ಕೊನೆಗೂ 'ಸಲಾರ್' ಟೀಸರ್ ರಿಲೀಸ್ ಡೇಟ್ ಘೋಷಣೆ.. ಹೊಂಬಾಳೆ ನಿರ್ಧಾರಕ್ಕೆ ಮೈ ಪರಚಿಕೊಳ್ತಿದ್ದಾರೆ ಫ್ಯಾನ್ಸ್
ಯಂಗ್ ರೆಬಲ್ ಸ್ಟಾರ್ ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ರಿಲೀಸ್ ಡೇಟ್ ಹತ್ತಿರವಾಗುತ್ತಿದೆ. ಸೆಪ್ಟೆಂಬರ್ 28ಕ್ಕೆ 3 ತಿಂಗಳು ಬಾಕಿ ಇರುವಂತೆ ಟೀಸರ್ ರಿಲೀಸ್ ಪ್ಲ್ಯಾನ್ ನಡೀತಿದೆ. ಸದ್ಯ ಟೀಸರ್ ರಿಲೀಸ್ ಘೋಷಿಸಿ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಸ್ವೀಟ್ ಶಾಕ್ ಕೊಟ್ಟಿದೆ. ರಿಲೀಸ್ ಡೇಟ್ ಓಕೆ, ಅದ್ಯಾಕೆ ಆ ಟೈಮ್‌ಗೆ ಎಂದು ಎಲ್ಲರೂ ಕೇಳ್ತಿದ್ದಾರೆ.
ಎರಡು ವರ್ಷಗಳ ಹಿಂದೆ ಸೆಟ್ಟೇರಿದ್ದ 'ಸಲಾರ್' ಸಿನಿಮಾ ಕಾರಣಾಂತರಗಳಿಂದ ರಿಲೀಸ್ ಆಗೋದು ತಡವಾಗಿತ್ತು. 'KGF' ಸರಣಿ ನಂತರ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಈ ಸಿನಿಮಾ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಮೂಡಿ ಬರ್ತಿದೆ. 'KGF' ಚಿತ್ರಕ್ಕೆ ಕೆಲಸ ಮಾಡಿದ ಬಹುತೇಕ ತಂಡ ಈ ಚಿತ್ರಕ್ಕೂ ಕೆಲಸ ಮಾಡಿದೆ. ಇನ್ನು ಪ್ರಭಾಸ್ ಕ್ರೇಜ್, ಪರ್ಫಾರ್ಮನ್ಸ್‌ಗೆ ಪ್ರಶಾಂತ್ ನೀಲ್ ಮೇಕಿಂಗ್ ಜೊತೆಯಾದರೆ ಬಾಕ್ಸಾಫೀಸ್ ಶೇಕ್ ಆಗೋದು ಗ್ಯಾರೆಂಟಿ ಎನ್ನುವ ಲೆಕ್ಕಚಾರ ನಡೀತಿದೆ.

'ಆದಿಪುರುಷ್' ಸೋಲಿನ ಕಹಿ ಮರೆಸೋಕೆ ಪ್ರಭಾಸ್ 'ಸಲಾರ್' ಆಗಿ ಎಂಟ್ರಿ ಕೊಡ್ತಿದ್ದಾರೆ. ಅದಕ್ಕೆ ತಕ್ಕಂತೆ ಬಹುಕೋಟಿ ವೆಚ್ಚದಲ್ಲಿ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ನಿರ್ಮಾಣವಾಗುತ್ತಿದೆ. ಇಷ್ಟು ದಿನ ಬರೀ ಪೋಸ್ಟರ್‌ಗಳಿಂದಲೇ ಸದ್ದು ಮಾಡ್ತಿದ್ದ ಸಿನಿಮಾ ಇದೀಗ ಫಸ್ಟ್ ಗ್ಲಿಂಪ್ಸ್ ಮೂಲಕ ಅಬ್ಬರಿಸೋಕೆ ಬರ್ತಿದೆ.
ಜುಲೈ 6ಕ್ಕೆ 'ಸಲಾರ್' ರಿಲೀಸ್
ಹೌದು ಕೊನೆಗೂ ಪ್ರಭಾಸ್ ಅಭಿಮಾನಿಗಳ ಕೂಗಿಗೆ ಓಗೊಟ್ಟ ಹೊಂಬಾಳೆ ಸಂಸ್ಥೆ, 'ಸಲಾರ್' ಟೀಸರ್ ರಿಲೀಸ್ ಡೇಟ್ ಘೋಷಿಸಿದೆ. ಜುಲೈ 6ರಂದು ಬೆಳಗ್ಗೆ 5 ಗಂಟೆ 12 ನಿಮಿಷಕ್ಕೆ 'ಸಲಾರ್' ಝಲಕ್ ರಿಲೀಸ್ ಎಂದು ಪೋಸ್ಟ್ ಮಾಡಿದೆ. ಈ ಸುದ್ದಿ ಕೇಳಿ ಪ್ರಭಾಸ್ ಅಭಿಮಾನಿಗಳಂತೂ ಥ್ರಿಲ್ಲಾಗಿದ್ದಾರೆ. ಯಾವಾಗ ಆ ಕ್ಷಣ ಬರುತ್ತೋ? ಯಾವಾಗ ಟೀಸರ್ ನೋಡ್ತೀವೋ ಎಂದು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.
ಅಭಿಮಾನಿಗಳಿಗೆ ಶುರುವಾಯ್ತು ಆತಂಕ
ಜುಲೈ 6ಕ್ಕೆ 'ಸಲಾರ್' ಟೀಸರ್ ರಿಲೀಸ್ ಆಗೋದೇನೊ ಸರಿ. ಆದರೆ ಸೂರ್ಯ ಹುಟ್ಟೋಕು ಮೊದ್ಲೆ ಬೆಳ್ಳಬೆಳ್ಳಗ್ಗೆ ರಿಲೀಸ್ ಮಾಡ್ತಿರೋದು ಯಾಕೆ? ಎಂದು ತಲೆ ಕೆಡಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಬೆಳಗ್ಗೆ ಅಥವಾ ಸಂಜೆ ದೊಡ್ಡ ಸಿನಿಮಾಗಳ ಟೀಸರ್, ಟ್ರೈಲರ್ ರಿಲೀಸ್ ಆಗುತ್ತೆ. ಬೆಳ್ಳಬೆಳಗ್ಗೆ ಯಾರು ಎದ್ದು ಟೀಸರ್ ನೋಡ್ತಾರೆ? ಇದರಿಂದ ವೀವ್ಸ್‌ಗೆ ಹೊಡೆತ ಬೀಳಲ್ವಾ? ಎಂದು ಅಭಿಮಾನಿಗಳು ಆತಂಕಗೊಂಡಿದ್ದಾರೆ. ಈ ಹಿಂದಿನ ಎಲ್ಲಾ ಸಿನಿಮಾ ಟೀಸರ್‌ಗಳ ದಾಖಲೆಯನ್ನು 'ಸಲಾರ್' ಮುರಿಯುತ್ತೆ ಎನ್ನುವ ಅಂದಾಜಿದೆ. ಆದರೆ ಬೆಳಗ್ಗೆ ರಿಲೀಸ್ ಆದರೆ ಕಷ್ಟ ಕಷ್ಟ ಎನ್ನುತ್ತಿದ್ದಾರೆ.
ಆಕ್ಷನ್ ಥ್ರಿಲ್ಲರ್ 'ಸಲಾರ್'
ಬಹುಕೋಟಿ ವೆಚ್ಚದ 'ಸಲಾರ್' ಕೂಡ 'KGF' ಮಾದರಿಯ ಹೈವೋಲ್ಟೇಜ್ ಆಕ್ಷನ್ ಸಿನಿಮಾ. ಎರಡು ಭಾಗಗಳಾಗಿ ಈ ಚಿತ್ರವನ್ನು ತೆರೆಗೆ ತರಲಾಗುತ್ತಿದೆ. ಶ್ರುತಿ ಹಾಸನ್ ನಾಯಕಿಯಾಗಿ ನಟಿಸ್ತಿದ್ದು ದೇವರಾಜ್, ಜಗಪತಿ ಬಾಬು, ಭಜರಂಗಿ ಲೋಕಿ, ಪ್ರಮೋದ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಸಿನಿಮಾ ಕತೆ ಏನು ಎನ್ನುವುದರ ಬಗ್ಗೆ ಈವರೆಗೆ ಯಾವುದೇ ಸುಳಿವು ಸಿಕ್ಕಿಲ್ಲ. ಟೀಸರ್‌ನಲ್ಲಿ ಅದಕ್ಕುತ್ತರ ಸಿಗಲಿದೆ.
ಪ್ಯಾನ್ ಇಂಡಿಯಾ ಸಿನಿಮಾ
'ಸಲಾರ್' ಸಿನಿಮಾ ಆರಂಭಿಸಿದಾಗಲೇ ಹೊಂಬಾಳೆ ಸಂಸ್ಥೆ ಇದು ಇಂಡಿಯನ್ ಸಿನಿಮಾ ಎಂದಿತ್ತು. 5 ಭಾಷೆಗಳಲ್ಲಿ ಬಹಳ ದೊಡ್ಡಮಟ್ಟದಲ್ಲಿ ಚಿತ್ರವನ್ನು ನಿರ್ಮಾಣ ಮಾಡಲಾಗುತ್ತಿದೆ. ಪ್ರಭಾಸ್ ಸಿಕ್ಕಾಪಟ್ಟೆ ರಗಡ್ ಲುಕ್‌ನಲ್ಲಿ ಪ್ರೇಕ್ಷಕರಿಗೆ ಥ್ರಿಲ್ ಕೊಡೋಕೆ ಬರ್ತಿದ್ದಾರೆ. ಕಲ್ಲಿದ್ದಲು ಗಣಿ ಹಿನ್ನೆಲೆಯಲ್ಲಿ ಕಥೆ ಇರುತ್ತೆ ಎನ್ನುವ ಮಾತುಗಳು ಕೇಳಿಬರ್ತಿದೆ. 5 ಭಾಷೆಗಳಿಗೆ ಸೇರಿ ಒಂದೇ ಟೀಸರ್ ರಿಲೀಸ್ ಆಗುವ ನಿರೀಕ್ಷೆಯಿದೆ.


Click it and Unblock the Notifications











