ಲಾಕ್‌ಡೌನ್ ನಂತರ ಶೂಟಿಂಗ್ ಆರಂಭಿಸಿದ ಶಾರೂಖ್-ಪ್ರಭಾಸ್

ತೆಲುಗು ನಟ ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಅಭಿನಯದ 'ರಾಧೆ ಶ್ಯಾಮ್' ಸಿನಿಮಾದ ಕೊನೆಯ ಹಂತದ ಶೂಟಿಂಗ್ ಇಂದಿನಿಂದ (ಜೂನ್ 25) ಹೈದರಾಬಾದ್‌ನಲ್ಲಿ ಪುನರಾರಂಭವಾಗಿದೆ ಎಂಬ ವರದಿಯಾಗಿದೆ.

ಐದು ಭಾಷೆಗಳಲ್ಲಿ ತಯಾರಾಗುತ್ತಿರುವ ಈ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗುತ್ತಿದೆ. ಬಹುತೇಕ ಶೂಟಿಂಗ್ ಮುಗಿಸಿರುವ ಚಿತ್ರತಂಡ ಕೊನೆಯ ಹತ್ತು ದಿನ ಚಿತ್ರೀಕರಣ ಮಾತ್ರ ಬಾಕಿ ಉಳಿಸಿಕೊಂಡಿತ್ತು ಎಂದು ಹೇಳಲಾಗಿದೆ.

ಇದೀಗ, ಕೊನೆಯ ಶೆಡ್ಯೂಲ್ ಮುಗಿಸಿ ಕುಂಬಳಕಾಯಿ ಹೊಡೆಯಲು ಸಜ್ಜಾಗಿದೆ. ರೊಮ್ಯಾಂಟಿಕ್ ಹಾಡಿನ ಶೂಟಿಂಗ್ ಸೇರಿದಂತೆ ಪ್ರಮುಖ ದೃಶ್ಯಗಳ ಶೂಟಿಂಗ್ ಶುರು ಮಾಡಲಾಗುತ್ತಿದೆ ಎಂದು ನಟಿ ಪೂಜಾ ಹೆಗ್ಡೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

 Prabhas starts Radhe shyam and Shahrukh khan starts Pathan shooting today

ಅಂದ್ಹಾಗೆ, ಜುಲೈ 30 ರಂದು ರಾಧೆ ಶ್ಯಾಮ್ ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ, ಕೋವಿಡ್ ಎರಡನೇ ಅಲೆ ಹಿನ್ನೆಲೆ ದಿನಾಂಕ ಮುಂದಕ್ಕೆ ಹೋಗಿದೆ. ಸದ್ಯದ ಮಾಹಿತಿ ಪ್ರಕಾರ ದಸರಾ ಹಬ್ಬಕ್ಕೆ ಬರುವ ಚಿಂತನೆಯಲ್ಲಿದೆ.

ಪಠಾಣ್ ಆರಂಭಿಸಿದ ಶಾರೂಖ್ ಖಾನ್

ಸಿದ್ಧಾರ್ಥ್ ಆನಂದ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಪಠಾಣ್ ಚಿತ್ರೀಕರಣವನ್ನು ಶಾರೂಖ್ ಖಾನ್ ಇಂದಿನಿಂದ (ಜೂನ್ 25) ಶುರು ಮಾಡಿದ್ದಾರೆ ಎಂದು ವರದಿಯಾಗಿದೆ. ಮುಂಬೈನ ವೈಆರ್‌ಎಸ್ ಸ್ಟುಡಿಯೋದಲ್ಲಿ 15 ದಿನಗಳ ಶೆಡ್ಯೂಲ್ ನಿಗದಿಯಾಗಿದ್ದು, ಶಾರೂಖ್ ಕೆಲಸ ಆರಂಭಿಸಿದ್ದಾರೆ.

ವಿಶೇಷ ಅಂದ್ರೆ ಶಾರೂಖ್ ಖಾನ್ ಚಿತ್ರರಂಗಕ್ಕೆ ಬಂದು ಇಂದಿಗೆ 29 ವರ್ಷ ಆಗಿದೆ. 'ದೀವಾನಾ' ಸಿನಿಮಾ ಬಿಡುಗಡೆಯಾದ ದಿನವೇ ಶಾರೂಖ್ ಪಠಾಣ್ ಶೂಟಿಂಗ್‌ಗೆ ಮರುಚಾಲನೆ ಕೊಟ್ಟಿದ್ದಾರೆ.

 Prabhas starts Radhe shyam and Shahrukh khan starts Pathan shooting today

ಸದ್ಯಕ್ಕೆ ಶಾರೂಖ್ ಖಾನ್ ಮಾತ್ರ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಶೀಘ್ರದಲ್ಲೇ ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಚಿತ್ರತಂಡ ಸೇರಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

2018ರಲ್ಲಿ ತೆರೆಕಂಡ 'ಜೀರೋ' ಸಿನಿಮಾದ ಬಳಿಕ ಶಾರೂಖ್ ನಟಿಸಿದ ಯಾವ ಚಿತ್ರವೂ ಬಿಡುಗಡೆಯಾಗಿಲ್ಲ. ಸೋಲಿನಿಂದ ಕಂಗೆಟ್ಟಿರುವ ಶಾರೂಖ್‌ಗೆ ಪಠಾಣ್ ಗೆಲುವು ತಂದುಕೊಡಬೇಕಿರುವ ಒತ್ತಡದಲ್ಲಿದೆ.

More from Filmibeat

English summary
Tollywood star Prabhas starts Radhe shyam shooting and Shahrukh khan starts Pathan shooting today (June 25th).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X