For Quick Alerts
  ALLOW NOTIFICATIONS  
  For Daily Alerts

  ಲಾಕ್‌ಡೌನ್ ನಂತರ ಶೂಟಿಂಗ್ ಆರಂಭಿಸಿದ ಶಾರೂಖ್-ಪ್ರಭಾಸ್

  |

  ತೆಲುಗು ನಟ ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಅಭಿನಯದ 'ರಾಧೆ ಶ್ಯಾಮ್' ಸಿನಿಮಾದ ಕೊನೆಯ ಹಂತದ ಶೂಟಿಂಗ್ ಇಂದಿನಿಂದ (ಜೂನ್ 25) ಹೈದರಾಬಾದ್‌ನಲ್ಲಿ ಪುನರಾರಂಭವಾಗಿದೆ ಎಂಬ ವರದಿಯಾಗಿದೆ.

  ಐದು ಭಾಷೆಗಳಲ್ಲಿ ತಯಾರಾಗುತ್ತಿರುವ ಈ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗುತ್ತಿದೆ. ಬಹುತೇಕ ಶೂಟಿಂಗ್ ಮುಗಿಸಿರುವ ಚಿತ್ರತಂಡ ಕೊನೆಯ ಹತ್ತು ದಿನ ಚಿತ್ರೀಕರಣ ಮಾತ್ರ ಬಾಕಿ ಉಳಿಸಿಕೊಂಡಿತ್ತು ಎಂದು ಹೇಳಲಾಗಿದೆ.

  ಟ್ವಿಟ್ಟರ್ ಟ್ರೆಂಡಿಂಗ್‌ನಲ್ಲಿ SRK; ದಳಪತಿ ವಿಜಯ್ ಬಗ್ಗೆ ಶಾರುಖ್ ಖಾನ್ ಹೇಳಿದ್ದೇನು?ಟ್ವಿಟ್ಟರ್ ಟ್ರೆಂಡಿಂಗ್‌ನಲ್ಲಿ SRK; ದಳಪತಿ ವಿಜಯ್ ಬಗ್ಗೆ ಶಾರುಖ್ ಖಾನ್ ಹೇಳಿದ್ದೇನು?

  ಇದೀಗ, ಕೊನೆಯ ಶೆಡ್ಯೂಲ್ ಮುಗಿಸಿ ಕುಂಬಳಕಾಯಿ ಹೊಡೆಯಲು ಸಜ್ಜಾಗಿದೆ. ರೊಮ್ಯಾಂಟಿಕ್ ಹಾಡಿನ ಶೂಟಿಂಗ್ ಸೇರಿದಂತೆ ಪ್ರಮುಖ ದೃಶ್ಯಗಳ ಶೂಟಿಂಗ್ ಶುರು ಮಾಡಲಾಗುತ್ತಿದೆ ಎಂದು ನಟಿ ಪೂಜಾ ಹೆಗ್ಡೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

  ಅಂದ್ಹಾಗೆ, ಜುಲೈ 30 ರಂದು ರಾಧೆ ಶ್ಯಾಮ್ ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ, ಕೋವಿಡ್ ಎರಡನೇ ಅಲೆ ಹಿನ್ನೆಲೆ ದಿನಾಂಕ ಮುಂದಕ್ಕೆ ಹೋಗಿದೆ. ಸದ್ಯದ ಮಾಹಿತಿ ಪ್ರಕಾರ ದಸರಾ ಹಬ್ಬಕ್ಕೆ ಬರುವ ಚಿಂತನೆಯಲ್ಲಿದೆ.

  ಪಠಾಣ್ ಆರಂಭಿಸಿದ ಶಾರೂಖ್ ಖಾನ್

  ಸಿದ್ಧಾರ್ಥ್ ಆನಂದ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಪಠಾಣ್ ಚಿತ್ರೀಕರಣವನ್ನು ಶಾರೂಖ್ ಖಾನ್ ಇಂದಿನಿಂದ (ಜೂನ್ 25) ಶುರು ಮಾಡಿದ್ದಾರೆ ಎಂದು ವರದಿಯಾಗಿದೆ. ಮುಂಬೈನ ವೈಆರ್‌ಎಸ್ ಸ್ಟುಡಿಯೋದಲ್ಲಿ 15 ದಿನಗಳ ಶೆಡ್ಯೂಲ್ ನಿಗದಿಯಾಗಿದ್ದು, ಶಾರೂಖ್ ಕೆಲಸ ಆರಂಭಿಸಿದ್ದಾರೆ.

  ವಿಶೇಷ ಅಂದ್ರೆ ಶಾರೂಖ್ ಖಾನ್ ಚಿತ್ರರಂಗಕ್ಕೆ ಬಂದು ಇಂದಿಗೆ 29 ವರ್ಷ ಆಗಿದೆ. 'ದೀವಾನಾ' ಸಿನಿಮಾ ಬಿಡುಗಡೆಯಾದ ದಿನವೇ ಶಾರೂಖ್ ಪಠಾಣ್ ಶೂಟಿಂಗ್‌ಗೆ ಮರುಚಾಲನೆ ಕೊಟ್ಟಿದ್ದಾರೆ.

   Prabhas starts Radhe shyam and Shahrukh khan starts Pathan shooting today

  ಸದ್ಯಕ್ಕೆ ಶಾರೂಖ್ ಖಾನ್ ಮಾತ್ರ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಶೀಘ್ರದಲ್ಲೇ ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಚಿತ್ರತಂಡ ಸೇರಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

  ಕನ್ನಡಿಗರಿಗೆ ಹೆದರಿ ಅಣ್ಣಾವ್ರ ವಿಚಾರದಲ್ಲಿ ತಪ್ಪು ತಿದ್ದಿಕೊಂಡ Google | Filmibeat Kannada

  2018ರಲ್ಲಿ ತೆರೆಕಂಡ 'ಜೀರೋ' ಸಿನಿಮಾದ ಬಳಿಕ ಶಾರೂಖ್ ನಟಿಸಿದ ಯಾವ ಚಿತ್ರವೂ ಬಿಡುಗಡೆಯಾಗಿಲ್ಲ. ಸೋಲಿನಿಂದ ಕಂಗೆಟ್ಟಿರುವ ಶಾರೂಖ್‌ಗೆ ಪಠಾಣ್ ಗೆಲುವು ತಂದುಕೊಡಬೇಕಿರುವ ಒತ್ತಡದಲ್ಲಿದೆ.

  English summary
  Tollywood star Prabhas starts Radhe shyam shooting and Shahrukh khan starts Pathan shooting today (June 25th).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X