ತೂಕ ಇಳಿಸಿ ಹೊಸ ಲುಕ್‌ನಲ್ಲಿ ಪ್ರಭಾಸ್; ಶೂಟಿಂಗ್ ಸೆಟ್ ವಿಡಿಯೋ ವೈರಲ್

ಟಾಲಿವುಡ್ ಆರಡಿ ಕಟೌಟ್ ಪ್ರಭಾಸ್ ಪ್ಯಾನ್ ಇಂಡಿಯಾ ಸಿನಿಮಾಗಳ ಮೂಲಕ ಸ್ಟಾರ್ ನಟನಾಗಿ ಮೆರೆಯುತ್ತಿದ್ದಾರೆ. 'ಬಾಹುಬಲಿ' ಸರಣಿ ಸಕ್ಸಸ್ ಬಳಿಕ ಪ್ರಭಾಸ್ ನ್ಯಾಷನಲ್ ಸ್ಟಾರ್ ಪಟ್ಟಕ್ಕೇರಿಬಿಟ್ಟರು. ಸದ್ಯ ಚಿತ್ರವೊಂದಕ್ಕೆ ಪ್ರಭಾಸ್ 100 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎನ್ನುವ ಮಾತಿದೆ.

ಆಜಾನುಬಾಹು ಪ್ರಭಾಸ್ ಎತ್ತರ, ಮೈಕಟ್ಟು ನೋಡಿದರೆ ಎಂಥಹವರು ದಂಗಾಗುತ್ತಾರೆ. ಚಿತ್ರರಂಗಕ್ಕೆ ಬಂದ ಆರಂಭದಲ್ಲಿ ಬಹಳ ಸಣ್ಣ ಇದ್ದ ಪ್ರಭಾಸ್ ಬಾಹುಬಲಿ ಸಿನಿಮಾ ವೇಳೆಗೆ ತೂಕ ಹೆಚ್ಚಿಸಿಕೊಂಡಿದ್ದರು. ಇದೀಗ ಪ್ರಭಾಸ್ ದಿಢೀರ್ ತೂಕ ಇಳಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಸದ್ಯ 'ರಾಜಾ ಸಾಬ್' ಚಿತ್ರದಲ್ಲಿ ಪ್ರಭಾಸ್ ನಟಿಸುತ್ತಿದ್ದಾರೆ.

Prabhas stunned fans with is new look in the raja saab sets

ಶೂಟಿಂಗ್ ಸೆಟ್‌ನಲ್ಲಿ ಪ್ರಭಾಸ್ ನಡೆದು ಬರುತ್ತಿರುವ ವಿಡಿಯೋವೊಂದರು ವೈರಲ್ ಆಗುತ್ತಿದೆ. ಅದರಲ್ಲಿ ಪ್ರಭಾಸ್ ತೆಳ್ಳಗಾಗಿರುವಂತೆ ಕಾಣುತ್ತಿದೆ. ಹೊಸ ಹೇರ್‌ಸ್ಟೈಲ್‌ನಲ್ಲಿ ಯಂಗ್ ರೆಬಲ್ ಸ್ಟಾರ್ ಹ್ಯಾಂಡ್ಸಮ್ ಆಗಿ ಮಿಂಚಿದ್ದಾರೆ. ಅಭಿಮಾನಿಗಳು ವಿಡಿಯೋ ನೋಡಿ ಕ್ರೇಜಿ ಕಾಮೆಂಟ್ಸ್ ಮಾಡುತ್ತಿದ್ದಾರೆ. 10 ವರ್ಷಗಳ ಹಿಂದಿನ ವಿಂಟೇಜ್ ಲುಕ್‌ನಲ್ಲಿ ಪ್ರಭಾಸ್ ಕಾಣಿಸಿಕೊಂಡಿದ್ದಾರೆ. ಈ ಲುಕ್ 'ಮಿರ್ಚಿ' ಹಾಗೂ 'ಡಾರ್ಲಿಂಗ್' ಸಿನಿಮಾಗಳನ್ನು ನೆನಪಿಸುತ್ತಿದೆ ಎನ್ನುತ್ತಿದ್ದಾರೆ.

ಭೋಜನಪ್ರಿಯರಾಗಿರುವ ಪ್ರಭಾಸ್ ಎಷ್ಟೇ ತಿಂದರೂ ಜಿಮ್‌ನಲ್ಲಿ ಕಸರತ್ತು ನಡೆಸಿ ಕರಗಿಸುತ್ತಾರೆ. ಆದರೆ ಈ ಬಾರಿ ಬಹಳ ತೂಕ ಇಳಿಸಿರುವಂತೆ ಕಾಣುತ್ತಿದೆ. ಮುಂದಿನ ಚಿತ್ರಕ್ಕಾಗಿ ಡಾರ್ಲಿಂಗ್ ಈ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗ್ತಿದೆ. ಪ್ರಭಾಸ್ ಈಗಾಗಲೇ 'ಕಲ್ಕಿ' ಸಿನಿಮಾ ಚಿತ್ರೀಕರಣ ಮುಗಿಸಿದ್ದಾರೆ. ಮೇ 9ಕ್ಕೆ ಸಿನಿಮಾ ತೆರೆಗೆ ಬರಬೇಕಿತ್ತು. ಲೋಕಸಭೆ ಚುನಾವಣೆ ಹಿನ್ನೆಲೆ ರಿಲೀಸ್ ತಡವಾಗುವ ಸಾಧ್ಯತೆಯಿದೆ.

ಪ್ರಭಾಸ್ ಇತ್ತೀಚಿನ ವರ್ಷಗಳಲ್ಲಿ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ. 'ಸಲಾರ್' ಸಿನಿಮಾ ಪ್ರಮೋಷನ್ ವೇಳೆ ಕ್ಯಾಮರಾಗಳ ಮುಂದೆ ಬಂದಿದ್ದರು. ಬಳಿಕ ಇಟಲಿಗೆ ಹೋಗಿ ಮೋಣಕಾಲಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಬಂದಿದ್ದಾರೆ ಎನ್ನಲಾಯಿತು. ಆಗ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದ ಫೋಟೊಗಳು ವೈರಲ್ ಆಗಿದ್ದವು. ಇನ್ನು ಬ್ಯಾಕ್ ಟು ಬ್ಯಾಕ್ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಪ್ರಭಾಸ್ ಒಪ್ಪಿಕೊಳ್ಳುತ್ತಿದ್ದಾರೆ.

'ಬಾಹುಬಲಿ'-2 ಬಳಿಕ ಪ್ರಭಾಸ್ ನಟಿಸಿದ 3 ಸಿನಿಮಾಗಳು ಸೋಲುಂಡಿದ್ದವು. ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ತಕ್ಕಮಟ್ಟಿಗೆ ಗೆದ್ದಿತ್ತು. ಹೊಂಬಾಳೆ ಸಂಸ್ಥೆ ಈ ಸಿನಿಮಾ ನಿರ್ಮಾಣ ಮಾಡಿತ್ತು. ಸದ್ಯ 'ಸಲಾರ್-2' ಚಿತ್ರದಲ್ಲಿ ಕೂಡ ಯಂಗ್‌ ರೆಬಲ್ ಸ್ಟಾರ್ ನಟಿಸಬೇಕಿದೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದಲ್ಲಿ 'ಸ್ಪಿರಿಟ್' ಎನ್ನುವ ಸಿನಿಮಾ ಕೆಲಸಗಳು ನಡೀತಿದೆ.

ಇನ್ನು ವಯಸ್ಸು 40 ದಾಟಿದರೂ ಪ್ರಭಾಸ್ ಮದುವೆ ಬಗ್ಗೆ ಆಲೋಚಿಸಿದಂತೆ ಕಾಣುತ್ತಿಲ್ಲ. ಸಾಕಷ್ಟು ಬಾರಿ ಅಭಿಮಾನಿಗಳು ಈ ಪ್ರಶ್ನೆ ಕೇಳಿದ್ದಾರೆ. ಪ್ರಭಾಸ್ ದೊಡ್ಡಮ್ಮ ಕೂಡ ಶೀಘ್ರದಲ್ಲೇ ಆತನಿಗೆ ಮದುವೆ ಮಾಡುತ್ತೇವೆ ಎಂದು ಹೇಳುತ್ತಾ ಬರುತ್ತಿದ್ದಾರೆ. ಈ ಹಿಂದೆ 'ಬಾಹುಬಲಿ' ಸರಣಿ ಬಳಿಕ ಮದುವೆ ಆಗುವುದಾಗಿ ಪ್ರಭಾಸ್ ಹೇಳಿದ್ದರು. ಆದರೆ ಆ ಸಿನಿಮಾ ಬಂದೋಗಿ 7 ವರ್ಷ ಕಳೆದರೂ ಮದುವೆ ಬಗ್ಗೆ ಯಾವುದೇ ಸುಳಿವು ಸಿಗುತ್ತಿಲ್ಲ.

ನಟಿಸುವುದರ ಜೊತೆಗೆ ಯುವಿ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಪ್ರಭಾಸ್ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಆದರೆ ನೇರವಾಗಿ ಆ ಸಂಸ್ಥೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿಲ್ಲ. ಆಪ್ತರ ಮೂಲಕ ಬ್ಯಾನರ್ ಕೆಲಸಗಳು ನಡೆಯುತ್ತಾ ಬರುತ್ತಿದೆ. ಸದ್ಯ ಆ ಬ್ಯಾನರ್‌ನಲ್ಲಿ 'ವಿಶ್ವಂಭರ', 'ಘಾಟಿ' ಒಂದಷ್ಟು ಸಿನಿಮಾಗಳ ನಿರ್ಮಾಣವಾಗುತ್ತಿದೆ. 'ಕಂಗುವ' ಸೇರಿದಂತೆ ಒಂದಷ್ಟು ಸಿನಿಮಾಗಳ ವಿತರಣೆಗೂ ಮುಂದಾಗಿದ್ದಾರೆ.

More from Filmibeat

English summary
Telugu actor Prabhas new look goes viral.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X