The RajaSaab Teaser; ತಾತನ ಜೊತೆ ಬೆದರುತ್ತಲೇ ಬೆದರಿಸಲು ಬಂದ 'ರಾಜಾಸಾಬ್

ಡಾರ್ಲಿಂಗ್ ಪ್ರಭಾಸ್ ನಟನೆಯ 'ದಿ ರಾಜಾಸಾಬ್' ಸಿನಿಮಾ ಕಾರಣಾಂತರಗಳಿಂದ ತಡವಾಗುತ್ತಿದೆ. ಬಹಳ ಹಿಂದೆಯೇ ಸೆಟ್ಟೇರಿದ್ದ ಸಿನಿಮಾ ಶೂಟಿಂಗ್ ತಡವಾಗಿ ಪ್ರೇಕ್ಷಕರ ಮುಂದೆ ಬರುವುದಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. ಸದ್ಯ ಚಿತ್ರದ ಹೊಸ ಟೀಸರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಬಹಳ ಅದ್ಧೂರಿಯಾಗಿ ಕಟ್ಟಿಕೊಟ್ಟಿರುವ ಫ್ಯಾಂಟಸಿ ಹಾರರ್ ಕಾಮಿಡಿ ಸಿನಿಮಾ ಇದು.

'ಶೈಲಜಾ ರೆಡ್ಡಿ ಅಲ್ಲುಡು', 'ಪಕ್ಕಾ ಕಮರ್ಷಿಯಲ್' ರೀತಿಯ ಹಿಟ್ ಸಿನಿಮಾಗಳನ್ನು ತೆರೆಗೆ ತಂದಿದ್ದ ನಿರ್ದೇಶಕರ ಮಾರುತಿ ಈ ಸಿನಿಮಾ ಹಿಂದಿನ ಸೂತ್ರಧಾರ. 'ಸಲಾರ್' ರೀತಿಯ ಹೈವೋಲ್ಟೇಜ್ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಅಬ್ಬರಿಸಿದ್ದ ಪ್ರಭಾಸ್ ಇದೀಗ ನಗಿಸುತ್ತಾ ಹೆದರಿಸಲು ಬರ್ತಿದ್ದಾರೆ. ಡಿಸೆಂಬರ್ 5ಕ್ಕೆ ಸಿನಿಮಾ ತೆರೆಗೆ ಬರಲಿದೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆ ಚಿತ್ರಕ್ಕೆ ಹಣ ಹೂಡಿದೆ.

Prabhas Stuns in The Rajasaab film Teaser Fantasy Horror Comedy Promises Thrills and Laughs

ಮಾಳವಿಕಾ ಮೋಹನನ್, ನಿಧಿ ಅಗರ್‌ವಾಲ್ ಹಾಗೂ ರಿದ್ದಿ ಕುಮಾರ್ ಚಿತ್ರದಲ್ಲಿ ನಾಯಕಿಯರಾಗಿ ಮಿಂಚಿದ್ದಾರೆ. ಸಂಜಯ್ ದತ್ ಮುಖ್ಯವಾದ ಪಾತ್ರದಲ್ಲಿ ನಟಿಸಿ ಪ್ರೇಕ್ಷಕರಿಗೆ ಭಯ ಹುಟ್ಟಿಸಲು ಸಜ್ಜಾಗಿದ್ದಾರೆ. ಸಿಜಿ, ಗ್ರಾಫಿಕ್ಸ್ ವರ್ಕ್ ಹೆಚ್ಚು ಇರುವುದರಿಂದ ಸಿನಿಮಾ ತೆರೆಗೆ ಬರುವುದು ತಡವಾಗುತ್ತಿದೆ. ಈ ಹಿಂದೆ ಬಂದಿದ್ದ ಪೋಸ್ಟರ್, ಟೀಸರ್ ಕೊಂಚ ಟ್ರೋಲ್ ಆಗಿತ್ತು. ಹಾಗಾಗಿ ಈ ಬಾರಿ ಜಬರ್ದಸ್ತ್ ಟೀಸರ್ ಕಟ್ ಮಾಡಿದ್ದಾರೆ. ಎರಡೂವರೆ ನಿಮಿಷದ ಟೀಸರ್ ರಾಜಾಸಾಬ್ ಪ್ರಪಂಚವನ್ನು ತೆರೆದಿಡುವಂತಿದೆ.

ದಟ್ಟ ಅರಣ್ಯದಲ್ಲಿ ಒಂದು ಭೂತ ಬಂಗಲೆ. ಅದರ ಸುತ್ತಾ ನಡೆಯು ಕಥೆ ಇದೆ. ಸಾಮಾನ್ಯವಾಗಿ ಹಾರರ್ ಸಿನಿಮಾಗಳಲ್ಲಿ ಇಂತಹ ಕಾನ್ಸೆಪ್ಟ್ ಇರುತ್ತದೆ. 'ರಾಜಾಸಾಬ್' ಚಿತ್ರದಲ್ಲೂ ಅದೇ ತಂತ್ರ ಬಳಸಿಕೊಂಡಿದ್ದಾರೆ. "ಈ ಮನೆ ನನ್ನ ದೇಹ, ಈ ಸಂಪತ್ತು ನನ್ನ ಪ್ರಾಣ. ನಾನು ಸತ್ತಮೇಲೂ ಇದನ್ನು ನಾನು ಮಾತ್ರ ಅನುಭವಿಸುತ್ತೇನೆ" ಎನ್ನುವ ಸಂಜಯ್ ದತ್ ವಾಯ್ಸ್‌ ಹಿನ್ನಲೆಯಲ್ಲಿ ಟೀಸರ್ ಶುರುವಾಗುತ್ತದೆ. ಆ ಡೈಲಾಗ್‌ನಲ್ಲೇ ಚಿತ್ರದ ಕಥೆಯ ಬಗ್ಗೆ ಸುಳಿವು ಸಿಗುತ್ತದೆ.

ಮುಂದೆ ಆ ಬಂಗಲೆಗೆ ಯಾರೆಲ್ಲಾ ಬರ್ತಾರಾ? ನಾಯಕ ಕೂಡ ಅಲ್ಲಿಗೆ ಬರೋದು ಯಾಕೆ? ಆತನಿಗೂ ಆ ಮನೆಗೆ ಒಡೆಯನಾಗಿದ್ದ ವ್ಯಕ್ತಿ(ಸಂಜಯ್‌)ಗೂ ಏನು ಸಂಬಂಧ? ಮುಂದೆ ಏನೆಲ್ಲಾ ಆಗುತ್ತದೆ ಎನ್ನುವುದನ್ನು ತೆರೆಮೇಲೆ ನೋಡಬೇಕು. ಪ್ರಭಾಸ್ ವಿಂಟೇಜ್ ಲುಕ್ ಅಭಿಮಾನಿಗಳ ಗಮನ ಸೆಳೆದಿದೆ. ಅದರಲ್ಲೂ ಕಾಮಿಡಿ ಟೈಮಿಂಗ್, ಡೈಲಾಗ್ಸ್ ಮಜಾ ಕೊಡುವಂತಿದೆ. ಇನ್ನು ಸಿಜಿಯಲ್ಲಿ ಮಾಡಿರುವ ಚಿತ್ರ ವಿಚಿತ್ರ ಜೀವಿಗಳು ಭಯಹುಟ್ಟಿಸುವಂತಿದೆ. ಮಕ್ಕಳಿಗೆ ಸಿನಿಮಾ ಬಹಳ ಇಷ್ಟವಾಗುವ ಸುಳಿವು ಸಿಗುತ್ತಿದೆ.

Prabhas Stuns in The Rajasaab film Teaser Fantasy Horror Comedy Promises Thrills and Laughs

'ರಾಜಾಸಾಬ್' ಚಿತ್ರದಲ್ಲಿ ಪ್ರಭಾಸ್ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗ್ತಿದೆ. ಆದರೆ ಟೀಸರ್‌ನಲ್ಲಿ ಯಂಗ್ ಲುಕ್‌ನಲ್ಲಿ ಕಾಣಿಸಿಕೊಂಡಿರುವುದನ್ನು ಮಾತ್ರ ನೋಡಬಹುದು. ಈ ಹಿಂದೆ ಬಂದಿದ್ದ ಪೋಸ್ಟರ್‌ನಲ್ಲಿ ಉದ್ದನೆಯ ಕೂದಲು, ಗಡ್ಡ ಬಿಟ್ಟು ಖಡಕ್ ಅವತಾರದಲ್ಲಿ ಪ್ರಭಾಸ್ ಮಿಂಚಿದ್ದರು. ಅದನ್ನು ಟೀಸರ್‌ನಲ್ಲಿ ರಿವೀಲ್ ಮಾಡಿಲ್ಲ. ಎಸ್. ತಮನ್ ಮ್ಯೂಸಿಕ್ ಟೀಸರ್‌ನಲ್ಲಿ ಹೈಲೆಟ್ ಎನ್ನುವಂತಿದೆ.

ಸಖತ್ ಸ್ಟೈಲಿಶ್ ಅವತಾರದಲ್ಲಿ ಪ್ರಭಾಸ್ ಮಿಂಚಿದ್ದು ಜಬರ್ದಸ್ತ್ ಆಕ್ಷನ್ ಸನ್ನಿವೇಶಗಳಲ್ಲಿ ಅಬ್ಬರಿಸಿದ್ದಾರೆ. ಇನ್ನು ಮೂವರು ನಾಯಕಿಯರ ಗ್ಲಾಮರ್ ಟಚ್ ಚಿತ್ರಕ್ಕಿದೆ. ಬೊಮನ್ ಇರಾನಿ, ಸಮುದ್ರಖನಿ, ಬ್ರಹ್ಮಾನಂದಂ, ವೆನ್ನೆಲ ಕಿಶೋರ್, ಯೋಗಿ ಬಾಬು ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ನಯನತಾರಾ ಚಿತ್ರದ ಸ್ಪೆಷಲ್ ಸಾಂಗ್‌ನಲ್ಲಿ ಕುಣಿಯಲಿದ್ದಾರೆ. ಇನ್ನು ಟೀಸರ್ ಬಾಲಿವುಡ್ 'ಭೂಲ್ ಭುಲಯ್ಯ' ಚಿತ್ರವನ್ನು ನೆನಪಿಸುವಂತಿದೆ. ಅಂದಾಜು 300 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ.

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗೆ ಬರ್ತಿದ್ದು 5 ಭಾಷೆಗಳಲ್ಲಿ ಟೀಸರ್ ರಿಲೀಸ್ ಆಗಿದೆ. ಚಿತ್ರಕ್ಕೆ ಮೊದಲಿಗೆ 'ರಾಜಾ ಡೀಲಕ್ಸ್' ಎಂಬ ಟೈಟಲ್ ಅಂದುಕೊಂಡಿದ್ದರು. ಕೊನೆಗೆ ಬದಲಾಯಿತು. ಇದೇ ವರ್ಷ ಏಪ್ರಿಲ್ 10ಕ್ಕೆ ಸಿನಿಮಾ ಬಿಡುಗಡೆ ಎಂದು ಹೇಳಲಾಗಿತ್ತು. ಬಳಿಕ ಅದನ್ನು ಬದಲಾಯಿಸಿ ಚಿತ್ರತಂಡ ಬೇಸರ ಮೂಡಿಸಿತ್ತು.

More from Filmibeat

English summary
‘The Rajasaab’, starring Prabhas and directed by Maruthi, is making waves with its grand new teaser
Read more about: prabhas tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X