For Quick Alerts
  ALLOW NOTIFICATIONS  
  For Daily Alerts

  ಪ್ರಭಾಸ್ ಮತ್ತೊಂದು ಬಾಲಿವುಡ್ ಪ್ರಾಜೆಕ್ಟ್ ಕನ್ಫರ್ಮ್: ನಿರ್ದೇಶಕ, ನಿರ್ಮಾಪಕರು ಯಾರು?

  |

  'ಸಲಾರ್', 'ಪ್ರಾಜೆಕ್ಟ್ ಕೆ', 'ಆದಿಪುರುಷ್', 'ಸ್ಪಿರಿಟ್' ಹೀಗೆ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ಪ್ರಭಾಸ್ ನಟಿಸ್ತಿದ್ದಾರೆ. ಇದೀಗ ಡಾರ್ಲಿಂಗ್ ನಟನೆಯ ಮತ್ತೊಂದು ಸಿನಿಮಾ ಬಗ್ಗೆ ಸುಳಿವು ಸಿಕ್ಕಿದೆ. ಸ್ವತಃ ನಿರ್ಮಾಪಕರೇ ಆ ವಿಷಯವನ್ನು ಖಚಿತ ಪಡಿಸಿದ್ದಾರೆ. ಬಾಲಿವುಡ್ ಡೈರೆಕ್ಟರ್ ಅಖಾಡಕ್ಕೆ ಇಳಿತ್ತಿದ್ದಾರೆ.

  'ಆದಿಪುರುಷ್' ಸಿನಿಮಾ ಮೂಲಕ ಪ್ರಭಾಸ್ ನೇರವಾಗಿ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಆದರೆ ಕಾರಣಾಂತರಗಳಿಂದ ಸಿನಿಮಾ ತಡವಾಗುತ್ತಿದೆ. ಕೆಲ ದಿನಗಳ ಹಿಂದೆ ಬಂದಿದ್ದ ಸಿನಿಮಾ ಟೀಸರ್ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ಹಾಗಾಗಿ ಚಿತ್ರವನ್ನು ಮತ್ತೆ ತಿದ್ದಿ ತೀಡುವ ಕೆಲಸ ನಡೀತಿದೆ. ಇದೆಲ್ಲದರ ಮಧ್ಯೆ ಪ್ರಭಾಸ್ ಮತ್ತೊಂದು ಬಾಲಿವುಡ್ ಚಿತ್ರದಲ್ಲಿ ನಟಿಸುವುದು ಪಕ್ಕಾ ಆಗಿದೆ. ಈ ಚಿತ್ರಕ್ಕೆ ಸೂಪರ್ ಹಿಟ್ ಸಿನಿಮಾಗಳ ನಿರ್ದೇಶಕ ಸಿದ್ದಾರ್ಥ್ ಆನಂದ್ ಆಕ್ಷನ್ ಕಟ್ ಹೇಳಲಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಈ ಚಿತ್ರವನ್ನು ನಿರ್ಮಾಣ ಮಾಡಲಿದೆ.

  Prabhas Team Up with Pathaan Director Siddharth Anand For Prabhas24

  ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ನಿರ್ಮಾಣದ 'ವೀರಸಿಂಹ ರೆಡ್ಡಿ' ಹಾಗೂ 'ವಾಲ್ತೇರು ವೀರಯ್ಯ' ಸಿನಿಮಾಗಳು ಸಂಕ್ರಾಂತಿ ಸಂಭ್ರಮದಲ್ಲಿ ರಿಲೀಸ್ ಆಗಿ ಸದ್ದು ಮಾಡ್ತಿವೆ. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಜ್ಯೂ. ಎನ್‌ಟಿಆರ್ ನಟನೆಯ ಚಿತ್ರವನ್ನು ಕೂಡ ಇದೇ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಇನ್ನು 'ಪುಷ್ಪ'- 2 ಚಿತ್ರವೂ ಇದೇ ಬ್ಯಾನರ್‌ನಲ್ಲಿ ಮೂಡಿ ಬರ್ತಿದೆ. ಇದೀಗ ಸಂಸ್ಥೆ ಪ್ರಭಾಸ್ ಜೊತೆ ಒಂದು ಬಾಲಿವುಡ್ ಪ್ರಾಜೆಕ್ಟ್ ಪ್ಲ್ಯಾನ್ ಮಾಡ್ತಿದೆ. ಜೊತೆಗೆ ಸಲ್ಮಾನ್ ಖಾನ್ ಜೊತೆಗೂ ಸಿನಿಮಾ ಬಗ್ಗೆ ಬಗ್ಗೆ ಚರ್ಚೆ ನಡೀತಿದೆ.

  ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್‌ನಲ್ಲಿ ಪ್ರಭಾಸ್ ನಟಿಸಲಿರುವ ಚಿತ್ರಕ್ಕೆ ಸಿದ್ದಾರ್ಥ್ ಆನಂದ್ ಆಕ್ಷನ್ ಕಟ್ ಹೇಳ್ತಾರೆ ಎಂದು ಸ್ವತಃ ನಿರ್ಮಾಪಕ ನವೀನ್ ಯೆರ್ನೇನಿ ಹೇಳಿದ್ದಾರೆ. ಬಾಲಕೃಷ್ಣ ನಡೆಸಿಕೊಡುವ ಕಾರ್ಯಕ್ರಮದಲ್ಲಿ ನಿರ್ಮಾಪಕರು ಈ ವಿಚಾರ ಬಹಿರಂಗಪಡಿಸಿದ್ದಾರೆ. 'ಬ್ಯಾಂಗ್ ಬ್ಯಾಂಗ್', 'ವಾರ್' ರೀತಿಯ ಆಕ್ಷನ್ ಎಂಟರ್‌ಟೈನರ್ ಸಿನಿಮಾಗಳನ್ನು ಕೊಟ್ಟ ಸಿದ್ದಾರ್ಥ್ ಆನಂದ್, ಈಗ ಶಾರುಕ್ ಖಾನ್ ನಟನೆಯ 'ಪಠಾಣ್' ಸಿನಿಮಾ ನಿರ್ದೇಶನ ಮಾಡಿದ್ದಾರೆ. ಮುಂದೆ ಪ್ರಭಾಸ್‌ಗೂ ಒಂದು ಆಕ್ಷನ್ ಎಂಟರ್‌ಟೈನರ್ ಕಥೆಯನ್ನು ಸಿದ್ಧಪಡಿಸಲಿದ್ದಾರೆ.

  ಪ್ರಭಾಸ್ ಅಂದು ಧರಿಸಿದ್ದ 12 ಸಾವಿರ ರೂ. ಶರ್ಟ್‌ ಕೇವಲ 600 ರೂ.ಗೆ ಲಭ್ಯ?ಪ್ರಭಾಸ್ ಅಂದು ಧರಿಸಿದ್ದ 12 ಸಾವಿರ ರೂ. ಶರ್ಟ್‌ ಕೇವಲ 600 ರೂ.ಗೆ ಲಭ್ಯ?

  English summary
  Prabhas Team Up with Pathaan Director Siddharth Anand For Prabhas24. film will be bankrolled by Mythri movie makers. Know More.
  Friday, January 13, 2023, 23:53
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X