ಅಬ್ಬಾ.. ಹೈದರಾಬಾದ್ ಉದ್ಯಮಿ ಮಗಳ ಜೊತೆ ಪ್ರಭಾಸ್ ಮದುವೆ? ಆಪ್ತರ ಪ್ರತಿಕ್ರಿಯೆ
ತೆಲುಗು ನಟ ಪ್ರಭಾಸ್ ಮದುವೆ ಯಾವಾಗ? ಎಂದು ಕೇಳಿ ಕೇಳಿ ಅಭಿಮಾನಿಗಳು ಸುಸ್ತಾಗಿದ್ದಾರೆ. ಸದ್ಯ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಡಾರ್ಲಿಂಗ್ ಬ್ಯುಸಿಯಾಗಿಬಿಟ್ಟಿದ್ದಾರೆ. ವಯಸ್ಸು 40 ದಾಟಿದರೂ ಪ್ರಭಾಸ್ ಮಾತ್ರ ಮದುವೆ ಬಗ್ಗೆ ಆಲೋಚಿಸಿದಂತೆ ಕಾಣುತ್ತಿಲ್ಲ. ಇದೀಗ ದಿಢೀರನೆ ಮತ್ತೆ ಬಾಹುಬಲಿ ಮದುವೆ ವಿಚಾರ ಚರ್ಚೆಗೆ ಬಂದಿದೆ.
ಹೈದರಾಬಾದ್ ಮೂಲದ ಉದ್ಯಮಿಯ ಮಗಳ ಜೊತೆ ನಟ ಪ್ರಭಾಸ್ ಹೊಸ ಬಾಳಿಕೆ ಕಾಲಿಡುತ್ತಾರೆ ಎನ್ನುವ ಗುಸುಗುಸು ಶುರುವಾಗಿದೆ. ಕಳೆದೆರಡು ದಿನಗಳಿಂದ ಪ್ರಭಾಸ್ ಮದುವೆ ವದಂತಿ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡ್ತಿದೆ. ರಾಷ್ಟ್ರೀಯ ಮಾಧ್ಯಮಗಳಲ್ಲಿ ಕೂಡ ಈ ಬಗ್ಗೆ ಚರ್ಚೆ ನಡೀತಿದೆ.

'ಬಾಹುಬಲಿ' ಸರಣಿ ಸಿನಿಮಾಗಳು ಮುಗಿದ ಬಳಿಕ ಕಂಡಿತ ಮದುವೆ ಆಗುತ್ತೇನೆ ಎಂದು ಪ್ರಭಾಸ್ ಹೇಳಿದ್ದರು. ಆದರೆ 'ಬಾಹುಬಲಿ- 2' ಸಿನಿಮಾ ಬಂದೋಗಿ 8 ವರ್ಷ ಕಳೆದರೂ ಮದುವೆ ಸುದ್ದಿನೇ ಇಲ್ಲ. ಸಲ್ಮಾನ್ ಖಾನ್ ಮದುವೆ ಬಳಿಕ ನನ್ನ ಮದುವೆ ಎಂದು ಕೆಲ ದಿನಗಳ ಹಿಂದೆ ಸಂದರ್ಶನವೊಂದರಲ್ಲಿ 'ಸಲಾರ್' ನಟ ತಮಾಷೆ ಮಾಡಿದ್ದರು. ಅದರ ಅರ್ಥ ಸದ್ಯಕ್ಕೆ ಮದುವೆ ಆಲೋಚನೆಯೇ ಇಲ್ಲ ಎನ್ನುವುದು ಸ್ಪಷ್ಟವಾಗಿತ್ತು.
ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಪ್ರಭಾಸ್ ಅವರನ್ನು ಕೈ ಹಿಡಿಯಲು ಸಾಕಷ್ಟು ಯುವತಿಯರು ಸಿದ್ಧರಿದ್ದಾರೆ. ಆದರೆ ಡಾರ್ಲಿಂಗ್ ಯಾಕೋ ಮನಸ್ಸು ಮಾಡ್ತಿಲ್ಲ. ಈ ಹಿಂದೆ ಸಾಕಷ್ಟು ಪ್ರಪೋಸಲ್ ಬಂದಿತ್ತು. ಆದರೆ ಯಾವುದೇ ಕೂಡಿ ಬರಲಿಲ್ಲ ಎನ್ನಲಾಗಿತ್ತು. ಹೈದರಾಬಾದ್ ಉದ್ಯಮಿಯ ಮಗಳ ಜೊತೆ ಪ್ರಭಾಸ್ ಮದುವೆ ಎನ್ನುವ ಸುದ್ದಿ ಇದ್ದಕ್ಕಿದ್ದಂತೆ ಹಲ್‌ಚಲ್ ಎಬ್ಬಿಸಿದೆ. ಇದೀಗ ಈ ಬಗ್ಗೆ ಪ್ರಭಾಸ್ ಆಪ್ತರಿಂದ ಸ್ಪಷ್ಟನೆ ಸಿಕ್ಕಿದೆ.
ಪ್ರಭಾಸ್ ಮದುವೆ ಹಾಗೂ ಡೇಟಿಂಗ್ ಬಗ್ಗೆ ಈ ಹಿಂದೆ ಕೂಡ ಸಾಕಷ್ಟು ವದಂತಿ ಹರಿದಾಡಿತ್ತು. ಅನುಷ್ಕಾ ಶೆಟ್ಟಿ, ಕೃತಿ ಸನೂನ್ ಸೇರಿ ಕೆಲ ನಟಿಯರ ಜೊತೆ ಡಾರ್ಲಿಂಗ್ ಹೆಸರು ತಳುಕು ಹಾಕಿಕೊಂಡಿತ್ತು. ಪ್ರಭಾಸ್- ಅನುಷ್ಕಾ ಶೆಟ್ಟಿ ಮದುವೆ ಆಗಬೇಕು ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ. ಇಬ್ಬರೂ ಕೂಡ ಇನ್ನು ಮದುವೆ ಆಗಿಲ್ಲ. ಇದು ಕೆಲವರ ಗೊಂದಲಕ್ಕೆ ಕಾರಣವಾಗಿದೆ. ಇದೆಲ್ಲದರ ನಡುವೆ ಇದೀಗ ಉದ್ಯಮಿ ಮಗಳ ಜೊತೆ ಪ್ರಭಾಸ್ ಹಸೆಮಣೆ ಏರುತ್ತಾರೆ. ದೊಡ್ಡಮ್ಮ ಶ್ಯಾಮಲಾ ದೇವಿ ಮದುವೆ ಸಿದ್ಧತೆ ಆರಂಭಿಸಿದ್ದಾರೆ ಎನ್ನುವ ವದಂತಿ ಸದ್ದು ಮಾಡ್ತಿದೆ.
ಉದ್ಯಮಿ ಮಗಳ ಜೊತೆ ಪ್ರಭಾಸ್ ಮದುವೆ ಎನ್ನುವುದೆಲ್ಲಾ ಸುಳ್ಳು ಸುದ್ದಿ. ಅದನ್ನು ಯಾರು ನಂಬಬೇಡಿ ಎಂದು ಪ್ರಭಾಸ್ ಆಪ್ತರು ಸ್ಪಷ್ಟನೆ ನೀಡಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ. 'ಬಾಹುಬಲಿ' ಸರಣಿ ಬಳಿಕ ಪ್ರಭಾಸ್ ಬರೀ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲೇ ನಟಿಸುತ್ತಿದ್ದಾರೆ. 3 ಸಿನಿಮಾಗಳ ಸೋಲಿನ ಬಳಿಕ 'ಸಲಾರ್' ಆಗಿ ಗೆದ್ದಿದ್ದಾರೆ.
ಸದ್ಯ ಮಾರುತಿ ನಿರ್ದೇಶನದ 'ದಿ ರಾಜಾಸಾಬ್' ಹಾಗೂ ಹನು ರಾಘವಪುಡಿ ಸಾರಥ್ಯದ 'ಫೌಜಿ' ಎಂಬ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಮುಂದೆ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ 'ಸ್ಪಿರಿಟ್' ಚಿತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ. ಆ ಬಳಿಕ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ 'ಸಲಾರ್'-2 ಶೌರ್ಯಾಂಗ ಪರ್ವ ಚಿತ್ರದಲ್ಲಿ ನಟಿಸೋದು ಪಕ್ಕಾ ಆಗಿದೆ.
ಹೊಂಬಾಳೆ ಫಿಲ್ಮ್ಸ್ ಕಾಂಬಿನೇಷನ್‌ನಲ್ಲಿ ಪ್ರಭಾಸ್ 3 ಸಿನಿಮಾಗಳನ್ನು ಮಾಡಲು ಒಪ್ಪಂದ ಮಾಡಿಕೊಂಡಿದ್ದಾರೆ. 'ಸಲಾರ್'- 2 ಜೊತೆಗೆ ಹೊಂಬಾಳೆ ಸಂಸ್ಥೆ ನಿರ್ಮಾಣದ ಮತ್ತೆರಡು ಸಿನಿಮಾಗಳಲ್ಲಿ ಡಾರ್ಲಿಂಗ್ ನಟಿಸೋದು ಕನ್ಫರ್ಮ್ ಆಗಿದೆ. ಆದರೆ ಯಾರು ಈ ಸಿನಿಮಾಗಳನ್ನು ನಿರ್ದೇಶನ ಮಾಡುತ್ತಾರೆ ಎನ್ನುವುದು ಇನ್ನು ಖಚಿತವಾಗಿಲ್ಲ.


Click it and Unblock the Notifications











