Prabhas: ಶಸ್ತ್ರಚಿಕಿತ್ಸೆಗೆ ಒಳಗಾಗಲಿರುವ ಪ್ರಭಾಸ್, ಶೂಟಿಂಗ್‌ನಿಂದ ವಿರಾಮ

ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಹೂಡಿಕೆ ಮಾಡಲ್ಪಟ್ಟ ನಟ ಪ್ರಭಾಸ್‌. 'ಆದಿಪುರುಷ್', 'ಸಲಾರ್', ಹೆಸರಿಡದ ನಾಗ ಚೈತನ್ಯ ಸಿನಿಮಾ, ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸುತ್ತಿರುವ 'ಅನಿಮಲ್' ಇವುಗೆಲ್ಲವನ್ನೂ ಒಟ್ಟು ಮಾಡಿದರೆ ಸಾವಿರಾರು ಕೋಟಿ ರುಪಾಯಿ ಹಣ ಪ್ರಭಾಸ್‌ ಮೇಲೆ ಹೂಡಿಕೆಯಾಗಿದೆ.

ಆದರೆ ಪ್ರಭಾಸ್‌ಗೆ ಆರೋಗ್ಯ ಸಮಸ್ಯೆ ಕಾಡುತ್ತಿದ್ದು, ಮೇಜರ್ ಶಸ್ತ್ರಚಿಕಿತ್ಸೆಗೆ ಅವರು ಒಳಗಾಗಲಿದ್ದಾರೆ. ಇದರಿಂದಾಗಿ ಚಿತ್ರೀಕರಣದಿಂದ ಕೆಲ ಕಾಲ ಬಿಡುವು ಪಡೆಯುತ್ತಿದ್ದಾರೆ.

ಪ್ರಭಾಸ್‌ಗೆ ಬಹುದಿನಗಳಿಂದಲೂ ಮೊಣಕಾಲಿನ ಸಮಸ್ಯೆ ಕಾಡುತ್ತಿದ್ದು ಇತ್ತೀಚೆಗೆ ಸಮಸ್ಯೆ ಉಲ್ಬಣಗೊಂಡಿದೆ. ಹಾಗಾಗಿ ಈಗ ಶಸ್ತ್ರಚಿಕಿತ್ಸೆಗೆ ಕಡ್ಡಾಯವಾಗಿ ಒಳಗಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

Prabhbas To Undergo Knee Surgery, Taking Break From Shooting

2019 ರಲ್ಲಿ 'ಸಾಹೋ' ಸಿನಿಮಾದ ಚಿತ್ರೀಕರಣದ ವೇಳೆ ಪ್ರಭಾಸ್‌ ಗಾಯಗೊಂಡಿದ್ದರು. ಗಾಯ ತೀವ್ರವಾಗಿದ್ದ ಕಾರಣ ಆಗ ಕೆಲ ಕಾಲ ವಿಶ್ರಾಂತಿ ಪಡೆದಿದ್ದರು. ಆಗಲೇ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗಿತ್ತು ಆದರೆ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದ ಕಾರಣ ಶಸ್ತ್ರಚಿಕಿತ್ಸೆ ಮುಂದೂಡಿದ್ದರು. ನಂತರ ಕೋವಿಡ್ ಬಂದ ಕಾರಣ ಆಗಲೂ ಶಸ್ತ್ರಚಿಕಿತ್ಸೆ ಮಾಡಿಸಲಾಗಲಿಲ್ಲ. ಬಳಿಕ ಮತ್ತೆ ಚಿತ್ರೀಕರಣದಲ್ಲಿ ಬ್ಯುಸಿಯಾದ ಕಾರಣ ಶಸ್ತ್ರಚಿಕಿತ್ಸೆಯನ್ನು ಮುಂದೂಡಿಕೊಂಡೆ ಬಂದರು. ಆದರೆ ಈಗ ಸಮಸ್ಯೆ ಉಲ್ಬಣಗೊಂಡಿರುವ ಕಾರಣ ಅನಿವಾರ್ಯವಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಲೇ ಬೇಕಾಗಿದೆ.

ಪ್ರಭಾಸ್ ವಿದೇಶದಲ್ಲಿ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎನ್ನಲಾಗುತ್ತಿದೆ. ಪ್ರಭಾಸ್ ಬೇಗನೆ ಗುಣಮುಖವಾಗಲೆಂದು ಅಭಿಮಾನಿಗಳು ಸಂದೇಶಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಪ್ರಭಾಸ್ ಅನಾರೋಗ್ಯದ ಕಾರಣದಿಂದಾಗಿ ನಾಗ್ ಅಶ್ವಿನ್ ನಿರ್ದೇಶನದ ಇನ್ನೂ 'ಪ್ರಾಜೆಕ್ಟ್ ಕೆ' ಸಿನಿಮಾ ಸಮಸ್ಯೆ ಎದುರಿಸಲಿದೆ. ಈ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಹಾಗೂ ದೀಪಿಕಾ ಪಡುಕೋಣೆ ಸಹ ನಟಿಸುತ್ತಿದ್ದಾರೆ. 'ಸಲಾರ್' ಚಿತ್ರೀಕರಣ ಸಹ ಪೂರ್ಣವಾಗಿ ಮುಗಿದಿಲ್ಲ ಹಾಗೂ ಅದರ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಸಹ ಬಾಕಿ ಇವೆ. 'ಆದಿಪುರುಷ್' ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಸಹ ಬಾಕಿ ಇವೆ. ಈ ಎಲ್ಲ ಸಿನಿಮಾಗಳು ಪ್ರಭಾಸ್‌ರ ಅನಾರೋಗ್ಯದಿಂದ ತೊಂದರೆ ಎದುರಿಸಲಿವೆ.

Recommended Video

Yash | ಮುಂಬೈನಲ್ಲಿ ಯಶ್ ಖದರ್ರೇ ಬೇರೆ ಗುರೂ..! | KGF 2 CRAZE

More from Filmibeat

English summary
Actor Prabhas to undergo knee surgery soon. He is taking break from shooting. He was injured while shooting for movie Sahoo in year 2019.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X