'ಸಲಾರ್‌' ಪ್ರಭಾಸ್‌ಗೆ ಡೈಲಾಗ್ಸ್ ಕೊಡಲಿಲ್ಲ ನೀಲ್; ಇಡೀ ಚಿತ್ರದಲ್ಲಿ ದೇವ ಮಾತನಾಡಿದ್ದು ಎಷ್ಟು ಸೆಕೆಂಡ್ ಗೊತ್ತಾ?

ಬಾಹುಬಲಿ ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ಓಟಿಟಿಗೆ ಎಂಟ್ರಿ ಕೊಟ್ಟು ಸದ್ದು ಮಾಡ್ತಿದೆ. ಬಾಕ್ಸಾಫೀಸ್‌ನಲ್ಲಿ 700 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿದ ಸಿನಿಮಾ ಇದೀಗ ಸ್ಮಾಲ್‌ ಸ್ಕ್ರೀನ್‌ನಲ್ಲಿ ವೀಕ್ಷಕರನ್ನು ಸೆಳೆಯುತ್ತಿದೆ. ಓಟಿಟಿಗೆ ಬಂದರೂ ಕೆಲವೆಡೆ ಸಿನಿಮಾ ಥಿಯೇಟರ್‌ಗಳಲ್ಲಿ ಪ್ರದರ್ಶನ ಕಾಣುತ್ತಿದೆ.

ಅಭಿಮಾನಿಗಳು ಮತ್ತೊಮ್ಮೆ ' ಸಲಾರ್' ಸಿನಿಮಾ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಥಿಯೇಟರ್‌ನಲ್ಲಿ ಅರ್ಥವಾಗದ್ದನ್ನು ಮತ್ತೊಮ್ಮೆ ನೋಡಿ ತಿಳಿಸುಕೊಳ್ಳುತ್ತಿದ್ದಾರೆ. ಪ್ರಭಾಸ್ ಡೈಲಾಗ್‌ಗಳನ್ನು ಮತ್ತೆ ಮತ್ತೆ ಕೇಳಿ ಖುಷಿಪಡುತ್ತಿದ್ದಾರೆ. ಪ್ರಶಾಂತ್ ನೀಲ್ ಎಲಿವೇಷನ್‌ ಸೀನ್ಸ್ ನೋಡಿ ಥ್ರಿಲ್ಲಾಗುತ್ತಿದ್ದಾರೆ. ಥಿಯೇಟರ್‌ನಲ್ಲಿ ಬಿಡುಗಡೆಯಾದ 28 ದಿನಕ್ಕೆ ಸಿನಿಮಾ ಓಟಿಟಿಗೆ ಬಂದಿದ್ದು ಕೆಲವರಿಗೆ ಅಚ್ಚರಿ ಮೂಡಿಸಿತ್ತು.

Prabhas total Dialogue duration in Salaar: Part 1 – Ceasefire film

'ಬಾಹುಬಲಿ' ಸರಣಿ ಬಳಿಕ ಪ್ರಭಾಸ್‌ಗೆ ಒಳ್ಳೆ ಬ್ರೇಕ್ ಕೊಟ್ಟ ಸಿನಿಮಾ 'ಸಲಾರ್'. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಸಿನಿಮಾ ನಿರ್ಮಾಣ ಮಾಡಿದೆ. ಅಂದಹಾಗೆ 2 ಭಾಗಗಳಾಗಿ ಚಿತ್ರವನ್ನು ತೆರೆಗೆ ತರಲಾಗುತ್ತಿದೆ. ಮುಂದಿನ ವರ್ಷ 'ಸಲಾರ್‌ ಪಾರ್ಟ್‌-2: ಶೌರ್ಯಾಂಗ ಪರ್ವ' ಪ್ರೇಕ್ಷಕರ ಮುಂದೆ ಬರುವ ನಿರೀಕ್ಷೆಯಿದೆ. ಕನ್ನಡದ 'ಉಗ್ರಂ' ಕಥೆಯನ್ನೇ ಬಹಳ ದೊಡ್ಡಮಟ್ಟದಲ್ಲಿ 'ಸಲಾರ್' ಸರಣಿಯಾಗಿ ತೆರೆಗೆ ತರಲಾಗುತ್ತಿದೆ.

ಕನ್ನಡ ಪ್ರೇಕ್ಷಕರಿಗೆ 'ಸಲಾರ್' ಅಷ್ಟಾಗಿ ಇಷ್ಟವಾಗದಿದ್ದರೂ ತೆಲುಗು ಪ್ರೇಕ್ಷಕರು ಪ್ರಭಾಸ್ ಆರ್ಭಟವನ್ನು ಮೆಚ್ಚಿಕೊಂಡಿದ್ದಾರೆ. ಉತ್ತರ ಭಾರತ ಮಾತ್ರವಲ್ಲದೇ ವಿದೇಶಗಳಲ್ಲಿ ಕೂಡ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಸಖತ್ ಸದ್ದು ಮಾಡಿತ್ತು. ಖಾನ್ಸರ್ ಪ್ರಪಂಚವನ್ನು ಪ್ರಶಾಂತ್ ನೀಲ್ ತಿದ್ದಿ ತೀಡಿದ ಬಗೆ ಮೆಚ್ಚುಗೆಗೆ ಪಾತ್ರವಾಗಿದೆ. ದೇವ ಹಾಗೂ ವರದ ಸ್ನೇಹದ ಕಥೆ ಪ್ರೇಕ್ಷಕರ ಮನಗೆದ್ದಿದೆ. ಇಂತಹ ಆತ್ಮೀಯ ಸ್ನೇಹಿತರು ಏಕೆ ಶತ್ರುಗಳಾದರು? ತಿಳಿಯಲು ಕಾತರದಿಂದ ಕಾಯುತ್ತಿದ್ದಾರೆ.

Prabhas total Dialogue duration in Salaar: Part 1 – Ceasefire film

ದೇವ ಪಾತ್ರದಲ್ಲಿ ಪ್ರಭಾಸ್ ಆರ್ಭಟಕ್ಕೆ ಫುಲ್ ಮಾರ್ಕ್ಸ್ ಸಿಕ್ಕಿದೆ. ಖಾನ್ಸರ್ ಬಿಟ್ಟು ಬರ್ಮಾ ಗಡಿಯ ಕಲ್ಲಿದ್ದಲು ಗಣಿಯಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡಿಕೊಂಡಿರುವ ದೇವ, ಸ್ನೇಹಿತನಿಗಾಗಿ ಮತ್ತೆ ಖಾನ್ಸರ್‌ಗೆ ಬರ್ತಾನೆ. ದೊಡ್ಡ ವಿರೋಧಿ ಪಡೆಯ ಎದುರು ಸ್ನೇಹಿತ ವರದನಿಗೆ ಖಾನ್ಸರ್‌ ಪಟ್ಟ ಕಟ್ಟಲು ಬೆಂಬಲವಾಗಿ ನಿಲ್ಲುತ್ತಾನೆ. ಆದರೆ ದೇವ ಮಾತನಾಡುವುದು ಕಮ್ಮಿ. ಹೊಡೆದಾಡುವುದೇ ಹೆಚ್ಚು.

ಇಡೀ 'ಸಲಾರ್' ಸಿನಿಮಾದಲ್ಲಿ ದೇವ ಬಹಳ ಹೊತ್ತು ಸೈಲೆಂಟ್ ಆಗಿಯೇ ಇರುತ್ತಾನೆ. ಆಗಾಗ್ಗೆ ವೈಲೆಂಟ್ ಆಗುತ್ತಿರುತ್ತಾನೆ. ಆ ಪಾತ್ರಕ್ಕೆ ಡೈಲಾಗ್ಸ್‌ ಕೂಡ ಕಮ್ಮಿ. ಫಸ್ಟ್ ಹಾಫ್‌ನಲ್ಲಿ ಜ್ವಾಲಾಮುಖಿಯಂತಹ ದೇವ, ತಾಯಿ ಮಾತಿಗೆ ಕಟ್ಟುಬಿದ್ದು ತಣ್ಣಗಿರುತ್ತಾನೆ. ಕೊನೆಗೆ ತಾಯಿಯ ಆಣತಿಯಂತೆ ಎದುರಾಳಿಗಳ ವಿರುದ್ಧ ತಿರುಗಿಬೀಳುತ್ತಾನೆ. ಸೆಕೆಂಡ್‌ ಹಾಫ್‌ನಲ್ಲಿ ಕೂಡ ಹೆಚ್ಚು ಡೈಲಾಗ್ಸ್ ಇಲ್ಲ.

ಸಾಮಾನ್ಯವಾಗಿ ಕಮರ್ಷಿಯಲ್ ಸಿನಿಮಾಗಳಲ್ಲಿ ನಾಯಕ ನಟನಿಗೆ ಹೆಚ್ಚು ಡೈಲಾಗ್ಸ್ ಇರುತ್ತದೆ. ಬಿಲ್ಡಪ್ ಡೈಲಾಗ್ಸ್, ಪಂಚಿಂಗ್ ಡೈಲಾಗ್ಸ್, ಒನ್‌ಲೈನರ್ಸ್ ಹೀಗೆ ಏನೇನೋ ಇರುತ್ತದೆ. ಆದರೆ 'ಸಲಾರ್' ಚಿತ್ರದಲ್ಲಿ ಪ್ರಭಾಸ್ ಡೈಲಾಗ್ಸ್ ಇರಲಿ, ಮಾತನಾಡಿರುವುದೇ ಬಹಳ ಕಮ್ಮಿ. ಸಿನಿಮಾ ಓಟಿಟಿಗೆ ಬರುತ್ತಿದ್ದಂತೆ ಅಭಿಮಾನಿಗಳು ಒಟ್ಟಾರೆಯಾಗಿ ಸಿನಿಮಾದಲ್ಲಿ ಪ್ರಭಾಸ್ ಎಷ್ಟು ಹೊತ್ತು ಮಾತನಾಡಿದ್ದಾರೆ ಎನ್ನುವ ಲೆಕ್ಕ ಹಾಕಿದ್ದಾರೆ. ಯಾವುದೇ ಸಿನಿಮಾದಲ್ಲಿ ನಾಯಕ ಇಷ್ಟ ಕಮ್ಮಿ ಅವಧಿ ಮಾತನಾಡಲ್ಲ ಎಂದು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

2 ಗಂಟೆ 52 ನಿಮಿಷಗಳ 'ಸಲಾರ್‌' ಚಿತ್ರದಲ್ಲಿ ಒಟ್ಟಾರೆಯಾಗಿ ಪ್ರಭಾಸ್, 2 ನಿಮಿಷ 33 ಸೆಕೆಂಡ್‌ ಮಾತ್ರ ಮಾತನಾಡಿದ್ದಾರೆ ಎಂದು ಅಭಿಮಾನಿಗಳು ಲೆಕ್ಕ ಹಾಕಿದ್ದಾರೆ. ಇದೇ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಬಿಲ್ಡಪ್ ಸಾಂಗ್, ಸರಿಯಾಗಿ ಡೈಲಾಗ್ಸ್ ಇಲ್ಲ. ಆದರೂ 'ಸಲಾರ್' ಸಿನಿಮಾ ಚೆನ್ನಾಗಿದೆ ಎಂದು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ. ಕಮ್ಮಿ ಮಾತನಾಡಿದ್ದರೂ ಇಂಪ್ಯಾಕ್ಟ್ ಚೆನ್ನಾಗಿದೆ ಎನ್ನುತ್ತಿದ್ದಾರೆ. ಪಾರ್ಟ್‌-2ನಲ್ಲಿ ಆದರೂ ನಮ್ಮ ಹೀರೋಗೆ ಡೈಲಾಗ್ಸ್ ಕೊಡಿ ಪ್ರಶಾಂತ್ ನೀಲ್ ಎಂದು ಕೇಳುತ್ತಿದ್ದಾರೆ.

More from Filmibeat

English summary
Prabhas got Less dialogue in Salaar: Part 1 – Ceasefire.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X