ಪ್ರಭಾಸ್‌ಗೆ ಮದುವೆ ಆಸೆ ಇದೆಯಂತೆ, ಯಾಕಿನ್ನೂ ಮದುವೆ ಆಗಿಲ್ಲ ಗೊತ್ತಾ?

'ಬಾಹುಬಲಿ' ಖ್ಯಾತಿಯ ಸೌತ್ ಸೂಪರ್‌ಸ್ಟಾರ್ ನಟ ಪ್ರಭಾಸ್ ಪ್ರಸ್ತುತ 'ರಾಧೆ ಶ್ಯಾಮ್' ಚಿತ್ರದ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಚಿತ್ರ ಇದೇ ಮಾರ್ಚ್ 11ಕ್ಕೆ ರಿಲೀಸ್ ಆಗುತ್ತಿದೆ. ಹಾಗಾಗಿ ಚಿತ್ರದ ಪ್ರಚಾರದಲ್ಲಿ ನಟ ಪ್ರಭಾಸ್ ಬ್ಯುಸಿಯಾಗಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಭಾಗಿ ಆಗುತ್ತಿದ್ದಾರೆ.

ರಾಧೆ ಶ್ಯಾಮ್ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಪ್ರಭಾಸ್ ಮಾಧ್ಯಮಗಳೊಂದಿಗೆ ಸಂವಾದ ನಡೆಸಿದ್ದಾರೆ. ಚಿತ್ರದ ಬಗ್ಗೆ ಮಾತ್ರ ಅಲ್ಲ, ಅವರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಕೆಲವು ವಿಷಯಗಳ ಬಗ್ಗೆಯೂ ನಟ ಮಾತನಾಡಿದ್ದಾರೆ. ಪ್ರಭಾಸ್‌ಗೆ ಸದಾ ಎದುರಾಗುವ ಪ್ರಶ್ನೆ ಒಂದಕ್ಕೆ ಉತ್ತರಿಸಿದ್ದಾರೆ.

ಹೌದು ನಟ ಪ್ರಭಾಸ್ ವೈಯಕ್ತಿಕ ಬದುಕಿನ ಬಗ್ಗೆ ಸದಾ ಚರ್ಚೆಯಲ್ಲಿ ಇರುವ ವಿಚಾರ ಅಂದರೆ ಅದು ಪ್ರಭಾಸ್ ಮದುವೆ ಸುದ್ದಿ. ಪ್ರಭಾಸ್ ಯಾರನ್ನು ಮದುವೆ ಆಗುತ್ತಾರೆ?, ಪ್ರಭಾಸ್ ಯಾವಾಗ ಮದುವೆ ಆಗುತ್ತಾರೆ ಎನ್ನುವ ಬಗ್ಗೆ ಹತ್ತಾರು ಸುದ್ದಿಗಳು ಅದಾಗಲೇ ಸದ್ದು ಮಾಡಿವೆ. ಆದರೆ ಅದೆಲ್ಲದಕ್ಕೂ ಪೂರ್ಣ ವಿರಾಮ ಇಟ್ಟಿರುವ ನಟ ಪ್ರಭಾಸ್ ಇನ್ನೂ ಯಾಕೆ ಮದುವೆ ಆಗಿಲ್ಲ ಎನ್ನುವ ಬಗ್ಗೆ ಮಾತನಾಡಿದ್ದಾರೆ.

ಮದುವೆ ಆಗದೇ ಇರಲು ಕಾರಣ ತಿಳಿಸಿದ ಪ್ರಭಾಸ್!

ಮದುವೆ ಆಗದೇ ಇರಲು ಕಾರಣ ತಿಳಿಸಿದ ಪ್ರಭಾಸ್!

ನಟ ಪ್ರಭಾಸ್ ಯಾಕೆ ಮದುವೆ ಆಗುತ್ತಿಲ್ಲ ಎನ್ನುವ ಕುತೂಹಲಕ್ಕೆ ಈಗ ಉತ್ತರ ಸಿಕ್ಕಿದೆ. ಸ್ವತಃ ಪ್ರಭಾಸ್ ಅವರೇ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ. ಅವರು ಮದುವೆ ಆಗದೇ ಇರಲು ಏನು ಕಾರಣ ಅಂತ ತಿಳಿಸಿದ್ದಾರೆ. ಇನ್ನೂ ಯಾಕೆ ಮದುವೆ ಆಗಿಲ್ಲ ಎನ್ನು ಪ್ರಶ್ನೆಗೆ ಉತ್ತರಿಸಿದ ಪ್ರಭಾಸ್, "ಸಾಮಾನ್ಯವಾಗಿ ಪ್ರೀತಿಯ ಬಗ್ಗೆ ನನಗೆ ಇದ್ದ ಕಲ್ಪನೆಗಳು ತಪ್ಪಾಗಿವೆ. ಹಾಗಾಗಿ ನಾನು ಇನ್ನೂ ಮದುವೆ ಆಗಿಲ್ಲ." ಎಂದು ನಕ್ಕಿದ್ದಾರೆ. ಈ ಉತ್ತರವನ್ನು ನಟ ಪ್ರಭಾಸ್ ತಮಾಷೆಗಾಗಿ ಹೇಳಿದ್ದಾರೆ.

ಮದುವೆ ಆಗಲು ಪ್ರಭಾಸ್‌ಗೆ ಸಮಯವೇ ಇಲ್ವಂತೆ!

ಮದುವೆ ಆಗಲು ಪ್ರಭಾಸ್‌ಗೆ ಸಮಯವೇ ಇಲ್ವಂತೆ!

ತಮಾಷೆ ಚಟಾಕಿ ಹಾರಿಸಿದ ಬಳಿಕ ನಟ ಪ್ರಭಾಸ್ ಮದುವೆಯ ಬಗ್ಗೆ, ಮದುವೆ ಮುಂದೂಡುತ್ತಿರುವ ಬಗ್ಗೆ ಸೀರಿಯಸ್ ಆಗಿ ಮಾತನಾಡಿದ್ದಾರೆ. "ನನ್ನ ತಾಯಿ ನನ್ನನ್ನು ಮದುವೆಯಾಗಲು ಆಗಾಗ ಕೇಳುತ್ತಾಳೆ. ಬಾಹುಬಲಿ ಚಿತ್ರದ ಸಮಯದಲ್ಲಿ ಮದುವೆ ಆಗುವಂತೆ ಹೇಳಿದ್ದರು. ನಾನು ಸಿನಿಮಾವನ್ನು ಮುಗಿಸಲು ಅವಕಾಶ ಮಾಡಿಕೊಡಿ ನಂತರ ಅದರ ಬಗ್ಗೆ ಯೋಚಿಸುತ್ತೇನೆ ಎಂದು ಹೇಳಿದ್ದೆ. ಈಗ, ನನಗೆ ಬೇರೆ ಆಯ್ಕೆ ಇಲ್ಲ ಆದ್ದರಿಂದ ನಾನು ಅಮ್ಮನಿಗೆ, ಒತ್ತಡ ಹಾಕಬೇಡ ಎಂದು ಹೇಳುತ್ತೇನೆ. ನನ್ನ ಮದುವೆ ನಡೆದೇ ನಡೆಯುತ್ತದೆ. ನಾನು ಮದುವೆಯಾಗಿ ಸೆಟಲ್ ಆಗಲು ಬಯಸುತ್ತೇನೆ. ಆದರೆ ಅದು ಸರಿಯಾದ ಸಮಯಕ್ಕೆ ನಡೆಯಲಿದೆ." ಎಂದು ತಮ್ಮ ಮದುವೆ ಬಗ್ಗೆ ಪ್ರಭಾಸ್ ಹೇಳಿಕೊಂಡಿದ್ದಾರೆ.

ಪ್ರಭಾಸ್ ಜೊತೆ ಅನುಷ್ಕಾ ಶೆಟ್ಟಿ ಹೆಸರು ತಳುಕು!

ಪ್ರಭಾಸ್ ಜೊತೆ ಅನುಷ್ಕಾ ಶೆಟ್ಟಿ ಹೆಸರು ತಳುಕು!

ನಟ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಹೆಸರು ತಳುಕು ಹಾಕಿಕೊಂಡಿತ್ತು. ಪ್ರಭಾಸ್ ಅನುಷ್ಕಾ ಶೆಟ್ಟಿಯನ್ನು ಮದುವೆ ಆಗುತ್ತಾರೆ ಎನ್ನುವ ಸುದ್ದಿಗಳು ಹೆಚ್ಚಾಗಿ ಹರಿದಾಡಿದ್ದವು. ಬಾಹುಬಲಿ ಚಿತ್ರದ ಬಳಿಕ, ಪ್ರಭಾಸ್ ಮತ್ತು ಅನುಷ್ಕಾ ಇನ್ನೇನೂ ಸಪ್ತಪದಿ ತುಳಿಯಲಿದ್ದಾರೆ ಅಂತ ಹೇಳಲಾಗಿತ್ತು. 2015ರಲ್ಲೇ ಈ ಜೋಡಿ ಮದುವೆ ನಡೆಯಲಿ ಎನ್ನಲಾಗಿತ್ತು. ಆದರೆ ಅದ್ಯಾವ ಸುದ್ದಿಗಳು ಕೂಡ ನಿಜ ಆಗಿಲ್ಲ. ಅನುಷ್ಕಾ ಕೂಡ ಪ್ರಭಾಸ್ ತನ್ನ ಒಳ್ಳೆಯ ಸ್ನೇಹಿತ ಎಂದು ಗಾಸಿಪ್‌ಗಳಿಗೆ ಬ್ರೇಕ್ ಹಾಕುವ ಪ್ರಯತ್ನ ಮಾಡಿದರು.

ಸಿನಿಮಾಗಳನ್ನು ಮುಗಿಸಿದ ಬಳಿಕ ಪ್ರಭಾಸ್ ಮದುವೆ?

ಸಿನಿಮಾಗಳನ್ನು ಮುಗಿಸಿದ ಬಳಿಕ ಪ್ರಭಾಸ್ ಮದುವೆ?

ನಟ ಪ್ರಭಾಸ್ ಸದ್ಯ ಸಾಲು, ಸಾಲು ಸಿನಿಮಾಗಳಲ್ಲಿ ನಿರತರಾಗಿದ್ದಾರೆ. ಅವರು ಸಿನಿಮಾಗಳನ್ನು ಮೊದಲು ಮುಗಿಸಿ ನಂತರ ಮದುವೆ ಬಗ್ಗೆ ಯೋಚಿಸುವೆ ಎಂದು ತಮ್ಮ ಅಮ್ಮನ ಬಳಿ ಹೇಳುತ್ತಾರೆ. ಹಾಗಾಗಿ ಈಗ ಒಪ್ಪಿಕೊಂಡಿರುವ ಚಿತ್ರಗಳನ್ನು ಮುಗಿಸಿ ಮದುವೆ ಆಗುತ್ತಾರೇನೊ ಎನ್ನುವ ಕುತೂಹಲ ಮೂಡಿದೆ. ಸದ್ಯ ಪ್ರಭಾಸ್ ಆದಿಪುರುಷ್, ಪ್ರಾಜೆಕ್ಟ್ ಕೆ, ಸಲಾರ್ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರಗಳ ಬಳಿಕ ಸ್ಪಿರಿಟ್ ಮತ್ತು ನಿರ್ದೇಶಕ ಮಾರುತಿ ಅವರ ಸಿನಿಮಾ ಕೂಡ ಸಾಲಿನಲ್ಲಿ ಇವೆ. ಪ್ರಭಾಸ್ ಹೇಳುವ ಪ್ರಕಾರ ಈ ಎಲ್ಲಾ ಸಿನಿಮಾಗಳನ್ನು ಮುಗಿಸಿ ಮದುವೆ ಆಗ್ತಾರಂತೆ.

More from Filmibeat

English summary
Prabhas On Wedding: He Want To Get Marry And Settled Down,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X