For Quick Alerts
  ALLOW NOTIFICATIONS  
  For Daily Alerts

  'ರಾಧೆ ಶ್ಯಾಮ್' ವೀಕ್ಷಿಸಿದ ಪ್ರಭಾಸ್: ಪೂಜಾ ಹೆಗ್ಡೆ ಬಗ್ಗೆ ಹೇಳಿದ್ದೇನು?

  |

  ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ನಟನೆಯ ರಾಧೆ ಶ್ಯಾಮ್ ಸಿನಿಮಾ ಭಾರಿ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಅಂದುಕೊಂಡಂತೆ ಆಗಿದ್ದಾರೆ ಸಿನಿಮಾ ಈಗಾಗಲೇ ರಿಲೀಸ್ ಆಗಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿರುತ್ತಿತ್ತು. ಆದರೆ ಕೊರೊನಾ ಕಾರಣ ಮುಂದಕ್ಕೆ ಹೋಗುತ್ತಲೇ ಇದೆ.

  ರಾಧೆ ಶ್ಯಾಮ್ ರೊಮ್ಯಾಂಟಿಕ್ ಸಿನಿಮಾವಾಗಿದ್ದು ಪ್ರಭಾಸ್ ಜೊತೆ ನಟಿ ಪೂಜೆ ಹೆಗ್ಡೆ ರೊಮ್ಯಾನ್ಸ್ ಮಾಡಿದ್ದಾರೆ. ಮೊದಲ ಬಾರಿಗೆ ಪೂಜಾ, ಪ್ರಭಾಸ್ ಜೊತೆ ನಟಿಸಿದ್ದಾರೆ. ಈಗಾಗಲೇ ಫಸ್ಟ್ ಲುಕ್ ರಿಲೀಸ್ ಆಗಿದ್ದು ಇಬ್ಬರನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

  ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಪ್ರಭಾಸ್ ತನ್ನ ತಂಡದ ಕೆಲವು ಸದಸ್ಯರ ಜೊತೆ ರಾಧೆ ಶ್ಯಾಮ್ ಸಿನಿಮಾ ವೀಕ್ಷಿಸಿದ್ದಾರಂತೆ. ಸಿನಿಮಾ ನೋಡಿ ಪೂಜಾ ಹೆಗ್ಡೆ ಅಭಿನಯವನ್ನು ಹಾಡಿಹೊಗಳಿದ್ದಾರೆ ಎನ್ನುವ ಮಾಹಿತಿ ಕೇಳಿಬರುತ್ತಿದೆ. ಮುಂದೆ ಓದಿ...

  ಪೂಜಾ ಹೆಗ್ಡೆಯನ್ನು ಹಾಡಿಹೊಗಳಿದ ಪ್ರಭಾಸ್

  ಪೂಜಾ ಹೆಗ್ಡೆಯನ್ನು ಹಾಡಿಹೊಗಳಿದ ಪ್ರಭಾಸ್

  ಆಂಗ್ಲ ವೆಬ್ ಪೋರ್ಟಲ್ ವರದಿ ಮಾಡಿದ ಪ್ರಕಾರ ಕೃಷ್ಣ ಕುಮಾರ್ ಸಾರಥ್ಯದಲ್ಲಿ ಮೂಡಿಬಂದಿರುವ ರಾಧೆ ಶ್ಯಾಮ್ ಚಿತ್ರ ವೀಕ್ಷಿಸಿದ ಪ್ರಭಾಸ್, ಪೂಜಾ ಹೆಗ್ಡೆ ಅಭಿನಯ ನೋಡಿ ಸಂತಸಗೊಂಡಿದ್ದಾರಂತೆ. ಪೂಜಾ ಹೆಗ್ಡೆ ಹೊಗಳಿರುವ ಪ್ರಭಾಸ್, ಎಷ್ಟು ಅದ್ಭುತವಾಗಿ ನಟಿಸಿದ್ದಾರೆ, ಪೂಜಾ ದೃಶ್ಯಗಳು ಚೆನ್ನಾಗಿ ಮೂಡಿಬಂದಿದೆ ಎಂದು ಹೇಳಿದ್ದಾರಂತೆ.

  ಕೊನೆಯ ಹಂತದ ಚಿತ್ರೀಕರಣ ಬಾಕಿ

  ಕೊನೆಯ ಹಂತದ ಚಿತ್ರೀಕರಣ ಬಾಕಿ

  ರಾಧೆ ಶ್ಯಾಮ್ ಚಿತ್ರೀಕರಣ ಇನ್ನು ಮುಗಿದಿಲ್ಲ. ಕೊನೆಯ ಹಂತದ ಚಿತ್ರೀಕರಣ ಬಾಕಿಯುಳಿಸಿಕೊಂಡಿದೆ ಚಿತ್ರತಂಡ. ಇನ್ನೇನು ಚಿತ್ರೀಕರಣ ಮುಕ್ತಾಯದ ಹಂತಕ್ಕೆ ಬಂದಿದೆ ಎನ್ನುವಷ್ಟೊತ್ತಿಗೆ ಕೊರೊನಾ ಚಿತ್ರೀಕರಣಕ್ಕೆ ಬ್ರೇಕ್ ಹಾಕಿದೆ. ಸದ್ಯ ಸ್ಥಗಿತಗೊಂಡಿರುವ ಚಿತ್ರೀಕರಣ ಕೊರೊನಾ ಹಾವಳಿ ಕಡಿಮೆಯಾದ ಬಳಿಕ ಪ್ರಾರಂಭವಾಗಲಿದೆ.

  ಪೂಜಾ ಹೆಗ್ಡೆ ಬಳಿ ಇರುವ ಸಿನಿಮಾಗಳು

  ಪೂಜಾ ಹೆಗ್ಡೆ ಬಳಿ ಇರುವ ಸಿನಿಮಾಗಳು

  ನಟಿ ಪೂಜಾ ಸದ್ಯ ಬಾಲಿವುಡ್ ನ ಸರ್ಕಸ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ರಣ್ವೀರ್ ಸಿಂಗ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ಸಲ್ಮಾನ್ ಖಾನ್ ಸಿನಿಮಾ ಕೂಡ ಕೈಯಲ್ಲಿದೆ. ಇನ್ನು ಸೌತ್ ನಲ್ಲಿ ಆಚಾರ್ಯ, ದಳಪತಿ 65, ಮೋಸ್ಟ್ ಎಲಿಜೆಬಲ್ ಬ್ಯಾಚುಲರ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

  ಮಾತಿನಿಂದ ತಿವಿದ ಚೇತನ್ ಗೆ ಉಪೇಂದ್ರ ಏನ್ ಹೇಳ್ತಾರೆ?? | Filmibeat Kannada
  ಪ್ರಭಾಸ್ ಬಳಿ ಇರುವ ಚಿತ್ರಗಳು

  ಪ್ರಭಾಸ್ ಬಳಿ ಇರುವ ಚಿತ್ರಗಳು

  ಪ್ರಭಾಸ್ ಕೂಡ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆದಿಪುರುಷ್ ಮತ್ತು ಸಲಾರ್ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಎರಡು ಸಿನಿಮಾದ ಚಿತ್ರೀಕರಣ ಏಕಕಾಲಕ್ಕೆ ನಡೆಯುತ್ತಿದ್ದು ಪ್ರಭಾಸ್ ಎರಡು ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ಜೊತೆಗೆ ಇನ್ನು ಹೆಸರಿಡದ ನಾಗ್ ಅಶ್ವಿನ್ ಚಿತ್ರದಲ್ಲೂ ನಟಿಸುತ್ತಿದ್ದಾರೆ.

  English summary
  Prabhas watches Radhe Shyam with his team. He praises Pooja hegde acting.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X