ಪ್ರಭಾಸ್ ಅನ್ನು ಹುಡುಕಿ ಬಂದ ಬಾಲಿವುಡ್ ಆಕ್ಷನ್ ಸಿನಿಮಾ ನಿರ್ದೇಶಕ
'ಬಾಹುಬಲಿ' ಸಿನಿಮಾದ ನಂತರ ನಟ ಪ್ರಭಾಸ್ ಬಹುದೊಡ್ಡ ಸ್ಟಾರ್ ಆಗಿ ಬದಲಾಗಿದ್ದಾರೆ. ಪ್ರಭಾಸ್ ಮೇಲೆ ಬಂಡವಾಳ ಹೂಡಲು ಹಲವು ದೊಡ್ಡ ಜೇಬಿನ ನಿರ್ಮಾಪಕರು ಸಾಲುಗಟ್ಟಿ ನಿಂತಿದ್ದಾರೆ.
ನಟ ಪ್ರಭಾಸ್ ಕೈಯಲ್ಲಿ ಈಗಾಗಲೇ ಮೂರು ಭಾರಿ ಬಜೆಟ್‌ನ ಸಿನಿಮಾಗಳಿವೆ. ಪ್ರಸ್ತುತ ಎರಡು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇನ್ನೊಂದು ಸಿನಿಮಾ ವರ್ಷಾಂತ್ಯದ ವೇಳೆಗೆ ಪ್ರಾರಂಭವಾಗಲಿದೆ.
ಈ ನಡುವೆ ಮತ್ತೊಂದು ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾದ ಅವಕಾಶ ಪ್ರಭಾಸ್ ಅನ್ನು ಹುಡುಕಿ ಹೋಗಿದೆ. ಪ್ರಭಾಸ್‌ಗೆ ಕತೆ ಇಷ್ಟವಾಗಿದೆ ಎನ್ನಲಾಗುತ್ತಿದ್ದು, ಸಿನಿಮಾ ನಿರ್ದೇಶಿಲಿರುವುದು ಬಾಲಿವುಡ್‌ನ ಖ್ಯಾತ ಆಕ್ಷನ್ ಸಿನಿಮಾ ನಿರ್ದೇಶಕ ಸಿದ್ಧಾರ್ಥ್ ಆನಂದ್.

ಪ್ರಭಾಸ್‌ಗಾಗಿ ಸ್ಟೈಲಿಷ್ ಆಕ್ಷನ್ ಸಿನಿಮಾ
ಹೌದು, ಹೃತಿಕ್ ರೋಷನ್ , ಟೈಗರ್ ಶ್ರಾಫ್, ಶಾರುಖ್ ಖಾನ್ ಸಿನಿಮಾಗಳನ್ನು ನಿರ್ದೇಶಿಸಿರುವ ಸಿದ್ಧಾರ್ಥ್ ಆನಂದ್ ಪ್ರಭಾಸ್‌ಗಾಗಿ ಆಕ್ಷನ್ ಸಿನಿಮಾ ಒಂದನ್ನು ನಿರ್ದೇಶಿಸುವ ತಯಾರಿಯಲ್ಲಿದ್ದಾರೆ. ಈಗಾಗಲೇ ಕತೆಯನ್ನು ಪ್ರಭಾಸ್‌ಗೆ ಹೇಳಲಾಗಿದೆ.

ಕತೆ ಹೇಳಿರುವ ಸಿದ್ಧಾರ್ಥ್ ಆನಂದ್
ಪ್ರಸ್ತುತ ಶಾರುಖ್ ಖಾನ್, ದೀಪಿಕಾ ಪಡುಕೋಣೆ ನಟನೆಯ 'ಪಠಾಣ್' ಸಿನಿಮಾ ನಿರ್ದೇಶಿಸುತ್ತಿರುವ ಸಿದ್ಧಾರ್ಥ್ ಆನಂದ್. ಈ ಸಿನಿಮಾ ಶುರುವಾಗುವ ಮುನ್ನವೇ ಪ್ರಭಾಸ್‌ಗೆ ಕತೆ ಹೇಳಿದ್ದರಂತೆ. ಪ್ರಭಾಸ್ ಗೆ ಸಹ ಕತೆ ಇಷ್ಟವಾಗಿದ್ದು, ಪೂರ್ಣ ಚಿತ್ರಕತೆ ಮಾಡಿಕೊಳ್ಳಲು ಸೂಚಿಸಿದ್ದಾರೆ ಎನ್ನಲಾಗಿದೆ.

ಶಾರುಖ್ ಬಳಿಕ ಹೃತಿಕ್ ಜೊತೆ ಸಿನಿಮಾ
ಹೃತಿಕ್, ಟೈಗರ್ ಶ್ರಾಫ್ ಅಭಿನಯದ 'ವಾರ್' ಸಿನಿಮಾ ನಿರ್ದೇಶಿಸಿರುವ ಸಿದ್ಧಾರ್ಥ್ ಆನಂದ್. ಪಠಾಣ್ ನಂತರ ಮತ್ತೆ ಹೃತಿಕ್-ದೀಪಿಕಾ ನಟನೆಯ 'ಫೈಟರ್' ಸಿನಿಮಾ ನಿರ್ದೇಶಿಸಲಿದ್ದಾರೆ. ಅದಾದ ಬಳಿಕ ಪ್ರಭಾಸ್ ಜೊತೆ ಸಿನಿಮಾ ಮಾಡಲಿದ್ದಾರೆ.
Recommended Video

ವರ್ಷಪೂರ್ತಿ ಬ್ಯುಸಿಯಾಗಿರುವ ಪ್ರಭಾಸ್
ನಟ ಪ್ರಭಾಸ್ ಸಹ ಈ ವರ್ಷಪೂರ್ತಿ ಬ್ಯುಸಿಯಾಗಿದ್ದಾರೆ. ಪ್ರಸ್ತುತ ಅವರು ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. ಅದರ ನಂತರ ಭಾರತದ ಅತಿ ದೊಡ್ಡ ಬಜೆಟ್ ಸಿನಿಮಾ 'ಆದಿಪುರುಷ್' ನಲ್ಲಿ ನಟಿಸಲಿದ್ದಾರೆ. ಅದರ ನಂತರ ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್ ಜೊತೆಗೆ ಸಿನಿಮಾ ಒಂದನ್ನು ಮಾಡಲಿದ್ದಾರೆ. ಅದಾದ ಬಳಿಕವಷ್ಟೆ ಸಿದ್ಧಾರ್ಥ್ ಆನಂದ್ ಸಿನಿಮಾ ಪ್ರಾರಂಭವಾಗಲಿದೆ.


Click it and Unblock the Notifications











