ಆಸ್ಪತ್ರೆ ಸೇರಲಿದ್ದಾರೆ ಪ್ರಭಾಸ್: ಅಸಲಿಗೆ ಆಗಿರುವುದೇನು?

ಬಾಹುಬಲಿ ನಟ ಪ್ರಭಾಸ್ ಕೆಲವು ದಿನಗಳ ಹಿಂದಷ್ಟೆ ವಿದೇಶದಿಂದ ಶೂಟಿಂಗ್ ಮುಗಿಸಿ ವಾಪಸ್ಸಾಗಿದ್ದಾರೆ. ವಿದೇಶದಿಂದ ಬಂದ ಕಾರಣ ಹೋಂ ಕ್ವಾರೆಂಟೈನ್‌ನಲ್ಲಿ ಪ್ರಭಾಸ್ ಇದ್ದಾರೆ.

Recommended Video

ನಾನು ಪ್ರಭಾಸ್ ರನ್ನು ಬಿಡಲ್ಲ ಎಂದ ಅನುಷ್ಕಾ ಶೆಟ್ಟಿ | Anushka Shetty & Prabhas | Filmibeat Kannada

ಅವರು ಆಸ್ಪತ್ರೆಗೆ ಹೋಗಲಿದ್ದಾರೆ ಎಂಬುದೇನೋ ನಿಜ, ಆದರೆ ಯಾವುದೇ ಖಾಯಿಲೆ ಕಾರಣಕ್ಕಲ್ಲ, ಕೊರೊನಾ ಕಾರಣಕ್ಕಂತೂ ಅಲ್ಲವೇ ಅಲ್ಲ. ಪ್ರಭಾಸ್ ಆರೋಗ್ಯವಾಗಿದ್ದಾರೆ ಅವರಿಗೆ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ.

ಆದರೂ ಪ್ರಭಾಸ್ ಆಸ್ಪತ್ರೆಗೆ ಹೋಗಲಿರುವುದು ಶೂಟಿಂಗ್ ಕಾರಣಕ್ಕೆ. ಹೌದು, ಈ ಕೊರೊನಾ ಅಟ್ಟಹಾಸ ಮುಗಿದ ಬಳಿಕ ಅವರು ಆಸ್ಪತ್ರೆಗೆ ಹೋಗಲಿದ್ದಾರೆ, ಅದೂ ಸಹ ಶೂಟಿಂಗ್ ಕಾರಣಕ್ಕೆ.

ಕೊರೊನಾ ಲಾಕ್‌ಡೌನ್ ಆಗುವ ಮುನ್ನವೇ ಅನ್ನಪೂರ್ಣ ಸ್ಟುಡಿಯೋದಲ್ಲಿ ಪ್ರಭಾಸ್ ಸಿನಿಮಾಕ್ಕೋಸ್ಕರ ಆಸ್ಪತ್ರೆಯ ಸೆಟ್ ಹಾಕಲಾಗಿದೆ. ಕೊರೊನಾ ಭೀತಿ ಮುಗಿದು ಶೂಟಿಂಗ್ ಪ್ರಾರಂಭವಾದಾಗ ಪ್ರಭಾಸ್ ಅಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ.

ಜಾನ್ ಸಿನಿಮಾಕ್ಕೆ ವಿದೇಶಕ್ಕೆ ತೆರಳಿದ್ದ ಪ್ರಭಾಸ್

ಜಾನ್ ಸಿನಿಮಾಕ್ಕೆ ವಿದೇಶಕ್ಕೆ ತೆರಳಿದ್ದ ಪ್ರಭಾಸ್

ಜಾನ್ ಸಿನಿಮಾದ ಚಿತ್ರೀಕರಣಕ್ಕಾಗಿ ಪ್ರಭಾಸ್ ಮತ್ತು ಚಿತ್ರತಂಡ ಜಾರ್ಜಿಯಾಕ್ಕೆ ಹೋಗಿದ್ದರು. ಕೊರೊನಾ ವೈರಸ್ ಹಾವಳಿ ಹೆಚ್ಚಾಗುವ ಮೊದಲೆ ಚಿತ್ರತಂಡ ವಿದೇಶಕ್ಕೆ ಹಾರಿತ್ತು. ಕೆಲವು ದಿನಗಳ ಹಿಂದೆ ಚಿತ್ರತಂಡ ವಾಪಸ್ಸಾಗಿದ್ದು ಶೂಟಿಂಗ್ ಬಂದ್ ಆಗಿರುವ ಕಾರಣ ಎಲ್ಲರೂ ಮನೆಯಲ್ಲಿದ್ದಾರೆ.

ಇಲ್ಲಿ ಸೆಟ್ ನಿರ್ಮಾಣ ಆರಂಭವಾಗಿತ್ತು

ಇಲ್ಲಿ ಸೆಟ್ ನಿರ್ಮಾಣ ಆರಂಭವಾಗಿತ್ತು

ಜಾರ್ಜಿಯಾಕ್ಕೆ ಶೂಟಿಂಗ್ ಗೆ ತೆರಳಿದಾಗಲೇ ಇಲ್ಲಿ ಅನ್ನಪೂರ್ಣ ಸ್ಟುಡಿಯೋದಲ್ಲಿ ಆಸ್ಪತ್ರೆಯ ಸೆಟ್ ತಯಾರಾಗುತ್ತಿತ್ತು, ಆದರೆ ಕೊರೊನಾ ಲಾಕ್‌ ಡೌನ್ ಆದ ನಂತರ ಆ ಕಾರ್ಯವೂ ನಿಂತಿದೆ. ಸೆಟ್ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಕೊರೊನಾ ಲಾಕ್‌ಡೌನ್ ಮುಗಿದ ನಂತರ ಚಿತ್ರೀಕರಣ ಪ್ರಾರಂಭವಾಗಲಿದೆ.

ಜಾರ್ಜಿಯಾದಿಂದ ವಾಪಸ್ಸಾಗಿದ್ದ ಪ್ರಭಾಸ್

ಜಾರ್ಜಿಯಾದಿಂದ ವಾಪಸ್ಸಾಗಿದ್ದ ಪ್ರಭಾಸ್

ಜಾರ್ಜಿಯಾದಿಂದ ವಾಪಸ್ ಬಂದಿದ್ದ ಪ್ರಭಾಸ್ ಸೆಲ್ಫ್ ಕ್ವಾರೆಂಟೈನ್‌ ವಿಧಿಸಿಕೊಂಡಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿಯೂ ಬರೆದುಕೊಂಡಿದ್ದರು. ''ವಿದೇಶದಿಂದ ಚಿತ್ರೀಕರಣ ಮುಗಿಸಿ ಸುರಕ್ಷಿತವಾಗಿ ವಾಪಸ್ ಬಂದಿದ್ದೀವಿ. ಕೊರೊನಾ ಹೆಚ್ಚುತ್ತಿರುವ ಕಾರಣ ನಾನು ಸ್ವಯಂ ಸಂಪರ್ಕದಲ್ಲಿ ಇರಲು ನಿರ್ಧರಿಸಿದ್ದೇನೆ. ನೀವೆಲ್ಲರು ಸುರಕ್ಷಿತರಾಗಿರಲು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದೀರಿ ಎಂದು ಭಾವಿಸುತ್ತೇನೆ" ಎಂದು ಪ್ರಭಾಸ್ ಹೇಳಿದ್ದರು.

ಇನ್ನೆರಡು ಸಿನಿಮಾಕ್ಕೆ ಸಹಿ ಹಾಕಿದ್ದಾರೆ

ಇನ್ನೆರಡು ಸಿನಿಮಾಕ್ಕೆ ಸಹಿ ಹಾಕಿದ್ದಾರೆ

ಪ್ರಭಾಸ್ ಅವರು ಜಾನ್ ಸಿನಿಮಾ ಜೊತೆಗೆ ಇನ್ನೆರಡು ಸಿನಿಮಾಕ್ಕೆ ಸಹಿ ಹಾಕಿದ್ದಾರೆ. ನಾಗ್ ಅಶ್ವಿನ್ ಜೊತೆಗೆ ಸೈನ್ಸ್ ಫಿಕ್ಷನ್ ಸಿನಿಮಾ ಒಂದು ಮಾಡುತ್ತಿದ್ದು, ಇದಕ್ಕೆ ಬಾಲಿವುಡ್‌ನ ಕರೀನಾ ಕಪೂರ್ ನಾಯಕಿಯಾಗುವ ಸಾಧ್ಯತೆ ಇದೆ.

More from Filmibeat

English summary
Hospital set is ready for Prabhas's new movie. After corona lock down ends Prabhas will join the shooting.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X