For Quick Alerts
  ALLOW NOTIFICATIONS  
  For Daily Alerts

  ಸಲಾರ್ ಬಳಿಕ 'ಆದಿಪುರುಷ್' ಚಿತ್ರೀಕರಣಕ್ಕೆ ಪ್ರಭಾಸ್ ಎಂಟ್ರಿ

  |

  ಸಲಾರ್ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಜನವರಿ 29 ರಿಂದ ಶೂಟಿಂಗ್ ಆರಂಭಿಸಿದ್ದ ಸಲಾರ್ 9 ದಿನಗಳ ಕಾಲ ಮೊದಲ ಶೆಡ್ಯೂಲ್‌ ಮುಗಿಸಿದೆ. ಈಗ ಮುಂದಿನ ಹಂತದ ಚಿತ್ರೀಕರಣಕ್ಕೆ ನಿರ್ದೇಶಕ ಪ್ರಶಾಂತ್ ನೀಲ್ ಸಜ್ಜಾಗುತ್ತಿದ್ದಾರೆ.

  ಈ ನಡುವೆ ನಟ ಪ್ರಭಾಸ್ ಬಾಲಿವುಡ್ ಚಿತ್ರ ಆದಿಪುರುಷ್ ಶೂಟಿಂಗ್ ಶುರು ಮಾಡಲಿದ್ದಾರೆ. ಈಗಾಗಲೇ ಆದಿಪುರುಷ್ ಚಿತ್ರೀಕರಣ ನಡೆಯುತ್ತಿದೆ. ಆದರೆ, ಪ್ರಭಾಸ್ ಪಾಲ್ಗೊಂಡಿಲ್ಲ. ಫೆಬ್ರವರಿ 15 ರಿಂದ ಪ್ರಭಾಸ್ ಸೆಟ್‌ಗೆ ಹೋಗಲಿದ್ದಾರೆ ಎಂದು ಹೇಳಲಾಗಿದೆ.

  ಶೂಟಿಂಗ್ ಶುರುವಾದ ಮೊದಲ ದಿನವೇ ಆದಿಪುರುಷ್ ಸೆಟ್‌ನಲ್ಲಿ ಬೆಂಕಿ ಅವಘಡಶೂಟಿಂಗ್ ಶುರುವಾದ ಮೊದಲ ದಿನವೇ ಆದಿಪುರುಷ್ ಸೆಟ್‌ನಲ್ಲಿ ಬೆಂಕಿ ಅವಘಡ

  ಆರಂಭಿಕ ಹಂತದಲ್ಲಿ ಪ್ರಭಾಸ್ ಅವರ ಪ್ರಮುಖ ದೃಶ್ಯಗಳನ್ನು ಸೆರೆಹಿಡಿಯಲಾಗುತ್ತದೆ ಎಂಬ ಮಾಹಿತಿ ಸಿಕ್ಕಿದೆ. ಸದ್ಯಕ್ಕೆ ಸೈಫ್ ಅಲಿ ಖಾನ್ ಶೂಟಿಂಗ್ ಶುರು ಮಾಡಲ್ಲ. ನಂತರ ದಿನದಲ್ಲಿ ಸೈಫ್ ಚಿತ್ರತಂಡಕ್ಕೆ ಸೇರಿಕೊಳ್ಳಲಿದ್ದಾರೆ.

  ಅಂದ್ಹಾಗೆ, ಈ ಮುಂಚೆಯೇ ಪ್ರಭಾಸ್ ಆದಿಪುರುಷ್ ಸೆಟ್‌ಗೆ ಸೇರಿಕೊಳ್ಳಬೇಕಿತ್ತು. ಆದರೆ, ಸೆಟ್‌ನಲ್ಲಿ ಬೆಂಕಿ ಅವಘಡ ಸಂಭವಿಸಿ ಸಮಸ್ಯೆಯಾಗಿತ್ತು. ಹಾಗಾಗಿ, ಸ್ವಲ್ಪ ದಿನ ಮಟ್ಟಿಗೆ ಪ್ರಭಾಸ್ ಚಿತ್ರೀಕರಣ ಮುಂದೂಡಲಾಗಿತ್ತು.

  ಅಂದ್ಹಾಗೆ, ಆದಿಪುರುಷ್ ಚಿತ್ರವನ್ನು ಓಂ ರಾವತ್ ನಿರ್ದೇಶಿಸುತ್ತಿದ್ದು, ಭೂಷಣ್ ಕುಮಾರ್, ಕೃಷ್ಣನ್ ಕುಮಾರ್, ಓಂ ರಾವತ್, ಪ್ರಸಾದ್ ಸುತಾರ್, ರಾಜೇಶ್ ನಾಯರ್ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ.

  ತೆಲುಗು, ಹಿಂದಿ, ತಮಿಳು, ಮಲಯಾಳಂ ಹಾಗೂ ಕನ್ನಡ ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಸ್ವತಃ ಚಿತ್ರತಂಡ ಹೇಳಿರುವ ಪ್ರಕಾರ, 2022ರ ಆಗಸ್ಟ್ 11 ರಂದು ಆದಿಪುರುಷ್ ಸಿನಿಮಾ ವರ್ಲ್ಡ್ ವೈಡ್ ತೆರೆಕಾಣಲಿದೆ.

  ಇಲ್ಲಿಗೆ ಬಾ ನೋಡ್ಕೊತಿವಿ ಅಂದ್ರು ರೆಡ್ಡಿ ಬ್ರದರ್ಸ್ | Mayur Patel | Filmibeat Kannada
  English summary
  Telugu actor Prabhas will start Adipurush movie shooting from February 15th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X