ಶಿವಣ್ಣ ಚಿತ್ರಕ್ಕಾಗಿ ಪ್ರಭಾಸ್, ಪ್ರಭಾಸ್ ಚಿತ್ರಕ್ಕಾಗಿ ಶಿವಣ್ಣ ವೈಟಿಂಗ್; ಶಿವಣ್ಣನಿಗೆ ಥ್ಯಾಂಕ್ಸ್ ಸರ್ ಎಂದ ಪ್ರಭಾಸ್!

ಸ್ಯಾಂಡಲ್‌ವುಡ್ ಕಿಂಗ್ ಶಿವ ರಾಜ್‌ಕುಮಾರ್ ಹಾಗೂ ಎ ಹರ್ಷ ಕಾಂಬಿನೇಶನ್‌ನ ನಾಲ್ಕನೇ ಚಿತ್ರ ವೇದ ಕಳೆದ ಡಿಸೆಂಬರ್ ತಿಂಗಳ 23ರಂದು ಬಿಡುಗಡೆಗೊಂಡು ಒಳ್ಳೆಯ ಪ್ರಶಂಸೆಯನ್ನು ಗಿಟ್ಟಿಸಿಕೊಂಡಿತ್ತು. ಈ ಬಾರಿ ವಿಭಿನ್ನ ಕಥೆಯನ್ನು ಹೊತ್ತು ತಂದಿದ್ದ ಈ ಜೋಡಿ ಫ್ಯಾಮಿಲಿ ಆಡಿಯನ್ಸ್ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಹೆಣ್ಣು ಮಕ್ಕಳ ಮೇಲಾಗುವ ಕಿರುಕುಳ ಹಾಗೂ ಶೋಷಣೆ ವಿರುದ್ಧ ಹೋರಾಟವಿದ್ದ ಚಿತ್ರ ಕಥೆಯನ್ನು ಕನ್ನಡ ಸಿನಿ ರಸಿಕರು ಮೆಚ್ಚಿಕೊಂಡು ಇಂತಹ ಕಥೆಗಳನ್ನು ಸ್ಟಾರ್ ನಟರು ಆರಿಸಿಕೊಂಡು ನಟಿಸಿ ಸಮಾಜಕ್ಕೆ ಉತ್ತಮ ಸಂದೇಶ ಕೊಡಬೇಕು ಎಂದು ಪ್ರತಿಕ್ರಿಯಿಸಿದ್ದರು.

ಇನ್ನು ವೇದ ಚಿತ್ರ ಕನ್ನಡ ಸಿನಿ ರಸಿಕರಿಂದ ಮಾತ್ರವಲ್ಲದೇ ತಮಿಳು ಸಿನಿ ರಸಿಕರಿಂದಲೂ ಸಹ ಮೆಚ್ಚುಗೆಯನ್ನು ಪಡೆದುಕೊಂಡಿತ್ತು. ಹೌದು, ವೇದ ಚಿತ್ರವನ್ನು ತಮಿಳಿಗೂ ಸಹ ಡಬ್ ಮಾಡಿ ಬಿಡುಗಡೆ ಮಾಡಲಾಗಿತ್ತು. ಚಿತ್ರವನ್ನು ಚಿತ್ರಮಂದಿರಗಳಲ್ಲಿ ನೋಡಿ ಹೊರಬಂದಿದ್ದ ತಮಿಳು ಚಿತ್ರ ಪ್ರೇಮಿಗಳು ಕನ್ನಡ ಚಿತ್ರರಂಗದಿಂದ ಇತ್ತೀಚೆಗೆ ಒಳ್ಳೊಳ್ಳೆ ಚಿತ್ರಗಳು ಮೂಡಿ ಬರುತ್ತಿದ್ದು, ಅಂತಹ ಒಳ್ಳೆಯ ಚಿತ್ರಗಳ ಸಾಲಿಗೆ ಈ ವೇದ ಚಿತ್ರ ಸಹ ಸೇರ್ಪಡೆಗೊಂಡಿದೆ ಎಂದು ಕೊಂಡಾಡಿದ್ದರು.

ವೇದ ಚಿತ್ರಕ್ಕೆ ತಮಿಳಿನಲ್ಲೂ ಸಹ ಮೆಚ್ಚುಗೆ ವ್ಯಕ್ತವಾಗಿದ್ದನ್ನು ಕಂಡಿದ್ದ ಕನ್ನಡ ಚಿತ್ರ ಪ್ರೇಮಿಗಳು ಚಿತ್ರವನ್ನು ತಮಿಳಿಗೆ ಮಾತ್ರ ಡಬ್ ಮಾಡಿದ್ದೀರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರವನ್ನು ಬಿಡುಗಡೆ ಮಾಡಬಹುದಿತ್ತು ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಅದರಂತೆ ಇದೀಗ ವೇದ ಚಿತ್ರ ತೆಲುಗು ಭಾಷೆಗೂ ಡಬ್ ಆಗಿ ಬಿಡುಗಡೆಯಾಗಲು ಸಜ್ಜಾಗಿದೆ. ಹೌದು, ವೇದ ಸಿನಿಮಾದ ತೆಲುಗು ವರ್ಷನ್‌ಗೆ 'ಶಿವ ವೇದ' ಎಂಬ ಟೈಟಲ್ ಇಡಲಾಗಿದ್ದು, ಇದೇ ಫೆಬ್ರವರಿ 9ರಂದು ಚಿತ್ರ ತೆರೆಗೆ ಬರಲಿದೆ. ಹೀಗೆ ಶಿವ ರಾಜ್‌ಕುಮಾರ್ ನಟನೆಯ ಚಿತ್ರ ತೆಲುಗಿಗೆ ಡಬ್ ಆಗಿ ಬಿಡುಗಡೆಯಾಗುತ್ತಿರುವುದರ ಬಗ್ಗೆ ತೆಲುಗಿನ ಸ್ಟಾರ್ ನಟ ಪ್ರಭಾಸ್ ಪೋಸ್ಟ್ ಮಾಡಿ ಪ್ರಚಾರ ಮಾಡಿದ್ದಾರೆ.

ಶಿವ ವೇದ ಟ್ರೈಲರ್ ಹಂಚಿಕೊಂಡ ಪ್ರಭಾಸ್

ಶಿವ ವೇದ ಟ್ರೈಲರ್ ಹಂಚಿಕೊಂಡ ಪ್ರಭಾಸ್

ಮುಂದಿನ ವಾರ ಬಿಡುಗಡೆಯಾಗಲಿರುವ ಶಿವವೇದ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಈ ಟ್ರೈಲರ್‌ನ ಲಿಂಕ್ ಅನ್ನು ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯ ಸ್ಟೋರಿಯಲ್ಲಿ ಪೋಸ್ಟ್ ಮಾಡಿರುವ ಪ್ರಭಾಸ್ ಕನ್ನಡದ ಲೆಜೆಂಡರಿ ಸೂಪರ್‌ಸ್ಟಾರ್ ಶಿವ ರಾಜ್‌ಕುಮಾರ್ ಅವರ ಶಿವ ವೇದ ಚಿತ್ರ ಇದೇ ಫೆಬ್ರವರಿ 9ರಂದು ತೆರೆಗೆ ಬರುತ್ತಿದ್ದು, ಯಶಸ್ಸು ಗಳಿಸಲಿ ಎಂದು ಶುಭ ಕೋರುತ್ತಿದ್ದೇನೆ, ಟ್ರೈಲರ್ ಸಖತ್ತಾಗಿದೆ ಎಂದು ಬರೆದುಕೊಂಡಿದ್ದಾರೆ.

ಪ್ರಭಾಸ್ ವಿಶ್‌ಗೆ ಶಿವಣ್ಣನ ಪ್ರತಿಕ್ರಿಯೆ, ಧನ್ಯವಾದ ತಿಳಿಸಿದ ಪ್ರಭಾಸ್

ಪ್ರಭಾಸ್ ವಿಶ್‌ಗೆ ಶಿವಣ್ಣನ ಪ್ರತಿಕ್ರಿಯೆ, ಧನ್ಯವಾದ ತಿಳಿಸಿದ ಪ್ರಭಾಸ್

ಹೀಗೆ ಪ್ರಭಾಸ್ ವೇದ ಚಿತ್ರದ ತೆಲುಗು ವರ್ಷನ್ ರಿಲೀಸ್‌ಗೆ ಶುಭ ಕೋರಿ ಸ್ಟೋರಿ ಹಂಚಿಕೊಂಡಿದ್ದನ್ನು ಶೇರ್ ಮಾಡಿದ ಶಿವ ರಾಜ್‌ಕುಮಾರ್ ಪ್ರಭಾಸ್‌ಗೆ ಧನ್ಯವಾದ ತಿಳಿಸಿ, ನಿಮ್ಮ ಸಲಾರ್ ಚಿತ್ರಕ್ಕಾಗಿ ಕಾಯುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಶಿವ ರಾಜ್‌ಕುಮಾರ್ ಅವರ ಈ ರಿಪ್ಲೈಗೆ ಪ್ರತಿಕ್ರಿಯಿಸಿದ ನಟ ಪ್ರಭಾಸ್ ಥ್ಯಾಂಕ್ಸ್ ಸರ್ ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ಇಬ್ಬರ ಇನ್ಸ್ಟಾಗ್ರಾಮ್ ಸ್ಟೋರಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಇಬ್ಬರ ನಡುವಿನ ಬಾಂಧವ್ಯದ ಬಗ್ಗೆ ಮೆಚ್ಚುಗೆ ವ್ಯಕ್ತವಾಗ್ತಿದೆ.

ವೇದ ಓಟಿಟಿ ಬಿಡುಗಡೆ ದಿನಾಂಕ ಪ್ರಕಟ

ವೇದ ಓಟಿಟಿ ಬಿಡುಗಡೆ ದಿನಾಂಕ ಪ್ರಕಟ

ವೇದ ತೆಲುಗು ವರ್ಷನ್ ಫೆಬ್ರವರಿ 9ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡರೆ, ಇದರ ನಾಳೆಯೇ ವೇದ ಕನ್ನಡ ವರ್ಷನ್ ಓಟಿಟಿ ವೇದಿಕೆಗೆ ಲಗ್ಗೆ ಇಡಲಿದೆ. ಹೌದು, ಫೆಬ್ರವರಿ 10 ರಂದು ವೇದ ಚಿತ್ರ ಝೀ ಫೈವ್ ಅಪ್ಲಿಕೇಶನ್‌ನಲ್ಲಿ ಸ್ಟ್ರೀಮ್ ಆಗಲು ಆರಂಭಿಸಲಿದೆ. ಇನ್ನು ವೇದ ಚಿತ್ರ ಬೆಂಗಳೂರಿನ ಕೆಜಿ ರಸ್ತೆಯ ಮುಖ್ಯ ಚಿತ್ರಮಂದಿರದಲ್ಲಿ 30ಕ್ಕೂ ಹೆಚ್ಚಿನ ದಿನಗಳನ್ನು ಪೂರೈಸಿದ್ದು, ಓಟಿಟಿ ಯುಗದಲ್ಲಿ ಕಾಂತಾರ ಬಳಿಕ ಕೆಜಿ ರಸ್ತೆಯ ಮುಖ್ಯ ಚಿತ್ರಮಂದಿರಲ್ಲಿ 30 ದಿನಗಳನ್ನು ಪೂರೈಸಿದ ಚಿತ್ರ ಎನಿಸಿಕೊಂಡಿದೆ.

More from Filmibeat

English summary
Prabhas wished Shiva Rajkumar for Shiva Vedha telugu release. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X