Prabhas: ಡಾರ್ಲಿಂಗ್‌ ಫ್ಯಾನ್ಸ್‌ಗೆ ಗುಡ್‌ನ್ಯೂಸ್: ದಸರಾಗೆ ಪ್ರಭಾಸ್ ಮದುವೆ ಎಂದ ದೊಡ್ಡಮ್ಮ ಶ್ಯಾಮಲಾ

ಸೌತ್ ಸಿನಿದುನಿಯಾದ ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಯಾರು ಅಂದ್ರೆ ಪ್ರಭಾಸ್ ಹೆಸರು ಮೊದಲಿಗೆ ಕೇಳಿ ಬರುತ್ತದೆ. ವಯಸ್ಸು 40 ದಾಟಿದ್ರು ಯಂಗ್ ರೆಬಲ್ ಸ್ಟಾರ್ ಮಾತ್ರ ಮದುವೆ ಬಗ್ಗೆ ಆಲೋಚಿಸಿದಂತೆ ಕಾಣುತ್ತಿಲ್ಲ. ಪದೇ ಪದೆ ಪ್ರಭಾಸ್ ಮದುವೆ ವಿಚಾರ ಕೇಳಿಬಂದರೂ ಯಾವುದು ನಿಜವಾಗಲಿಲ್ಲ.

ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಮದುವೆ ಆಗುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಲೇ ಇದ್ದಾರೆ. ಪ್ರಭಾಸ್ ಹಾಗೂ ಸ್ವೀಟಿ ಮದುವೆ ಆಗಿರುವಂತೆ ದಂಪತಿಗೆ ಮಕ್ಕಳಿರುವಂತೆ AI ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದರು. ಪ್ರಭಾಸ್ ಹಾಗೂ ಅನುಷ್ಕಾ 3 ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಆತ್ಮೀಯ ಸ್ನೇಹಿತರು ಕೂಡ. ಇದೇ ಕಾರಣಕ್ಕೆ ಇಬ್ಬರೂ ಮದುವೆ ಆಗುತ್ತಾರೆ ಎನ್ನುವ ಮಾತುಗಳು ಪದೇ ಪದೆ ಕೇಳಿ ಬರುತ್ತದೆ.

Prabhass Aunt Shyamala Devi reacts to Actors marriage

ಈ ಹಿಂದೆ ದೊಡ್ಡಪ್ಪ ಕೃಷ್ಣಂರಾಜು ಕೂಡ ಪ್ರಭಾಸ್ ಮದುವೆ ಮಾಡಲು ಪ್ರಯತ್ನಿಸಿದ್ದರು. ಸಾವಿರಾರು ಮದುವೆ ಪ್ರಪೋಸಲ್‌ಗಳು ಬಂದಿತ್ತು ಎಂದು ಸುದ್ದಿಯಾಗಿತ್ತು. 'ಬಾಹುಬಲಿ' ಸರಣಿ ಸಿನಿಮಾಗಳ ಬಳಿಕ ಯಂಗ್ ರೆಬಲ್ ಸ್ಟಾರ್ ಹಸೆಮಣೆ ಏರುತ್ತಾರೆ ಅಂತ್ಲೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಬಾಹುಬಲಿ-2 ಸಿನಿಮಾ ಬಂದೋಗಿ ಐದಾರು ವರ್ಷ ಕಳೆದರೂ ಮದುವೆ ಸುದ್ದಿ ಮಾತ್ರ ಸಿಗಲೇಯಿಲ್ಲ.

ಸದ್ಯ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಪ್ರಭಾಸ್ ದರ್ಬಾರ್ ನಡೆಸುತ್ತಿದ್ದಾರೆ. ಮೂರ್ನಾಲ್ಕು ಹೈ ಬಜೆಟ್ ಸಿನಿಮಾಗಳು ಡಾರ್ಲಿಂಗ್ ಕೈಯಲ್ಲಿವೆ. ಅಭಿಮಾನಿಗಳು ಕೂಡ ಪ್ರಭಾಸ್ ಮದುವೆ ಬಗ್ಗೆ ಕೇಳಿ ಕೇಳಿ ಸುಸ್ತಾಗಿದ್ದಾರೆ. ಇನ್ನು ಯಂಗ್ ರೆಬಲ್ ಸ್ಟಾರ್ ಕೈಯಲ್ಲಿರುವ ಸಿನಿಮಾಗಳ ಲಿಸ್ಟ್ ನೋಡಿ ಪ್ರಭಾಸ್ ಮದುವೆ ಸದ್ಯಕ್ಕೆ ಅನುಮಾನ ಅಂತ್ಲೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಡಾರ್ಲಿಂಗ್ ಮದುವೆ ಬಗ್ಗೆ ದೊಡ್ಡಮ್ಮ ಪ್ರತಿಕ್ರಿಯಿಸಿದ್ದಾರೆ.

ಪ್ರಭಾಸ್ ದೊಡ್ಡಪ್ಪ ಕೃಷ್ಣಂರಾಜು ಹಾಗೂ ದೊಡ್ಡಮ್ಮ ಶ್ಯಾಮಲಾ ದೇವಿ ತಂದೆ ತಾಯಿ ಸಮಾನರು. ನವರಾತ್ರಿ ಉತ್ಸವದ ಸಂದರ್ಭದ ಪೂಜೆಯಲ್ಲಿ ಭಾಗಿಯಾಗಿದ್ದ ಶ್ಯಾಮಲಾ, ಪ್ರಭಾಸ್ ಮದುವೆ ಕುರಿತ ಪ್ರಶ್ನೆಗೆ ಉತ್ತರಿಸಿದ್ದಾರೆ. ಮುಂದಿನ ದಸರಾ ಹೊತ್ತಿಗೆ ಪ್ರಭಾಸ್ ಮದುವೆ ಆಗುತ್ತದೆ ಎಂದು ಹೇಳಿ ಅಭಿಮಾನಿಗಳಿಗೆ ಸಂತಸ ತಂದಿದ್ದಾರೆ.

"ಪ್ರಭಾಸ್ ಅಷ್ಟು ಎತ್ತರಕ್ಕೆ ಬೆಳೆದಿರವುದು ನೋಡಿದರೆ ಸಂತೋಷವಾಗುತ್ತದೆ. ಕೃಷ್ಣಂರಾಜು ಕೂಡ ಅದನ್ನೆಲ್ಲಾ ನೋಡಿದ್ದಾರೆ. ಕೃಷ್ಣಂರಾಜು ಸಾಧನೆ, ಸೇವೆ ಎಂಥದ್ದು ಅನ್ನೋದು ಎಲ್ಲರಿಗೂ ಗೊತ್ತಿದೆ. ಅಂತಹ ವ್ಯಕ್ತಿಗೆ ನಾನು ಮಡದಿ ಆಗಿದ್ದಕ್ಕೆ ಇಂತಹ ಮಕ್ಕಳನ್ನು ಪಡೆದಿದ್ದಕ್ಕೆ ನಮಗೆ ಪ್ರಭಾಸ್‌ನಂತ ಮಗ ಇರುವುದು ಎಷ್ಟು ಜನ್ಮದಲ್ಲಿ ನಾವು ಮಾಡಿದ ಪುಣ್ಯ".

ಪ್ರಭಾಸ್ ಮದುವೆ ಯಾವಾಗ? ಹುಡುಗಿ ಯಾರು? ಅನ್ನೋದು ಗೊತ್ತಿಲ್ಲ. ಆದರೆ 100%ರಷ್ಟು ಪ್ರಭಾಸ್‌ಗೆ ಮದುವೆ ಆಗುತ್ತದೆ. ನೀವೆಲ್ಲಾ ಖುಷಿಪಡುವ ದಿನ ಶೀಘ್ರದಲ್ಲೇ ಬರಲಿದೆ. ಅದಕ್ಕೆ ಆ ತಾಯಿಯ ಆಶೀರ್ವಾದ ಕೂಡ ಇದೆ. ಮುಂದಿನ ದಸರಾ ವೇಳೆಗೆ ಖಂಡಿತ ಪ್ರಭಾಸ್ ಮದುವೆ ನಡೆಯುತ್ತದೆ. ದೇವರು ಹಾಗೂ ಕೃಷ್ಣಂರಾಜು ಆಶೀರ್ವಾದದಿಂದ ಅದನ್ನು ಶೀಘ್ರದಲ್ಲೇ ಎಲ್ಲರೂ ನೋಡಬಹುದು" ಎಂದಿದ್ದಾರೆ.

ಸಿನಿಮಾಗಳ ವಿಚಾರಕ್ಕೆ ಬಂದರೆ ಪ್ರಭಾಸ್ ನಟನೆಯ 'ಸಲಾರ್' ಡಿಸೆಂಬರ್ 22ಕ್ಕೆ ರಿಲೀಸ್ ಆಗಲಿದೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರವನ್ನು ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡಿದೆ. ಶಾರುಖ್ ಖಾನ್ 'ಡಂಕಿ' ಎದುರು 'ಸಲಾರ್' ಆರ್ಭಟ ಶುರುವಾಗಲಿದೆ. ಇನ್ನು ನಾಗ್ ಅಶ್ವಿನ್ ನಿರ್ದೇಶನದ 'ಕಲ್ಕಿ' ಚಿತ್ರವೂ ಭಾರೀ ನಿರೀಕ್ಷೆ ಮೂಡಿಸಿದೆ.

ಮಾರುತಿ ನಿರ್ದೇಶನದ 'ರಾಜಾ ಡೀಲಕ್ಸ್' ಸಿನಿಮಾ ಚಿತ್ರೀಕರಣ ಕೂಡ ಸದ್ದಿಲ್ಲದೇ ನಡೀತಿದೆ. ಇನ್ನು 'ಸಲಾರ್' ಎರಡು ಭಾಗಗಳಾಗಿ ಪ್ರೇಕ್ಷಕರ ಮುಂದೆ ಬರಲಿದೆ. ಇನ್ನು ಲೋಕೇಶ್ ಕನಕರಾಜ್ ಸೇರಿದಂತೆ ಹಲವರು ಪ್ರಭಾಸ್ ಕಾಂಬಿನೇಷನ್‌ನಲ್ಲಿ ಸಿನಿಮಾ ಮಾಡಲು ಉತ್ಸುಕರಾಗಿದ್ದಾರೆ.

More from Filmibeat

English summary
Aunt Shyamala Devi hints Prabhas's marriage very soon;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X