For Quick Alerts
  ALLOW NOTIFICATIONS  
  For Daily Alerts

  'ರಾಧೇ ಅತ್ಯಂತ ಕೆಟ್ಟ ಸಿನಿಮಾ, ಪ್ರಭುದೇವ ಹಾಳು ಮಾಡಿದ್ದಾರೆ' ಎಂದ ನಟಿ

  |

  ಸಲ್ಮಾನ್ ಖಾನ್ ಅಭಿನಯದಲ್ಲಿ ತೆರೆಕಂಡಿರುವ 'ರಾಧೇ' ಸಿನಿಮಾ ಬಹಳ ಚೆನ್ನಾಗಿದೆ, ಸೂಪರ್ ಹಿಟ್ ಎಂದು ಅಭಿಮಾನಿಗಳು ಬೊಬ್ಬೆ ಹೊಡೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಮರ್ಶಾತ್ಮಕವಾಗಿ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

  ಈ ನಡುವೆ ರಾಧೇ ಅತ್ಯಂತ ಕೆಟ್ಟ ಸಿನಿಮಾ, ಪ್ರಭುದೇವ ಅವರದ್ದು ಕೆಟ್ಟ ನಿರ್ದೇಶಕ ಎಂದು ನಟಿ ಶ್ರೀ ರೆಡ್ಡಿ ಕಾಮೆಂಟ್ ಮಾಡಿದ್ದಾರೆ. ಟ್ವಿಟ್ಟರ್‌ನಲ್ಲಿ ಚಿತ್ರದ ಬಗ್ಗೆ ಅಸಮಾಧಾನ ಹೊರಹಾಕಿರುವ ನಟಿ ಪ್ರಭುದೇವ ಕೆಲಸದ ಬಗ್ಗೆ ಟೀಕಿಸಿದ್ದಾರೆ.

  ರಾಧೇ ಟ್ವಿಟ್ಟರ್ ವಿಮರ್ಶೆ: 'ಸೂಪರ್ ಹಿಟ್' ಎಂದು ಘೋಷಿಸಿದ ಅಭಿಮಾನಿಗಳುರಾಧೇ ಟ್ವಿಟ್ಟರ್ ವಿಮರ್ಶೆ: 'ಸೂಪರ್ ಹಿಟ್' ಎಂದು ಘೋಷಿಸಿದ ಅಭಿಮಾನಿಗಳು

  ''ರಾಧೇ ಸಿನಿಮಾ ಒಂದು ವಾಕ್ಯದ ವಿಮರ್ಶೆ, ಇತಿಹಾಸದಲ್ಲಿ ಇದೊಂದು ಕೆಟ್ಟ ಚಿತ್ರ. ಸಲ್ಮಾನ್ ಖಾನ್ ಅದ್ಭುತ ನಟ. ಆದರೆ, ಪ್ರಭುದೇವ ಸಿನಿಮಾ ಹಾಳು ಮಾಡಿದ್ದಾರೆ. ಕೆಟ್ಟ ನಿರ್ದೇಶನ, ಕೆಟ್ಟ ಕಥೆ, ಇದು ಕೇವಲ ಕಸ'' ಎಂದು ಹೀಯಾಳಿಸಿದ್ದಾರೆ.

  ರಾಧೇ ಚಿತ್ರದ ಬಗ್ಗೆ ಶ್ರೀರೆಡ್ಡಿ ಮಾಡಿರುವ ಟ್ವೀಟ್‌ಗೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು, 'ಥ್ಯಾಂಕ್ಸ್ ಡಿಯರ್, ನೀನು ಇಷ್ಟು ಹೇಳಿದ್ಮೇಲೆ ನಾನು ಸಿನಿಮಾ ನೋಡಲ್ಲ' ಎಂದು ಓರ್ವ ವ್ಯಕ್ತಿ ಹೇಳಿದ್ದಾರೆ. 'ಸಿನಿಮಾ ಇನ್ನು ರಿಲೀಸ್ ಆಗೇ ಇಲ್ಲ ಅಷ್ಟು ಬೇಗ ರಿವ್ಯೂ ಕೊಡುತ್ತಿದ್ದಿಯಾ' ಎಂದು ಮತ್ತೊರ್ವ ವ್ಯಕ್ತಿ ಪ್ರಶ್ನಿಸಿದ್ದಾರೆ.

  ಆಕೆ ನೀಲಿ ಚಿತ್ರಗಳಲ್ಲಿ ನಟಿಸುತ್ತಾಳೆ: ನಟಿಯ ಬಗ್ಗೆ ಸಂಸದ ಹೇಳಿಕೆಆಕೆ ನೀಲಿ ಚಿತ್ರಗಳಲ್ಲಿ ನಟಿಸುತ್ತಾಳೆ: ನಟಿಯ ಬಗ್ಗೆ ಸಂಸದ ಹೇಳಿಕೆ

  ಪ್ರಭುದೇವ ನಿರ್ದೇಶನದ ರಾಧೇ ಸಿನಿಮಾದಲ್ಲಿ ಸಲ್ಮಾನ್ ಖಾನ್ ಪೊಲೀಸ್ ಆಫೀಸರ್ ಆಗಿ ನಟಿಸಿದ್ದಾರೆ. ದಿಶಾ ಪಟಾನಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ರಣದೀಪ್ ಹೂಡಾ ಪ್ರಮುಖ ಖಳನಟನಾಗಿ ಅಭಿನಯಿಸಿದ್ದಾರೆ.

  ಪ್ರಪಂಚದ ಶ್ರೀಮಂತ ಮಹಿಳೆಯನ್ನು ಪರಿಚಯಿಸಿದ ಸೋನು ಸೂದ್ | Filmibeat Kannada

  ಇನ್ನು ನಟಿ ಶ್ರೀರೆಡ್ಡಿ ಅವರ ವಿರುದ್ಧ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಸಂಸದ ರಘುರಾಮ ಕೃಷ್ಣ ರಾಜು ಸಿಡಿದೆದಿದ್ದು, ' ನೀಲಿ ಚಿತ್ರಗಳಲ್ಲಿ ನಟಿಸುವ ನೀನು ಎಂಥವಳು ಎಂದು ಜನರಿಗೆ ಗೊತ್ತಿದೆ' ಎಂದು ವಾಗ್ದಾಳಿ ನಡೆಸಿದ್ದರು. ಅದಕ್ಕೂ ಮುಂಚೆ ರಘುರಾಮ ಕೃಷ್ಣ ರಾಜು ಅವರ ವಿರುದ್ಧ ಶ್ರೀರೆಡ್ಡಿ ವಿಡಿಯೋ ಪೋಸ್ಟ್ ಮಾಡಿ ನಿಂದಿಸಿದ್ದರು.

  English summary
  PrabhuDeva Spoiled Radhe Movie, its Worst Story, Worst Direction Said Actress Sri Reddy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X