For Quick Alerts
  ALLOW NOTIFICATIONS  
  For Daily Alerts

  ಟಿವಿ ನಿರೂಪಕ ಪ್ರದೀಪ್ ವಿರುದ್ಧ ಅತ್ಯಾಚಾರ ಆರೋಪ, ಟ್ರೋಲಿಗರ ವಿರುದ್ಧ ಆಕ್ರೋಶ!

  |

  ತೆಲುಗಿನ ಖ್ಯಾತ ಟಿವಿ ನಿರೂಪಕ, ಸೆಲೆಬ್ರಿಟಿಗಳ ನೆಚ್ಚಿನ ಸಂದರ್ಶಕ ಹಾಗೂ ಕೆಲವು ಸಿನಿಮಾಗಳಲ್ಲು ನಟಿಸಿರುವ ಪ್ರದೀಪ್ ಮಾಚಿರಾಜು ವಿರುದ್ಧ ಅತ್ಯಾಚಾರದ ಆರೋಪ ಕೇಳಿ ಬಂದಿದೆ.

  Drug Mafia 15 ಜನ ಹೀರೋ, ಹೀರೋಯಿನ್ ದಾಖಲೆಯನ್ನು ಸಾಕ್ಷಿ ಸಮೇತ ಪೋಲೀಸರ ಕೈಗೆ ಕೊಟ್ಟ ಇ,ಲಂಕೇಶ್ |

  ಹೈದರಾಬಾದ್‌ನ ಪಂಜಗುಟ್ಟಾ ಪೊಲೀಸ್ ಠಾಣೆಯಲ್ಲಿ ಮಿರಿಯಲಗುಡದ ಮಹಿಳೆಯೊಬ್ಬರು 140 ಜನರ ವಿರುದ್ಧ ಲೈಂಗಿಕ ಕಿರುಕುಳದ ಆರೋಪದಡಿ ದೂರು ನೀಡಿದ್ದಾರೆ. ಈ ದೂರಿನ ಅನ್ವಯ ಪೊಲೀಸರು ಎಫ್ ಐ ಆರ್ ಸಹ ದಾಖಲಿಸಿದ್ದಾರೆ ಎಂದು ಹೇಳಲಾಗಿದೆ. ಈ ಎಫ್‌ಐಆರ್‌ನಲ್ಲಿ ಪ್ರದೀಪ್ ಮಾಚಿರಾಜು ಹೆಸರು ಸಹ ಉಲ್ಲೇಖಿಸಲಾಗಿದೆ ಎಂದು ಕೆಲವು ವೆಬ್ ಪೋರ್ಟಲ್‌ಗಳು ಮತ್ತು ಯೂಟ್ಯೂಬ್ ಚಾನೆಲ್‌ಗಳು ವರದಿ ಮಾಡಿದೆ. ಮುಂದೆ ಓದಿ...

  ಲೈಂಗಿಕ ದೌರ್ಜನ್ಯ: ನವಾಜುದ್ದೀನ್ ಸಿದ್ದಿಕಿ ಸಹೋದರನ ವಿರುದ್ಧ ಸೋದರ ಸೊಸೆ ದೂರು

  ಆಧಾರ ರಹಿತ ಆರೋಪ ಇದು

  ಆಧಾರ ರಹಿತ ಆರೋಪ ಇದು

  'ನೀಲಿ ನೀಲಿ ಆಕಾಶಂ' ಎಂಬ ಹಾಡಿನ ಮೂಲಕ ದೇಶಾದ್ಯಂತ ಖ್ಯಾತಿ ಗಳಿಸಿಕೊಂಡಿರುವ ಪ್ರದೀಪ್, ಈ ಆರೋಪಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ''ಇದು ಆಧಾರ ರಹಿತ ಆರೋಪ, ಯೂಟ್ಯೂಬ್ ವಾಹಿನಿ ಹಾಗೂ ಕೆಲವು ವೆಬ್‌ಸೈಟ್‌ಗಳು ನನ್ನ ಹೆಸರನ್ನು ಸುಮ್ಮನೆ ಉಲ್ಲೇಖಿಸುತ್ತಿದ್ದಾರೆ. ನನ್ನ ಫೋಟೋ ಬಳಸುತ್ತಿದ್ದಾರೆ. ಅಂತವರ ವಿರುದ್ಧ ನಾನು ಕಾನೂನು ಕ್ರಮ ಜರುಗಿಸತ್ತೇನೆ'' ಎಂದು ಆರೋಪ ನಿರಾಕರಣೆ ಮಾಡಿದ್ದಾರೆ.

  ನೋವು ಅನುಭವಿಸುತ್ತಿದ್ದೇನೆ

  ನೋವು ಅನುಭವಿಸುತ್ತಿದ್ದೇನೆ

  ನನ್ನ ಮೇಲೆ ಬಂದಿರುವ ಆರೋಪಗಳು ಸುಳ್ಳು ಎಂದಿರುವ ಪ್ರದೀಪ್ "ಆಧಾರರಹಿತ ಆರೋಪಗಳಿಂದ ನಾನು ನೋವು ಅನುಭವಿಸುತ್ತಿದ್ದೇನೆ" ಎಂದು ವಿಡಿಯೋದಲ್ಲಿ ಬೇಸರ ಹಂಚಿಕೊಂಡಿದ್ದಾರೆ. "ಇಂತಹ ಘಟನೆಗಳಿಂದ ನಾನು ಅಥವಾ ನನ್ನ ಕುಟುಂಬದ ಮೇಲೆ ಏನಾದರೂ ಪರಿಣಾಮ ಬೀರಿದ್ರೆ ಯಾರೂ ಜವಾಬ್ದಾರಿ? ಎಂದು ಪ್ರಶ್ನಿಸಿದ್ದಾರೆ.

  ನೀವು ನನ್ನನ್ನು ಮಾನಸಿಕವಾಗಿ ಅತ್ಯಾಚಾರ ಮಾಡುತ್ತಿದ್ದೀರಿ

  ನೀವು ನನ್ನನ್ನು ಮಾನಸಿಕವಾಗಿ ಅತ್ಯಾಚಾರ ಮಾಡುತ್ತಿದ್ದೀರಿ

  ಮಹಿಳೆ ಮಾಡಿರುವ ಅತ್ಯಾಚಾರ ಆರೋಪದಲ್ಲಿ ಪ್ರದೀಪ್ ಹೆಸರಿದೆ ಎಂದು ಸುದ್ದಿ ಮಾಡಿರುವ ಯೂಟ್ಯೂಬ್ ವಾಹಿನಿ ಮತ್ತು ವೆಬ್‌ಸೈಟ್‌ಗಳ ವಿರುದ್ಧ ಪ್ರದೀಪ್ ಗರಂ ಆಗಿದ್ದಾರೆ. ''ನೀವು ನನ್ನನ್ನು ಮಾನಸಿಕವಾಗಿ ಅತ್ಯಾಚಾರ ಮಾಡುತ್ತಿದ್ದೀರಿ'' ಎಂದು ಕಿಡಿ ಕಾರಿದ್ದಾರೆ. ಈ ವಿಚಾರವನ್ನು ಬೇಜವಾಬ್ದಾರಿಯಾಗಿ ಪ್ರಸಾರ ಮಾಡಿರುವುದನ್ನು ಖಂಡಿಸಿರುವ ಪ್ರದೀಪ್, ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

  ಸಾಮಾಜಿಕ ಟ್ರೋಲ್ ವಿರುದ್ಧ ಪ್ರದೀಪ್ ಸಮರ

  ಸಾಮಾಜಿಕ ಟ್ರೋಲ್ ವಿರುದ್ಧ ಪ್ರದೀಪ್ ಸಮರ

  ವೈಯಕ್ತಿಕವಾಗಿ ವ್ಯಕ್ತಿ ಹಾಗೂ ಅವರ ಕುಟುಂಬಗಳ ಬಗ್ಗೆ ಚಿಂತಿಸದೆ, ಮನಸ್ಸಿಗೆ ಬಂದಂತೆ ಟ್ರೋಲ್ ಮಾಡುವುದು ಖಂಡನೀಯ ಎಂದು ಪ್ರದೀಪ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನನಗೆ ಅಪಘಾತವಾಗಿ ವಿಶ್ರಾಂತಿಯಲ್ಲಿದ್ದೆ, ಆದರೆ, ಪ್ರದೀಪ್ ಗಂಭೀರ, ಸಾವು-ಬದುಕಿನ ಮಧ್ಯೆ ಹೋರಾಟ ಮಾಡ್ತಿದ್ದಾನೆ ಅಂದ್ರು. ನನಗೆ ಕಾಲಿಗೆ ಮಾತ್ರ ಪೆಟ್ಟಾಗಿತ್ತು ಎಂದು ಟ್ರೋಲಿಗರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  English summary
  Telugu star anchor Pradeep Machiraju react to rape allegations against him.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X