For Quick Alerts
  ALLOW NOTIFICATIONS  
  For Daily Alerts

  ಮಾ ಚುನಾವಣೆಗೆ ಟ್ವಿಸ್ಟ್: ಬಲವಂತದ ವೋಟಿಂಗ್? ಸಿಸಿಟಿವಿ ದೃಶ್ಯ ಕೇಳಿದ ಪ್ರಕಾಶ್ ರೈ

  |

  ತೆಲುಗು ಚಿತ್ರರಂಗದ ಪ್ರತಿಷ್ಠಿತ ಕಲಾವಿದರ ಸಂಘ ಮಾ (ಮೂವಿ ಆರ್ಟಿಸ್ಟ್ ಅಸೋಸಿಯೇಷನ್) ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಪ್ರಕಾಶ್ ರೈ ಸೋತು, ಎದುರಾಳಿ ಮಂಚು ವಿಷ್ಣು ಗೆದ್ದು ನಾಲ್ಕು ದಿನಗಳಾಗಿವೆ.

  ಚುನಾವಣೆಯಲ್ಲಿ ಸೋತ ಬಳಿಕ ಸುದ್ದಿಗೋಷ್ಠಿ ನಡೆಸಿದ ಪ್ರಕಾಶ್ ರಾಜ್, ಮಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, 'ನಾನು ಅತಿಥಿಯಾಗಿ ಬಂದಿದ್ದೆ, ಅತಿಥಿಯಾಗಿಯೇ ಇರುವೆ'' ಎಂದು ಭಾವುಕ ಹೇಳಿಕೆ ನೀಡಿದ್ದರು. ಆದರೆ ಈಗ ಮಾ ಚುನಾವಣೆಗೆ ಸಂಬಂಧಿಸಿದಂತೆ ಟ್ವಿಸ್ಟ್ ಎದುರಿಗೆ ಬಂದಿದೆ.

  ''ಮಾ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮಂಚು ವಿಷ್ಣುವಿನ ತಂದೆ ಮಾ ಸಂಘದ ಹಿರಿಯ ಸದಸ್ಯ ಮೋಹನ್‌ ಬಾಬು ಮತದಾನದ ದಿನ ಮಾ ಸದಸ್ಯರ ಮೇಲೆ, ಅಭ್ಯರ್ಥಿಗಳ ಮೇಲೆ ಹಲ್ಲೆ ಮಾಡಿದ್ದಾರೆ. ಚುನಾವಣಾ ಪೋಲಿಂಗ್ ಬೂತ್ ಪ್ರವೇಶಿಸಿದ್ದಾರೆ. ಅವರು ಮಾತ್ರವೇ ಅಲ್ಲದೆ ಮಾ ಸಂಘಕ್ಕೆ ಸಂಬಂಧಿಸದವರು ಪೋಲಿಂಗ್ ಬೂತ್ ಪ್ರವೇಶ ಮಾಡಿದ್ದಾರೆ,'' ಎಂದು ಪ್ರಕಾಶ್ ರೈ ಆರೋಪಿಸಿದ್ದಾರೆ.

  ಈ ಸಂಬಂಧ ಚುನಾವಣಾ ಅಧಿಕಾರಿಗೆ ಪತ್ರ ಬರೆದಿರುವ ಪ್ರಕಾಶ್ ರೈ, ''ಮತದಾನಕ್ಕೆ ಮುನ್ನ ಮೀಟಿಂಗ್ ನಡೆಸಿದ್ದ ನೀವು ಪೋಲಿಂಗ್ ಬೂತ್‌ನಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದಾಗಿ ಹೇಳಿದ್ದಿರಿ. ಅದರಲ್ಲಿ ಎಲ್ಲವೂ ದಾಖಲಾಗಿರುವುದಾಗಿ ಹೇಳಿದ್ದಿರಿ. ಇದೀಗ ಪೋಲಿಂಗ್ ದಿನ ಮೋಹನ್‌ ಬಾಬು ಅವರಿಂದ ದಾಳಿ ಹಾಗೂ ನಿಂದನೆ ಆಗಿದ್ದನ್ನು ನಮ್ಮ ಪ್ಯಾನೆಲ್‌ನವರು ನೋಡಿದ್ದು, ಪೋಲಿಂಗ್ ನ್ಯಾಯುಯತವಾಗಿ ನಡೆದಿಲ್ಲವೆಂಬ ಅನುಮಾನ ನಮಗೆ ಬಂದಿದೆ'' ಎಂದಿದ್ದಾರೆ.

  ''ನಿಯಮಗಳ ಪ್ರಕಾರ ಚುನಾವಣೆಯ ಸಿಸಿಟಿವಿ ದೃಶ್ಯಗಳನ್ನು ಕನಿಷ್ಠ ಮೂರು ತಿಂಗಳ ವರೆಗಾದರೂ ಕಾಯ್ದಿಡಬೇಕು, ಅಗತ್ಯವಿದ್ದಲ್ಲಿ ಅದನ್ನು ತನಿಖೆಗೆ ನೀಡಬೇಕು ಎಂದಿದೆ. ಇದನ್ನು ಸುಪ್ರೀಂಕೋರ್ಟ್ ಸಹ ಹೇಳಿದೆ. ತಾವು ಈ ಕೂಡಲೇ ಸಿಸಿಟಿವಿ ದೃಶ್ಯಗಳನ್ನು ನೀಡಬೇಕು. ಒಂದೊಮ್ಮೆ ನೀವು ಸಿಸಿಟಿವಿ ದೃಶ್ಯಗಳನ್ನು ಕೊಡಲು ತಡ ಮಾಡಿದರೆ. ಆ ದೃಶ್ಯಗಳನ್ನು ಡಿಲೀಟ್ ಮಾಡಿದ್ದೀರೆಂದೊ ಅಥವಾ ಸಿಸಿಟಿವಿ ದೃಶ್ಯಗಳನ್ನು ಟ್ಯಾಂಪರಿಂಗ್ ಮಾಡಿದ್ದಾರೆಂದೊ ನಂಬಬೇಕಾಗುತ್ತದೆ'' ಎಂದಿದ್ದಾರೆ ಪ್ರಕಾಶ್ ರೈ.

  ಮತದಾನದ ದಿನ, ಪ್ರಕಾಶ್ ರೈ ಸಿಂಡಿಕೇಟ್‌ನಿಂದ ಸ್ಪರ್ಧಿಸಿದ್ದ ನಟ ಬ್ಯಾನರ್ಜಿ ವಿರುದ್ಧ ಮೋಹನ್‌ ಬಾಬು ಹಲ್ಲೆಗೆ ಯತ್ನಿಸಿದ್ದರು, ''ನಿನ್ನನ್ನು ಕೊಂದು ಬಿಡುವೆ'' ಎಂದು ಬೆದರಿಕೆಯನ್ನೂ ಹಾಕಿದ್ದರು ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಪೋಲಿಂಗ್‌ ಬೂತ್‌ನ ಒಳಗೆ ಮಾ ಸಂಘಕ್ಕೆ ಸೇರದ ಕೆಲವು ವ್ಯಕ್ತಿಗಳು ಬಂದಿದ್ದನ್ನು ಸಹ ವರದಿ ಮಾಡಿದ್ದವು. ಇದೀಗ ಪ್ರಕಾಶ್ ರೈ ಪೋಲಿಂಗ್ ಬೂತ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಕೇಳಿದ್ದು, ಒಂದೊಮ್ಮೆ ನಿಜವಾಗಿಯೂ ಪೋಲಿಂಗ್ ಬೂತ್‌ನೊಳಗೆ ಅಕ್ರಮವೇನಾದರೂ ನಡೆದಿದ್ದರೆ ಪ್ರಕಾಶ್ ರೈ ಮತ್ತು ಬಳಗ ಮರು ಚುನಾವಣೆಗೆ ಒತ್ತಾಯ ಮಾಡುವ ಸಾಧ್ಯತೆ ಇದೆ.

  English summary
  Prakash Raj asked for MAA election polling booth CCTV footage. He wrote letter to election officer and said Mohan Babu threatened and physically attacked our members so he wants to check CCTV footage.
  Thursday, October 14, 2021, 20:30
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X