twitter
    For Quick Alerts
    ALLOW NOTIFICATIONS  
    For Daily Alerts

    ಸಿನಿ ಕುಟುಂಬದ ಒಳರಾಜಕೀಯ: ಚಿರಂಜೀವಿ ವಿರುದ್ಧ ಕಿಡಿಕಾರಿದ ಪ್ರಕಾಶ್ ರೈ

    By ರವೀಂದ್ರ ಕೊಟಕಿ
    |

    'ಮಾ' ಚುನಾವಣೆ ಮುಗಿದರೂ ಅದರ ಒಳ ರಾಜಕೀಯಗಳು ಮಾತ್ರ ಇನ್ನೂ ನಿಲ್ಲುತ್ತಿಲ್ಲ. ಈಗಲೂ ಎರಡು ಕಡೆಯ ಸದಸ್ಯರುಗಳು ಮಾಧ್ಯಮಗಳ ಮೂಲಕ ಪರಸ್ಪರ ಕೆಸರೆರಚಾಟ ಮುಂದುವರೆಸಿದ್ದಾರೆ. ಕಳೆದ ಶನಿವಾರವಷ್ಟೇ ಅಧ್ಯಕ್ಷರಾಗಿ ಮಂಚು ವಿಷ್ಣು ಅಧಿಕಾರವನ್ನು ಸ್ವೀಕರಿಸಿದರು. ಅಲ್ಲದೆ ಅವರ ಬಣದ 15 ಸದಸ್ಯರುಗಳು ಕೂಡ ಅಧಿಕಾರವನ್ನು ವಹಿಸಿಕೊಂಡಿದ್ದಾರೆ. ಇತ್ತ ಪ್ರಕಾಶ್ ರೈ ಬಣದ 9 ಸದಸ್ಯರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ.

    ಅಧ್ಯಕ್ಷ ಚುನಾವಣೆಯಲ್ಲಿ ಸೋತಿರುವ ಪ್ರಕಾಶ್ ರೈ ಅವರು 'ಮಾ' ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದಾರೆ. ಅವರನ್ನು ಬೆಂಬಲಿಸಿದ ಚಿರಂಜೀವಿ ಸೋದರ ನಾಗಬಾಬು ಕೂಡಾ 'ಮಾ' ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅಧ್ಯಕ್ಷ ಮಂಚು ವಿಷ್ಣು ಅವರು 'ಯಾರನ್ನು ಯಾವುದೇ ಕಾರಣಕ್ಕೂ ಸಮಾಧಾನಗೊಳಿಸುವಂತಹ ಪ್ರಯತ್ನಗಳಿಗೆ ನಾವು ಮುಂದಾಗುವುದಿಲ್ಲ. ಇಚ್ಚೆ ಇದ್ದವರು ಮುಂದುವರಿಯಬಹುದು. ಇಲ್ಲದೆ ಹೋದವರು ಹೋಗಬಹುದು' ಅಂತ ಕಡ್ಡಿಮುರಿದಂತೆ ಹೇಳಿದ್ದಾರೆ. ಹೀಗಾಗಿ ಪ್ರಕಾಶ್ ರೈ ಬಣದ ಸದಸ್ಯರುಗಳ ಮುಂದಿನ ಭವಿಷ್ಯ ಅಸ್ಪಷ್ಟವಾಗಿದೆ.

    'ಮಾ' ಸದಸ್ಯರೆಲ್ಲ ಸೇರಿ ಒಂದೇ ಕುಟುಂಬ ಎಂಬುವುದು ಹಸಿಸುಳ್ಳು: ಪ್ರಕಾಶ್ ರೈ

    'ಮಾ' ಸದಸ್ಯರೆಲ್ಲ ಸೇರಿ ಒಂದೇ ಕುಟುಂಬ ಎಂಬುವುದು ಹಸಿಸುಳ್ಳು: ಪ್ರಕಾಶ್ ರೈ

    ಚಿರಂಜೀವಿ ಕುಟುಂಬದ ಬೆಂಬಲದೊಂದಿಗೆ ಚುನಾವಣಾ ಅಖಾಡಕ್ಕೆ ಇಳಿದು ಸೋತಿರುವ ಪ್ರಕಾಶ್ ರವರು ಇತ್ತೀಚೆಗೆ ಓಪನ್ ಹಾರ್ಟ್ ವಿಥ್ ಆರ್ ಕೆ ಕಾರ್ಯಕ್ರಮದಲ್ಲಿ ತಮ್ಮ ಮನದಾಳದ ಮಾತುಗಳನ್ನು ವ್ಯಕ್ತಪಡಿಸುತ್ತಾ 'ತಾನು ಚಿರಂಜೀವಿ ಕುಟುಂಬದ ಬೆಂಬಲದೊಂದಿಗೆ ಚುನಾವಣೆ ಕಣಕ್ಕೆ ಇಳಿದಿದ್ದೆ ಎಂಬುವುದು ಹಸಿಸುಳ್ಳು. ನನ್ನನ್ನು ಇಷ್ಟಪಡುವವರು ನನಗೆ ಮತ ಮಾಡಿದ್ದಾರೆ, ಇಷ್ಟಪಡದವರು ನನ್ನ ವಿರುದ್ಧ ಮತಚಲಾಯಿಸಿದ್ದಾರೆ ಅಷ್ಟೇ. ನಾಗಬಾಬು ನನ್ನ ಪರವಾಗಿ ಅಖಾಡಕ್ಕೆ ಇಳಿದಿದ್ದು ಸತ್ಯ. ಹಾಗಂತ ಒಂದು ಕುಟುಂಬದ ಬೆಂಬಲದೊಂದಿಗೆ ನಾನು ಚುನಾವಣೆ ಅಕಾಡಕ್ಕೆ ಇಳಿದಿದ್ದೆ ಎಂಬುದು ಸುಳ್ಳು'. ಇನ್ನು ಮಾತು ಮುಂದುವರಿಸಿದ ಅವರು 'ಮೂವಿ ಆರ್ಟಿಸ್ಟ್ ಅಸೋಸಿಯೇಷನ್ (ಮಾ) ಸದಸ್ಯರೆಲ್ಲಾ ಒಂದು ಕುಟುಂಬವಿದ್ದಂತೆ ಎಂಬ ಮಾತುಗಳು ಕೇಳಲಿಕ್ಕೆ ಚೆನ್ನಾಗಿರುತ್ತದೆ. ಆದರೆ ವಾಸ್ತವದಲ್ಲಿ ಇದು ಹಸಿಸುಳ್ಳು ಆಗಿದೆ. ಪ್ರತಿಯೊಬ್ಬರೂ ಅವರವರ ವೈಯಕ್ತಿಕ ಹಿತಾಸಕ್ತಿಗಳಿಗಾಗಿ ಇಲ್ಲಿ ಬದುಕುತ್ತಾರೆ. ಇಲ್ಲಿ ಜಾತಿ ಕೆಲಸಮಾಡುತ್ತದೆ, ಭಾಷೆ ಕೆಲಸ ಮಾಡುತ್ತದೆ, ರಾಷ್ಟ್ರೀಯತೆ ಕೆಲಸ ಮಾಡುತ್ತದೆ. ಅಂದಮೇಲೆ ಇಲ್ಲಿರುವ ಕಲಾವಿದರೆಲ್ಲ ಒಂದೇ ಕುಟುಂಬ ಎಂಬುದು ಹೇಗೆ ನಿಜವಾಗಲೂ ಸಾಧ್ಯ?' ಎಂದು ನೋವಿನಿಂದ ಪ್ರಶ್ನಿಸಿದ್ದಾರೆ.

    'ಮಾ' ಚುನಾವಣೆಯ ಬಗ್ಗೆ ಬ್ಯಾನರ್ಜಿ ಹೇಳಿದ ಆ ವಿಷಯ ಏನು?

    'ಮಾ' ಚುನಾವಣೆಯ ಬಗ್ಗೆ ಬ್ಯಾನರ್ಜಿ ಹೇಳಿದ ಆ ವಿಷಯ ಏನು?

    ಕಳೆದ ನಾಲ್ಕು ದಿನಗಳ ಹಿಂದೆ ಪ್ರಕಾಶ್ ರೈ ಬಣದಲ್ಲಿ ಚುನಾವಣೆಗೆ ಸ್ಪರ್ಧಿಸಿ ವಿಜೇತರಾಗಿದ್ದ ನಟ ಬ್ಯಾನರ್ಜಿ ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡುತ್ತಾ ಅವರು 'ಮಾ' ಚುನಾವಣೆಗೆ ಸಂಬಂಧಿಸಿದಂತೆ ಚಿರಂಜೀವಿ ಅವರು ಮೋಹನ್ ಬಾಬು ಅವರ ಜೊತೆ ಮಾತನಾಡಿದ್ದ ಒಂದು ವಿಚಾರವನ್ನು ಬಹಿರಂಗಪಡಿಸಿದ್ದರು. ಈ ವಿಚಾರವಾಗಿ ನಟ ಬ್ಯಾನರ್ಜಿ ಹೇಳುವುದು, 'ಮಾ'ಗೆ ಸಂಬಂಧಿಸಿದಂತೆ ಪ್ರಕಾಶ್ ರೈ ಅವರು ಒಂದಷ್ಟು ಕ್ರಿಯಾ ಯೋಜನೆಗಳೊಂದಿಗೆ ಚಿರಂಜೀವಿ ಅವರನ್ನು ಭೇಟಿಯಾಗಿದ್ದರು. ಇದನ್ನು ಮೆಚ್ಚಿಕೊಂಡ ಚಿರಂಜೀವಿ ಅವರು ಹಿರಿಯ ನಟ ಮೋಹನ್ ಬಾಬು ಅವರಿಗೆ ಕರೆ ಮಾಡಿ 'ಈ ಬಾರಿ ಪ್ರಕಾಶ್ ರೈ ಅವರಿಗೆ 'ಮಾ' ಅಧ್ಯಕ್ಷರಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಡಿ. ಎಲ್ಲರೂ ಸೇರಿ ಸರ್ವಸಮ್ಮತ ಆಯ್ಕೆ ಮಾಡೋಣ. ಮುಂದಿನ ಅವಧಿಗೆ ಮಂಚು ವಿಷ್ಣು ಅವರ ಹೆಸರನ್ನು ನಾನೇ ಮುಂದೆ ನಿಂತು ಪ್ರತಿಪಾದಿಸುತ್ತಾನೆ. ಆದರೆ ಚಿರಂಜೀವಿಯವರ ಆಫರ್ ಅನ್ನು ಮೋಹನ್ ಬಾಬು ತಿರಸ್ಕರಿಸಿದರು, ಮತ್ತು ಅವರ ಮಗ ಮಂಚು ವಿಷ್ಣು ಅವರನ್ನು ಚುನಾವಣಾ ಅಖಾಡಕ್ಕೆ ಇಳಿಸಿದರು. ಹೀಗಾಗಿ ಚುನಾವಣೆ ಅನಿವಾರ್ಯವಾಯಿತು' ಅಂತ ಬ್ಯಾನರ್ಜಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

    ಹೌದು, ಆ ಪ್ರಸ್ತಾಪವನ್ನು ನಾನು ತಿರಸ್ಕರಿಸಿದ್ದೆ: ಮೋಹನ್ ಬಾಬು

    ಹೌದು, ಆ ಪ್ರಸ್ತಾಪವನ್ನು ನಾನು ತಿರಸ್ಕರಿಸಿದ್ದೆ: ಮೋಹನ್ ಬಾಬು

    ಬ್ಯಾನರ್ಜಿ ಹೇಳಿದ್ದ ಈ ಮಾತುಗಳಿಗೆ ಪುಷ್ಟಿ ನೀಡುವಂತೆ ಹಿರಿಯ ನಟ ಮೋಹನ್ ಬಾಬು ಅವರು ಕೂಡ 'ಕೆಲವು ತಿಂಗಳುಗಳ ಹಿಂದೆ ಚಿರಂಜೀವಿ ಅವರು ನನಗೆ ಕರೆ ಮಾಡಿ ನಾವು ಪ್ರಕಾಶ್ ರೈ ಅವರನ್ನು ಅಧ್ಯಕ್ಷನಾಗಿ ಆಯ್ಕೆಮಾಡಲು ಒಲವು ತೋರಿದ್ದೇವೆ. ನೀವು ಇದಕ್ಕೆ ಸಹಕರಿಸಿದರೆ ಮುಂದಿನ ಅವಧಿಗೆ ನಿಮ್ಮ ಮಗ ಮಂಚು ವಿಷ್ಣು ಅವರನ್ನು ಸರ್ವಸಮ್ಮತ ಅಭ್ಯರ್ಥಿಯಾಗಿ ಆಯ್ಕೆ ಮಾಡಲು ನಾವು ಸಿದ್ಧರಿದ್ದೇವೆ ಅಂತ ಚಿರಂಜೀವಿ ಪ್ರತಿಪಾದಿಸಿದ್ದರು ಆದರೆ ಚಿರಂಜೀವಿ ಅವರ ಪ್ರತಿಪಾದನೆಗೆ ನಾನು ಸ್ಪಷ್ಟವಾದ ರೀತಿಯಲ್ಲಿ ಉತ್ತರಿಸಿ, ಮಾ ಚುನಾವಣೆಗೆ ನನ್ನ ಮಗ ಮಂಚು ವಿಷ್ಣುವರ್ಧನ್ ಸ್ಪರ್ಧಿಸುವುದು ಶತಸಿದ್ಧ, ಯಾವುದೇ ಕಾರಣಕ್ಕೂ ಚುನಾವಣೆ ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಅಂತ ಚಿರಂಜೀವಿ ಅವರಿಗೆ ಆಗಲೇ ಸ್ಪಷ್ಟಪಡಿಸಿದೆ' ಅಂತ ಹೇಳುವ ಮೂಲಕ ಸರ್ವಸಮ್ಮತ ಅಭ್ಯರ್ಥಿಯಾಗಿ ಪ್ರಕಾಶ್ ರೈ ಅವರನ್ನು ಆಯ್ಕೆ ಮಾಡುವ ಚಿರಂಜೀವಿ ಪ್ರಯತ್ನವನ್ನು ವಿಫಲಗೊಳಿಸಿ ತಾನೆ ಎಂಬುವುದನ್ನು ಮೋಹನ್ ಬಾಬು ಪರೋಕ್ಷವಾಗಿ ಹೇಳಿದ್ದಾರೆ.

    ಚಿರಂಜೀವಿ ವಿರುದ್ಧ ಕಿಡಿಕಾರಿದ ಪ್ರಕಾಶ್ ರೈ

    ಚಿರಂಜೀವಿ ವಿರುದ್ಧ ಕಿಡಿಕಾರಿದ ಪ್ರಕಾಶ್ ರೈ

    ಇನ್ನು ಇದೇ ವಿಚಾರವಾಗಿ ಆರ್ ಕೆ ಜೊತೆ ಮಾತನಾಡಿದ ಪ್ರಕಾಶ್ ರೈ ತನ್ನನ್ನು ಬೆಂಬಲಿಸಿದ ಚಿರಂಜೀವಿ ಕುಟುಂಬದ ವಿರುದ್ಧವೇ ಕಿಡಿಕಾರಿದ ಅವರು 'ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಮುಸುಕಿನೊಳಗಿನ ಗುದ್ದಾಟ ಯಾಕೆ? ಮೋಹನ್ ಬಾಬು ಅವರ ಜೊತೆಗೆ ಚಿರಂಜೀವಿ ಅವರ ಮಾತುಕತೆ ನಡೆದಿದ್ದರೆ ಅದನ್ನು ಸ್ಪಷ್ಟಪಡಿಸಲಿ. ಇಲ್ಲದೇ ಹೋದರೆ ಅದನ್ನು ಖಂಡಿಸಬೇಕು. ಆದರೆ ಈ ವಿಚಾರದಲ್ಲಿ ಮೌನವಾಗಿರುವುದು ಸರಿಯಲ್ಲ ಅಂತ' ಪರೋಕ್ಷವಾಗಿ ಚಿರಂಜೀವಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇನ್ನು ತನ್ನ ಸೋಲಿನ ಬಗ್ಗೆ ಪ್ರತಿಕ್ರಿಯಿಸುತ್ತಾ ಅವರು 'ಚುನಾವಣೆ ಅಂದಮೇಲೆ ಸೋಲು-ಗೆಲುವು ಎರಡು ಕೂಡ ಸಹಜ. ಆದರೆ ಕುಟುಂಬಗಳ ವ್ಯವಸ್ಥೆಗಳ ಹಿಡಿತದಿಂದ ಮುಕ್ತವಾದ ಸಮಾಜವನ್ನು ನಾನು ಬಯಸಿದ್ದೇನೆ. 'ಮಾ' ಬದಲಾಗಬೇಕು ಮಾನವೀಯತೆ

    ಸಮಸಮಾಜದ ಆಶಯವಿರುವ 'ಮಾ' ಬರಬೇಕು. ಇದಕ್ಕಾಗಿ ನನ್ನ ನಿರಂತರ ಹೋರಾಟ ಮುಂದುವರಿಯುತ್ತದೆ. ನಾನು ಕೆಲವು ಕುಟುಂಬಗಳ ಹೋರಾಟಕ್ಕೆ ಬಲಿಪಶುವಾದೆ ಎಂಬುದು ಅಪ್ಪಟ ಸುಳ್ಳು. ನಾನು ನಾನಾಗೆ ಚುನಾವಣೆ ಕಣದಲ್ಲಿ ಸ್ಪರ್ಧಿಸಿದ್ದೇನೆ. ಸಿನಿಮಾ ಕುಟುಂಬಗಳ ಒಳ ರಾಜಕೀಯದಿಂದ ನಾನು ಸೋತಿರಬಹುದು. ಆದರೆ, ನನ್ನ ಹೋರಾಟ ನಿರಂತರವಾಗಿ ಮುಂದುವರೆಯುತ್ತದೆ' ಅಂತ ಪ್ರಕಾಶ್ ರೈ ಇದೆ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ.

    English summary
    Prakash Raj indirectly lambasted on Chiranjeevi and his family. He said movie industry families inner politics made me loose in MAA elections.
    Tuesday, October 19, 2021, 11:37
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X