twitter
    For Quick Alerts
    ALLOW NOTIFICATIONS  
    For Daily Alerts

    'ನಮ್ಮವರಲ್ಲ' ಎಂದ ಟಾಲಿವುಡ್ ಮಂದಿಗೆ ಪ್ರಕಾಶ್ ರಾಜ್ ತಿರುಗೇಟು

    |

    ತೆಲುಗು ಸಿನಿಮಾ ಕಲಾವಿದರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿದೆ. 'ಮಾ' (ಮೂವಿ ಆರ್ಟಿಸ್ಟ್ ಅಸೋಸಿಯೇಶನ್) ಚುನಾವಣೆಯಲ್ಲಿ ಬಹುಭಾಷೆ ನಟ ಪ್ರಕಾಶ್ ರಾಜ್ ಸ್ಪರ್ಧೆ ಮಾಡುತ್ತಿದ್ದು, ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿದ್ದಾರೆ. ಪ್ರತಿಸ್ಪರ್ಧಿಗಳಾಗಿ ಮಂಚು ವಿಷ್ಣು, ಜೀವಿತಾ ರಾಜಶೇಖರ್ ಸಹ ಅಖಾಡದಲ್ಲಿದ್ದಾರೆ.

    ಪ್ರಕಾಶ್ ರಾಜ್ ಸ್ಪರ್ಧೆಗೆ ಟಾಲಿವುಡ್‌ನ ಒಂದು ವರ್ಗ ವಿರೋಧ ವ್ಯಕ್ತಪಡಿಸಿದೆ. ಪ್ರಕಾಶ್ ರಾಜ್ ತೆಲುಗಿನವರಲ್ಲ, ಅವರು ಬೇರೆ ರಾಜ್ಯದವರು, ಅವರು ಏಕೆ ಮಾ ಅಧ್ಯಕ್ಷರಾಗಬೇಕು ಎಂದು ಪ್ರಶ್ನಿಸಿದೆ. ಪ್ರಕಾಶ್ ರಾಜ್ ನಾನ್ ಲೋಕಲ್ ಎಂಬ ಚರ್ಚೆ ಹುಟ್ಟುಹಾಕಿ 'ಮಾ' ಚುನಾವಣೆಯಿಂದ ಹಿಂದೆ ಸರಿಯುವಂತೆ ಟೀಕಿಸಿದೆ. ಇದೀಗ, 'ನಾನ್ ಲೋಕಲ್' ಎಂದವರಿಗೆ ಪ್ರಕಾಶ್ ರಾಜ್ ತಿರುಗೇಟು ಕೊಟ್ಟಿದ್ದಾರೆ. ಮುಂದೆ ಓದಿ...

    ಪ್ರಕಾಶ್ ರಾಜ್ ತಂಡದಲ್ಲಿ ಸ್ಟಾರ್ಸ್

    ಪ್ರಕಾಶ್ ರಾಜ್ ತಂಡದಲ್ಲಿ ಸ್ಟಾರ್ಸ್

    'ಮಾ' ಚುನಾವಣೆ ಹಿನ್ನೆಲೆ ಪ್ರಕಾಶ್ ರಾಜ್ ಬಣ ಇಂದು ಸುದ್ದಿಗೋಷ್ಠಿ ಮಾಡಿತ್ತು. ಚಿರಂಜೀವಿ ಸಹೋದರ ನಾಗಬಾಬು, ನಟ ಶ್ರೀಕಾಂತ್, ಬಂಡ್ಲಗಣೇಶ್ ಸೇರಿದಂತೆ ಹಲವರು ಪ್ರಕಾಶ್ ರಾಜ್‌ಗೆ ಬೆಂಬಲ ಸೂಚಿಸಿದರು. ಈ ವೇಳೆ ಮಾತನಾಡಿದ ಪ್ರಕಾಶ್ ರಾಜ್ 'ನಾನ್ ಲೋಕಲ್' ಎಂದವರಿಗೆ ತಮ್ಮದೇ ಶೈಲಿಯಲ್ಲಿ ಉತ್ತರ ಕೊಟ್ಟಿದ್ದಾರೆ.

    'ಮಾ' ಚುನಾವಣೆ: ಬೇರೆ ಇಂಡಸ್ಟ್ರಿಯ ಪ್ರಕಾಶ್ ರಾಜ್ ನಮಗೆ ಬೇಡ ಎಂದ ನಟಿ'ಮಾ' ಚುನಾವಣೆ: ಬೇರೆ ಇಂಡಸ್ಟ್ರಿಯ ಪ್ರಕಾಶ್ ರಾಜ್ ನಮಗೆ ಬೇಡ ಎಂದ ನಟಿ

    ನಾವು ಯಾವ ದೇಶದಲ್ಲಿದ್ದೇವೆ

    ನಾವು ಯಾವ ದೇಶದಲ್ಲಿದ್ದೇವೆ

    ಮಾಧವಿ ಲತಾ, ಕರಾಟೆ ಕಲ್ಯಾಣಿ, ಚಿಟ್ಟಿಬಾಬು ಸೇರಿದಂತೆ ಬಹಳಷ್ಟು ಜನರು ಪ್ರಕಾಶ್ ರಾಜ್ ನಮ್ಮವರಲ್ಲ, ಅವರು ಮಾ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂದು ಹೇಳಿದ್ದಾರೆ. ಈ ಬಗ್ಗೆ ಮಾತನಾಡಿದ ಪ್ರಕಾಶ್ ರಾಜ್ ''ಇದ್ದಕ್ಕಿದ್ದಂತೆ ಲೋಕಲ್, ನಾನ್ ಲೋಕಲ್ ಎಂಬ ಭೇದ ಎಲ್ಲಿಂದ ಬಂತು, ನಾವು ಯಾವ ದೇಶದಲ್ಲಿದ್ದೇವೆ ಅರ್ಥವಾಗುತ್ತಿಲ್ಲ. ಇಲ್ಲಿ ಯಾರು ನಾನ್ ಲೋಕಲ್ ಅಲ್ಲ, ಕಲಾವಿದರು ಯೂನಿವರ್ಸಲ್'' ಎಂದು ತಿರುಗೇಟು ಕೊಟ್ಟಿದ್ದಾರೆ.

    ಗ್ರಾಮ ದತ್ತು ಪಡೆದಾಗ ಯಾರೂ ಹೇಳಿಲ್ಲ?

    ಗ್ರಾಮ ದತ್ತು ಪಡೆದಾಗ ಯಾರೂ ಹೇಳಿಲ್ಲ?

    ''ನನ್ನ ಸಹಾಯಕರಿಗೆ ತೆಲಂಗಾಣದಲ್ಲಿ ಮನೆ ತೆಗೆದುಕೊಂಡಾಗ ಯಾರೂ ಪ್ರಶ್ನೆ ಮಾಡಿಲ್ಲ, ಎರಡು ಗ್ರಾಮ ದತ್ತು ಪಡೆದಾಗ ಯಾರು ನಾನ್ ಲೋಕಲ್ ಎಂದು ಕೇಳಲಿಲ್ಲ. ನಂದಿ ಪ್ರಶಸ್ತಿ ಪಡೆದಾಗ ಯಾರು ಪ್ರಶ್ನಿಸಿಲ್ಲ. ರಾಷ್ಟ್ರ ಪ್ರಶಸ್ತಿ ಸಿಕ್ಕಾಗ ಎಲ್ಲಿ ಹೋಗಿದ್ದರು. ಈಗ ಎಲ್ಲಿಂದ ಬಂತು ನಾನ್ ಲೋಕಲ್ ಮಾತು, ಇದು ಬಹಳ ಸಂಕುಚಿತ ಮನೋಭಾವ ತೋರಿಸುತ್ತದೆ'' ಎಂದು ರಾಜ್ ಬೇಸರ ವ್ಯಕ್ತಪಡಿಸಿದರು.

    ಸಾಯಿ ಕುಮಾರ್, ಜಯಪ್ರದ ಯಾರು?

    ಸಾಯಿ ಕುಮಾರ್, ಜಯಪ್ರದ ಯಾರು?

    ''ಸಾಯಿ ಕುಮಾರ್ ಮತ್ತು ಜಯಪ್ರದ ಅವರನ್ನು ಯಾರೂ ಪ್ರಶ್ನೆ ಮಾಡಿಲ್ಲ. ಎಲ್ಲ ಭಾಷೆಯಲ್ಲೂ ಅವರು ರಾರಾಜಿಸುತ್ತಿದ್ದಾರೆ. ಎಲ್ಲಿಯೂ ಅವರನ್ನು ನಾನ್ ಲೋಕಲ್ ಎಂದು ಹೇಳಿಲ್ಲ. ಅವರು ತೆಲುಗಿನ ಗೌರವ. ಕಲೆಯ ರಾಯಭಾರಿಗಳು'' ಎಂದು ಪ್ರಕಾಶ್ ರಾಜ್ ಅಭಿಪ್ರಾಯ ಪಟ್ಟಿದ್ದಾರೆ.

    English summary
    South indian actor Prakash Raj reaction to non local comment in Tollywood on MAA elections controversy.
    Friday, June 25, 2021, 17:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X