"ಪ್ರಭಾಸ್‌ನ ರೇ* ಮಾಡ್ತೀನಿ" ಎಂದ ಪ್ರಮುಖ ನಟಿ ಇಂದು: ವಿಡಿಯೋ ಫುಲ್ ವೈರಲ್

ಬಾಹುಬಲಿ ಪ್ರಭಾಸ್‌ಗೆ ದೇಶ ವಿದೇಶಗಳಲ್ಲಿ ದೊಡ್ಡ ಅಭಿಮಾನಿ ಬಳಗವಿದೆ. ಸಾಕಷ್ಟು ನಟ, ನಟಿಯರು ಈ ಆರಡಿ ಕಟೌಟ್‌ಗೆ ಫಿದಾ ಆಗಿದ್ದಾರೆ. ವಯಸ್ಸು 40 ದಾಟಿದ್ರು ಯಂಗ್ ರೆಬಲ್ ಸ್ಟಾರ್ ಮಾತ್ರ ಮದುವೆ ಆಲೋಚನೆ ಬಿಟ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಮೋಸ್ಟ್ ಎಲಿಜಬಲ್ ಬ್ಯಾಚುಲರ್‌ಗೆ ಮಹಿಳಾ ಅಭಿಮಾನಿಗಳ ಸಂಖ್ಯೆ ಜಾಸ್ತಿನೇ ಇದೆ.

ತೆಲುಗು ಯುವ ನಟಿಯೊಬ್ಬರು ಪ್ರಭಾಸ್ ಬಗ್ಗೆ ಇಂಟ್ರೆಸ್ಟಿಂಗ್ ಕಾಮೆಂಟ್ ಮಾಡಿದ್ದಾರೆ. ಡಾರ್ಲಿಂಗ್ ದೊಡ್ಡ ಅಭಿಮಾನಿಯಾಗಿರುವ ಆಕೆ ನೆಚ್ಚಿನ ನಟನನ್ನು ನೋಡಬೇಕು, ಮಾತನಾಡಬೇಕು ಎಂದಿದ್ದಾರೆ. ತಿಂಗಳ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಆಕೆ ನೀಡಿರುವ ಹೇಳಿಕೆ ಈಗ ಸಖತ್ ವೈರಲ್ ಆಗುತ್ತಿದೆ. ಪ್ರಭಾಸ್‌ನ ರೇ* ಮಾಡ್ತೀನಿ ಎಂದು ಆಕೆ ಹೇಳಿರೋದು ಕೆಲವರ ಹುಬ್ಬೇರಿಸಿದೆ. ಇನ್ನು ಪ್ರಭಾಸ್ ಜೊತೆ ನಟಿಸೋ ಅವಕಾಶ ಕೊಡಿ ಎಂದು ಸಿನಿಮಾ ನಿರ್ದೇಶಕರನ್ನು ಪೀಡಿಸಿದ್ದೇನೆ ಎಂದು ಆಕೆ ಹೇಳಿದ್ದಾರೆ. ಆಕೆ ಮಾತನಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ.

Pramukha Nati Indu Kusuma sensational comments about Prabhas goes viral

ಅಂದಹಾಗೆ ಪ್ರಭಾಸ್ ಬಗ್ಗೆ ಈ ರೀತಿ ಕಾಮೆಂಟ್ ಮಾಡಿರುವ ನಟಿಯರ ಹೆಸರು ಇಂದು ಕುಸುಮಾ. ಕೆಲ ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಈಕೆ ನಟಿಸಿದ್ದಾರೆ. 'ಬುಟ್ಟಬೊಮ್ಮ' ಮತ್ತು 'ಮೆರಿಸ್ ಮೆರಿಸ್' ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. 'ರಾಜಾ ರಾಜ ಚೋರಾ', 'ಗಲಿವಾನಾ' ವೆಬ್ ಸೀರಿಸ್‌ಗಳಲ್ಲೂ ನಟಿಸಿದ್ದಾರೆ. ಪ್ರಭಾಸ್ ತನ್ನ ನೆಚ್ಚಿನ ನಟ ಎಂದು ಹೇಳಿರುವ ಇಂದು ಡಾರ್ಲಿಂಗ್ ಜೊತೆ ನಟಿಸೋ ಇಂಗಿತ ವ್ಯಕ್ತಪಡಿಸಿದ್ದಾರೆ. ನನ್ನ ತಾಯಿ ಕೂಡ ಪ್ರಭಾಸ್ ದೊಡ್ಡ ಅಭಿಮಾನಿ. ಅಷ್ಟೇ ಆದರೂ ಅಳಿಯ ಅಲ್ಲವೇ ಎಂದು ಇಂದು ಹೇಳಿದ್ದಾರೆ.

ನಿರೂಪಕ ಒಂದು ವೇಳೆ ಪ್ರಭಾಸ್ ಪಕ್ಕದಲ್ಲಿ ತಂಗಿಯಾಗಿ ನಟಿಸಿ ಡೈಲಾಗ್ ಹೇಳುವ ಪ್ರಮೇಯ ಬಂದರೆ ನಟಿಸುತ್ತೀರಾ? ಎಂದು ಕೇಳಿದ್ದಾನೆ. ಈ ಪ್ರಶ್ನೆಗೆ ಆಕೆ ಸಖತ್ ಬೋಲ್ಡ್ ಆಗಿ ಉತ್ತರಿಸಿದ್ದಾರೆ. "ಆನ್‌ ಸ್ಕ್ರೀನ್‌ನಲ್ಲಿ ನಟಿಸ್ತೀನಿ, ಆದರೆ ಆಫ್‌ ಸ್ಕ್ರೀನ್‌ನಲ್ಲಿ ರೇ* ಮಾಡ್ತೀನಿ ಅಂತ ಪ್ರಭಾಸ್‌ಗೆ ಹೇಳ್ತೀನಿ" ಎಂದು ಆಕೆ ಹೇಳಿದ್ದಾರೆ. 'ಸಾಹೋ' ಚಿತ್ರದಲ್ಲಿ ಪ್ರಭಾಸ್ ಜೊತೆ ನಟಿಸೋ ಅವಕಾಶ ಕೊಡುವಂತೆ ನಿರ್ದೇಶಕ ಸುಜಿತ್‌ಗೆ ದುಂಬಾಲು ಬಿದ್ದಿದ್ದೆ. ಆದರೆ ಆ ಚಿತ್ರದಲ್ಲಿ ಅಂತಹ ಪಾತ್ರ ಯಾವುದು ಇಲ್ಲ ಎಂದು ಬಿಟ್ಟರು. ಮುಂದೆ ಯಾವ ಸಿನಿಮಾದಲ್ಲಿ ಪ್ರಭಾಸ್ ನಟಿಸ್ತಿದ್ದಾರೆ ಎಂದು ನೋಡಿಕೊಂಡು ಆ ನಿರ್ದೇಶಕರನ್ನಿ ಪೀಡಿಸಬೇಕು ಎಂದಿದ್ದಾರೆ.

ಮಹೇಶ್ ಬಾಬು, ಎನ್‌ಟಿಆರ್, ಜ್ಯೂ. ಎನ್‌ಟಿಆರ್, ವಿಜಯ್ ದೇವರಕೊಂಡ ಜೊತೆ ನಟಿಸೋ ಆಸೆ ಇದೆ. ಆದರೆ ಆ ಲಿಸ್ಟ್‌ನಲ್ಲಿ ಪ್ರಭಾಸ್ ಮೊದಲ ಸ್ಥಾನದಲ್ಲಿದ್ದಾರೆ. ನಾನು ಚಿತ್ರರಂಗದಲ್ಲಿ ಒಳ್ಳೆ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಬೇಕು ಎಂದು ಬಂದೆ. ಲೇಡಿ ಪ್ರಕಾಶ್ ರಾಜ್ ರೀತಿ ಆಗಬೇಕು. ಅಂದರೆ ಒಳ್ಳೆ ಒಳ್ಳೆ ಪಾತ್ರಗಳಲ್ಲಿ ನಟಿಸಬೇಕು. ನಾಯಕಿಯಾಗಿ ಎಷ್ಟು ಸಿನಿಮಾಗಳಲ್ಲಿ ನಟಿಸೋಕೆ ಸಾಧ್ಯ ಹೇಳಿ. ಪೋಷಕ ಪಾತ್ರಗಳಲ್ಲಿ ಹೆಚ್ಚು ನಟಿಸಬೇಕು ಎನ್ನುವುದು ನನ್ನ ಆಸೆ. ಪ್ರಭಾಸ್ ಚಿತ್ರದಲ್ಲಿ ಲೇಡಿ ರೇ*ಸ್ಟ್ ಪಾತ್ರ ಆದರೂ ಸರಿ ಎಂದು ನಗು ಬೀರಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ 'ಪ್ರಮುಖ ನಟಿ ಇಂದು' ಎಂದು ತಮ್ಮ ಅಕೌಂಟ್ ಓಪನ್ ಮಾಡಿದ್ದಾರೆ. ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ನಾನು ಪ್ರಭಾಸ್ ವೀರಾಭಿಮಾನಿ ಎಂದು ಆಕೆ ಹೇಳಿಕೊಂಡಿದ್ದಾರೆ. ಆಕೆಯ ಹೇಳಿಕೆ ಈಗ ವೈರಲ್ ಆಗುತ್ತಿದ್ದು ಕೆಲವರು ಏನಿದು ಈರೀತಿ ಬಹಿರಂಗವಾಗಿ ಹೀಗೆಲ್ಲಾ ಮಾತನಾಡಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಪ್ರಭಾಸ್ ಅಭಿಮಾನಿಗಳು ನೋಡಿದ್ರಾ ನಮ್ಮ ಡಾರ್ಲಿಂಗ್‌ಗೆ ಎಂಥೆಂತ ಅಭಿಮಾನಿಗಳಿದ್ದಾರೆ ಎನ್ನುತ್ತಿದ್ದಾರೆ.

More from Filmibeat

English summary
Pramukha Nati Indu Kusuma shocking comments about Prabhas. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X