ಸೋಪ್ ನೊರೆಯಲ್ಲಿ ಮೈಮುಚ್ಚಿಕೊಂಡ ಸಂತೂರ್ ಮಮ್ಮಿ ಪ್ರಣೀತಾ.. ತೆಗೆಯುವಂತೆ ನೆಟ್ಟಿಗರು ಟ್ರೋಲ್

ಮಿಲ್ಕಿ ಬ್ಯೂಟಿ ಪ್ರಣೀತಾ ಸುಭಾಷ್ ಮದುವೆಯಾಗಿ ಒಂದು ಮಗುವಿನ ತಾಯಿಯಾದ ಬಳಿಕವೂ ಚಿತ್ರರಂಗದಲ್ಲಿ ನಾಯಕಿಯಾಗಿ ಮುಂದುವರೆದಿದ್ದಾರೆ. ಮಗಳ ಲಾಲಾನೆ ಪಾಲನೆ ಜೊತೆ ಜೊತೆಗೆ ಹೊಸ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಇತ್ತ ಸೋಶಿಯಲ್ ಮೀಡಿಯಾದಲ್ಲೂ ಸಖತ್ ಆಕ್ಟೀವ್ ಆಗಿರುವ ಚೆಲುವೆ ಹೊಸ ಹೊಸ ಪೋಸ್ಟ್ ಮಾಡುತ್ತಿರುತ್ತಾರೆ.

14 ವರ್ಷಗಳ ಹಿಂದೆ 'ಪೊರ್ಕಿ' ಚಿತ್ರದಲ್ಲಿ ಪ್ರಣೀತಾ ನಾಯಕಿಯಾಗಿ ನಟಿಸಿದರು. ಬಳಿಕ ತೆಲುಗು, ತಮಿಳು ಸಿನಿಮಾಗಳತ್ತ ಹೆಚ್ಚು ಗಮನ ಹರಿಸಿದರು. ಆಗೊಮ್ಮೆ ಈಗೊಮ್ಮೆ ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸುತ್ತಾ ಬಂದಿದ್ದಾರೆ. ಇತ್ತೀಚೆಗೆ ಮಾಲಿವುಡ್ ಕೂಡ ಪ್ರವೇಶಿಸಿದ್ದರು. ಮದುವೆ, ಮಗು ಬಳಿಕ ಮಲಯಾಳಂನ 'ತಂಕಮಣಿ ಚಿತ್ರದಲ್ಲಿ ನಟಿಸಿದರು. ಇನ್ನು ಬಹಳ ಹಿಂದೆ ಶುರುವಾಗಿದ್ದ 'ರಾಮನ ಅವತಾರ' ಕನ್ನಡ ಸಿನಿಮಾ ಇತ್ತೀಚೆಗೆ ತೆರೆಗೆ ಬಂದಿತ್ತು.

Pranitha Subhash gets trolled for her latest bath tub video netizens ask to delete

ಸಿನಿಮಾಗಳಲ್ಲಿ ನಟಿಸುವುದರ ಜೊತೆಗೆ ತಮ್ಮ ಬಲಪಂಥೀಯ ವಿಚಾರಧಾರೆಯಿಂದಲೂ ಪ್ರಣೀತಾ ಆಗಾಗ್ಗೆ ಸುದ್ದಿಯಾಗುತ್ತಾರೆ. ಇತ್ತೀಚೆಗೆ ಸ್ಯಾಮ್ ಪಿತ್ರೋಡಾ ಹೇಳಿಕೆಗೂ ತಿರುಗೇಟು ನೀಡಿದ್ದರು. ಇನ್ನು ಸಿಕ್ಕಾಪಟ್ಟೆ ಬೋಲ್ಡ್ ಫೋಟೊಶೂಟ್‌ಗಳಲ್ಲಿ ಮಿಲ್ಕಿ ಬ್ಯೂಟಿ ಮೋಡಿ ಮಾಡುತ್ತಾರೆ. ಕೆಲ ದಿನಗಳ ಹಿಂದೆ ಟರ್ಕಿಯಲ್ಲಿ ಸ್ವಿಮ್ ಸೂಟ್‌ ಧರಿಸಿ ಬಿಂದಾಸ್ ಪೋಸ್ ನೀಡಿದ್ದರು. ಮದುವೆಯಾಗಿ ಒಂದು ಮಗುವಿನ ತಾಯಿಯಾದರೂ ನಿಮ್ಮ ಚೆಲುವೆ ಕಮ್ಮಿ ಆಗಲಿಲ್ಲ. ನೀವು ಸಂತೂರ್ ಮಮ್ಮಿ ಎಂದು ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿರುತ್ತಾರೆ.

ಯೋಗ ಮಾಡುತ್ತಾ, ಸ್ವಿಮ್ಮಿಂಗ್ ಮಾಡುತ್ತಾ ಕ್ಯಾಮರಾಗೆ ಪೋಸ್ ಕೊಡುವ ಪ್ರಣೀನಾ ಬಾತ್‌ ಟಬ್ ಫೋಟೊಗಳನ್ನು ಶೇರ್ ಮಾಡುತ್ತಿರುತ್ತಾರೆ. ಸದ್ಯ ಮತ್ತೊಮ್ಮೆ ಬಾತ್‌ ಟಬ್ ವೀಡಿಯೋ ಶೇರ್ ಮಾಡಿ ಫುಲ್ ಟ್ರೋಲ್ ಆಗುತ್ತಿದ್ದಾರೆ. ಕೆಲವರು ಸೂಪರ್ ಎಂದು ಕಾಮೆಂಟ್ ಮಾಡಿದರೆ ಮತ್ತೆ ಕೆಲವರು ಡಿಲೀಟ್ ಮಾಡಿ ಎಂದು ಮನವಿ ಮಾಡಿದ್ದಾರೆ. ಬರೀ ಸೋಪ್ ನೊರೆಯಿಂದ ಮೈ ಮುಚ್ಚಿಕೊಂಡಂತೆ ಪ್ರಣೀತಾ ವೀಡಿಯೋ ಶೇರ್ ಮಾಡಿದ್ದಾರೆ.

"ಹಾಟ್ ಬಬಲ್ ಬಾತ್‌ಗಿಂತ ಒಳ್ಳೆ ರಿಲ್ಯಾಕ್ಸ್ ಮತ್ತೊಂದಿಲ್ಲ" ಎಂದು ಬರೆದು ಪ್ರಣೀತಾ ವಿಡಿಯೋ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು ತರಹೇವಾರಿ ಕಾಮೆಂಟ್ಸ್ ಬರ್ತಿದೆ.

ಪ್ರಣೀತಾ ವಿಡಿಯೋ ಮೇಲೆ ನೆಟ್ಟಿಗರು ಗರಂ ಆಗಿದ್ದಾರೆ. ಇಂತಹ ವಿಡಿಯೋಗಳನ್ನು ಏಕೆ ಶೇರ್ ಮಾಡುತ್ತಿದ್ದೀರಾ ಎಂದು ಕೆಲವರು ಕೇಳಿದರೆ ಮತ್ತೆ ಕೆಲವರು ಆ ನೊರೆ ತೆಗೆದುಬಿಡಿ ಎಂದು ಟ್ರೋಲ್ ಮಾಡುತ್ತಿದ್ದಾರೆ. ಕೆಲವೇ ಗಂಟೆಗಳಲ್ಲಿ ಸಾವಿರಾರು ಲೈಕ್ಸ್, ನೂರಾರು ಕಾಮೆಂಟ್ಸ್ ಬಂದಿದೆ. ಇನ್ನು ಚಿತ್ರೀಕರಣಕ್ಕಾಗಿ ಇತ್ತೀಚೆಗೆ ಥಾಯ್ಲೆಂಡ್ ಪ್ರವಾಸ ಕೈಗೊಂಡಿದ್ದ ಪ್ರಣೀತಾ, ಮೊನ್ನೆಯಷ್ಟೆ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು.

3 ವರ್ಷಗಳ ಹಿಂದೆ ಪ್ರಣೀತಾ ಸುಭಾಷ್ ಉದ್ಯಮಿ ನಿತಿನ್ ರಾಜು ಎಂಬುವವರ ಕೈ ಹಿಡಿದಿದ್ದರು. ತಡವಾಗಿ ಈ ವಿಚಾರ ಗೊತ್ತಾಗಿತ್ತು. ಕನ್ನಡದಲ್ಲಿ ಜರಾಸಂಧ, ವಿಷಲ್, ಬ್ರಹ್ಮ, ಮಾಸ್ ಲೀಡರ್ ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಪ್ರಣೀತಾ ಮಿಂಚಿದ್ದಾರೆ. ಇನ್ನು ತೆಲುಗಿನಲ್ಲಿ 'ಅತ್ತಾರಿಂಟಿಕಿ ದಾರೇದಿ' ಚಿತ್ರದ 2ನೇ ನಾಯಕಿಯಾಗಿ ಆಕೆ ಕಾಣಿಸಿಕೊಂಡಿದ್ದರು. ಚಿತ್ರದ 'ಬಾಪುಗಾರಿ ಬೊಮ್ಮ' ಹಾಡು ಆಕೆಗೆ ಒಳ್ಳೆ ಕ್ರೇಜ್ ತಂದುಕೊಟ್ಟಿತ್ತು.

ಸದ್ಯ ಪ್ರಣೀತಾ ಹೊಸದಾಗಿ ಯಾವುದೇ ಸಿನಿಮಾ ಘೋಷಿಸಿಲ್ಲ. ಒಂದಷ್ಟು ಕಥೆಗಳನ್ನು ಕೇಳುತ್ತಿದ್ದು ಶೀಘ್ರದಲ್ಲೇ ತಮ್ಮ ಮುಂದಿನ ಸಿನಿಮಾ ಬಗ್ಗೆ ಮಾಹಿತಿ ನೀಡುವ ಸಾಧ್ಯತೆಯಿದೆ.

More from Filmibeat

English summary
Pranitha Subhash bath tub video goes viral;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X