For Quick Alerts
  ALLOW NOTIFICATIONS  
  For Daily Alerts

  ಪ್ರಭಾಸ್ ಬಳಿಕ ತೆಲುಗು ಸ್ಟಾರ್ ನಟನಿಗೆ ಪ್ರಶಾಂತ್ ನೀಲ್ ಆಕ್ಷನ್-ಕಟ್

  |

  ಕೆಜಿಎಫ್ ಸಿನಿಮಾದಿಂದ ತಾರಾ ಪಟ್ಟ್ ಗಳಿಸಿಕೊಂಡಿರುವ ಕನ್ನಡದ ನಿರ್ದೇಶಕ ಪ್ರಶಾಂತ್ ನೀಲ್ ಇದೀಗ ತೆಲುಗಿನ 'ಸಲಾರ್' ಸಿನಿಮಾಕ್ಕಾಗಿ ಪ್ರಭಾಸ್ ಗೆ ಆಕ್ಷನ್-ಕಟ್ ಹೇಳುತ್ತಿದ್ದಾರೆ.

  ಸಲಾರ್ ನಂತರ ಮತ್ತೊಂದು ದೊಡ್ಡ ಸಿನಿಮಾಕ್ಕೆ ರೆಡಿಯಾದ ಪ್ರಶಾಂತ್ ನೀಲ್

  'ಸಲಾರ್' ನ ನಂತರ ಮತ್ತೊಬ್ಬ ದೊಡ್ಡ ತೆಲುಗು ನಟನ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ ಪ್ರಶಾಂತ್ ನೀಲ್. ಇದೊಂದು ಭಾರಿ ಬಿಗ್ ಬಜೆಟ್ ಸಿನಿಮಾ ಆಗಿರಲಿದೆ.

  ಪ್ರಶಾಂತ್ ನೀಲ್ 'ಸಲಾರ್'ಗೆ ವಿಲನ್ ಆದ ಕನ್ನಡಿಗ; ಪ್ರಭಾಸ್ ಎದುರು 'ಭಜರಂಗಿ' ನಟನ ಅಬ್ಬರಪ್ರಶಾಂತ್ ನೀಲ್ 'ಸಲಾರ್'ಗೆ ವಿಲನ್ ಆದ ಕನ್ನಡಿಗ; ಪ್ರಭಾಸ್ ಎದುರು 'ಭಜರಂಗಿ' ನಟನ ಅಬ್ಬರ

  ಹೌದು, ಖ್ಯಾತ ನಟ ಜೂ.ಎನ್‌ಟಿಆರ್ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ ಪ್ರಶಾಂತ್ ನೀಲ್. ಈ ಬಗ್ಗೆ ಈ ಹಿಂದೆಯೇ ಸ್ವತಃ ಪ್ರಶಾಂತ್ ನೀಲ್ ಮಾತನಾಡಿದ್ದರು. ಆದರೆ ಈ ನಡುವೆ 'ಸಲಾರ್' ಸೆಟ್ಟೇರಿದ ಕಾರಣ ಜೂ.ಎನ್‌ಟಿಆರ್ ಜೊತೆಗಿನ ಸಿನಿಮಾ ಅನುಮಾನ ಎನ್ನಲಾಗಿತ್ತು. ಆದರೆ ಸಿನಿಮಾ ನಿರ್ಮಾಣವಾಗುವುದು ಅಧಿಕೃತಕೊಂಡಿದೆ.

  ತೆಲುಗಿನ ಪ್ರಖ್ಯಾತ ಮೈತ್ರಿ ಮೂವೀಸ್ ನ ನಿರ್ಮಾಪಕರಾದ ನವೀನ್ ಯೆರನೇನಿ ಹಾಗೂ ರವಿ ಶಂಕರ್ ಅವರುಗಳು ಸಂದರ್ಶನವೊಂದರಲ್ಲಿ ಮಾತನಾಡುತ್ತಾ, 'ಜೂ.ಎನ್‌ಟಿಆರ್ ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡಲಿದ್ದಾರೆ' ಎಂದು ಹೇಳಿದ್ದಾರೆ.

  ಜೂ.ಎನ್‌ಟಿಆರ್ ರ 31 ನೇ ಸಿನಿಮಾ

  ಜೂ.ಎನ್‌ಟಿಆರ್ ರ 31 ನೇ ಸಿನಿಮಾ

  ಜೂ.ಎನ್‌ಟಿಆರ್ ಅವರ 31 ನೇ ಸಿನಿಮಾ ಇದಾಗಿರಲಿದ್ದು, ಸಿನಿಮಾಕ್ಕೆ 'ನ್ಯೂಕ್ಲಿಯರ್' ಎಂದು ಹೆಸರಿಡುವ ಸಾಧ್ಯತೆ ಇದೆ. ಜೂ.ಎನ್‌ಟಿಆರ್ ಹುಟ್ಟುಹಬ್ಬದಂದು ಜೂ.ಎನ್‌ಟಿಆರ್ ಅನ್ನು ಭೇಟಿ ಮಾಡಿದ್ದ ಪ್ರಶಾಂತ್ ನೀಲ್, 'ಈಗ ಗೊತ್ತಾಗುತ್ತಿದೆ, ನ್ಯೂಕ್ಲಿಯರ್ ಪ್ಲ್ಯಾಂಟ್ ಪಕ್ಕ ಕೂತರೇ ಹೇಗೆ ಅನುಭವವಾಗುತ್ತದಂತೆ, ಮುಂದಿನ ಬಾರಿ ನನ್ನ ರೇಡಿಯೇಶನ್ ಸೂಟ್ ಧರಿಸಿ ಬರುತ್ತೇನೆ. ಅದ್ಭುತವಾದ ಎನರ್ಜಿ ಜೂ.ಎನ್‌ಟಿಆರ್ ಅವರದ್ದು' ಎಂದು ಟ್ವೀಟ್ ಮಾಡಿದ್ದರು.

  'ಸಲಾರ್' ಮುಗಿದ ಬಳಿಕ ಜೂ.ಎನ್‌ಟಿಆರ್ ಜೊತೆ ಸಿನಿಮಾ

  'ಸಲಾರ್' ಮುಗಿದ ಬಳಿಕ ಜೂ.ಎನ್‌ಟಿಆರ್ ಜೊತೆ ಸಿನಿಮಾ

  'ಸಲಾರ್' ಸಿನಿಮಾ ಮುಗಿದ ಬಳಿಕ ಜೂ.ಎನ್‌ಟಿಆರ್ ಸಿನಿಮಾವನ್ನು ಪ್ರಾರಂಭಿಸಲಿದ್ದಾರೆ ಪ್ರಶಾಂತ್ ನೀಲ್. 'ಸಲಾರ್' ಸಿನಿಮಾದ ಮೊದಲ ಶೆಡ್ಯೂಲ್ ಇತ್ತೀಚೆಗಷ್ಟೆ ಗೋಧಾವರಿ ಗಣಿಯಲ್ಲಿ ಮುಗಿದಿದ್ದು. ಇನ್ನೂ ಹಲವು ದಿನಗಳ ಚಿತ್ರೀಕರಣ ಬಾಕಿ ಇದೆ.

  ಆರ್‌ಆರ್ಆರ್ ಸಿನಿಮಾದ ಚಿತ್ರೀಕರಣ ಮುಗಿಸಿರುವ ಜೂ.ಎನ್‌ಟಿಆರ್

  ಆರ್‌ಆರ್ಆರ್ ಸಿನಿಮಾದ ಚಿತ್ರೀಕರಣ ಮುಗಿಸಿರುವ ಜೂ.ಎನ್‌ಟಿಆರ್

  ಜೂ.ಎನ್‌ಟಿಆರ್ ಈಗಷ್ಟೆ ರಾಜಮೌಳಿ ನಿರ್ದೇಶನದ 'ಆರ್ಆರ್ಆರ್' ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಪ್ರಶಾಂತ್ ನೀಲ್ ಸಿನಿಮಾದ ಆರಂಭಕ್ಕೂ ಮುನ್ನಾ ಮತ್ತೊಂದು ಸಿನಿಮಾವನ್ನು ಜೂ.ಎನ್‌ಟಿಆರ್ ಒಪ್ಪಿಕೊಳ್ಳುವ ಸಾಧ್ಯತೆ ಇದೆ.

  ಸಲಾರ್‌ಗೆ ಕನ್ನಡಿಗ ವಿಲನ್

  ಸಲಾರ್‌ಗೆ ಕನ್ನಡಿಗ ವಿಲನ್

  ಇನ್ನು ಪ್ರಶಾಂತ್ ನೀಲ್ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ಕೆಜಿಎಫ್ 2 ಜುಲೈ 16 ಕ್ಕೆ ಬಿಡುಗಡೆ ಆಗಲಿದೆ. ಇನ್ನು ಪ್ರಭಾಸ್ ನಟನೆಯ ಸಲಾರ್ ಸಿನಿಮಾ ಅಕ್ಟೋಬರ್ ನಲ್ಲಿ ಬಿಡುಗಡೆ ಆಗಲಿದೆ. ಸಲಾರ್ ಸಿನಿಮಾದಲ್ಲಿ ನಟಿ ಶ್ರುತಿ ಹಾಸನ್ ನಾಯಕಿಯಾಗಿದ್ದಾರೆ. ವಿಲನ್ ಆಗಿ ಕನ್ನಡಿಗ ಮಧು ಗುರುಸ್ವಾಮಿ ಅಭಿನಯಿಸಲಿದ್ದಾರೆ. ಜೊತೆಗೆ ಮೋಹನ್‌ಲಾಲ್ ಸಹ ಸಿನಿಮಾದಲ್ಲಿರಲಿದ್ದಾರೆ.

  English summary
  Director Prashant Neel will direct a movie for Jr NTR after finishing Salaar movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X