ಒಂದೇ ಒಂದು ಫೋಟೊ ಬಿಟ್ಟು ಎಲ್ಲಾ ವದಂತಿಗಳಿಗೆ ತೆರೆ ಎಳೆದ ಪ್ರಶಾಂತ್ ನೀಲ್

ಚಿತ್ರರಂಗದಲ್ಲಿ ಗಾಳಿಸುದ್ದಿಗಳಿವೆ ಬರವಿಲ್ಲ. ಸೋಶಿಯಲ್ ಮೀಡಿಯಾ ಬಂದಮೇಲೆ ಇಂತಹ ಸುದ್ದಿಗಳು ಬಹಳ ಬೇಗ ಹರಡುತ್ತಿವೆ. ಅಧಿಕೃತವಾಗಿ ಮಾಹಿತಿ ಸಿಗದೇ ಇದ್ದಾಗ ತರಹೇವಾರಿ ಸುದ್ದಿಗಳು ಹುಟ್ಟಿಕೊಳ್ಳುತ್ತದೆ. ಪ್ರಶಾಂತ್ ನೀಲ್ ಸಾಧ್ಯವಾದಷ್ಟು ಮಾಧ್ಯಮಗಳಿಂದ ದೂರ ಇರುತ್ತಾರೆ. ಹಾಗಾಗಿ ಅವರ ಬಗ್ಗೆ ನಾನಾ ರೀತಿಯ ಊಹಾಪೋಹಗಳು ಹರಿದಾಡುತ್ತದೆ.

ಸೋಶಿಯಲ್ ಮೀಡಿಯಾದಿಂದ ಕೂಡ ಪ್ರಶಾಂತ್ ನೀಲ್ ದೂರ ಇದ್ದಾರೆ. ಹಾಗಾಗಿ ಸುಳ್ಳು ವದಂತಿಗಳು ಮತ್ತಷ್ಟು ಜೋರಾಗಿ ಸದ್ದು ಮಾಡುತ್ತವೆ. ಸದ್ಯ ಜ್ಯೂ. ಎನ್‌ಟಿಆರ್ ನಟನೆಯ 'ಡ್ರ್ಯಾಗನ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇತ್ತೀಚೆಗೆ ಆ ಚಿತ್ರದ ಬಗ್ಗೆ ಸಾಕಷ್ಟು ಗಾಳಿಸುದ್ದಿ ಹರಿದಾಡಿತ್ತು. ಅದಕ್ಕೆಲ್ಲಾ ಈಗ ಒಂದೇ ಒಂದು ಫೋಟೊ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ.

Prashanth Neel and Jr NTR Quash Rumors with New Dragon Movie Update

ಮೈತ್ರಿ ಮೂವಿಮೇಕರ್ಸ್ ಹಾಗೂ ಎನ್‌ಟಿಆರ್ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ 'ಡ್ರ್ಯಾಗನ್' ಸಿನಿಮಾ ನಿರ್ಮಾಣವಾಗುತ್ತಿದೆ. ಕನ್ನಡ ನಟಿ ರುಕ್ಮಿಣಿ ವಸಂತ್ ನಾಯಕಿಯಾಗಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗುತ್ತಿದೆ. ಪ್ರಶಾಂತ್‌ ನೀಲ್ ಚಿತ್ರಿಸಿದ ಕೆಲ ದೃಶ್ಯಗಳು ತಾರಕ್‌ಗೆ ಇಷ್ಟವಾಗಲಿಲ್ಲ. ಅದೇ ಕಾರಣಕ್ಕೆ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎನ್ನುವ ಗುಸುಗುಸು ಕೇಳಿಬಂದಿತ್ತು. ಸಿನಿಮಾ ನಿಂತೇ ಹೋಗುತ್ತದೆ ಎನ್ನುವ ಹಂತಕ್ಕೆ ಕೆಲವರು ಗಾಳಿಸುದ್ದಿ ಹರಡಿದ್ದರು.

ಸದ್ಯ ಜ್ಯೂ. ಎನ್‌ಟಿಆರ್ ತಮ್ಮ ಹೇರ್‌ಸ್ಟೈಲ್, ಲುಕ್ ಬದಲಿಸುತ್ತಿದ್ದಾರೆ. ಪ್ರಶಾಂತ್ ನೀಲ್ ಮುಂದೆ ನಿಂತು ತಾರಕ್ ಲುಕ್ ಬಗ್ಗೆ ಗಮನ ಹರಿಸಿದ್ದಾರೆ. ಸೆಲೆಬ್ರೆಟಿ ಹೇರ್ ಸ್ಟೈಲಿಶ್ ಜ್ಯೂ. ಎನ್‌ಟಿಆರ್ ತಲೆ ಕೂದಲು, ಗಡ್ಡಕ್ಕೆ ಕತ್ತರಿ ಹಾಕಿ ಹೊಸ ರೂಪ ಕೊಡುತ್ತಿದ್ದಾರೆ. ಶೀಘ್ರದಲ್ಲೇ ಹೊಸ ಚಿತ್ರದ ಹೊಸ ಶೆಡ್ಯೂಲ್ ಆರಂಭ ಎಂದು ಚಿತ್ರತಂಡ ಮಾಹಿತಿ ನೀಡಿದೆ. ಅಭಿಮಾನಿಗಳು ಈ ಪೋಸ್ಟ್ ಲೈಕ್, ಶೇರ್ ಮಾಡಿ ಮೆಚ್ಚಿಕೊಳ್ಳುತ್ತಿದ್ದಾರೆ.

ಬಾಲಿವುಡ್ ಅಂಗಳಕ್ಕೆ ಹೋಗಿ ಗೆಲ್ಲುವ ತಾರಕ್ ಲೆಕ್ಕಾಚಾರ ತಲೆ ಕೆಳಗಾಗಿದೆ. ಹೃತಿಕ್ ರೋಷನ್ ಜೊತೆ ನಟಿಸಿದ 'ವಾರ್- 2' ಸಿನಿಮಾ ಸೋತಿತ್ತು. ಅದಕ್ಕೂ ಮುನ್ನ ಬಂದಿದ್ದ 'ದೇವರ' ಸಿನಿಮಾ ಕೂಡ ಅಷ್ಟಾಗಿ ಸದ್ದು ಮಾಡಲಿಲ್ಲ. ಹಾಗಾಗಿ 'ಡ್ರ್ಯಾಗನ್' ಚಿತ್ರದ ಮೇಲೆ ಭಾರೀ ನಿರೀಕ್ಷೆಯಿದೆ. ನಾನು ತಾರಕ್ ದೊಡ್ಡ ಅಭಿಮಾನಿ ಎಂದು ಪ್ರಶಾಂತ್ ನೀಲ್ ಹೇಳ್ತಾ ಬರ್ತಿದ್ದಾರೆ. ಹಾಗಾಗಿ ತನ್ನ ಅಭಿಮಾನ ನಟನನ್ನು ಹೇಗೆ ತೆರೆಮೇಲೆ ತೋರಿಸುತ್ತಾರೆ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿದೆ.

ಪ್ರಶಾಂತ್ ನೀಲ್ ತಂಡವೇ 'ಡ್ರ್ಯಾಗನ್' ಚಿತ್ರಕ್ಕೆ ಕೆಲಸ ಮಾಡ್ತಿದೆ. ರವಿ ಬಸ್ರೂರು ಸಂಗೀತ, ಭುವನ್ ಗೌಡ ಛಾಯಾಗ್ರಹಣ ಚಿತ್ರಕ್ಕಿದೆ. ಇತ್ತೀಚೆಗೆ ಶೆಡ್ಯೂಲ್ ಗ್ಯಾಪ್‌ನಲ್ಲೇ ಭುವನ್ ಮದುವೆ ನಡೆದಿತ್ತು. ಪ್ರಶಾಂತ್ ನೀಲ್, ಯಶ್ ಸೇರಿದಂತೆ ಹಲವರು ಮದುವೆಗೆ ಸಮಾರಂಭಕ್ಕೆ ಹಾಜರಾಗಿ ನವಜೋಡಿಗೆ ಶುಭ ಕೋರಿದ್ದರು.

ಪ್ರಭಾಸ್ ಜೊತೆ 'ಸಲಾರ್'-1 ಸಿನಿಮಾ ಮಾಡಿರುವ ಪ್ರಶಾಂತ್ ನೀಲ್ ಸೀಕ್ವೆಲ್ ಸಹ ಕಟ್ಟಿಕೊಡಬೇಕಿದೆ. ಇನ್ನು ಯಶ್ ಕಾಂಬಿನೇಷನ್‌ನಲ್ಲಿ 'ಕೆಜಿಎಫ್- 3' ಸಿನಿಮಾ ಕೂಡ ಬರಬೇಕಿದೆ. ಹಾಗಾಗಿ ಒಪ್ಪಿಕೊಂಡಿರುವ ಕೆಲಸಗಳನ್ನು ಬೇಗ ಬೇಗ ಮುಗಿಸಬೇಕಿದೆ. ಮುಂದಿನ ವರ್ಷ ಜೂನ್ 25ರಂದು 'ಡ್ರ್ಯಾಗನ್' ಸಿನಿಮಾ ಬಿಡುಗಡೆ ಆಗಲಿದೆ.

'ಕೆಜಿಎಫ್' ಹಾಗೂ 'ಸಲಾರ್' ರೀತಿ 'ಡ್ರ್ಯಾಗನ್' ಸಿನಿಮಾ ಕೂಡ ಎರಡು ಭಾಗಗಳಾಗಿ ತೆರೆಗೆ ಬರುತ್ತದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಈ ಬಗ್ಗೆ ಕೂಡ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಹಾಗಾಗಿ ಇದೆಲ್ಲಾ ಬರೀ ವದಂತಿ ಮಾತ್ರ. ಶೀಘ್ರದಲ್ಲೇ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದೆ.

More from Filmibeat

Read more about: ntr prashanth neel
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X