ಸೆನ್ಸಾರ್ ಕಾಪಿಯಲ್ಲಿ ಲೀಕ್ ಆಗಿಬಿಡ್ತು ಪ್ರಶಾಂತ್ ನೀಲ್- ಜ್ಯೂ. ಎನ್‌ಟಿಆರ್ ಸಿನಿಮಾ ಟೈಟಲ್
ಯಾವುದೇ ಚಿತ್ರಕ್ಕೆ ಟೈಟಲ್ ಬಹಳ ಮುಖ್ಯ. ದೊಡ್ಡ ದೊಡ್ಡ ಸಿನಿಮಾ ಟೈಟಲ್‌ಗಳ ಬಗ್ಗೆ ಭಾರೀ ಚರ್ಚೆ ನಡೆಯುತ್ತದೆ. ಕಥೆಗೆ ತಕ್ಕ ಟೈಟಲ್ ಇಡುವುದು, ಟೈಟಲ್‌ಗೆ ಸರಿಹೊಂದುವಂತೆ ಕಥೆ ಮಾಡುವುದು ಗೊತ್ತೇಯಿದೆ. ಆದರೆ ಅಭಿಮಾನಿಗಳು ಇಷ್ಟಪಟ್ಟ ಟೈಟಲ್ ಅನ್ನು ಪ್ರಶಾಂತ್ ನೀಲ್ ಹಾಗೂ ಜ್ಯೂ. ಎನ್‌ಟಿಆರ್ ಚಿತ್ರಕ್ಕೆ ಫಿಕ್ಸ್ ಮಾಡಿದಂತೆ ಕಾಣ್ತಿದೆ.
'ಸಲಾರ್' ಬಳಿಕ ಜ್ಯೂ. ಎನ್‌ಟಿಆರ್ ಜೊತೆ ಪ್ರಶಾಂತ್ ನೀಲ್ ಕೈ ಜೋಡಿಸಿದ್ದಾರೆ. ಇಬ್ಬರ ಕ್ರೇಜಿ ಕಾಂಬಿನೇಷನ್‌ನಲ್ಲಿ ಹೈವೋಲ್ಟೇಜ್ ಆಕ್ಷನ್ ಎಂಟರ್‌ಟೈನರ್ ಸಿನಿಮಾ ನಿರ್ಮಾಣವಾಗುತ್ತಿದೆ. ತಾರಕ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಫಸ್ಟ್ ಗ್ಲಿಂಪ್ಸ್ ರಿಲೀಸ್ ಮಾಡಲು ಸಿದ್ಧತೆ ನಡೀತಿದೆ. ಸಿನಿಮಾ ಟೈಟಲ್ ಬಗ್ಗೆ ಬಹಳ ಕುತೂಹಲ ಇತ್ತು. ಆದರೆ ಅಧಿಕೃತವಾಗಿ ಘೋಷಣೆಗೂ ಮುನ್ನ ಟೈಟಲ್ ಲೀಕ್ ಆಗಿದೆ.

ಮೇ 20ರಂದು ಜ್ಯೂ. ಎನ್‌ಟಿಆರ್ ಹುಟ್ಟುಹಬ್ಬ. ಆದರೆ ಮೇ 19ರಂದು ಮಧ್ಯರಾತ್ರಿ 12 ಗಂಟೆಗೆ ಗ್ಲಿಂಪ್ಸ್ ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. 4 ನಿಮಿಷ 35 ಸೆಕೆಂಡ್‌ಗಳ ಟೀಸರ್ ಇದಾಗಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ರೆ ಈ ವರ್ಷವೇ ಸಿನಿಮಾ ತೆರೆಗೆ ಬರಬೇಕಿತ್ತು. ಕಾರಣಾಂತರಗಳಿಂದ ಪದೇ ಪದೆ ರಿಲೀಸ್ ಮುಂದೂಡಲಾಗುತ್ತಿದೆ. ಮುಂದಿನ ವರ್ಷ ಜೂನ್ 11ರಂದು ಎನ್‌ಟಿಆರ್-ನೀಲ್ ಸಿನಿಮಾ ತೆರೆಗೆ ಬರಲಿದೆ. ಎರಡು ಭಾಗಗಳಾಗಿ ಸಿನಿಮಾ ಕಟ್ಟಿಕೊಡುತ್ತಿದ್ದಾರೆ. ಹಾಗಾಗಿ ತಡವಾಗುತ್ತಿದೆ ಎನ್ನುವ ವಾದವೂ ಇದೆ. ಮೈತ್ರಿ ಮೂವಿ ಮೇಕರ್ಸ್ ಹಾಗೂ ಎನ್‌ಟಿಆರ್ ಆರ್ಟ್ಸ್ ಬ್ಯಾನರ್‌ಗಳು ಜಂಟಿಯಾಗಿ ಸಿನಿಮಾ ನಿರ್ಮಾಣ ಮಾಡುತ್ತಿವೆ.
ಪ್ರಶಾಂತ್ ನೀಲ್ ಚಿತ್ರಕ್ಕೆ 'ಡ್ರ್ಯಾಗನ್' ಎಂಬ ಟೈಟಲ್ ಪರಿಶೀಲನೆಯಲ್ಲಿದ್ದಾರೆ ಎನ್ನಲಾಗಿತ್ತು. ಅಭಿಮಾನಿಗಳು ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಸುತ್ತಲೇ ಇದ್ದಾರೆ. ಆದರೆ ಈವರೆಗೆ ಚಿತ್ರತಂಡ ಅಧಿಕೃತವಾಗಿ ಟೈಟಲ್ ರಿವೀಲ್ ಆಗಿರಲಿಲ್ಲ. ಸದ್ಯ ಬಿಡುಗಡೆ ಆಗುತ್ತಿರುವ ಟೀಸರ್‌ನಲ್ಲೇ ಟೈಟಲ್ ಕನ್ಫರ್ಮ್ ಆಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. 'ಡ್ರ್ಯಾಗನ್' ಬಿಟ್ಟು ಬೇರೆ ಟೈಟಲ್ ಫಿಕ್ಸ್ ಮಾಡಿದ್ದಾರಾ? ಎನ್ನುವ ಅನುಮಾನ ಮೂಡಿತ್ತು. ಆದರೆ ಎಲ್ಲಾ ಊಹಾಪೋಹಕ್ಕೆ ತೆರೆ ಬಿದ್ದಿದೆ ಎನ್ನಲಾಗ್ತಿದೆ. ಫಸ್ಟ್ ಗ್ಲಿಂಪ್ಸ್ ಸೆನ್ಸಾರ್ ಕಾಪಿ ವೈರಲ್ ಆಗ್ತಿದೆ. ಅದರಲ್ಲಿ ಸಿನಿಮಾ ಟೈಟಲ್ 'ಡ್ರ್ಯಾಗನ್' ಎಂದು ಇರುವುದು ಗೊತ್ತಾಗುತ್ತಿದೆ.

ಸಿನಿಮಾ ಹೆಸರು 'ಡ್ರ್ಯಾಗನ್' ಎಂದು ಸೆನ್ಸಾರ್ ಕಾಪಿಯಲ್ಲಿ ನಮೂದಿಸಿರುವುದು ನೋಡಬಹುದು. ಮೇ 15ರಂದು ಸೆನ್ಸಾರ್ ಕಾಪಿ ಸಿಕ್ಕಿದೆ. ಚಿತ್ರದಲ್ಲಿ ಕನ್ನಡ ನಟಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಪ್ರಶಾಂತ್ ನೀಲ್ ತಂಡದ ಖಾಯಂ ಸದಸ್ಯರ 'ಡ್ರ್ಯಾಗನ್' ಚಿತ್ರಕ್ಕೂ ಕೆಲಸ ಮಾಡುತ್ತಿದ್ದಾರೆ. ಭುವನ್ ಗೌಡ ಛಾಯಾಗ್ರಹಣ, ರವಿ ಬಸ್ರೂರು ಸಂಗೀತ ಚಿತ್ರಕ್ಕಿದೆ. ಜ್ಯೂ. ಎನ್‌ಟಿಆರ್ ನನ್ನ ನೆಚ್ಚಿನ ನಟ ಎಂದು ಪ್ರಶಾಂತ್ ನೀಲ್ ಮೊದಲಿನಿಂದಲೂ ಹೇಳ್ತಾ ಬರ್ತಿದ್ದಾರೆ. ಹಾಗಾಗಿ ನೆಚ್ಚಿನ ನಟನನ್ನು ತೆರೆಮೇಲೆ ಹೇಗೆ ತೋರಿಸ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.
ತಾರಕ್ 43ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲು ಸಜ್ಜಾಗಿದ್ದಾರೆ. ಇದೇ ಸಂಭ್ರಮದಲ್ಲಿ 'ಗಾಡ್ ಆಫ್ ವಾರ್' ಹಾಗೂ 'ದೇವರ- 2' ಚಿತ್ರಗಳ ಪೋಸ್ಟರ್, ಟೀಸರ್ ಬರುವ ನಿರೀಕ್ಷೆಯಿದೆ. ಕೊನೆಯದಾಗಿ 'ವಾರ್- 2' ಚಿತ್ರದಲ್ಲಿ ಯಂಗ್ ಟೈಗರ್ ಎನ್‌ಟಿಆರ್ ನಟಿಸಿದ್ದರು. ಸಿನಿಮಾ ನಿರಾಸೆ ಮೂಡಿಸಿತ್ತು. ಪ್ರಶಾಂತ್ ನೀಲ್ ಕಾಂಬಿನೇಷನ್ ಸಿನಿಮಾ ಬಿಡುಗಡೆಗೆ ಇನ್ನು ಒಂದು ವರ್ಷ ಕಾಯಬೇಕಾಗಿದೆ. ಬಾಲಿವುಡ್ ನಟ ಅನಿಲ್ ಕಪೂರ್ ಕೂಡ 'ಡ್ರ್ಯಾಗನ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ತಾರಕ್ ಅಭಿಮಾನಿಗಳಂತೂ ಗ್ಲಿಂಪ್ಸ್ ನೋಡೊಕೆ ಕಾತರರಾಗಿದ್ದಾರೆ.


Click it and Unblock the Notifications