ಬೇಸತ್ತ ಪ್ರಶಾಂತ್ ನೀಲ್‌ರಿಂದ ಸಲಾರ್ ಶೂಟಿಂಗ್ ಸೆಟ್‌ನಲ್ಲಿ ಕಟ್ಟುನಿಟ್ಟಿನ ನಿಮಯ ಜಾರಿ
ಉಗ್ರಂ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಪ್ರಶಾಂತ್ ನೀಲ್ ತಾವು ನಿರ್ದೇಶಿಸಿದ ಮೊದಲ ಚಿತ್ರದಲ್ಲಿಯೇ ತಾನೊಬ್ಬ ಟ್ಯಾಲೆಂಟೆಡ್ ನಿರ್ದೇಶಕ ಎಂಬುದನ್ನು ತಿಳಿಸಿಕೊಟ್ಟರು. ಹೀಗೆ ಮೊದಲ ಚಿತ್ರದಲ್ಲಿ ಭರ್ಜರಿ ಯಶಸ್ಸು ಪಡೆದ ಪ್ರಶಾಂತ್ ನೀಲ್ ನಂತರ ಹೊಂಬಾಳೆ ಫಿಲ್ಮ್ಸ್ ಜತೆ ಕೈಗೂಡಿಸಿ ಕೆಜಿಎಫ್ ಚಾಪ್ಟರ್ 1 ಹಾಗೂ ಚಾಪ್ಟರ್ 2 ರೀತಿಯ ಅತಿದೊಡ್ಡ ಚಿತ್ರಗಳನ್ನು ನಿರ್ದೇಶಿಸಿ ರಾಜಮೌಳಿ ಹಾಗೂ ಶಂಕರ್ ಜತೆಗೆ ಜನ ಹೋಲಿಸುವ ಮಟ್ಟಕ್ಕೆ ಬೆಳೆದು ಬಿಟ್ಟರು.
ಹೀಗೆ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಪ್ರಶಾಂತ್ ನೀಲ್ ಕೆಜಿಎಫ್ ಚಾಪ್ಟರ್ 2 ಬಿಡುಗಡೆಗೂ ಮುನ್ನವೇ ಪ್ರಭಾಸ್ ಅವರಿಗೆ ಸಲಾರ್ ಚಿತ್ರವನ್ನು ನಿರ್ದೇಶನ ಮಾಡಲು ಆರಂಭಿಸಿದ್ದರು. ಈ ಚಿತ್ರದ ಚಿತ್ರೀಕರಣ ಇನ್ನೂ ಸಹ ನಡೆಯುತ್ತಿದ್ದು, ಇತ್ತೀಚಿಗಷ್ಟೆ ಸಿನಿಮಾದ ದೃಶ್ಯವೊಂದರ ವಿಡಿಯೋ ಲೀಕ್ ಆಗಿತ್ತು.
ಪ್ರಭಾಸ್ ತನ್ನ ಹಿಂಬಾಲಕರ ಜತೆ ಸ್ಟೈಲಿಶ್ ಆಗಿ ನಡೆದು ಬರುವ ದೃಶ್ಯ ಇದಾಗಿತ್ತು. ಅಲ್ಲಿಯೇ ಕೆಲಸ ಮಾಡುತ್ತಿದ್ದ ಯಾರೋ ಟೆಕ್ನಿಷಿಯನ್ ಈ ದೃಶ್ಯವನ್ನು ರೆಕಾರ್ಡ್ ಮಾಡಿ ಹರಿಬಿಟ್ಟಿದ್ದಾರೆ ಎಂಬ ಸಂದೇಹ ವಿಡಿಯೋ ನೋಡಿದ ಪ್ರತಿಯೊಬ್ಬರಿಗೂ ಸಹ ಬಂದಿತ್ತು. ಹೀಗೆ ಚಿತ್ರೀಕರಣದ ದೃಶ್ಯಗಳು ಲೀಕ್ ಆಗಿರುವುದರಿಂದ ಚಿತ್ರದ ಮೇಲೆ ಅಡ್ಡ ಪರಿಣಾಮ ಹೆಚ್ಚಾಗಿ ಬೀರಲಿದ್ದು, ಇದರ ವಿರುದ್ಧ ಇದೀಗ ಪ್ರಶಾಂತ್ ನೀಲ್ ಹೊಸ ನಿಯಮವೊಂದನ್ನು ಜಾರಿಗೆ ತಂದಿದ್ದಾರೆ.

ಹೌದು, ಇನ್ನು ಮುಂದೆ ಸಲಾರ್ ಚಿತ್ರೀಕರಣಕ್ಕೆ ಬರುವ ಯಾರಾದರೂ ಕ್ಯಾರವಾನ್ ಅಥವಾ ತಮಗೆ ನಿಗದಿಪಡಿಸಿರುವ ಕೊಠಡಿಗಳಲ್ಲಿ ತಮ್ಮ ತಮ್ಮ ಮೊಬೈಲ್ ಫೋನ್‍ಗಳನ್ನು ಕಡ್ಡಾಯವಾಗಿ ಇಟ್ಟು ಬರಬೇಕೆಂದು ಪ್ರಶಾಂತ್ ನೀಲ್ ನಿಯಮವೊಂದನ್ನು ಜಾರಿಗೆ ತಂದಿದ್ದಾರೆ.
ಕೇವಲ ಸಲಾರ್ ಮಾತ್ರವಲ್ಲದೆ ಇನ್ನುಳಿದ ಹಲವಾರು ಬಿಗ್ ಬಜೆಟ್ ಸಿನಿಮಾಗಳು ಕೂಡ ಇದೇ ಸಮಸ್ಯೆಯನ್ನು ಎದುರಿಸಿವೆ ಹಾಗೂ ಎದುರಿಸುತ್ತಾ ಇವೆ. ಈ ಲೀಕ್ ಸಮಸ್ಯೆ ಬಗೆಹರಿಯಬೇಕೆಂದರೆ ಪ್ರಶಾಂತ್ ನೀಲ್ ಹಾಗೆ ಎಲ್ಲ ನಿರ್ದೇಶಕರೂ ಇದೇ ನಿಯಮವನ್ನು ಅನುಸರಿಸಬೇಕಾಗುತ್ತದೆ.


Click it and Unblock the Notifications