For Quick Alerts
  ALLOW NOTIFICATIONS  
  For Daily Alerts

  'ಸಲಾರ್' ರಿಲೀಸ್ ಲೇಟ್ ಯಾಕೆ? ಪ್ರಶಾಂತ್ ನೀಲ್ ಸ್ಪಷ್ಟನೆ!

  |

  ನಿರ್ದೇಶಕ ಪ್ರಶಾಂತ್ ನೀಲ್ ಮುಂದಿನ ಸಿನಿಮಾ 'ಸಲಾರ್'. ಪ್ರಭಾಸ್ ನಾಯಕ ನಟನಾಗಿ ನಟಿಸುತ್ತಿರುವ 'ಸಲಾರ್' ಪ್ಯಾನ್ ಇಂಡಿಯಾ ಸಿನಿಮಾ. ಈ ಚಿತ್ರವನ್ನು ಹೊಂಬಾಳೆ ನಿರ್ಮಾಣ ಸಂಸ್ಥೆ ನಿರ್ಮಿಸಿದ್ದು, ಸಿನಿಮಾ ಮೇಲೆ ನಿರೀಕ್ಷೆ ಇದೆ.

  'ಸಲಾರ್' ಸಿನಿಮಾದ ಅಪ್ಡೇಟ್‌ಗಾಗಿ ಸಿನಿಪ್ರಿಯರು ಕಾಯುತ್ತಲೇ ಇದ್ದರು. ಅಂದುಕೊಂಡದ್ದಕ್ಕಿಂತಲೂ ಸಿನಿಮಾ ತಡವಾಗುತ್ತಿದೆ. ಹಾಗಾಗಿ ಚಿತ್ರದ ರಿಲೀಸ್ ಕೂಡ ತಡವಾಗಲಿದೆ. ಸಿನಿಮಾದ ಇನ್ನೂ ಅನೇಕ ಕೆಲಸಗಳು ಬಾಕಿ ಇವೆ. ಇದರ ನಡುವೆ ಸಿನಿಮಾ ರಿಲೀಸ್ ಯಾವಾಗ ಎನ್ನುವ ಬಗ್ಗೆ ಚಿತ್ರತಂಡ ಪ್ರಕಟ ಮಾಡಿದೆ.

  ಕೆಜಿಎಫ್ 2: ಮುಂಬೈ, ಪೂಣೆ, ಚೆನ್ನೈನಲ್ಲಿ ಥಿಯೇಟರ್‌ನಲ್ಲಿ ಮುಂದುವರೆದ ಯಶಸ್ವಿ ಪ್ರದರ್ಶನ!ಕೆಜಿಎಫ್ 2: ಮುಂಬೈ, ಪೂಣೆ, ಚೆನ್ನೈನಲ್ಲಿ ಥಿಯೇಟರ್‌ನಲ್ಲಿ ಮುಂದುವರೆದ ಯಶಸ್ವಿ ಪ್ರದರ್ಶನ!

  'ಸಲಾರ್' ಚಿತ್ರದ ರಿಲೀಸ್ ದಿನಾಂಕ ಪ್ರಕಟ ಆಗಿದೆ. ಆದರೆ ಇಷ್ಟೊಂದು ಲೇಟ್ ಯಾಕೆ ಆಗುತ್ತಿದೆ ಎನ್ನುವ ಬಗ್ಗೆಯೂ ಚರ್ಚೆಗಳು ಹುಟ್ಟಿಕೊಂಡಿದ್ದವು. ಇದಕ್ಕೆ ನಿರ್ದೇಶಕ ಪ್ರಶಾಂತ್ ನೀಲ್ ಉತ್ತರ ಕೊಟ್ಟಿದ್ದಾರೆ. ಸಲಾರ್ ಲೇಟ್ ಆಗಲು ಕಾರಣ ಏನು ಅಂತ ತಿಳಿಸಿದ್ದಾರೆ. ಮುಂದೆ ಓದಿ...

  'ಸಲಾರ್' ರಿಲೀಸ್ ದಿನಾಂಕ ಪ್ರಕಟ!

  'ಸಲಾರ್' ರಿಲೀಸ್ ದಿನಾಂಕ ಪ್ರಕಟ!

  ಪ್ರಭಾಸ್ ಇತ್ತೀಚೆಗೆ ಸಾಲು, ಸಾಲು ಸೋಲು ಕಂಡಿದ್ದಾರೆ. ಇನ್ನು ನಿರ್ದೇಶಕ ಪ್ರಶಾಂತ್ ನೀಲ್ ಅದ್ದೂರಿ ಯಶಸ್ಸು ಕಂಡಿದ್ದಾರೆ. ಈ ಜೋಡಿ ಒಂದಾಗಿ ಸಿನಿಮಾ ಮಾಡುತ್ತೇ ಎಂದಾಗಳೇ ಸಾಕಷ್ಟು ನಿರೀಕ್ಷೆ ಮನೆ ಮಾಡಿತ್ತು. ಅಂತೆಯೇ ಪ್ರಭಾಸ್ ಕೂಡ ದೊಡ್ಡದೊಂದು ಯಶಸ್ಸಿಗೆ ಕಾಯುತ್ತಿದ್ದಾರೆ. ಹಾಗಾಗಿ 'ಸಲಾರ್' ಪ್ರಭಾಸ್ ಮುಂದಿನ ಸಿನಿಮಾ ಎನ್ನಲಾಗಿತ್ತು. ಆದರೆ ಅದು ಕಷ್ಟ ಸಾಧ್ಯ. ಯಾಕೆಂದರೆ ಈ ಸಿನಿಮಾ ರಿಲೀಸ್ ಅಗುವುದೇ ಮುಂದಿನ ವರ್ಷದ ಅಂತ್ಯದ ವೇಳೆಗೆ. 'ಸಲಾರ್' ನಿರೀಕ್ಷೆಯಲ್ಲಿ ಇರುವವರು ಇನ್ನು ಒಂದು ವರ್ಷ ಕಾಯಲೇ ಬೇಕು.

  ಬಲವಂತಕ್ಕೆ 'ಕೆಜಿಎಫ್ 3' ಮಾಡುತ್ತಿದ್ದಾರೆ ಪ್ರಶಾಂತ್ ನೀಲ್: ಒತ್ತಡಕ್ಕೆ ಕಾರಣವೇನು?ಬಲವಂತಕ್ಕೆ 'ಕೆಜಿಎಫ್ 3' ಮಾಡುತ್ತಿದ್ದಾರೆ ಪ್ರಶಾಂತ್ ನೀಲ್: ಒತ್ತಡಕ್ಕೆ ಕಾರಣವೇನು?

  28/9/2023 'ಸಲಾರ್' ರಿಲೀಸ್!

  28/9/2023 'ಸಲಾರ್' ರಿಲೀಸ್!

  'ಸಲಾರ್' ಈಗಾಗಲೇ ಹೆಚ್ಚು ತಡವಾಗಿದೆ. ಹಾಗಾಗಿ ಇನ್ನು ಹೆಚ್ಚು ತಡ ಆಗುವುದಿಲ್ಲ ಎನ್ನು ನಿರೀಕ್ಷೆ ಇತ್ತು. ಆದರೆ ಚಿತ್ರಡಂದ ರಿಲೀಸ್ ದಿನಾಂಕವನ್ನು ಪ್ರಕಟ ಮಾಡಿರುವಂತೆ ಇನ್ನು ಒಂದು ವರ್ಷ 'ಸಲಾರ್' ಚಿತ್ರವನ್ನು ತೆರೆಯ ಮೇಲೆ ನೋಡಲು ಕಾಯಲೇ ಬೇಕು. ಮುಂದಿನ ವರ್ಷ ಸೆಪ್ಟೆಂಬರ್‌ನಲ್ಲಿ ಈ ಚಿತ್ರ ತೆರೆಗೆ ಬರಲಿದೆ. 2023 ಸೆಪ್ಟೆಂಬರ್ 28ಕ್ಕೆ 'ಸಲಾರ್' ರಿಲೀಸ್ ದಿನಾಂಕ ಪ್ರಕಟವಾಗಿದೆ.

  ಸಲಾರ್ ತಡವಾಗಿದ್ದಕ್ಕೆ ಅಸಮಾಧಾನ!

  ಸಲಾರ್ ತಡವಾಗಿದ್ದಕ್ಕೆ ಅಸಮಾಧಾನ!

  ಆಗಸ್ಟ್ 15ರಂದು ಸಲಾರ್ ಚಿತ್ರದ ರಿಲೀಸ್ ದಿನಾಂಕವನ್ನು ಪ್ರಕಟ ಮಾಡಲಾಗಿದೆ. ಸಿನಿಮಾ ಶುರುವಾಗಿ ಈಗಾಲೇ ಹೆಚ್ಚು ಸಮಯ ಸಾಗಿದೆ. ಆದರೆ ಈ ಚಿತ್ರವನ್ನು ನೋಡಲು ಇನ್ನು ಒಂದು ವರ್ಷ ಕಾಯಲೇ ಬೇಕು. ಹಾಗಾಗಿ ಯಾಕಿಷ್ಟು ತಡವಾಗುತ್ತಿದೆ ಎನ್ನುವ ಬಗ್ಗೆ ಚರ್ಚೆ ಹುಟ್ಟಿಕೊಂಡಿತು. ಅಭಿಮಾನಿಗಳು ಈ ಬ್ಗಗೆ ಸೋಷಿಯಲ್ ಮಿಡಿಯಾದಲ್ಲಿ ಪ್ರಶ್ನೆ ಮಾಡಿತ್ತಿದ್ದರು.

  'ಸಲಾರ್ ಲೇಟ್' ಯಾಕೆ?

  'ಸಲಾರ್ ಲೇಟ್' ಯಾಕೆ?

  'ಸಲಾರ್' ರಿಲೀಸ್ ದಿನಾಂಕದ ಬಗ್ಗೆ ನಿರ್ದೇಶಕ ಪ್ರಶಾಂತ್ ನೀಲ್ ಮಾತನಾಡಿದ್ದಾರೆ. ಸಿನಿಮಾ ಯಾಕೆ ತಡವಾಗುತ್ತಿದೆ ಎಂದು ಇತ್ತೀಚೆಗೆ ಮಾಧ್ಯಗಳ ಮುಂದೆ ಪ್ರತಿಕ್ರಿಯೆ ನೀಡಿದ್ದಾರೆ. ಸಲಾರ್ ಯಾಕೆ ತಡವಾಗುತ್ತಿದೆ. ಪ್ರಭಾಸ್ ಆವರಿಗೆ ಏನಾದರೂ, ಇಂತಿಷ್ಟು ಅಂತ ಸಮಯ ಬೇಕ ಎಂದು ಕೇಳಲಾಗಿದೆ. ಇದಕ್ಕೆ ಉತ್ತರಿಸಿದ ಪ್ರಶಾಂತ್ ನೀಲ್ "ಹಾಗೇನು ಇಲ್ಲ, ಸಿನಿಮಾ ಚೆನ್ನಾಗಿ ಬರಬೇಕಾದರೆ ಸಮಯ ಬೇಕಾಗುತ್ತದೆ." ಎಂದಿದ್ದಾರೆ. ಈ ಮೂಲಕ ಪ್ರಶಾಂತ್ ನೀಲ್ ಸಲಾರ್ ತಡವಾಗುತ್ತಿರುವುದು ಯಾಕೆ ಎನ್ನುವ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.

  English summary
  Prashanth Neel First Reaction On Salaar Release Date, And Reveal Why Salaar Is Too Late, Know More,
  Wednesday, August 17, 2022, 8:40
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X