ಪ್ರಶಾಂತ್ ನೀಲ್ ಮೇಲೆ ಜ್ಯೂ. ಎನ್‌ಟಿಆರ್ ಪತ್ನಿ ಪ್ರಣತಿ ಅಸಮಾಧಾನಗೊಂಡಿದ್ದೇಕೆ?
ಜ್ಯೂ. ಎನ್‌ಟಿಆರ್ ಹುಟ್ಟುಹಬ್ಬದ ಸಂಭ್ರಮದಲ್ಲಿ 'ಡ್ರ್ಯಾಗನ್' ಸಿನಿಮಾ ಗ್ಲಿಂಪ್ಸ್ ರಿಲೀಸ್ ಆಗಿ ಧೂಳೆಬ್ಬಸಿದೆ. ಪ್ರಶಾಂತ್ ನೀಲ್ ಈ ಆಕ್ಷನ್ ಥ್ರಿಲ್ಲರ್ ಚಿತ್ರಕ್ಕೆ ಸಾರಥ್ಯ ವಹಿಸಿದ್ದಾರೆ. 'ಕೆಜಿಎಫ್' ಸರಣಿ ಹಾಗೂ 'ಸಲಾರ್' ಚಿತ್ರವಂತೆ ಮೀರಿಸುವಂತೆ ಈ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ಸಿಕ್ಕಾಪಟ್ಟೆ ರಗಡ್ ಅವತಾರದಲ್ಲಿ ತಾರಕ್ ನಟಿಸಿದ್ದಾರೆ.
4 ನಿಮಿಷದ ಸುದೀರ್ಘ ಗ್ಲಿಂಪ್ಸ್‌ನಲ್ಲಿ 'ಡ್ರ್ಯಾಗನ್' ಪ್ರಪಂಚವನ್ನು ಪ್ರಶಾಂತ್ ನೀಲ್ ಅನಾವರಣ ಮಾಡಿದ್ದಾರೆ. 'ಅಫ್ಗನ್ ಟ್ರೇಡಿಂಗ್ ಕಂಪನಿ'ಯ ವಿಲನ್ ರೀತಿ ತಾರಕ್ ಅವರನ್ನು ತೋರಿಸಲಾಗಿದೆ. ಚಿತ್ರಕ್ಕಾಗಿ ಸಿಕ್ಸ್‌ಪ್ಯಾಕ್ ಹ್ಯಾಬ್ಸ್ ಮಾಡಿ ಸಖತ್ ರಗಡ್ ಆಗಿ ಯಂಗ್ ಟೈಗರ್ ಅಬ್ಬರಿಸಿದ್ದಾರೆ. "ನಾನು ಮಲಗಿದ್ದಾಗ ಕನಸಿನಲ್ಲಿ ನಾನು ಸಾಯಿಸಿದವರ ಮುಖ ಬರೋದಿಲ್ಲ, ಉಳಿದುಕೊಂಡ ವೈರಿಗಳ ಮುಖ ಬರುತ್ತದೆ. ಅಪ್ಪಿ ತಪ್ಪಿಯೂ ನನ್ನ ಕನಸಲ್ಲಿ ಬರಬೇಡಿ" ಎನ್ನುವ ತಾರಕ್ ಡೈಲಾಗ್ ಅಂತೂ ಸಖತ್ ಕಿಕ್ ಕೊಡ್ತಿದೆ. ತೆಲುಗಿಗಿಂತ ಕನ್ನಡದಲ್ಲಿ ವಾಯ್ಸ್ ಖಡಕ್ ಆಗಿದೆ.

ಪಾತ್ರಕ್ಕಾಗಿ 15 ಕೆಜಿ ತೂಕ ಇಳಿಸಿ ಜ್ಯೂ. ಎನ್‌ಟಿಆರ್ ದೇಹ ದಂಡಿಸಿ ಕರಸತ್ತು ಮಾಡಿದ್ದಾರೆ. ಅವರ ಹಾರ್ಡ್‌ವರ್ಕ್ ಈಗ ತೆರೆಮೇಲೆ ಕಾಣ್ತಿದೆ. ಆದರೆ ಕೆಲವರು ಈ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟು ತೆಳ್ಳಗೆ ನೆಚ್ಚಿನ ನಟನನ್ನು ನೋಡೋಕೆ ಆಗ್ತಿಲ್ಲ ಎಂದು ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ತಾರಕ್ ತೂಕ ಇಳಿಸಿ ತೆಳ್ಳಗಾದಾಗ ಒಂದು ಹಂತದಲ್ಲಿ ಪತ್ನಿ ಪ್ರಣತಿ ಬೇಸರಗೊಂಡಿದ್ದರಂತೆ. ಇದೇ ಕಾರಣಕ್ಕೆ ಪ್ರಶಾಂತ್ ನೀಲ್ ಮೇಲೆ ಅಸಮಾಧಾನಗೊಂಡಿದ್ದರಂತೆ. ಈ ವಿಚಾರವನ್ನು Galatta Plus ಯೂಟ್ಯೂಬ್ ಸಂದರ್ಶನದಲ್ಲಿ ಸ್ವತಃ ಪ್ರಶಾಂತ್ ನೀಲ್ ಹೇಳಿದ್ದಾರೆ.
ಲೂಗರ್ ನಾನು ಬರೆದ ಅತಿ ಡಾರ್ಕ್ ಕ್ಯಾರೆಕ್ಟರ್ ಎಂದು ಪ್ರಶಾಂತ್ ನೀಲ್ ಹೇಳಿದ್ದಾರೆ. ಈ ಪಾತ್ರಕ್ಕಾಗಿ ನೀವು ದೇಹದ ತೂಕ ಇಳಿಸಿಕೊಂಡು ತೆಳ್ಳಗಾದರೆ ಚೆನ್ನಾಗಿರುತ್ತೆ ಎಂದು ಜ್ಯೂ. ಎನ್‌ಟಿಆರ್ ಬಳಿ ಹೋಗಿ ಹೇಳ್ದೆ. ಆ ಬಳಿಕ ಅವರು ಸುಮ್ಮನಾಗಲೇ ಇಲ್ಲ. 4 ತಿಂಗಳು ನಾವು ಚಿತ್ರೀಕರಣ ಮಾಡಲಿಲ್ಲ. ಹೆಚ್ಚು ಕಮ್ಮಿ 15 ಕೆಜಿ ತೂಕ ಇಳಿಸಿದರು. ಒಂದು ಹಂತದಲ್ಲಿ ನಾನೇ ಬೇಡ ನಿಲ್ಲಿಸಿ ಸಾಕು ಎಂದೆ. ಕಾರಣ ಅಷ್ಟು ತೆಳ್ಳಗಾಗಿಬಿಟ್ಟಿದ್ರು. ನೋಡೋಕೆ ಆಗ್ತಿರಲಿಲ್ಲ. ಆದ್ರೆ ಒಪ್ಪಲಿಲ್ಲ. ನೀವು ಏನು ಬಯಸುತ್ತಿದ್ದಿರೋ ಅದನ್ನು ಮಾಡುತ್ತೇನೆ ಎಂದು ಪಟ್ಟು ಹಿಡಿದ್ರು. ಅವರ ಪತ್ನಿ, ತಾಯಿ, ಸ್ನೇಹಿತರು ಎಲ್ಲರೂ ನನ್ನ ಮೇಲೆ ಅಸಮಾಧಾನಗೊಂಡಿದ್ರು" ಎಂದಿದ್ದಾರೆ.
ನನ್ನ ತಂಡದವರೇ ನನ್ನ ಮೇಲೆ ಬೇಸರಗೊಂಡಿದ್ದರು. ನಾನು ಬೇಕು ಅಂತ ಮಾಡ್ತಿಲ್ಲ. ನಾನು ಕೊಂಚ ತೂಹ ಇಳಿಸಲು ಎನ್‌ಟಿಆರ್ ಅವರಿಗೆ ಹೇಳ್ದೆ. ಆದ್ರೆ ಅವ್ರು ಆಳಕ್ಕೆ ಇಳಿದುಬಿಟ್ರು. ಅವ್ರು ಇರೋದೆ ಹಾಗೆ. ಒಮ್ಮೆ ಯಾವುದಕ್ಕಾದರೂ ಕಮಿಟ್ ಆಗಿಬಿಟ್ರೆ ಮುಗೀತು. ಅದರಿಂದ ಹೊರ ಬರಲ್ಲ. ಅಂತಹ ಮೊಂಡುತನವನ್ನು ಯಾರಲ್ಲೂ ನೋಡಿಲ್ಲ. ನಿಮಗೇನು ನನ್ನ ಕೆನ್ನೆ ಒಳಕ್ಕೆ ಹೋಗಬೇಕು, ನನ್ನ ದೇಹ ತೆಳ್ಳಗಾಗಬೇಕು, ಅಫ್ಗಾನಿಸ್ತಾನದ ಹಂತಕನಂತೆ ಕಾಣಬೇಕು ಅಲ್ವಾ? ಅಂದ್ರು. ಬಳಿಕ 4 ತಿಂಗಳು ಅವರನ್ನು ನೋಡಿ ಬಹಳ ನೋವಾಯಿತು. ಅವರು ಅಷ್ಟೇ ಕಷ್ಟಪಟ್ಟರು. ಮೊದಲ ಎರಡು ತಿಂಗಳು ಜಾಸ್ತಿ ತೂಕ ಇಳಿಸಿದಾಗ ಎಲ್ಲರಿಗೂ ಗಾಬರಿಯಾಗಿತ್ತು. ಆದ್ರೂ ಅವ್ರು ಬಿಡಲಿಲ್ಲ ಎಂದು ಪ್ರಶಾಂತ್ ನೀಲ್ ವಿವರಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಮೊದಲಿಗೆ ಆ ಅವತಾರದಲ್ಲಿ ಎನ್‌ಟಿಆರ್ ಅವರನ್ನು ನೋಡಿ ಏನಾದರೂ ಕಾಯಿಲೆ, ಆರೋಗ್ಯ ಸಮಸ್ಯೆನಾ ಅಂತ ಕಾಮೆಂಟ್ ಮಾಡಿದ್ದರು. ಅವತ್ತು ಸಂಜೆ 7 ಗಂಟೆಗೆ ನಾನು ತೂಕ ಇಳಿಸೋಕೆ ಹೇಳಿದ್ದೆ. ರಾತ್ರಿ 10 ಗಂಟೆಗೆ ಜಿಮ್ ಟ್ರೈನರ್ ಕರೆದು ಸೂಚಿಸಿದ್ದರು. ಬೆಳಗ್ಗೆಯಿಂದಲೇ ಕರಸತ್ತು ಆರಂಭಿಸಿದ್ದರು. ಅಂತಿಮವಾಗಿ ಔಟ್‌ಫುಟ್ ನೋಡಿ ಖುಷಿಯಾಯಿತು ಎಂದು ಪ್ರಶಾಂತ್ ನೀಲ್ ತಿಳಿಸಿದ್ದಾರೆ.


Click it and Unblock the Notifications