ಅಲ್ಲು ಅರ್ಜುನ್-ಪ್ರಶಾಂತ್ ನೀಲ್ ಸಿನಿಮಾ: ಸ್ಪಷ್ಟನೆ ನೀಡಿದ ನಿರ್ಮಾಪಕ
ಇತ್ತೀಚೆಗಷ್ಟೆ ತೆಲುಗು ನಟ ಅಲ್ಲು ಅರ್ಜುನ್ ಹಾಗೂ ಕನ್ನಡದ ನಿರ್ದೇಶಕ ಪ್ರಶಾಂತ್ ನೀಲ್ ಹೈದರಾಬಾದ್‌ನಲ್ಲಿ ಭೇಟಿಯಾಗಿದ್ದರು. ಈ ಭೇಟಿ ಭಾರಿ ಕುತೂಹಲ ಮೂಡಿಸಿತ್ತು.
Recommended Video
ಅಲ್ಲು ಅರ್ಜುನ್ ಹಾಗೂ ಪ್ರಶಾಂತ್ ನೀಲ್ ಅವರು ಗೀತಾ ಆರ್ಟ್ಸ್ ಪ್ರೊಡಕ್ಷನ್ ಹೌಸ್‌ನ ಕಚೇರಿಯಲ್ಲಿ ಪರಸ್ಪರ ಭೇಟಿ ಆಗಿ ಮಾತುಕತೆ ನಡೆಸಿದ್ದರು. ಇದೀಗ ಈ ಭೇಟಿಯ ಹಿಂದಿನ ಉದ್ದೇಶದ ಬಗ್ಗೆ ನಿರ್ಮಾಪಕ ಬನ್ನಿ ವಾಸು ಮಾತನಾಡಿದ್ದಾರೆ.
'ಭವಿಷ್ಯದಲ್ಲಿ ಗೀತಾ ಆರ್ಟ್ಸ್ ನಿರ್ಮಿಸುವ ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶಿಸಲಿದ್ದಾರೆ. ಕೆಲವು ವಿಷಯಗಳ ಬಗ್ಗೆ ಚರ್ಚೆಗಳು ಇನ್ನೂ ನಡೆಯುತ್ತಿದೆ' ಎಂದಿದ್ದಾರೆ ಬನ್ನಿ ವಾಸು.

ಬನ್ನಿ ವಾಸು ನೀಡಿದ ಸುಳಿವಿನ ಪ್ರಕಾರ, ಪ್ರಶಾಂತ್ ನೀಲ್ ಅವರು ಅಲ್ಲು ಅರ್ಜುನ್ ಗೆ ಕತೆ ಹೇಳಿದ್ದು, ಕೆಲವು ವಿಷಯಗಳ ಬಗ್ಗೆ ಚರ್ಚಿಸಿದ ಬಳಿಕ ಸಿನಿಮಾ ಘೋಷಣೆ ಆಗುವ ಸಂಭವ ಇದೆ.
ಪ್ರಸ್ತುತ ಪ್ರಶಾಂತ್ ನೀಲ್ ಅವರು ಪ್ರಭಾಸ್ ನಟಿಸುತ್ತಿರುವ 'ಸಲಾರ್' ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಇದೇ ಸಿನಿಮಾದಲ್ಲಿ ನಾಯಕಿಯಾಗಿ ಶ್ರುತಿ ಹಾಸನ್ ನಟಿಸುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದೆ.
ಇನ್ನು ಅಲ್ಲು ಅರ್ಜುನ್ ಅವರು ಸುಕುಮಾರ್ ನಿರ್ದಶನದ 'ಪುಷ್ಪ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆ ಸಿನಿಮಾದ ಬಳಿಕ ಕೊರಟಾಲ ಶಿವ ನಿರ್ದೇಶಿಸಲಿರುವ ಸಿನಿಮಾದಲ್ಲಿ ನಟಿಸುವ ಸಾಧ್ಯತೆ ಇದೆ.
ಇನ್ನು ಪ್ರಶಾಂತ್ ನೀಲ್ ಅವರು ಜೂ.ಎನ್‌ಟಿಆರ್ ಗಾಗಿ ಸಿನಿಮಾ ಒಂದನ್ನು ನಿರ್ದೇಶಿಸಲಿದ್ದಾರೆ ಎನ್ನಲಾಗಿತ್ತು. ಒಂದೊಮ್ಮೆ ಪ್ರಶಾಂತ್ ನೀಲ್, ಅಲ್ಲು ಅರ್ಜುನ್ ಸಿನಿಮಾ ನಿರ್ದೇಶಿಸುವುದಾದರೆ ಜೂ.ಎನ್‌ಟಿಆರ್ ಸಿನಿಮಾ ಕತೆ ಏನಾಗುತ್ತದೆ ಕಾದು ನೋಡಬೇಕಿದೆ.


Click it and Unblock the Notifications











