ಪ್ರಶಾಂತ್ ನೀಲ್ ಮಗದೊಂದು ಪ್ರಾಜೆಕ್ಟ್ ಕನ್ಫರ್ಮ್: ಹೀರೊ, ಪ್ರೊಡ್ಯುಸರ್, ಟೈಟಲ್ ಫಿಕ್ಸ್

KGF ಸಾರಥಿ ಪ್ರಶಾಂತ್‌ ನೀಲ್ ರೇಂಜ್ ಬದಲಾಗಿದೆ. ಒಂದಕ್ಕಿಂತ ಒಂದು ದೊಡ್ಡ ಪ್ರಾಜೆಕ್ಟ್‌ನಲ್ಲಿ ನೀಲ್ ಕೆಲಸ ಮಾಡುತ್ತಿದ್ದಾರೆ. 'ಸಲಾರ್', 'NTR31' ನಂತರ ಮತ್ತೊಂದು ಚಿತ್ರಕ್ಕೆ ಕಮಿಟ್ ಆಗಿದ್ದಾರೆ. ಈ ವಿಚಾರವನ್ನು ಸ್ವತಃ ನಿರ್ಮಾಪಕರೇ ಕನ್ಫರ್ಮ್ ಮಾಡಿದ್ದಾರೆ.

'ಉಗ್ರಂ' ಸಿನಿಮಾ ಮೂಲಕ ಸಕ್ಸಸ್ ಕಂಡ ಪ್ರಶಾಂತ್ ನೀಲ್, KGF ಚಿನ್ನದ ಮಣ್ಣಿನ ಕಥೆ ಹೇಳಿ ಎಲ್ಲರನ್ನು ಬೆರಗಾಗಿಸಿದ್ದರು. ಕನ್ನಡದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗೆ ಭದ್ರ ಬುನಾದಿ ಹಾಕಿದರು. ಕನ್ನಡ ಸಿನಿಮಾ ಕೂಡ 1000 ಕೋಟಿ ಕಲೆಕ್ಷನ್ ಮಾತಬಹುದು ಎಂದು ಪ್ರೂವ್ ಮಾಡಿದ್ದರು. KGF ನಂತರ ಪ್ರಶಾಂತ್ ನೀಲ್ ಟಾಲಿವುಡ್ ಕಡೆ ಮುಖ ಮಾಡಿದರು. ಪ್ರಭಾಸ್ ಜೊತೆ 'ಸಲಾರ್' ಸಿನಿಮಾ ಆರಂಭಿಸಿದರು. ಈ ಸಿನಿಮಾ ಶುರುವಾಗುವುದಕ್ಕೂ ಮೊದ್ಲೆ ಜ್ಯೂ. ಎನ್‌ಟಿಆರ್ ಜೊತೆ ಸಿನಿಮಾ ಘೋಷಿಸಿದರು. ಕೊರೋನಾ ಕಾರಣಕ್ಕೆ ಸಿನಿಮಾಗಳ ಶೂಟಿಂಗ್ ತಡವಾಗುತ್ತಿದೆ. ಈ 2 ಸಿನಿಮಾಗಳ ನಂತರ ವಾಟ್ ನೆಕ್ಸ್ಟ್ ಎನ್ನುವ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.

ದಳಪತಿ ವಿಜಯ್ ನಟನೆಯ 'ವಾರಿಸು' ಸಿನಿಮಾ ನಿರ್ಮಾಪಕ ದಿಲ್ ರಾಜು ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ತಮ್ಮ ಮುಂದಿನ ಪ್ರಾಜೆಕ್ಟ್‌ಗಳ ಲಿಸ್ಟ್ ರಿವೀಲ್ ಮಾಡಿದ್ದು, ಅದರಲ್ಲಿ ಪ್ರಶಾಂತ್ ನೀಲ್ ಸಿನಿಮಾ ಕೂಡ ಇದೆ.

ಹೌದು ದಿಲ್ ರಾಜು ನಿರ್ಮಾಣದಲ್ಲಿ ಒಂದು ಸಿನಿಮಾ ಮಾಡಲು ಪ್ರಶಾಂತ್ ನೀಲ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ನಿರ್ಮಾಪಕ ದಿಲ್ ರಾಜು ಈ ವಿಚಾರ ಬಹಿರಂಗ ಪಡಿಸಿದ್ದಾರೆ. 'ಸಲಾರ್' ಕೊನೆ ಹಂತದ ಚಿತ್ರೀಕರಣ ನಡೀತಿದೆ. 'NTR31' ಸದ್ಯಕ್ಕೆ ಶುರುವಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಸೆಪ್ಟೆಂಬರ್ ಕೊನೆ ವಾರದಲ್ಲಿ 'ಸಲಾರ್' ತೆರೆಗೆ ಬರಲಿದೆ. ಮುಂದಿನ ವರ್ಷ ತಾರಕ್ ಸಿನಿಮಾ ಶುರುವಾಗಲಿದೆ. ಆ ನಂತರ ದಿಲ್ ರಾಜು ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ.

ಪ್ರಭಾಸ್ ಜೊತೆ ಮತ್ತೊಂದು ಚಿತ್ರ

ಪ್ರಭಾಸ್ ಜೊತೆ ಮತ್ತೊಂದು ಚಿತ್ರ

ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ಆಕ್ಷನ್ ಎಂಟರ್‌ಟೈನರ್ 'ಸಲಾರ್' ಸಿನಿಮಾ ಮೂಡಿ ಬರ್ತಿದೆ. ಈಗಾಗಲೇ ಚಿತ್ರದ ಪೋಸ್ಟರ್‌ಗಳು ರಿಲೀಸ್ ಆಗಿ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಬಹುಕೋಟಿ ವೆಚ್ಚದಲ್ಲಿ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ನೀಲ್ ಈ ಸಿನಿಮಾ ಕಟ್ಟಿಕೊಡುತ್ತಿದ್ದಾರೆ. ದಿಲ್‌ರಾಜು - ಪ್ರಶಾಂತ್ ನೀಲ್ ಕಾಂಬಿನೇಷನ್ ಚಿತ್ರಕ್ಕೂ ಪ್ರಭಾಸ್ ಹೀರೊ ಎನ್ನುವುದು ಕನ್ಫರ್ಮ್ ಆಗಿದೆ. ಈ ವಿಚಾರವನ್ನು ಸ್ವತಃ ದಿಲ್ ರಾಜು ಖಚಿತಪಡಿಸಿದ್ದಾರೆ. ದೊಡ್ಡದಾಗಿ ಅನೌನ್ಸ್ ಆಗಬೇಕಿದ್ದ ಚಿತ್ರವನ್ನು ಬಾಯಿ ತಪ್ಪಿ ದಿಲ್ ರಾಜು ಘೋಷಿಸಿಬಿಟ್ಟಿದ್ದಾರೆ. ಈ ಸುದ್ದಿ ಕೇಳಿ ಪ್ರಭಾಸ್ ಫ್ಯಾನ್ಸ್ ಥ್ರಿಲ್ಲಾಗಿದ್ದಾರೆ.

'ರವಣಂ' ಟೈಟಲ್‌ ಫಿಕ್ಸ್

'ರವಣಂ' ಟೈಟಲ್‌ ಫಿಕ್ಸ್

ದಿಲ್ ರಾಜು ನಿರ್ಮಾಣದಲ್ಲಿ ಪ್ರಶಾಂತ್ ನೀಲ್- ಪ್ರಭಾಸ್ ಕಾಂಬಿನೇಷನ್ ಚಿತ್ರಕ್ಕೆ 'ರವಣಂ' ಎನ್ನುವ ಟೈಟಲ್ ಫಿಕ್ಸ್ ಮಾಡಲಾಗಿದೆ. ಇದೊಂದು ಐತಿಹಾಸಿಕ ಕಥಾಹಂದರದ ಸಿನಿಮಾ ಎನ್ನಲಾಗ್ತಿದ್ದು 2025ರಲ್ಲಿ ಈ ಸಿನಿಮಾ ಸೆಟ್ಟೇರುವ ಸಾಧ್ಯತೆಗಳಿವೆ. ಇದು ರಾವಣಾಸುರನ ಕಥೆ ಎಂದು ಕೂಡ ಹೇಳಲಾಗುತ್ತಿದೆ. ಬಹಳ ಹಿಂದೆಯೇ ಈ ಸಿನಿಮಾ ಘೋಷಣೆ ಆಗಬೇಕಿತ್ತು. ಆದರೆ ಅತ್ತ ಪ್ರಭಾಸ್ ಇತ್ತ ನೀಲ್ ಸಿನಿಮಾ ಕೆಲಸಗಳು ತಡವಾಗಿದ್ದರಿಂದ ಘೋಷಣೆ ಆಗಿರಲಿಲ್ಲ.

'ಸಲಾರ್- 2' ಕಥೆ ಏನಾಯ್ತು?

'ಸಲಾರ್- 2' ಕಥೆ ಏನಾಯ್ತು?

ಆಕ್ಷನ್ ಎಂಟರ್‌ಟೈನರ್ 'ಸಲಾರ್' ಸಿನಿಮಾ ಸೀಕ್ವೆಲ್ ಕೂಡ ಬರುತ್ತದೆ ಎನ್ನಲಾಗ್ತಿದೆ. KGF ರೀತಿಯಲ್ಲೇ 2 ಭಾಗಗಳಾಗಿ ಕಥೆಯನ್ನು ಹೇಳ್ತಾರೆ ಎನ್ನಲಾಗ್ತಿತ್ತು. ನಿರ್ಮಾಪಕ ವಿಜಯ್ ಕಿರಗಂದೂರ್ ಕೂಡ ಇಂತಾದೊಂದು ಸಾಧ್ಯಸಾಧ್ಯತೆಗಳ ಬಗ್ಗೆ ಮಾತನಾಡಿದ್ದಾರೆ. ಆದರೆ ನೀಲ್ ಜೊತೆ ಪ್ರಭಾಸ್ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಬೇರೆ ಸಿನಿಮಾ ಮಾಡಲು ಕಮಿಟ್ ಆಗಿರುವುದರಿಂದ 'ಸಲಾರ್- 2' ಕೂಡ ಬರುತ್ತಾ? ಇಲ್ವಾ? ಎನ್ನುವ ಪ್ರಶ್ನೆ ಎದ್ದಿದೆ.

More from Filmibeat

English summary
Prashanth Neel once again To collaborate with prabhas Titled Ravanam. Movie Story Based on Ravanasura. Dil Raju Bankroll th Project. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X