For Quick Alerts
  ALLOW NOTIFICATIONS  
  For Daily Alerts

  ಪ್ರಭಾಸ್ 25ನೇ ಪ್ರಾಜೆಕ್ಟ್: ಪೌರಾಣಿಕ ಕಥೆ ಸಿದ್ದಪಡಿಸುತ್ತಿರುವ ಪ್ರಶಾಂತ್ ನೀಲ್?

  |

  ನಿರ್ದೇಶಕ ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಇನ್ನು ನಾಲ್ಕೈದು ವರ್ಷಕ್ಕೆ ಆಗುವಷ್ಟು ಬ್ಯುಸಿ ಇದ್ದಾರೆ. ಸದ್ಯ ಒಪ್ಪಿಕೊಂಡಿರುವ ಚಿತ್ರಗಳನ್ನು ಮುಗಿಸಿದ್ರೆ ಸಾಕು ಎನ್ನುವ ಒತ್ತಡವೂ ಅವರ ಮೇಲಿದೆ. ಹಾಗಿದ್ದರೂ ಹೊಸ ಹೊಸ ಪ್ರಾಜೆಕ್ಟ್‌ಗಳ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇದೆ. ಬಾಹುಬಲಿ ನಟನೊಂದಿಗೆ 'ಸಲಾರ್' ಮಾಡ್ತಿರುವ ಪ್ರಶಾಂತ್ ನೀಲ್ ಈ ಪ್ರಾಜೆಕ್ಟ್ ಮುಗಿಸಿ ಮತ್ತೊಮ್ಮೆ ಪ್ರಭಾಸ್ ಜೊತೆ ಚಿತ್ರ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

  ಪ್ರಭಾಸ್ ಗೆ ಪೌರಾಣಿಕ ಕಥೆ ರೆಡಿ ಮಾಡ್ತಿದ್ದಾರೆ ಪ್ರಶಾಂತ್ ನೀಲ್ | Filmibeat Kannada

  ಪ್ರಭಾಸ್ ಜೊತೆ ಪ್ರಶಾಂತ್ ನೀಲ್ ಮಾಡಬೇಕಾಗಿದ್ದ ಚಿತ್ರವೇ ಬೇರೆ. ಆದರೆ ಅದಕ್ಕೂ ಮುಂಚೆ ಸಲಾರ್ ಆರಂಭಿಸಿದರು. ಈ ಮೊದಲು ಅಂದುಕೊಂಡಿದ್ದ ಚಿತ್ರವೂ ಮಾಡ್ತಾರೆ. ಅದಕ್ಕೆ ಸಮಯ ಬೇಕಾಗಿದೆ. ಈ ಪ್ರಾಜೆಕ್ಟ್‌ಗೆ ನಿರ್ಮಾಪಕ ಸಹ ಸಿದ್ದವಾಗಿದ್ದು, ಪೂರ್ವ ತಯಾರಿ ಮಾಡ್ತಿದ್ದಾರೆ. ಮುಂದೆ ಓದಿ...

  ಪೌರಾಣಿಕ ಚಿತ್ರಕ್ಕೆ ತಯಾರಿ!

  ಪೌರಾಣಿಕ ಚಿತ್ರಕ್ಕೆ ತಯಾರಿ!

  ಬಾಹುಬಲಿ ಮುಗಿಸಿದ ಬಳಿಕ ಪ್ರಭಾಸ್ ಜೊತೆ ಅಂತಹದ್ದೇ ದೊಡ್ಡ ಚಿತ್ರ ಮಾಡಬೇಕು ಎಂದು ನಿರ್ಮಾಪಕ ದಿಲ್ ರಾಜು ನಿರ್ಧರಿಸಿದ್ದರು. ಈ ಇಬ್ಬರು ಜೊತೆಗೆ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಸೇರಿದರು. ಈ ಕಾಂಬಿನೇಷನ್‌ನಲ್ಲಿ ಪೌರಾಣಿಕ ಚಿತ್ರದ ಮಾಡುವ ಚರ್ಚೆ ನಡೆದು, ಅದಕ್ಕೆ ಪ್ಲಾನ್ ಸಹ ಆಯಿತು. ಆದರೆ, ಪ್ರಭಾಸ್ ನಿರ್ಧಾರದಿಂದ ಆ ಪ್ರಾಜೆಕ್ಟ್‌ ಸ್ವಲ್ಪ ತಡವಾಗಬೇಕಾಗಿದೆ.

  'ಸಲಾರ್' ನಂತರ ಪ್ರಶಾಂತ್ ನೀಲ್ ಮುಂದಿದೆ 4 ಪ್ಯಾನ್ ಇಂಡಿಯಾ ಪ್ರಾಜೆಕ್ಟ್?'ಸಲಾರ್' ನಂತರ ಪ್ರಶಾಂತ್ ನೀಲ್ ಮುಂದಿದೆ 4 ಪ್ಯಾನ್ ಇಂಡಿಯಾ ಪ್ರಾಜೆಕ್ಟ್?

  ಸಲಾರ್ ಆರಂಭಿಸಿದ್ದು ಹೇಗೆ?

  ಸಲಾರ್ ಆರಂಭಿಸಿದ್ದು ಹೇಗೆ?

  ಬಾಹುಬಲಿ ಚಿತ್ರಕ್ಕಾಗಿ ಅದಾಗಲೇ ಐದು ವರ್ಷ ಕೆಲಸ ಮಾಡಿದ್ದ ಪ್ರಭಾಸ್, ಮತ್ತೊಮ್ಮೆ ಮೆಗಾ ಚಿತ್ರ ಆರಂಭಿಸಿದ ಮತ್ತೆ ಕೆಲವು ವರ್ಷಗಳು ಕಳೆದು ಹೋಗುವುದು ಇಷ್ಟವಿರಲಿಲ್ಲ. ಹಾಗಾಗಿ, ಸದ್ಯಕ್ಕೆ ಕಮರ್ಷಿಯಲ್ ಸಿನಿಮಾ ಮಾಡೋಣ, ಪೌರಾಣಿಕ ಕಥೆಗೆ ಸಮಯ ತೆಗೆದುಕೊಳ್ಳೋಣ ಎಂದು ಸಲಹೆ ಕೊಟ್ಟರು. ಆಗಲೇ ಪ್ರಶಾಂತ್ ನೀಲ್ ಆರಂಭಿಸಿದ್ದ ಸಲಾರ್. ಮತ್ತೊಂದೆಡೆ ದಿಲ್ ರಾಜು ತಮ್ಮ ಕನಸಿನ ಚಿತ್ರಕ್ಕಾಗಿ ಪೂರ್ವ ಸಿದ್ದತೆಯಲ್ಲಿ ತೊಡಗಿಕೊಂಡರು.

  25ನೇ ಚಿತ್ರ ದಿಲ್ ರಾಜು ಜೊತೆ?

  25ನೇ ಚಿತ್ರ ದಿಲ್ ರಾಜು ಜೊತೆ?

  ಈ ಹಿಂದೆ ಚರ್ಚಿಸಿದಂತೆ 25ನೇ ಚಿತ್ರ ಪ್ರಭಾಸ್ ಪಾಲಿಗೆ ಬಹಳ ವಿಶೇಷವಾಗಿಸಲು ದಿಲ್ ರಾಜು ಮತ್ತು ಪ್ರಶಾಂತ್ ನೀಲ್ ನಿರ್ಧರಿಸಿದ್ದಾರೆ. ತಾವು ಮೊದಲು ಅಂದುಕೊಂಡಂತೆ ಪೌರಾಣಿಕ ಕಥೆಯನ್ನು ಸ್ಕ್ರಿಪ್ಟ್ ಮಾಡಿ 25ನೇ ಸಿನಿಮಾ ಆಗಿಸಲು ತೀರ್ಮಾನಿಸಿದರು.

  'ಕೆಜಿಎಫ್' ಪ್ರಶಾಂತ್ ನೀಲ್ ಗೆಲುವಿನ ಹಿಂದಿರುವ ಪ್ರಮುಖ ಅಸ್ತ್ರಗಳು'ಕೆಜಿಎಫ್' ಪ್ರಶಾಂತ್ ನೀಲ್ ಗೆಲುವಿನ ಹಿಂದಿರುವ ಪ್ರಮುಖ ಅಸ್ತ್ರಗಳು

  ಕಮಿಟ್‌ಮೆಂಟ್‌ಗಳು ಮುಗಿಯಬೇಕು

  ಕಮಿಟ್‌ಮೆಂಟ್‌ಗಳು ಮುಗಿಯಬೇಕು

  ಬಾಲಿವುಡ್‌ನಲ್ಲಿ 'ಆದಿಪುರುಷ್' ಎಂಬ ಹೆಸರಿನಲ್ಲಿ ರಾಮಾಯಾಣ ಆಧರಿತ ಚಿತ್ರವೊಂದನ್ನು ಪ್ರಭಾಸ್ ಕೈಗೆತ್ತಿಕೊಂಡಿದ್ದಾರೆ. ಸಲಾರ್ ಸಿನಿಮಾ ಮಾಡ್ತಿದ್ದಾರೆ. ರಾಧೆ ಶ್ಯಾಮ್ ಮುಗಿಸಿದ್ದಾರೆ. ನಾಗ್ ಅಶ್ವಿನ್ ಜೊತೆ ಚಿತ್ರವೊಂದು ಶುರು ಮಾಡಬೇಕಿದೆ. ಈ ಚಿತ್ರಗಳ ಬಳಿಕ ದಿಲ್ ರಾಜು-ಪ್ರಶಾಂತ್ ನೀಲ್ ಚಿತ್ರಕ್ಕೆ ಅಸ್ತು ಎನ್ನಬೇಕಿದೆ.

  ಪ್ರಶಾಂತ್ ನೀಲ್ ಬ್ಯುಸಿ

  ಪ್ರಶಾಂತ್ ನೀಲ್ ಬ್ಯುಸಿ

  ಸಲಾರ್ ಸಿನಿಮಾ ಮುಗಿಯುತ್ತಿದ್ದಂತೆ ಜೂನಿಯರ್ ಎನ್‌ಟಿಆರ್ ಜೊತೆ 31ನೇ ಚಿತ್ರ ಆರಂಭಿಸಲಿದ್ದಾರೆ. ಗೀತಾ ಆರ್ಟ್ಸ್, ಬಾಹುಬಲಿ ನಿರ್ಮಾಪಕರ ಜೊತೆಯೂ ಮಾತುಕತೆ ನಡೆಯುತ್ತಿದೆಯಂತೆ. ದಿಲ್ ರಾಜು ಜೊತೆ ಪ್ರಾಜೆಕ್ಟ್ ಓಕೆ ಮಾಡಿಕೊಂಡಿರುವ ನೀಲ್‌ಗೆ ಯಾವಾಗ ಆರಂಭಿಸಬೇಕು ಎನ್ನುವುದರ ಬಗ್ಗೆ ಉತ್ತರ ಇಲ್ಲ.

  English summary
  After Salaar, Director Prashanth neel planning mythology story for prabhas with Dil Raju.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X