Dragon Glimpse: 'ಕೆಜಿಎಫ್', 'ಸಲಾರ್' ಛಾಯೆಯಿಂದ ಹೊರಬಾರದ ಎನ್‌ಟಿಆರ್- ನೀಲ್ 'ಡ್ರ್ಯಾಗನ್'

ಪ್ರಶಾಂತ್ ನೀಲ್ ಹಾಗೂ ಜ್ಯೂ. ಎನ್‌ಟಿಆರ್ ಕ್ರೇಜಿ ಕಾಂಬಿನೇಷನ್ 'ಡ್ರ್ಯಾಗನ್' ಚಿತ್ರದ ಫಸ್ಟ್ ಗ್ಲಿಂಪ್ಸ್ ಹೊರ ಬಿದ್ದಿದೆ. ತಾರಕ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ಸಿಕ್ಕಿದೆ. ಸಿನಿಮಾ ತೆರೆಗೆ ಬರೋಕೆ ಇನ್ನು ಒಂದು ವರ್ಷ ಕಾಯಬೇಕಿದೆ. ಅಲ್ಲಿಯವರೆಗೆ ಇಂತಹ ಸರ್ಪ್ರೈಸ್ ಕೊಡಲು ಚಿತ್ರತಂಡ ಮುಂದಾಗಿದೆ. ಚಿತ್ರದಲ್ಲಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದಾರೆ.

4 ನಿಮಿಷಗಳ ಗ್ಲಿಂಪ್ಸ್ 'ಡ್ರ್ಯಾಗನ್' ಪ್ರಪಂಚದೊಳಕ್ಕೆ ನೋಡುಗರನ್ನು ಕರೆದುಕೊಂಡು ಹೋಗುತ್ತದೆ. ಕೆಜಿಎಫ್, ಸಲಾರ್ ಸಿನಿಮಾಗಳನ್ನೆ ನೆನಪಿಸುವಂತೆ ಮತ್ತೊಂದು ಹೊಸ ಲೋಕವನ್ನು ಪ್ರಶಾಂತ್ ನೀಲ್ ಈ ಬಾರಿ ಸೃಷ್ಟಿಸಿದ್ದಾರೆ. ಅಫ್ಘಾನಿಸ್ತಾನ ಹಾಗೂ ಗೋಲ್ಡನ್ ಟ್ರಯಾಂಗಲ್ ನಡುವೆ ಭಾರತದಲ್ಲೂ ಚಿತ್ರದ ಕಥೆ ಸಾಗಲಿದೆ. ಮತ್ತದೇ ಡಾರ್ಕ್ ಫ್ರೇಮ್‌ಗಳು, ಚಿತ್ರ ವಿಚಿತ್ರ ಹೆಸರುಗಳ ವಿಲನ್‌ಗಳು, ಸ್ಲೋ ಮೋಷನ್, ಜೋರಾದ ಬಿಜಿಎಂ, ಇಂಗ್ಲೀಷ್ ಡೈಲಾಗ್ಸ್, ಖಡಕ್ ಹೀರೊ ಹೀಗೆ 'ಡ್ರ್ಯಾಗನ್' ಝಲಕ್ ಕಿಕ್ ಕೊಡುತ್ತಾ ಹೋಗುತ್ತದೆ.

Prashanth neel s Dragon first glimpse out Jr NTR stuns as Devil luger on his birthday

ಫಸ್ಟ್ ಗ್ಲಿಂಪ್ಸ್‌ನಲ್ಲೇ ಸಿನಿಮಾ ಕಥೆಗೆ ಪ್ರಶಾಂತ್ ನೀಲ್ ಪೀಠಿಕೆ ಹಾಕಿಬಿಟ್ಟಿದ್ದಾರೆ. ಬ್ರಿಟೀಷರು ಕೇವಲ ಸಾಂಬಾರ ಪದಾರ್ಥಗಳಿಗಾಗಿ ಮಾತ್ರ ಭಾರತಕ್ಕೆ ಬರಲಿಲ್ಲ. ಮುಖ್ಯವಾಗಿ ಅಫ್ಘಾನಿಸ್ತಾನ ಹಾಗೂ ಗೋಲ್ಡನ್ ಟ್ರಯಾಂಗಲ್ ಪ್ರದೇಶಗಳಲ್ಲಿ ಹೇರಳವಾಗಿ ಬೆಳೆಯುತ್ತಿದ್ದ ಅಫೀಮು ಅವರನ್ನು ಇಲ್ಲಿಗೆ ಬರುವಂತೆ ಮಾಡಿತು. ಈ ಎರಡು ಪ್ರದೇಶಗಳನ್ನು ಬ್ರಿಟೀಷರು ತಮ್ಮ ನಿಯಂತ್ರಣದಲ್ಲಿಟ್ಟುಕೊಂಡು ಅಫೀಮು ವ್ಯಾಪಾರವನ್ನು ನಡೆಸುತ್ತಿದ್ದರು. 1947ರಲ್ಲಿ ಬ್ರಿಟೀಷರು ಭಾರತ ಮಾತ್ರವಲ್ಲ, ಅಫೀಮು ವ್ಯಾಪಾರವನ್ನು ಬಿಟ್ಟು ಹೋದರು. ಮುಂದೆ ಆ ವ್ಯಾಪಾರ ಎರಡು ಭಾಗವಾಯಿತು. ಆಗ ಅಫೀಮು ಯುದ್ಧ ಶುರುವಾಯಿತು. ಆಗ ಈ ವಿಲನ್‌ಗಳ ಆರ್ಭಟ ಶುರುವಾಯಿತು. ಅದರಲ್ಲಿ ಒಬ್ಬ ಡೆವಿಲ್ ಕೂಡ ಇದ್ದ ಎಂದು ತಾರಕ್ ಪಾತ್ರ ಪರಿಚಯಿಸಲಾಗಿದೆ.

ಗ್ಲಿಂಪ್ಸ್ ಗಮನಿಸಿದರೆ ಜ್ಯೂ. ಎನ್‌ಟಿಆರ್ ದ್ವಿಪಾತ್ರದಲ್ಲಿ ನಟಿಸಿದ್ದಾರೆ ಎನ್ನುವಂತೆ ಕಾಣ್ತಿದೆ. ಅಫ್ಘನ್ ಟ್ರೇಡಿಂಗ್ ಕಂಪನಿ ಮುಖ್ಯಸ್ಥ ಲಗ್ಗರ್ ಎಂಬ ನೆಗೆಟಿವ್ ಶೇಡ್ ರೋಲ್‌ನಲ್ಲಿ ತಾರಕ್ ಕಾಣಿಸಿಕೊಳ್ಳುತ್ತಿದ್ದಾರೆ. ಮತ್ತೊಂದು ಪಾತ್ರದಲ್ಲಿ ಕೂಡ ಅವರು ನಟಿಸಿರುವಂತೆ ಕಾಣ್ತಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ. ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಮುಖ್ಯಸ್ಥ ರಘುವೀರ್ ರಾಥೋಡ್ ಪಾತ್ರದಲ್ಲಿ ಅನಿಲ್ ಕಪೂರ್ ದರ್ಶನ ಕೊಟ್ಟಿದ್ದಾರೆ. ಈ ದುಷ್ಟರ ಪಡೆಯನ್ನು ಮಟ್ಟ ಹಾಕಲು ಯಾರನ್ನು ರಘುವೀರ್ ಅಖಾಡಕ್ಕೆ ಇಳಿಸ್ತಾರೆ? ಅವನೇ 'ಡ್ರ್ಯಾಗನ್' ಆಗಿರ್ತಾನಾ? ಎನ್ನುವ ಪ್ರಶ್ನೆಗಳಿಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.

ಗ್ಲಿಂಪ್ಸ್ ನೋಡಿದರೆ ಪ್ರಶಾಂತ್ ನೀಲ್ ಹಿಂದಿನ ಸಿನಿಮಾಗಳೇ ನೆನಪಿಸಿಗೆ ಬರುತ್ತದೆ. ಅದೇ ರೀತಿಯ ಪಾತ್ರಗಳು, ಲೊಕೇಶನ್, ವಿಷ್ಯುವಲ್ಸ್, ಎಲಿವೇಷನ್ಸ್, ಆಕ್ಷನ್ ಸೀನ್ಸ್, ಮ್ಯೂಸಿಕ್ ಎಲ್ಲವನ್ನು ನೋಡಬಹುದು. 'ಕೆಜಿಎಫ್' ಸರಣಿ ಸಿನಿಮಾಗಳಲ್ಲಿ ಅನಂತ್ ನಾಗ್ ಹಾಗೂ ಪ್ರಕಾಶ್ ರಾಜ್ ಕಥೆ ನಿರೂಪಣೆ ಮಾಡುತ್ತಾ ಹೋದಂತೆ ಇಲ್ಲಿ ರುಕ್ಮಿಣಿ ವಸಂತ್ ದರ್ಶನ ಕೊಟ್ಟಿದ್ದಾರೆ. 'ಕೆಜಿಎಫ್' ಚಾಚಾ ರೀತಿಯಲ್ಲೇ ಜಲೀಲ್ ರೆಹಮಾನ್ ಎನ್ನುವ ಪಾತ್ರ ಕಾಣುತ್ತದೆ.

ಜ್ಯೂ. ಎನ್‌ಟಿಆರ್ ದೇಹ ದಂಡಿಸಿ ಸಿಕ್ಸ್‌ಪ್ಯಾಕ್ ಹ್ಯಾಬ್ಸ್ ಮಾಡಿ ಖಡಕ್ ಅವತಾರದಲ್ಲಿ ದರ್ಶನ ಕೊಟ್ಟಿದ್ದಾರೆ. ಹಾಲಿವುಡ್ ರೇಂಜ್ ವಿಷ್ಯುವಲ್ಸ್ ಕಣ್ಣಿಗೆ ರಾಚುತ್ತದೆ. ಎರಡು ಭಾಗಗಳಾಗಿ ಸಿನಿಮಾ ತೆರೆಗೆ ಬರುವ ಲೆಕ್ಕಾಚಾರ ಶುರುವಾಗಿದೆ. ಭಾರೀ ಬಂಡವಾಳ ಹೂಡಿ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ಕಟ್ಟಿಕೊಡಲಾಗ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 'ಡ್ರ್ಯಾಗನ್' ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ಬಿಜು ಮೆನನ್, ಖುಷ್ಬು ಸುಂದರ್, ಗುರು ಸೋಮಸುಂದರಂ, ರಾಜೀವ್ ಕಣಕಾಲ, ಅಶುತೋಷ್ ರಾಣಾ, ಅಂಶುಮನ್ ಪುಷ್ಕರ್, ಸಿದ್ದಾಂತ್ ಗುಪ್ತಾ, ಪ್ರಭಾಸ್ ಶ್ರೀನು, ಶತ್ರು, ಶಿವ, ಭೀಮಲ್ಜೀತ್ ಒಬೆರಾಯ್, ನ್ಟುಟುಜೆಲೊ ಪ್ರಿನ್ಸ್ ಗ್ರೂಟ್‌ಬೂಮ್, ಅಲೆಕ್ಸಾಂಡರ್ ಮಿಜೆವ್, ಬೆನೆಡಿಕ್ಟ್ ಪಾಲ್ ಗ್ಯಾರೆಟ್ ಹೀಗೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಭುವನ್ ಗೌಡ ಛಾಯಾಗ್ರಹಣ, ರವಿ ಬಸ್ರೂರು ಸಂಗೀತ ಚಿತ್ರಕ್ಕಿದೆ.

Read more about: ntr prashanth neel tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X