ಜಪಾನ್‌ನಲ್ಲೂ ಕೇಳಿಸಲಿದೆ 'ಸಲಾರ್' ಸದ್ದು: ರಜನಿಕಾಂತ್ ದಾಖಲೆ ಮುರಿಯಲಿದೆಯಾ ಸಲಾರ್?
ಸಾಲು ಸಾಲು ಸೋಲುಗಳನ್ನು ಕಾಣುತ್ತಿದ್ದ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್‌ಗೆ ಮತ್ತೆ ಭರ್ಜರಿ ಗೆಲುವು ತಂದುಕೊಟ್ಟಿದೆ ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳಿರುವ 'ಸಲಾರ್'. 'ಸಲಾರ್ : ಭಾಗ 1 - ಕದನ ವಿರಾಮ' ಬಿಡುಗಡೆಯಾಗಿ ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಯಶಸ್ಸನ್ನು ಕಂಡಿದೆ. ಇನ್ನೂ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಓಡುತ್ತಿದೆ.
ಈ ಚಿತ್ರವು ಶೀಘ್ರದಲ್ಲೇ 700 ಕೋಟಿ ರೂಪಾಯಿಗಳ ಗಡಿ ದಾಟಲಿದೆ. ಸಲಾರ್ 2023 ರಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾಗಳಲ್ಲಿ ಒಂದಾಗಿದೆ. ಈ ಖುಷಿಯ ನಡುವೆಯೇ ಚಿತ್ರತಂಡ ಅಧಿಕೃತವಾಗಿ ಜಪಾನ್‌ನಲ್ಲಿ ಸಲಾರ್ ಬಿಡುಗಡೆಯಾಗುವ ಬಗ್ಗೆ ಘೋಷಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

ಈ ಬೇಸಿಗೆಯಲ್ಲಿ ಜಪಾನ್‌ನಲ್ಲಿ ಸಲಾರ್ ಸದ್ದು!
ಪ್ರಭಾಸ್ ಮತ್ತು ಪೃಥ್ವಿರಾಜ್ ಸುಕುಮಾರನ್ ನಟನೆಯ "ಸಲಾರ್: ಭಾಗ 1 - ಕದನ ವಿರಾಮ" ಈ ಬೇಸಿಗೆಯಲ್ಲಿ ಜಪಾನಿನ ಥಿಯೇಟರ್‌ಗಳಿಗೆ ಬರಲಿದೆ ಎಂದು ಚಿತ್ರತಂಡ ಘೋಷಿಸಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಮತ್ತು ಹೊಂಬಾಳೆ ಫಿಲಂಸ್ ನಿರ್ಮಾಣದ ಚಲನಚಿತ್ರವನ್ನು ಜಪಾನಿನ ಚಲನಚಿತ್ರ ವಿತರಣಾ ಕಂಪನಿ ಟ್ವಿನ್ ಜಪಾನ್ ದೇಶದಲ್ಲಿ ಬಿಡುಗಡೆ ಮಾಡಲಿದೆ.
"ಸಲಾರ್ ಕೇಸ್ ಫೈರ್ ಈ ಬೇಸಿಗೆಯಲ್ಲಿ ಜಪಾನ್‌ನಾದ್ಯಂತ ಥಿಯೇಟರ್‌ಗಳಿಗೆ ಬರಲಿದೆ. ಟ್ವಿನ್ ಮೂವಿ ಮೂಲಕ ಬಿಡುಗಡೆ ಅಗಲಿದೆ" ಎಂದು ಶನಿವಾರದಂದು ಸಲಾರ್‌ನ ಅಧಿಕೃತ ಟ್ವಿಟ್ಟರ್ ಪುಟದಲ್ಲಿ ಟ್ವೀಟ್ ಮಾಡಲಾಗಿದೆ.
ಹಿಂದೆ, ಜಪಾನ್‌ನಲ್ಲಿ ಪ್ರಭಾಸ್ ಸಿನಿಮಾಗಳು ಯಶಸ್ವಿಯಾಗಿವೆ. ಪ್ರಭಾಸ್ ಮತ್ತು ಶ್ರದ್ಧಾ ಕಪೂರ್ ಅಭಿನಯದ 'ಸಾಹೋ' ಜಪಾನ್‌ನಲ್ಲಿ ಉತ್ತಮ ಪ್ರದರ್ಶನ ಕಂಡು 12.50 ಕೋಟಿ ಗಳಿಸಿತ್ತು. ಇನ್ನು, ಬಾಹುಬಲಿ 2: ದಿ ಕನ್‌ಕ್ಲೂಷನ್ ಕೂಡ 16 ಕೋಟಿಗಳ ಸಂಗ್ರಹ ಮಾಡಿ ಒಲ್ಳೆ ಕಮಾಲ್ ಮಾಡಿತ್ತು.
ಹೀಗಾಗಿ ಪ್ರಭಾಸ್ ಜಪಾನಿನ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ದಾಖಲೆಯನ್ನು ಹೊಂದಿದ್ದಾರೆ. ಜಪಾನ್ ದೇಶದ ಅತ್ಯಂತ ಜನಪ್ರಿಯ ಭಾರತೀಯ ನಟರಲ್ಲಿ ಒಬ್ಬರು. ಆದ್ದರಿಂದ, ಸಲಾರ್ ಜಪಾನ್‌ನಲ್ಲಿ ಉತ್ತಮ ಅರಂಭ ಹುಡುಕುತ್ತಿದೆ ಮತ್ತು ಸಾಹೋ ಮತ್ತು ಬಾಹುಬಲಿ 2: ದಿ ಕನ್‌ಕ್ಲೂಷನ್‌ನ ದಾಖಲೆಗಳನ್ನು ಮುರಿಯಲು 'ಸಲಾರ್' ಕಾಯುತ್ತಿದೆ.

ಸ್ಪ್ಯಾನಿಷ್ ಭಾಷೆಯಲ್ಲಿ ಬಿಡುಗಡೆಯಾಗಲಿದೆ ಸಲಾರ್
ಇನ್ನು, ಸಲಾರ್ ಸಿನಿಮಾ ಮಾರ್ಚ್ 7 ರಂದು ಲ್ಯಾಟಿನ್ ಅಮೆರಿಕಾದಲ್ಲಿ ಸ್ಪ್ಯಾನಿಷ್ ಭಾಷೆಯಲ್ಲಿ ಬಿಡುಗಡೆಯಾಗಲಿದೆ. "'ಸಲಾರ್: ಭಾಗ 1 - ಕದನ ವಿರಾಮ' ಲ್ಯಾಟಿನ್ ಅಮೆರಿಕಾದಲ್ಲಿ ಮಾರ್ಚ್ 7, 2024 ರಂದು ಸ್ಪ್ಯಾನಿಷ್ ಭಾಷೆಯಲ್ಲಿ ಸಿನಿಪೋಲೀಸ್ ಬಿಡುಗಡೆ ಮಾಡಲಿದೆ. ಮಹಾಕಾವ್ಯವನ್ನು ನೋಡಲು ಸಿದ್ಧರಾಗಿ!" ಎಂದು ಸ್ಪ್ಯಾನಿಷ್ ಭಾಷೆಯಲ್ಲಿ ಟ್ವೀಟ್ ಮಾಡಲಾಗಿದೆ.
ರಜನಿಕಾಂತ್ 'ಮುತ್ತು' ದಾಖಲೆ ಮುರಿಯುತ್ತಾ 'ಸಲಾರ್'?
ರಜನಿಕಾಂತ್ ನಟನೆಯ 'ಮುತ್ತು' ಸಿನಿಮಾ 25 ವರ್ಷಗಳ ಹಿಂದೆ ಜಪಾನ್‌ನಲ್ಲಿ ಬಿಡುಗಡೆಯಾಗಿತ್ತು. ಅದು ಬಾಕ್ಸ್ ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ಆಗಿ ದಾಖಲೆ ಬರೆದಿದೆ. ಜಪಾನ್‌ನಲ್ಲಿ 23.50 ಕೋಟಿ ಗಳಿಸಿತ್ತು. ಗಲ್ಲಾ ಪೆಟ್ಟಿಗೆಯಲ್ಲಿ ಅತಿ ಹೆಚ್ಚು ಸದ್ದು ಭಾರತೀಯ ಚಲನಚಿತ್ರವಾಗಿ ದಶಕಗಳ ಕಾಲ ಅಗ್ರ ಸ್ಥಾನದಲ್ಲಿತ್ತು. ಅದನ್ನು ಮುರಿದದ್ದು ಇತ್ತೀಚೆನ ಆರ್‌ಆರ್‌ಆರ್. ಎಸ್ಎಸ್ ರಾಜಮೌಳಿ ಅವರ ಆರ್‌ಆರ್‌ಆರ್ ಜಪಾನ್‌ನಲ್ಲಿ 150 ಕೋಟಿಗೂ ಅಧಿಕ ಮೊತ್ತ ಗಳಿಸಿದೆ.
ಇನ್ನು, ನಟ ಪ್ರಭಾಸ್‌ನ ಜನಪ್ರಿಯತೆ ಮತ್ತು ಆಕ್ಷನ್ ಥ್ರಿಲ್ಲರ್ ಸಿನಿಮಾವನ್ನು ಗಮನಿಸಿದರೆ, ಸಲಾರ್, ರಜನಿಕಾಂತ್ ಅವರ 'ಮುತ್ತು' ಸಿನಿಮಾವನ್ನು ಮೀರಿಸುವ ದೊಡ್ಡ ಅವಕಾಶವಿದೆ. ಆದರೆ ಅದಕ್ಕೆ ಮಾಡಬೇಕಾಗಿರುವುದು ಉತ್ತಮ ಪ್ರಚಾರ ಮತ್ತು ದೊಡ್ಡ ಮಟ್ಟದ ಬಿಡುಗಡೆ.


Click it and Unblock the Notifications











