'ಸಲಾರ್- 3' ಬರುತ್ತಾ? ಸೀಕ್ವೆಲ್‌ನಲ್ಲಿ ಪ್ರಶಾಂತ್ ನಟಿಸ್ತಾರಾ? ಲಿಖಿತಾ ನೀಲ್ ಹೇಳಿದ್ದಿಷ್ಟು
ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿದ್ದು ಗೊತ್ತೇಯಿದೆ. ಸದ್ಯ ಓಟಿಟಿ ಸ್ಟ್ರೀಮಿಂಗ್ ಆಗುತ್ತಿದೆ. ಎರಡು ಭಾಗಗಳಾಗಿ ಕಥೆ ಪ್ರೇಕ್ಷಕರ ಮುಂದೆ ಬರುತ್ತಿದೆ. ಕಥೆಯ ಬಗ್ಗೆ ಸಾಕಷ್ಟು ಪ್ರಶ್ನೆಗಳು ಅಭಿಮಾನಿಗಳಲ್ಲಿದೆ. ಅದಕ್ಕೆಲ್ಲಾ ಸೀಕ್ವೆಲ್‌ನಲ್ಲಿ ಉತ್ತರ ಸಿಗಲಿದೆ. ಮುಂದಿನ ವರ್ಷವೇ 'ಸಲಾರ್:ಪಾರ್ಟ್-2 ಶೌರ್ಯಾಂಗ ಪರ್ವ' ತೆರೆಗೆ ಬರಲಿದೆ.
ಕನ್ನಡದ 'ಉಗ್ರಂ' ಕಥೆಯನ್ನೇ ಬಹಳ ದೊಡ್ಡದಾಗಿ ಎರಡು ಭಾಗಗಳಲ್ಲಿ ಪ್ರಶಾಂತ್ ನೀಲ್ ಹೇಳುತ್ತಿದ್ದಾರೆ. ಈಗಾಗಲೇ ಮೊದಲ ಭಾಗ ಹಿಟ್ ಆಗಿದ್ದು ಸಹಜವಾಗಿಯೇ 2ನೇ ಭಾಗದ ಬಗ್ಗೆ ನಿರೀಕ್ಷೆ ಮೂಡಿದೆ. 'ಬಾಹುಬಲಿ', 'KGF' ಸರಣಿಗಳ ರೀತಿಯಲ್ಲೇ 2ನೇ ಭಾಗವನ್ನು ಬಹಳ ದೊಡ್ಡಮಟ್ಟದಲ್ಲಿ ತೆರೆಗೆ ತರುವ ಪ್ರಯತ್ನ ನಡೀತಿದೆ. ಇನ್ನು ಮೊದಲ ಭಾಗ ಬರೀ ಟ್ರೈಲರ್ ಅಷ್ಟೇ, 2ನೇ ಭಾಗದಲ್ಲಿ ಅಸಲಿ ಪಿಕ್ಚರ್ ನೋಡುತ್ತೀರಾ ಎಂದು ಪ್ರಶಾಂತ್ ನೀಲ್ ಹೇಳಿದ್ದಾರೆ.

'ಸಲಾರ್: ಪಾರ್ಟ್ 2 ಶೌರ್ಯಾಂಗ ಪರ್ವಂ' ನೋಡಲು ಎಲ್ಲರೂ ಕಾಯುತ್ತಿದ್ದಾರೆ. ದೇವ ಯಾರು? ಆತನ ಹಿನ್ನೆಲೆ ಏನು? ಶೌರ್ಯಾಂಗ ಬುಡಕಟ್ಟಿನ ಕಥೆಯೇನು? ಎನ್ನುವುದನ್ನು ತಿಳಿದುಕೊಳ್ಳಲು ಸಿನಿರಸಿಕರು ಉತ್ಸುಕರಾಗಿದ್ದಾರೆ. 'ಸಲಾರ್-2' ಬಗ್ಗೆ ನಿರ್ದೇಶಕ ಪ್ರಶಾಂತ್ ನೀಲ್ ಪತ್ನಿ ಲಿಖಿತಾ ನೀಲ್ ಪ್ರತಿಕ್ರಿಯಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
ಅಭಿಮಾನಿಗಳ ಪ್ರಶ್ನೆಗಳು, ಅದಕ್ಕೆ ಲಿಖಿತಾ ಉತ್ತರ ಹೀಗಿದೆ.
1. ಸಲಾರ್: ಪಾರ್ಟ್- 1 ಕ್ಲೈಮ್ಯಾಕ್ಸ್‌ನಲ್ಲಿ ಪ್ರಭಾಸ್ ದೇಹ ಹಸಿರು ಬಣ್ಣಕ್ಕೆ ತಿರುಗಲು ಕಾರಣವೇನು?
ಅದು ಶೌರ್ಯಾಂಗ ಬುಡಕಟ್ಟು ಜನಾಂಗದ ಬಣ್ಣ.
2. ದೇವನಿಗೆ ಏಕೆ ಹೆಚ್ಚು ಡೈಲಾಗ್‌ಗಳಿಲ್ಲ?
ಏಕೆಂದರೆ ಆತನ ನೆರಳು ಮಿಲಿಯನ್ ಡೈಲಾಗ್‌ಗಳಿಗೆ ಸಮ.
3. ಖಾನ್ಸರ್ ಸೀಲ್ ದೇವ ಸೃಷ್ಟಿಸಿದ್ದರೂ ಅವನೇಕೆ ಖಾನ್ಸರ್‌ನಲ್ಲಿ ಇಲ್ಲ?
ಅದನ್ನು ಸೃಷ್ಟಿಸಿದ ದೇವ ದೂರ ಸರಿದ ಕಾರಣ ಪಾರ್ಟ್-2ನಲ್ಲಿ ಇದೆ.
4. ದೇವ - ವರದ ಪಾತ್ರಗಳ ನಡುವೆ ಫೈಟ್ ಇರುತ್ತಾ?

ಸುಮ್ಮನೆ ಊಹಿಸಿಕೊಳ್ಳಿ.
5. ದೇವನನ್ನು ನೋಡಿ ಓಬುಳಮ್ಮ ಯಾಕೆ ಹೆದರುತ್ತಿದ್ದಳು?
ಇದಕ್ಕೆ ಉತ್ತರ ತಿಳಿದರೆ ನಮಗೂ ಭಯವಾಗುತ್ತದೆ.
6. 'ಬಾಹುಬಲಿ' ಚಿತ್ರದಲ್ಲಿ ರಾಜಮೌಳಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಂತೆ, ಪ್ರಶಾಂತ್ ನೀಲ್ 'ಸಲಾರ್'-2 ಚಿತ್ರದ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಾ?
ಅವರ ನೆರಳು ಕಾಣುವುದಿಲ್ಲ.
7. ದೇವನ ಕೈಯಲ್ಲಿ ಪ್ಲಾಸ್ಟಿಕ್ ಚಾಕು ನೋಡಿ ಆತನ ತಾಯಿ ಯಾಕೆ ಹೆದರುತ್ತಾರೆ, ಅದು ತುಂಬಾ ಓವರ್ ಅನ್ಸಲ್ವಾ?
ಪಾರ್ಟ್- 2 ನೋಡಿದರೆ ಕ್ಲಾರಿಟಿ ಸಿಗುತ್ತದೆ.
8. ಡೈನೋಸಾರ್ ಬಗ್ಗೆ ಒಂದು ಮಾತಿನಲ್ಲಿ ಹೇಳಬೇಕು ಅಂದ್ರೆ?
ಕೆಲ ತಲೆಮಾರುಗಳು ಮಾತನಾಡಿಕೊಳ್ಳುತ್ತವೆ.
9. ದೇವ ಹಾಗೂ ಆತನ ತಾಯಿ ಜೊತೆಗಿದ್ದಾಗ ಆಕೆ ಗರ್ಭಿಣಿ ಎನ್ನುವಂತೆ ತೋರಿಸಿದ್ದಾರೆ, ಆತನಿಗೆ ತಮ್ಮ ಇರ್ತಾನಾ?
ನಾನು ಗಮನಿಸಲಿಲ್ಲ.
10. 'ಸಲಾರ್' ಪಾರ್ಟ್-3 ಕೂಡ ಇರುತ್ತಾ?
ಪಾರ್ಟ್-2 ಕ್ಲೈಮ್ಯಾಕ್ಸ್‌ನಲ್ಲಿ ಇದಕ್ಕೆ ಉತ್ತರ ಸಿಗಲಿದೆ.
11. ಬಿಲಾಲ್ ಪಾಸ್ಟ್‌ನಲ್ಲಿ ವರದ ಬಳಿ ಇರ್ತಾನೆ, ಆದರೆ ಈಗ ದೇವ ಬಳಿ ಯಾಕೆ ಇದ್ದಾನೆ?
ಗುಡ್ ಅಬರ್ಸರ್ವೇಷನ್
12. ಸೀಸ್‌ಫೈರ್‌ನಲ್ಲಿ ಮಾಸ್ ಸಾಂಗ್ ಮಿಸ್ ಆಯ್ತು, ಪಾರ್ಟ್-2ನಲ್ಲಿ ಇರುತ್ತಾ?
ಕಂಡಿತ ಇರುತ್ತದೆ
13. ದೇವ, ರಾಧರಮಾ ಹಾಗೂ ಆದ್ಯ ನಡುವಿನ ಸಂಬಂಧ ಏನು?
ಇದಕ್ಕೆ ಉತ್ತರ ಕೊಡಬೇಕು ಅಂದ್ರೆ ಶೌರ್ಯಾಂಗ ಪರ್ವ ಸ್ಕ್ರಿಪ್ಟ್ ನಾನು ಕದಿಯಬೇಕು.
14. ಖಾನ್ಸರ್ ಸಿಂಹಾಸನದ ಮೇಲೆ ಕೂರುವ ಅರ್ಹತೆ ದೇವಾದು ಅಂತ ಅವನಿಗೆ ಗೊತ್ತಾ?
ಈ ಉತ್ತರಕ್ಕಾಗಿಯೇ ಎಲ್ಲರೂ ಕಾಯುತ್ತಿದ್ದಾರೆ. ನಾನು ಸಹ.
15. ದೇವ ಹಾಗೂ ಬಿಲಾಲ್‌ಗೆ ಕೃಷ್ಣಕಾಂತ್ ಕೊಟ್ಟ ಮಾತೇನು?
ಅದು ನೆಕ್ಸ್ಟ್ ಪಾರ್ಟ್‌ನಲ್ಲಿ ಇರುವಂತದ್ದು. ಚೆನ್ನಾಗಿ ಅಬರ್ಸರ್ವೇಷನ್ ಮಾಡಿದ್ದೀರಾ.
16. ದೇವ ಶೌರ್ಯಾಂಗ ಬುಡಕಟ್ಟಿಗೆ ಸೇರಿದವನು ಎಂದು ಗೊತ್ತಿದ್ದು ವರದ ಯಾಕೆ ಕೊಲ್ಲಲಿಲ್ಲ?
ಎಲ್ಲದಕ್ಕಿಂತ ಸ್ನೇಹ ದೊಡ್ಡದು.
17. ಪಾರ್ಟ್-2 ಶೂಟಿಂಗ್ ನಡೆದಿದ್ಯಾ?
ಡೈನೋಸಾರ್
18. ದೇವ ಹಾಗೂ ವರದ ಶತ್ರುಗಳಾಗಿ ಬದಲಾಗಿದ್ದು ಯಾಕೆ?
ನೀವು ಏನು ಅಂದುಕೊಂಡಿದ್ದೀರಾ?
19. ಪಂಡಿತ್ ರೋಲ್ ಬಗ್ಗೆ ಇನ್ನು ಗೊತ್ತಾಗಬೇಕಿದೆ
ನೀವು ಪಾರ್ಟ್-1ನಲ್ಲಿ ನೋಡಿದ್ದು ಬಹಳ ಕಮ್ಮಿ.
20. ಅಖಿಲ್ ಅಕ್ಕಿನೇನಿ ಸಲಾರ್-2ನಲ್ಲಿ ಇರ್ತಾರೆ ಎನ್ನುವ ರೂಮರ್ ಇದೆ?
ಅದು ನಿಜಕ್ಕೂ ರೂಮರ್
21. ದೇವ(ಪ್ರಭಾಸ್) ತಂದೆ ಪಾತ್ರದಲ್ಲಿ ಯಾರು ನಟಿಸುತ್ತಾರೆ?
ಶೌರ್ಯಾಂಗ ಪರ್ವದಲ್ಲಿ ದೇವ ತಂದೆ ಯಾರು ಅಂತ ನಾನು ಕೂಡ ಕಾಯುತ್ತಿದ್ದೇನೆ.
22. ಟ್ರೈಲರ್‌ನಲ್ಲಿ ತೋರಿಸಿದ ಕೆಲ ಸನ್ನಿವೇಶಗಳು ಹಾಗೂ ಡೈನೋಸಾರ್ ಬಗ್ಗೆ ಹೇಳಿ
ಶೌರ್ಯಾಂಗ ಪರ್ವ ಬಿಡುಗಡೆಯಾದ ಮೇಲೆ ನೀವೇ ನೋಡ್ತೀರಾ.


Click it and Unblock the Notifications











