For Quick Alerts
  ALLOW NOTIFICATIONS  
  For Daily Alerts

  ವಿಶ್ವದ ಗಮನ ಸೆಳೆಯಲು ದುಬೈನಲ್ಲಿ ಅದ್ಧೂರಿ ಕಾರ್ಯಕ್ರಮ

  |

  ' RRR' ಪ್ರೀ-ರಿಲೀಸ್ ಸಮಾರಂಭ ದುಬೈನಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ನಟರು ಹಾಗೂ ತಂತ್ರಜ್ಞರು ಭಾಗವಹಿಸುವ ಮೂಲಕ 'RRR' ಪ್ರೀ ರಿಲೀಸ್ ಕಾರ್ಯಕ್ರಮವನ್ನು ಅದ್ದೂರಿಯಾಗಿ ಮಾಡಲು ರಾಜಮೌಳಿ ಪ್ಲಾನಿಂಗ್ ಮಾಡಿಕೊಂಡಿದ್ದಾರಂತೆ. ತೆಲುಗಿನ ಇಬ್ಬರು ಸೂಪರ್ ಸ್ಟಾರ್‌ಗಳ ಜೊತೆಯಲ್ಲಿ ರಾಜಮೌಳಿ ನಿರ್ದೇಶಿಸಿರುವ 'RRR' ಜನವರಿ 7, 2022 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಕಾರಣಾಂತರಗಳಿಂದ 'RRR' ಸಿನಿಮಾದ ಶೂಟಿಂಗ್ ನಿಗದಿತ ಸಮಯಕ್ಕೆ ಮುಗಿಯಲಿಲ್ಲ. ಪರಿಣಾಮವಾಗಿ, 'RRR' ಬಿಡುಗಡೆಯನ್ನು ಮೂರು ಬಾರಿ ಮುಂದೂಡಲಾಯಿತು. ತಡವಾದರೂ ರಾಜಮೌಳಿ ಅದ್ಭುತವಾದ ಚಿತ್ರ ನೀಡಿದ್ದಾರೆ ಅಂತ ಚಿತ್ರತಂಡ ಹೇಳುತ್ತಿದೆ.

  'ಕೋಮರಂ ಭೀಮ್' ನಾಗಿ ಎನ್‌ಟಿಆರ್, 'ಅಲ್ಲೂರಿ ಸೀತಾರಾಮರಾಜು' ಆಗಿ ರಾಮ್ ಚರಣ್ ಪಾತ್ರಗಳು ಅಭಿಮಾನಿಗಳಿಗೆ ಅಪಾರವಾಗಿ ಇಷ್ಟವಾಗಿವೆ ಸಣ್ಣ, ಸಣ್ಣ ಟೀಸರ್ ಗಳ ಮೂಲಕ ಈಗಾಗಲೇ ಎಲ್ಲಾ ಪಾತ್ರಗಳನ್ನು ಇಂಟ್ರಡ್ಯೂಸ್ ಮಾಡಲಾಗಿದೆ. ಇನ್ನು ಸಿನಿಮಾ ಬಿಡುಗಡೆ ಹತ್ತಿರವಾಗುತ್ತಿದ್ದಂತೆ ರಾಜಮೌಳಿ ಪ್ರಚಾರದತ್ತ ಗಮನ ಹರಿಸಿದ್ದಾರೆ. ಇದರ ಭಾಗವಾಗಿ ಚಿತ್ರದ ಹಾಡುಗಳು ಮತ್ತು ಟ್ರೈಲರ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

  ಎಲ್ಲಕ್ಕಿಂತ ಮಿಗಿಲಾಗಿ ದುಬೈನಲ್ಲಿ 'RRR' ಪ್ರಿ-ರಿಲೀಸ್ ಸಮಾರಂಭ ಅದ್ಧೂರಿಯಾಗಿ ನಡೆಯಲಿದೆ. ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ನಟರು ಹಾಗೂ ತಂತ್ರಜ್ಞರು ಭಾಗವಹಿಸುವ 'RRR' ಪ್ರೀ ರಿಲೀಸ್ ಕಾರ್ಯಕ್ರಮವನ್ನು ಅದ್ದೂರಿಯಾಗಿ ಮಾಡಲು ಜಕ್ಕಣ್ಣ(ರಾಜಮೌಳಿ) ಮುಂದಾಗಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ದುಬೈಯಂತಹ ಅಂತಾರಾಷ್ಟ್ರೀಯ ನಗರದಲ್ಲಿ ವಿಶ್ವದ ಗಮನ ಸೆಳೆಯಲು ನಗರದಲ್ಲಿ 'RRR' ಪ್ರೀ-ರಿಲೀಸ್ ಸಮಾರಂಭ ನಡೆಸುವ ಮೂಲಕ ವಿಶ್ವ ಗಮನ ಸೆಳೆಯಲು ಚಿತ್ರತಂಡ ಪ್ಲಾನ್ ಮಾಡ್ತಾ ಇದೆ ಅಂತೆ.

  ದುಬೈನಲ್ಲಿ ನಡೆದಿತ್ತು ರೋಬೋ ರಿಲೀಸ್ ಈವೆಂಟ್:
  ದುಬೈ ಎಂಬ ಮಾಯಾನಗರಿ ಯನ್ನು ಪ್ರೀ-ರಿಲೀಸ್ ಈವೆಂಟ್ ಗೆ ಆಯ್ಕೆ ಮಾಡಿಕೊಳ್ಳುವುದರ ಹಿಂದೆ ಒಂದು ಮುಖ್ಯ ಕಾರಣವಿದೆ. ದುಬೈನಲ್ಲಿ ದಕ್ಷಿಣ ಭಾರತದ ಎಲ್ಲಾ ಭಾಷಿಕರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಅಲ್ಲದೆ ಹಿಂದಿ ಭಾಷಿಕರು ಕೂಡ ದೊಡ್ಡಮಟ್ಟದಲ್ಲಿ ನೆಲೆಸಿದ್ದಾರೆ. ಹೀಗಾಗಿ ಒಂದೇ ಈವೆಂಟ್ ನಲ್ಲಿ ಎಲ್ಲಾ ಭಾಷಿಕರನ್ನು ಕೂಡ ಏಕಕಾಲಕ್ಕೆ ತಲುಪಬಹುದು. ಇದೇ ಹಿನ್ನೆಲೆಯಲ್ಲಿ ಈ ಹಿಂದೆ ರಜನಿಕಾಂತ್ 'ರೋಬೋ' ಚಿತ್ರ ತಮ್ಮ ಪ್ರಿ-ರಿಲೀಸ್ ಸಮಾರಂಭವನ್ನು ದುಬೈನಲ್ಲಿ ಆಯೋಜಿಸಿತ್ತು. ಅದೇ ತಂತ್ರವನ್ನು ಈಗ ರಾಜಮೌಳಿ 'RRR' ಸಿನಿಮಾಗಾಗಿ ಅನುಸರಿಸುತ್ತಿದ್ದಾರೆ ಅಂತ ಹೇಳಲಾಗುತ್ತಿದೆ. ಡಿವಿವಿ ದಾನಯ್ಯ ಅವರು ಸುಮಾರು ರೂ. 400 ಕೋಟಿ ಬಜೆಟ್‌ನಲ್ಲಿ 'RRR' ಚಿತ್ರವನ್ನು ನಿರ್ಮಿಸಿದ್ದಾರೆ. ರಾಮ್ ಚರಣ್, ಎನ್ ಟಿ ಆರ್ ಜೊತೆಗೆ ನಾಯಕಿಯರಾಗಿ ಆಲಿಯಾ ಭಟ್ ಮತ್ತು ಒಲಿವಿಯಾ ಮೋರಿಸ್ ನಟಿಸಿದ್ದಾರೆ. ಅಜಯ್ ದೇವಗನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಚಿತ್ರಕ್ಕೆ ಎಂ.ಎಂ. ಕೀರವಾಣಿ ಸಂಗೀತ ಸಂಯೋಜಿಸುತ್ತಿದ್ದಾರೆ.
  ಜನವರಿ 7 2022ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿರುವ 'RRR' ನೋಡಲು ಈಗಿನಿಂದಲೇ ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ.

  English summary
  The RRR pre release ceremony will be held in a grand manner in Dubai. It is a rumored that Rajamouli is planning to dazzle the RRR pre-release event with the participation of the actors who played major roles in the film as well as technicians.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X