Samantha :ಡಿವೋರ್ಸ್‌ಗೆ ಕಾರಣ ಆದವನ ಜೊತೆ ಮತ್ತೆ ಸಲುಗೆ ಬೆಳೆಸಿದ ಸಮಂತಾ!
ಟಾಲಿವುಡ್‌ನ ರೀಲ್ ಕಮ್ ರಿಯಲ್ ಜೋಡಿಗಳಲ್ಲಿ ಅಕ್ಕಿನೇನಿ ನಾಗಚೈತನ್ಯ ಹಾಗೂ ಸಮಂತಾ ರುತ್ ಪ್ರಭು ಕೂಡ ಒಂದು. ಜೊತೆ ಜೊತೆಯಾಗಿಯೇ ಸಿನಿಮಾ ರಂಗಕ್ಕೆ ಬಂದು ಪ್ರೀತಿಯ ಲೋಕಕ್ಕೆ ಇಳಿದು, ಬಹಳ ಸಮಯ ಪ್ರೀತಿಸಿ ಮದುವೆ ಮಾಡಿಕೊಂಡರು.
Recommended Video

ಟಾಲಿವುಡ್‌ನಲ್ಲಿ ನಗುವಿನ ಮೂಲಕವೇ ಬೆಳದಿಂಗಳು ಹರಿಸುವ ಕ್ಯೂಟಿ ಸಮಂತಾ ನಾಗಚೈತನ್ಯಾ ಜೊತೆ ಡಿವೋರ್ಸ್ ಪಡೆದ ಬಳಿಕ ಸಾಕಷ್ಟು ಸುದ್ದಿಯಾಗುತ್ತಿದ್ದಾರೆ. ತಾವಿಬ್ಬರೂ ದಂಪತಿಗಳಾಗಿ ಇನ್ನು ಮುಂದೆ ಇರುವುದಿಲ್ಲವೆಂದು ತುಂಬ ಯೋಚನೆ ಮಾಡಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ.
ಅಭಿಮಾನಿಗಳು ಮತ್ತು ಹಿತೈಷಿಗಳು ಮತ್ತು ಮೀಡಿಯಾದವರು ನಮ್ಮ ಭಾವನೆಗಳಿಗೆ ಬೆಲೆ ಕೊಟ್ಟು, ಇದರಿಂದ ಹೊರಗೆ ಬರಲು ನಮಗೆ ಪ್ರೈವೆಸಿ ನೀಡಬೇಕು ಎಂದು ಇಬ್ಬರು ಇನ್‌ಸ್ಟ್ರಾಗ್ರಾಂನಲ್ಲಿ ಹೇಳಿಕೊಂಡಿದ್ದರು. ಡಿವೋರ್ಸ್ ಹಿಂದೆ ಸಾಕಷ್ಟು ಅನುಮಾನಗಳು ಮೂಡಿತ್ತು. ಅದರಲ್ಲಿ ಒಂದು ಕಾರಣ ಪ್ರಮುಖವಾಗಿ ಕೇಳಿ ಬರುತ್ತಿರುವುದು ಸಮಂತಾ ಕಾಸ್ಟ್ಯೂಮ್ ಡಿಸೈನರ್ ಪ್ರೀತಂ ಜುಕಾಲ್ಕರ್ ಹೆಸರು.

ಸಮಂತಾ ವಿಚ್ಛೇದನಕ್ಕೆ ನೂರೆಂಟು ಕಾರಣ
ನಾಗಚೈತನ್ಯ ಮತ್ತು ಸಮಂತಾ ವಿಚ್ಛೇದನಕ್ಕೆ ಏನು ಕಾರಣ ಅನ್ನೋದು ಖಚಿತವಾಗಿ ಇನ್ನೂ ತಿಳಿದು ಬಂದಿಲ್ಲಾ. ಆದರೆ ಸಮಂತಾ ಸುತ್ತಾ ಹಲವಾರು ಕಾರಣಗಳು ಕೇಳಿಬಂದವು. ಬೋಲ್ಡ್ ಪಾತ್ರಗಳಲ್ಲಿ ನಟಿಸುತ್ತಿದ್ದ ಕಾರಣಕ್ಕೆ ನಾಗ ಚೈತನ್ಯ ಮತ್ತು ಸಮಂತಾ ನಡುವೆ ಬಿರುಕು ಎಂದಾದರೇ, ಮಗು ಪಡೆದುಕೊಳ್ಳುವ ವಿಚಾರದಲ್ಲಿ ಇಬ್ಬರು ಕಿತ್ತಾಡಿಕೊಂಡಿದ್ದರು ಅನ್ನೋದು ಮತ್ತೊಂದು ಕಾರಣ. ಹಾಗೇ ಪ್ರಮುಖ ಕಾರಣವಾಗಿ ಕೇಳಿ ಬಂದಿದ್ದು ಸಮಂತಾಳ ಕಾಸ್ಟ್ಯೂಮ್ ಡಿಸೈನರ್ ಪ್ರೀತಂ ಜುಕಾಲ್ಕರ್ ಹೆಸರು.

ಪ್ರೀತಂ ಜುಕಾಲ್ಕರ್ ಕಾರಣ ಎಂದು ಸುದ್ದಿ
ಸಮಂತಾ ಮತ್ತು ನಾಗಚೈತನ್ಯ ಡಿವೋರ್ಸ್‌ಗೆ ಕಾಸ್ಟ್ಯೂಮ್ ಡಿಸೈನರ್ ಪ್ರೀತಂ ಜುಕಾಲ್ಕರ್ ಕಾರಣ ಎಂದು ಹಲವು ಭಾರಿ ಸುದ್ದಿಯಾಗಿದೆ. ಅವರಿಬ್ಬರ ನಡುವೆ ಇದ್ದ ಸ್ನೇಹವೇ ಟಾಲಿವುಡ್‌ನ ಕ್ಯೂಟ್ ಕಪಲ್ ದೂರವಾಗಲು ಕಾರಣ ಎಂದು ಹೇಳಲಾಗಿತ್ತು. ಇದಕ್ಕೆ ಉದಾಹರಣೆ ಎಂಬಂತೆ ಕೆಲವು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅದು ಸಮಂತಾ ಮತ್ತು ಅವರ ಕಾಸ್ಟ್ಯೂಮ್ ಡಿಸೈನರ್ ಪ್ರೀತಂ ಜುಕಾಲ್ಕರ್ ಜೊತೆ ಇರುವ ಫೋಟೋಗಳು. ಪ್ರೀತಂ ಹುಟ್ಟುಹಬ್ಬದ ದಿನ ಸಮಂತಾ ಒಂದು ಫೋಟೊಶೇರ್ ಮಾಡಿ ಅವರಿಗೆ ವಿಶ್ ಮಾಡಿದ್ದರು. ಅದರಲ್ಲಿ ಸಮಂತಾ ಮತ್ತು ಪ್ರೀತಂ ಬಹಳ ಸಲುಗೆಯಿಂದ ಇದ್ದಂತೆ ಕಾಣುತ್ತಿತ್ತು. ಇದರಿಂದಾಗಿ ಸಮಂತಾ ಟ್ರೋಲ್‌ಗೆ ಒಳಗಾಗಿದ್ದರು. ಈ ವಿಡಿಯೋ ನೋಡಿ ನೆಟ್ಟಿಗರು ಸಮಂತಾ ಮೇಲೆ ಕೋಪ ಮಾಡಿಕೊಂಡಿದ್ದೂ ಇದೆ. ಆಗ ಸ್ವತಃ ಸಮಂತಾ ಈ ಫೋಟೋವನ್ನು ಡಿಲೀಟ್ ಮಾಡಿದ್ದರು.

ಡಿಸೈನರ್ ಪ್ರೀತಂ ಜುಕಾಲ್ಕರ್‌ಗೆ ಸಮಂತಾ ಹೇರ್‌ಕಟ್
ಇಷ್ಟಿದ್ದರೂ ಕೂಡ ಸಮಂತಾ ಈಗಲೂ ಡಿಸೈನರ್ ಪ್ರೀತಂ ಜುಕಾಲ್ಕರ್ ಜೊತೆ ಮೊದಲಿನಂತೆ ಸ್ನೇಹದಿಂದಲೇ ಇದ್ದಾರೆ. ಸಮಂತಾ ಮತ್ತು ಡಿಸೈನರ್ ಪ್ರೀತಂ ಜುಕಾಲ್ಕರ್ ನಡುವೆ ಅದೇನೆ ಗಾಸಿಪ್‌ಗಳು ಬಂದರೂ ಅದನ್ನು ಸಮಂತಾ ತಲೆಕೆಡಿಸಿಕೊಂಡಿಲ್ಲ. ಈಗ ಮತ್ತೆ ಡಿಸೈನರ್ ಪ್ರೀತಂ ಜುಕಾಲ್ಕರ್ ಅವರೊಂದಿಗೆ ತೆಗೆದಿರುವ ಫೋಟೊಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಇಂದು ಕೂಡ ಡಿಸೈನರ್ ಪ್ರೀತಂ ಜುಕಾಲ್ಕರ್‌ಗೆ ಹೇರ್‌ಕಟ್ ಮಾಡುವ ವಿಡಿಯೋವನ್ನು ಹಂಚಿಕೊಂಡಿದ್ರು. ಅದೇನೇ ತಪ್ಪು ಕಲ್ಪನೆಗಳು ಜನರಲ್ಲಿ ಇದ್ದರೂ ನಾವೇನು ಅನ್ನೋದು ನಮಗೆ ಗೊತ್ತಿದೆ ಅನ್ನುವಂತಿದೆ ಸಮಂತಾ ನಡೆ.

ಪ್ರೀತಂ ಬರೆದಿದ್ದ ಕ್ಯಾಪ್ಶನ್ ವೈರಲ್
ಕಳೆದ ಬಾರಿ ಸಮಂತಾ ಹುಟ್ಟುಹಬ್ಬದ ದಿನ ಪ್ರೀತಂ, ಸಮಂತಾ ಜೊತೆ ಗೋವಾ ಟ್ರಿಪ್ ಹೋಗಿದ್ದ ಫೋಟೊ ಶೇರ್ ಮಾಡಿ, ವಿಶ್ ಮಾಡಿದ್ದರು. ಈ ಫೋಟೊಗಳು ಮತ್ತು ಪ್ರೀತಂ ಬರೆದಿದ್ದ ಕ್ಯಾಪ್ಶನ್ ಸಹ ಬಹಳ ವೈರಲ್ ಆಗಿತ್ತು. ಇದೀಗ ಚೈತನ್ಯ ಹಾಗೂ ಸಮಂತಾ ವಿಚ್ಛೇದನ ಪಡೆಯಲು ಪ್ರೀತಂ ಜೊತೆ ಇದ್ದ ಸಲುಗೆಯೇ ಕಾರಣ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಈ ಹಿಂದೆ ಪ್ರೀತಂರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ್ದರು. ಟ್ರೋಲ್‌ನಿಂದಾಗಿ ಬೇಸತ್ತ ಪ್ರೀತಂ, ಚೈತನ್ಯ ಹಾಗೂ ಸಮಂತಾ ಡೈವೋರ್ಸ್‌ಗೂ ನನಗೂ ಯಾವುದೇ ಸಂಬಂಧ ಇಲ್ಲ. ಅವರಿಬ್ಬರು ದೂರ ಆಗಿದ್ದಕ್ಕೆ ನನಗೇಕೆ ಮಾನಸಿಕ ಕಿರುಕುಳ ಕೊಡುತ್ತೀರಾ ಎಂದು ಪೋಸ್ಟ್ ಮಾಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.


Click it and Unblock the Notifications











