For Quick Alerts
  ALLOW NOTIFICATIONS  
  For Daily Alerts

  ಅಲ್ಲು ಅರ್ಜುನ್ 'ಪುಷ್ಪ' ಲುಕ್‌ ಹಿಂದೆ ಇದೆ ಈ ಮಹಿಳೆಯ ಪಾತ್ರ

  |

  ಅಲ್ಲು ಅರ್ಜುನ್ ಪ್ರತಿ ಸಿನಿಮಾಕ್ಕೂ ಒಂದು ಭಿನ್ನ ಹೇರ್‌ಸ್ಟೈಲ್, ಡ್ರೆಸ್ ಮಾದರಿ ಪ್ರಯತ್ನಿಸುತ್ತಾರೆ. ಆದರೆ 'ಪುಷ್ಪ' ಅವರ ಲುಕ್‌ ಸಂಪೂರ್ಣ ಭಿನ್ನವಾಗಿದೆ. ಹಳ್ಳಿ ಚೆಹರೆ ಜೊತೆಗೆ ಮಾಸ್‌ ಲುಕ್‌ ಸಹ 'ಪುಷ್ಪ' ಸಿನಿಮಾದಲ್ಲಿ ಅಲ್ಲು ಅರ್ಜುನ್‌ಗಿದೆ.

  'ಪುಷ್ಪ' ಸಿನಿಮಾದ ಮೊದಲ ಪೋಸ್ಟರ್‌ ಬಿಡುಗಡೆ ಆದಾಗಲೇ ಸಿನಿಮಾದ ಬಗ್ಗೆ ನಿರೀಕ್ಷೆಗಳು ಆಕಾಶಕ್ಕೇರಿದ್ದವು ಇದಕ್ಕೆ ಪ್ರಮುಖ ಕಾರಣ ಅಲ್ಲು ಅರ್ಜುನ್ ಭಿನ್ನ ಲುಕ್. ಈ ಭಿನ್ನ ಮಾದರಿ ಲುಕ್‌ನ ಹಿಂದೆ ಇರುವುದು ಮಹಿಳೆ ಪ್ರೀತಿಶೀಲ್ ಡಿಸೋಜಾ.

  ಹೌದು, ಭಾರತದ ನಂಬರ್ 1 ಮೇಕಪ್‌ ಕಲಾವಿದೆ ಹಾಗೂ ಭಿನ್ನ ಮಾದರಿ ಲುಕ್‌ ಚೇಂಜ್ (ಪ್ರಾಸ್ತೆಟಿಕ್) ಕಲಾವಿದೆ ಪ್ರೀತೀಶೀಲ್ ಡಿಸೋಜಾ 'ಪುಷ್ಪ' ಸಿನಿಮಾದಲ್ಲಿ ಅಲ್ಲು ಅರ್ಜುನ್‌ಗೆ ಹೊಸ ಲುಕ್‌ ನೀಡಿದ್ದಾರೆ. ಹಳ್ಳಿಯ ಹುಡುಗನ ಲುಕ್‌ ಜೊತೆಗೆ ಒಂದು ರಗಡ್‌ ಮಾದರಿಯ ಲುಕ್‌ ಅಲ್ಲು ಅರ್ಜುನ್‌ಗೆ ನೀಡಿದ್ದಾರೆ ಪ್ರೀತಿಶೀಲ್.

  ನ್ಯಾಷನಲ್ ಕ್ರಶ್ ರಶ್ಮಿಕಾಗೆ ಪ್ರಭಾಸ್ ಮೇಲೆ ಕ್ರಶ್ | Filmibeat Kannada
  |
  'ಪುಷ್ಪ' ಸಿನಿಮಾದಲ್ಲಿ ಅಲ್ಲು ಅರ್ಜುನ್ ರಕ್ತ ಚಂದನ ಕಳ್ಳ ಸಾಗಣೆದಾರನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಒಬ್ಬ ಲವರ್‌ ಬಾಯ್ ಸಹ ಹೌದು. ಹಾಗಾಗಿ ಎರಡೂ ಮಾದರಿಯ ಲುಕ್‌ಗಳನ್ನು ಬ್ಲೆಂಡ್ ಮಾಡಿದ್ದಾರಂತೆ ಪ್ರೀತಿ.

  'ಪುಷ್ಪ' ಸಿನಿಮಾದ ನಾಯಕಿ ರಶ್ಮಿಕಾ ಮಂದಣ್ಣಗೂ ಮೇಕಪ್‌ ಮಾಡಿರುವ ಪ್ರೀತಿ, 'ಪುಷ್ಪ' ಸಿನಿಮಾದ ಬಗ್ಗೆ ನಿರೀಕ್ಷೆ ಬಹು ಎತ್ತರಕ್ಕೆ ಏರಿದೆ ಹಾಗಾಗಿ ಒಮ್ಮೊಮ್ಮೆ ಇದು ಅನಪೇಕ್ಷಿತ ಎನಿಸುತ್ತದೆ. ನನ್ನ ಕೆಲಸವನ್ನು ಜನ ಇಷ್ಟಪಡುತ್ತಾರೆ ಎಂಬ ನಿರೀಕ್ಷೆ ಇದೆ ಎಂದಿದ್ದಾರೆ.

  ಪ್ರೀತಿಶೀಲ್, ಈ ಮುಂಚೆ ಬಾಲಿವುಡ್‌ನ, 'ಬಾಜಿರಾವ್ ಮಸ್ತಾನಿ', 'ಚಿಚೋರೆ', 'ಪದ್ಮಾವತ್', '102 ನಾಟ್‌ ಔಟ್', 'ಠಾಕ್ರೆ', 'ಅಂಧಾಧುನ್', 'ಬಾಲ', ತಮಿಳಿನ 'ಮಾಸ್ಟರ್', ತೆಲುಗಿನ 'ವೈಲ್ಡ್‌ ಗಾಡ್' ಸಿನಿಮಾಗಳಿಗಾಗಿ ಕೆಲಸ ಮಾಡಿದ್ದಾರೆ.

  English summary
  India's number one make up artist Preethisheel D'Soza works for Pushpa movie she is the person behind massy look of Allu Arjun in the movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X