ಅರೇ, ಗರ್ಭಿಣಿ ಸಮಂತಾಗೆ ಸಿಕ್ಸ್ ಪ್ಯಾಕ್ ಚಿಂತೆ; ಪೋಸ್ಟ್ ವೈರಲ್

ತೆಲುಗು ನಟಿ ಸಮಂತಾ ಡಬಲ್ ಸಂಭ್ರಮದಲ್ಲಿದ್ದಾರೆ. ಒಂದ್ಕಡೆ ಸ್ಯಾಮ್ ನಟಿಸಿದ 'ಮಾ ಇಂಟಿ ಬಂಗಾರಂ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. ಮತ್ತೊಂದು ಕಡೆ ಸಮಂತಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚೆಗೆ ಆ ವಿಚಾರವನ್ನು ಆಕೆ ಹಂಚಿಕೊಂಡಿದ್ದರು. ಇದೀಗ ತಮ್ಮ ಬೇಬಿ ಬಂಪ್ ಫೋಟೊ ಶೇರ್ ಮಾಡಿದ್ದಾರೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಸಮಂತಾ ಎರಡನೇ ಮದುವೆ ಆಗಿದ್ದರು. ನಟ ನಾಗಚೈತನ್ಯಾಗೆ ಡಿವೋರ್ಸ್ ನೀಡಿದ ಬಳಿಕ ನಿರ್ದೇಶಕ ರಾಜ್ ನಿಡುಮೊರು ಅವರನ್ನು ಪ್ರೀತಿಸಿ ಮದುವೆ ಆಗಿದ್ದರು. ಮದುವೆ ಆಗುವವರೆಗೂ ತಮ್ಮ ಪ್ರೀತಿ ವಿಚಾರವನ್ನು ಗುಟ್ಟಾಗಿಯೇ ಇಟ್ಟಿದ್ದರು. ಮದುವೆಯಾಗಿ 7 ತಿಂಗಳಿಗೆ ಸಿಹಿಸುದ್ದಿ ಹಂಚಿಕೊಂಡಿದ್ದಾರೆ. 'ಮಾ ಇಂಟಿ ಬಂಗಾರಂ' ಸಿನಿಮಾ ಚಿತ್ರೀಕರಣ ಸಮಯದಲ್ಲೇ ಆಕೆ ಗರ್ಭಿಣಿ ಆಗಿರುವ ವಿಚಾರ ಗೊತ್ತಿತ್ತು ಎಂದು ನಿರ್ದೇಶಕಿ ನಂದಿನಿ ರೆಡ್ಡಿ ಹೇಳಿದ್ದರು.

Pregnant Samantha Bids Goodbye to Her Six-Pack Shares Adorable Baby Bump Photo

ಸಮಂತಾ ಮೊದಲಿನಿಂದಲೂ ಫಿಟ್‌ನೆಸ್ ಫ್ರೀಕ್ ಎನಿಸಿಕೊಂಡಿದ್ದಾರೆ. ಸಿನಿಮಾ ಇರಲಿ ಬಿಡಲಿ ಜಿಮ್‌ನಲ್ಲಿ ಕಸರತ್ತು ತಪ್ಪುತ್ತಿರಲಿಲ್ಲ. ಗರ್ಭಿಣಿಯಾದ ಬಳಿಕ ಕೂಡ ಆಕೆ ಜಿಮ್‌ಗೆ ಹೋಗಿ ಬರುತ್ತಿದ್ದಾರೆ. ಇದೆಲ್ಲದರ ನಡುವೆ ತಮ್ಮ ಬೇಬಿ ಬಂಪ್ ಫೋಟೊವನ್ನು ಆಕೆ ಹಂಚಿಕೊಂಡಿದ್ದಾರೆ. "ನನ್ನ ಸಿಕ್ಸ್ ಪ್ಯಾಕ್, ನಾನು ನಿನ್ನನ್ನು ಮತ್ತೆ ನೋಡ್ತೀನಿ" ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಆ ಮೂಲಕ ಸದ್ಯಕ್ಕೆ ಸಿಕ್ಸ್‌ಪ್ಯಾಕ್‌ಗೆ ಬೈ ಹೇಳಿರುವುದನ್ನು ಹಂಚಿಕೊಂಡಿದ್ದಾರೆ.

ಡಿವೋರ್ಸ್ ಬಳಿಕ ಸಮಂತಾ ಮಯೋಸೈಟಿಸ್ ಸಮಸ್ಯೆಯಿಂದ ಬಳಲಿದ್ದರು. ವೈದ್ಯಕೀಯ ಚಿಕಿತ್ಸೆ ಜೊತೆಗೆ ದೈಹಿಕವಾಗಿ ಸಾಕಷ್ಟು ಕಸರತ್ತು ನಡೆಸಿ ಮಯೋಸೈಟಿಸ್ ವಿರುದ್ಧ ಹೋರಾಟ ನಡೆಸಿದ್ದರು. ಆಗಾಗ್ಗೆ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದರು. 'ಸಿಟಾಡೆಲ್' ವೆಬ್ ಸೀರಿಸ್‌ನಲ್ಲಿ ಸ್ಯಾಮ್ ನಟಿಸಿದ್ದರು. ಅದಕ್ಕಾಗಿ ಸಾಕಷ್ಟು ವರ್ಕೌಟ್ ಮಾಡಿದ್ದರು. ಸಿಕ್ಸ್‌ಪ್ಯಾಕ್ ಮಾಡಿ ಹುಬ್ಬೇರಿಸಿದ್ದರು.

ಸಾಮಾನ್ಯವಾಗಿ ಪುರುಷರಿಗೆ ಸಿಕ್ಸ್‌ಪ್ಯಾಕ್ ಕ್ರೇಜ್ ಹೆಚ್ಚು. ಹೊಟ್ಟೆಯ ಕೊಬ್ಬು ಕರಗಿಸಿ, ಸಿಕ್ಸ್ ಪ್ಯಾಕ್ ಹ್ಯಾಬ್ಸ್ ಪ್ರದರ್ಶನ ಮಾಡುತ್ತಾರೆ. ಸ್ಟಾರ್ ನಟರು ಇದಕ್ಕೆ ಹೊರತಲ್ಲ. ಸಾಕಷ್ಟು ಜನ ನಟರು ತೆರೆಮೇಲೆ ಸಿಕ್ಸ್‌ಪ್ಯಾಕ್ ಪ್ರದರ್ಶಿಸಿ ಗಮನ ಸೆಳೆದಿದ್ದಾರೆ. ಇನ್ನುಳಿದಂತೆ ಮಹಿಳೆಯರು ವರ್ಕೌಟ್ ಮಾಡಿದ್ರು, ಸಿಕ್ಸ್ ಪ್ಯಾಕ್ ಹ್ಯಾಬ್ಸ್ ಮಾಡುವ ಸಾಹಸ ಮಾಡುವುದು ಕಮ್ಮಿ. ಆದರೆ ಇತ್ತೀಚೆಗೆ ಕೆಲವರು ಈ ಪ್ರಯತ್ನ ಮಾಡುತ್ತಿದ್ದಾರೆ. ಕನ್ನಡದಲ್ಲಿ ನಿಶ್ವಿಕಾ ನಾಯ್ಡು, ಸಂಗೀತಾ ಶೃಂಗೇರಿ ಸೇರಿ ಕೆಲವರು ಸಿಕ್ಸ್‌ಪ್ಯಾಕ್ ಮಾಡಿ ಗಮನ ಸೆಳೆದಿದ್ದರು. ಸಮಂತಾ ಕೂಡ ಅದೇ ರೀತಿ ಸಿಕ್ಸ್‌ಪ್ಯಾಕ್ ಮಾಡಿ ಫಿಟ್‌ನೆಸ್ ಮಂತ್ರ ಜಪಿಸಿದ್ದರು.

ಸದ್ಯ ತಾಯಿಯಾಗುತ್ತಿರುವ ಸ್ಯಾಮ್ ತಾಯ್ತನದ ಸಂಭ್ರಮಕ್ಕೆ ಕಾಯುತ್ತಿದ್ದಾರೆ. ಅದಕ್ಕಾಗಿ ತಯಾರಿ ನಡೆಸುತ್ತಿದ್ದಾರೆ. ಹಾಗಾಗಿ ಸದ್ಯಕ್ಕೆ ಸಿಕ್ಸ್‌ಪ್ಯಾಕ್‌ಗೆ ಬೈ ಹೇಳಿದ್ದಾರೆ. ಆದಷ್ಟು ಬೇಗ ಮತ್ತೆ ಸಿಕ್ಸ್‌ಪ್ಯಾಕ್ ಮಾಡುವ ಪಣ ತೊಟ್ಟಿರುವುದು ಗೊತ್ತಾಗುತ್ತಿದೆ. ಮಹಿಳೆಯರು ಹೆರಿಗೆ ಬಳಿಕ ದೇಹದ ತೂಕ ಹೆಚ್ಚಾಗಿ ಸಮಸ್ಯೆ ಎದುರಿಸುತ್ತಾರೆ. ಆದರೆ ಇತ್ತೀಚೆಗೆ ಕೆಲವರು ಇದನ್ನು ಸವಾಲಾಗಿ ತೆಗೆದುಕೊಳ್ಳುತ್ತಿದ್ದಾರೆ. ಮಗು ಹುಟ್ಟಿದ ವರ್ಷದ ಒಳಗೆ ಮತ್ತೆ ಜಿಮ್‌ನಲ್ಲಿ ಕಸರತ್ತು ಆರಂಭಿಸಿ, ತಮ್ಮ ಮೊದಲಿನ ಶೇಪ್ ಉಳಿಸಿಕೊಳ್ಳಲು ಶ್ರಮಿಸುತ್ತಾರೆ. ಸಮಂತಾ ಕೂಡ ಇದೇ ಹಾದಿಯಲ್ಲಿದ್ದಾರೆ.

ಸಮಂತಾ ನಿರ್ಮಿಸಿ ನಟಿಸಿರುವ 'ಮಾ ಇಂಟಿ ಬಂಗಾರಂ' ಸಿನಿಮಾ ಯಶಸ್ವಿ ಪ್ರದರ್ಶನ ಮುಂದುವರೆದಿದೆ. 70 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ಮುನ್ನುಗ್ಗುತ್ತಿದೆ. ತೆಲುಗಿನಲ್ಲಿ ಅತಿಹೆಚ್ಚು ಗಳಿಕೆ ಕಂಡ ಮಹಿಳಾ ಪ್ರಧಾನ ಸಿನಿಮಾ ಎನಿಸಿಕೊಂಡಿದೆ. ಡಿಸೆಂಬರ್‌ನಲ್ಲಿ ಸಮಂತಾಗೆ ಮೊದಲ ಮಗುವಿನ ಹೆರಿಗೆ ಆಗಬಹುದು ಎನ್ನುವ ಲೆಕ್ಕಾಚಾರ ಶುರುವಾಗಿದೆ.

Read more about: samantha tollywood actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X