"ರಶ್ಮಿಕಾ ನನ್ನ ಫ್ರೆಂಡ್ ಎಂದು ಹೇಳಿಕೊಳ್ಳುವುದು ನನಗೆ ಇಷ್ಟವಿಲ್ಲ"; ಪ್ರೇರಣಾ ಕಂಬಂ

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್ ಹೀರೋಯಿನ್. ಒಂದ್ಕಾಲದಲ್ಲಿ ಅವಕಾಶಗಳಿಗಾಗಿ ಆಕೆ ಪರಿತಪಿಸಿದ್ದರು. ಆದರೆ 'ಕಿರಿಕ್ ಪಾರ್ಟಿ' ಸಿನಿಮಾ ಗೆದ್ದು ಆಕೆಗೆ ದೊಡ್ಡ ಬ್ರೇಕ್ ಸಿಕ್ಕಿತ್ತು. ಕನ್ನಡದಲ್ಲಿ ಕೆಲ ಸಿನಿಮಾಗಳಲ್ಲಿ ನಟಿಸಿದ ಚೆಲುವೆ ಬಳಿಕ ಟಾಲಿವುಡ್ ಮೂಲಕ ಬಾಲಿವುಡ್ ಪ್ರವೇಶಿಸಿದರು.

ರಶ್ಮಿಕಾ ಈಗ ಬಾಲಿವುಡ್ ಟಾಪ್ ನಟಿಯರಿಗೆ ಪೈಪೋಟಿ ಕೊಡುತ್ತಿದ್ದಾರೆ. ಸ್ಟಾರ್ ನಟರ ಜೊತೆ ನಟಿಸೋ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇನ್ನು ಕಿರುತೆರೆ ನಟಿ ಪ್ರೇರಣಾ ಕಂಬಂ ಹಾಗೂ ರಶ್ಮಿಕಾ ಮಂದಣ್ಣ ಒಂದ್ಕಾಲದಲ್ಲಿ ಆತ್ಮೀಯ ಸ್ನೇಹಿತರಾಗಿದ್ದರು. ಮಾಡೆಲಿಂಗ್ ಮಾಡುತ್ತಿದ್ದ ಸಮಯದಲ್ಲಿ ಒಟ್ಟೊಟ್ಟಿಗೆ ಒಂದೇ ದ್ವಿಚಕ್ರ ವಾಹನದಲ್ಲಿ ಸುತ್ತಾಡುತ್ತಿದ್ದರು.

Prerana Kambam interesting comments on friendship with Rashmika Mandanna

ಬಿಗ್‌ಬಾಸ್ ತೆಲುಗು ಸೀಸನ್ 8ರಲ್ಲಿ ಪ್ರೇರಣಾ ಕಂಬಂ ಸ್ಪರ್ಧಿಯಾಗಿ ದೊಡ್ಮನೆ ಒಳಗೆ ಹೋಗಿದ್ದರು. ಅದೇ ಸಮಯದಲ್ಲಿ ರಶ್ಮಿಕಾ ಹಾಗೂ ಪ್ರೇರಣಾ ಸ್ನೇಹದ ವಿಚಾರ ರಿವೀಲ್ ಆಗಿತ್ತು. ಅಂದಹಾಗೆ ಪ್ರೇರಣಾ ಕನ್ನಡದ ಹುಡುಗಿ. ಕನ್ನಡದ ಕೆಲ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 'ಕೃಷ್ಣ ಮುಕುಂದ ಮುರಾರಿ' ಎಂಬ ಧಾರಾವಾಹಿ ಆಕೆಗೆ ತೆಲುಗು ಕಿರುತೆರೆಯಲ್ಲಿ ದೊಡ್ಡ ಬ್ರೇಕ್ ಕೊಟ್ಟಿತ್ತು.

ಪ್ರೇರಣಾ ಈಗ ತೆಲುಗು ಧಾರಾವಾಹಿಗಳಲ್ಲೇ ಹೆಚ್ಚು ಬ್ಯುಸಿಯಾಗಿದ್ದಾರೆ. ಚೆನ್ನಾಗಿ ತೆಲುಗು ಕಲಿತು ಮಾತನಾಡುತ್ತಾರೆ. ಬಿಗ್‌ಬಾಸ್ ಮನೆಯಿಂದ ಹೊರ ಬಂದ ಬಳಿಕ ಕೆಲ ಸಂದರ್ಶನಗಳಲ್ಲಿ ಆಕೆ ಮಾತನಾಡಿದ್ದರು. ಈ ವೇಳೆ ಪದೇ ಪದೆ ರಶ್ಮಿಕಾ ಮಂದಣ್ಣ ಬಗ್ಗೆ ಕೇಳಿದ್ದಕ್ಕೆ ಬೇಸರಗೊಂಡಿದ್ದರು. Idream ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಆಕೆ ಮಾತನಾಡಿದ್ದ ಮಾತುಗಳು ಈಗ ವೈರಲ್ ಆಗುತ್ತಿದೆ.

"ನಾನು ಬಿಗ್‌ಬಾಸ್ ಮನೆಯಲ್ಲಿ ಇದ್ದಾಗ ರಶ್ಮಿಕಾ ಮಂದಣ್ಣ ವಿಷಯ ಪ್ರಸ್ತಾಪವಾಗಿದ್ದೇ ನನಗೆ ಇಷ್ಟವಾಗಲಿಲ್ಲ. ಪದೇ ಪದೇ ಜನ ಈ ಬಗ್ಗೆ ಕೇಳುವುದು, ಸಂದರ್ಶನಗಳಲ್ಲಿ ನಮ್ಮಿಬ್ಬರ ಸ್ನೇಹದ ಬಗ್ಗೆ ಮಾತನಾಡುವುದು ಇಷ್ಟವಿಲ್ಲ. ಯಾಕಂದರೆ ಈ ವಿಚಾರದಿಂದ ನನಗೆ ಎಫೆಕ್ಟ್ ಆಗಬಾರದು ಎಂದುಕೊಂಡೆ. ನಾನು ಯಾವತ್ತೂ ರಶ್ಮಿಕಾ ವಿಷಯ ಮಾತನಾಡಲಿಲ್ಲ. ಯಾರು ಬಿಗ್‌ಬಾಸ್ ತಂಡಕ್ಕೆ ಈ ವಿಷಯ ಹೇಳಿದರು ಗೊತ್ತಿಲ್ಲ. ನಾಗಾರ್ಜುನ ಸರ್ ಯಾಕೆ ಇದನ್ನು ಕೇಳಿದರೂ ಅರ್ಥವಾಗಲಿಲ್ಲ, ನಿರೀಕ್ಷಿರಲಿಲ್ಲ" ಎಂದು ಪ್ರೇರಣಾ ಹೇಳಿದ್ದಾರೆ.

ಮಾತು ಮುಂದುವರೆಸಿರುವ ಪ್ರೇರಣಾ ಕಂಬಂ "ನನಗೆ ಗೊತ್ತಿಲ್ಲ ಅವತ್ತು ಯಾರು ರಶ್ಮಿಕಾ ಹೆಸರು ಹೇಳಿದರು ಅಂತ. ನಾಗಾರ್ಜುನ ಸರ್ ಮಾತನಾಡಿ ಇಂಡಸ್ಟ್ರಿಯಲ್ಲಿ ದೊಡ್ಡ ಸೆಲೆಬ್ರೆಟಿ ನಿಮ್ಮ ಫ್ರೆಂಡ್ ಅಂತೆ ಎಂದ್ರು. ಆಗ ನನಗೆ ರಶ್ಮಿಕಾ ನೆನಪಾಗಿದ್ದಳು. ಅದು ಹೇಗೆ ನಾಗಾರ್ಜುನ ಅವರಿಗೆ ಗೊತ್ತಾಯ್ತೋ ಗೊತ್ತಿಲ್ಲ. ಆ ಕ್ಷಣದಿಂದ ಪ್ರತಿಯೊಬ್ಬರು ಅದರ ಬಗ್ಗೆ ಕೇಳಲು ಆರಂಭಿಸಿದರು. ಅದು ನನಗೆ ಇಷ್ಟವಾಗುತ್ತಿಲ್ಲ. ಆಕೆ ಈಗ ಉತ್ತುಂಗಕ್ಕೆ ಏರಿದ್ದಾರೆ. ಪಾಪ್ಯುಲಾರಿಟಿಗಾಗಿ ನಾನು ರಶ್ಮಿಕಾ ಬಗ್ಗೆ ಮಾತನಾಡುತ್ತೇನೆ ಎಂದುಕೊಳ್ಳುತ್ತಾರೆ. ನನಗೆ ಅದೆಲ್ಲಾ ಬೇಡ, ನನ್ನ ಬಗ್ಗೆ ಮಾತನಾಡುವುದು ಬಹಳ ಇದೆ. ಈ ವಿಷಯ ಅಡ್ಡ ಇಟ್ಟುಕೊಂಡು ಮಾತನಾಡುವುದು ಇಷ್ಟವಿಲ್ಲ" ಎಂದಿದ್ದಾರೆ.

ನಟ ಸೂರ್ಯ ಅತಿಥಿಯಾಗಿ ಬಿಗ್‌ಬಾಸ್ ವೇದಿಕೆಗೆ ಬಂದಿದ್ದರು. ಆಗ ಎಲ್ಲಾ ಸ್ಪರ್ಧಿಗಳ ಪರಿಚಯ ಮಾಡಿಕೊಟ್ಟರು. ಕಿರುತೆರೆ ನಟಿ, ಸಿನಿಮಾ ನಟಿ, ಯೂಟ್ಯೂಬರ್ ಎಂದರು. ಆದರೆ ನನ್ನ ಬಗ್ಗೆ ಮಾತನಾಡುವಾಗಿ ರಶ್ಮಿಕಾ ಬಾಲ್ಯದ ಗೆಳತಿ ಎಂದುಬಿಟ್ಟರು. ಅದು ನನಗೆ ಇಷ್ಟವಾಗಲಿಲ್ಲ. ಬೇಡ ಬೇಡ ಎಂದರೂ ಅದೇ ಟಾಪಿಕ್ ಬರ್ತಿದೆ. ಕಾರಣ ಆಕೆ ಈಗ ದೊಡ್ಡ ವಿಷಯ ಆಗಿಬಿಟ್ಟಿದೆ ಎಂದು ಪ್ರೇರಣಾ ಬೇಸರ ಹೊರ ಹಾಕಿದ್ದಾರೆ.

More from Filmibeat

English summary
Television actress Prerana Kambam expresses frustration over constant references to her past friendship with Bollywood star Rashmika Mandanna;
Read more about: rashmika mandanna tv tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X