Prashanth Neel Universe: 'ಸಲಾರ್' ಶಿವ ಮನ್ನಾರ್‌ಗೂ 'KGF' ರಾಕಿ ಭಾಯ್‌ಗೂ ಲಿಂಕ್?
ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಸಿನಿಮಾ ಹಿಟ್ ಆಗಿದೆ. ಸದ್ಯ ಚಿತ್ರದ ಸೀಕ್ವೆಲ್ ಚಿತ್ರೀಕರಣ ಯಾವಾಗ ಶುರು ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ. ಕೆಲವರು ಸದ್ಯಕ್ಕೆ ಶುರುವಾಗಲ್ಲ ಎಂದು ಹೇಳುತ್ತಿದ್ದಾರೆ. ಈ ತಿಂಗಳೇ ಆರಂಭವಾಗುತ್ತದೆ ಎಂದು ಟಾಲಿವುಡ್‌ನಲ್ಲಿ ಚರ್ಚೆ ಆಗುತ್ತಿದೆ.
ಡಿಸೆಂಬರ್ 22ಕ್ಕೆ ತೆರೆಕಂಡಿದ್ದ 'ಸಲಾರ್'-1 ಸಿನಿಮಾ 600 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ಕನ್ನಡದ 'ಉಗ್ರಂ' ಕಥೆಯನ್ನೇ ಬಹಳ ದೊಡ್ಡದಾಗಿ 2 ಭಾಗಗಳಾಗಿ ತೆರೆಗೆ ತರುವ ಪ್ರಯತ್ನ ನಡೀತಿದೆ. ಈಗಾಗಲೇ ಅರ್ಧ ಕಥೆಯನ್ನು ನೀಲ್ ಹೇಳಿ ಮುಗಿಸಿದ್ದಾರೆ. ಸದ್ಯ ಶೌರ್ಯಾಂಗ ಪರ್ವದ ಬಗ್ಗೆ ಕುತೂಹಲ ಮೂಡಿದೆ. ಚಿತ್ರದಲ್ಲಿ ಪ್ರಭಾಸ್ ಜೊತೆಗೆ ಪೃಥ್ವಿರಾಜ್ ಸುಕುಮಾರನ್ ಕೂಡ ನಟಿಸಿದ್ದಾರೆ.

ದೇವ ಹಾಗೂ ವರದರಾಜ ಮನ್ನಾರ್ ಸ್ನೇಹ, ದ್ವೇಷದ ಕಥೆಯೇ 'ಸಲಾರ್'. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಿದೆ. ಮೊದಲ ಭಾಗಕ್ಕಿಂತ ಹಲವು ಪಟ್ಟು ದೊಡ್ಡದಾಗಿ ಸೀಕ್ವೆಲ್ ಕೊಟ್ಟಿಕೊಡುವ ಪ್ರಯತ್ನ ನಡೀತಿದೆ. ಚಿತ್ರದಲ್ಲಿ ವರದರಾಜ ಮನ್ನಾರ್ ತಂದೆ ಶಿವ ಮನ್ನಾರ್ ಹಾಗೂ ದೇವ ತಂದೆಯ ಕಥೆಯನ್ನು ಹೇಳುವ ಸಾಧ್ಯತೆಯಿದೆ. ಅದೇ ಕಾರಣಕ್ಕೆ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ.
ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರ್ 'ಸಲಾರ್' ಕಥೆ ಬಗ್ಗೆ ಇಂಟ್ರೆಸ್ಟಿಂಗ್ ಸಂಗತಿ ಬಿಚ್ಚಿಟ್ಟಿದ್ದಾರೆ. ಪ್ರಶಾಂತ್ ನೀಲ್ ನನಗೆ ಎಲ್ಲಾ ಕಥೆ ಹೇಳಿದ್ದಾರೆ ಎಂದು ಹೇಳಿ ಕುತೂಹಲ ಮೂಡಿಸಿದ್ದಾರೆ. ಜೊತೆಗೆ ಪ್ರಶಾಂತ್ ನೀಲ್ ಸಿನಿಮ್ಯಾಟಿಕ್ ಯೂನಿವರ್ಸ್ ಬಗ್ಗೆಯೂ ಸುಳಿವು ನೀಡಿದ್ದಾರೆ. ಸದ್ಯ ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಹುಟ್ಟಾಕ್ಕಿದೆ.

"ಶಿವ ಮನ್ನಾರ್ ಪಾತ್ರವನ್ನು ಇನ್ನಷ್ಟು ನೋಡಲು ಬಯಸುತ್ತೇನೆ" ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದರು. ಇದಕ್ಕೆ ಪೃಥ್ವಿರಾಜ್ ಸುಕುಮಾರನ್ ಸ್ವಾರಸ್ಯಕರವಾಗಿ ಪ್ರತಿಕ್ರಿಯಿಸಿದ್ದಾರೆ. ಶಿವ ಮನ್ನಾರ್ ಪಾತ್ರ ಕೇವಲ 'ಸಲಾರ್' ಮಾತ್ರವಲ್ಲದೇ ಮತ್ತೊಂದು ಪ್ರಪಂಚ(ಸಿನಿಮಾ)ದಲ್ಲಿ ಕೂಡ ಇರುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಈ ಮೂಲಕ ಪ್ರಶಾಂತ್ ನೀಲ್ ಮತ್ತೊಂದು ಸಿನಿಮಾ ಕತೆಯ ಜೊತೆ 'ಸಲಾರ್' ಕಥೆಯನ್ನು ಲಿಂಕ್ ಮಾಡುತ್ತಿದ್ದಾರೆ ಎನ್ನುವುದು ಗೊತ್ತಾಗುತ್ತಿದೆ.
'ಸಲಾರ್' ಶುರು ಆದಾಗಲೇ 'KGF' ಕಥೆಯ ಜೊತೆಗೆ ಲಿಂಕ್ ಇರುತ್ತದೆ ಎನ್ನುವ ಊಹಾಪೋಹ ಶುರುವಾಗಿತ್ತು. 'ಸಲಾರ್' ಹಾಗೂ 'ರಾಕಿಭಾಯ್' ಎದುರುಬದಿರಾದರೆ ಬಾಕ್ಸಾಫೀಸ್ ಶೇಕ್ ಆಗುತ್ತದೆ ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ಚಿತ್ರದಲ್ಲಿ ರಾಕಿಭಾಯ್ ಆಗಿ ಯಶ್ ಗೆಸ್ಟ್ ಅಪ್ಪಿಯರೆನ್ಸ್ ಮಾಡುತ್ತಾರೆ ಎನ್ನುವ ಕುತೂಹಲವಿತ್ತು. ಆದರೆ ಅದು ನಿಜವಾಗಲಿಲ್ಲ. ಎರಡೂ ಕಥೆಗಳ ಕಾಲಘಟ್ಟ ಬೇರೆ ಬೇರೆ. ಹಾಗಾಗಿ ಅದು ಸಾಧ್ಯವಾಗಲಿಲ್ಲ ಎಂದು ನೀಲ್ ಹೇಳಿದ್ದರು.
"ಪ್ರಶಾಂತ್ ನೀಲ್ ಸಂಪೂರ್ಣ ಕಥೆಯನ್ನು ನನಗೆ ಹೇಳಿದ್ದಾರೆ. ಶಿವ ಮನ್ನಾರ್ ಪಾತ್ರ ಅದರಲ್ಲಿ ಬಹಳ ಚೆನ್ನಾಗಿದೆ. ಯಾರೂ ಊಹಿಸದಂತಹ ಲಿಂಕ್ ಮತ್ತೊಂದು ಯೂನಿವರ್ಸ್ ಜೊತೆ ಇರುತ್ತದೆ' ಎಂದು ಪೃಥ್ವಿರಾಜ್ ಈ ಟ್ವೀಟ್ ಮಾಡಿದ್ದಾರೆ. ಇದನ್ನು ನೋಡಿ ಪ್ರಶಾಂತ್ ಯಾವ ಸಿನಿಮಾ ಜೊತೆಗೆ ಶಿವ ಮನ್ನಾರ್ ಪಾತ್ರ ಲಿಂಕ್ ಮಾಡುತ್ತಾರೆ ಎಂದು ತಲೆ ಕೆಡಿಸಿಕೊಂಡಿದ್ದಾರೆ.
ಪ್ರಶಾಂತ್ ನೀಲ್ ಸದ್ಯ 'KGF' ಸರಣಿ ಸಿನಿಮಾಗಳನ್ನು ಕಟ್ಟಿಕೊಟ್ಟಿದ್ದಾರೆ. 'KGF'-3 ಕಥೆ ಕೂಡ ಸಿದ್ಧವಾಗಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಮೂಡಿ ಬರುತ್ತದೆ ಎಂದಿದ್ದಾರೆ. ಮತ್ತೊಂದು ಕಡೆ ಜ್ಯೂ. ಎನ್‌ಟಿಆರ್ ಜೊತೆ ಸಿನಿಮಾ ಘೋಷಣೆ ಮಾಡಿದ್ದಾರೆ. ಆ ಚಿತ್ರವನ್ನು ಸದ್ಯಕ್ಕೆ NTR31 ಎಂದು ಕರೆಯಲಾಗುತ್ತದೆ. ಹಾಗಾಗಿ 'KGF'-3 ಅಥವಾ NTR31 ಸಿನಿಮಾ ಕಥೆಗೆ ಶಿವ ಮನ್ನಾರ್ ಪಾತ್ರಕ್ಕೂ ಲಿಂಕ್ ಇರುತ್ತಾ? ಎನ್ನುವ ಚರ್ಚೆ ನಡೀಯಿದೆ.


Click it and Unblock the Notifications










