Salaar: 'ಉಗ್ರಂ' ರೀಮೇಕ್ 'ಸಲಾರ್'? ಆ ಡೈಲಾಗ್ ಹೇಳಿ ಎಡವಟ್ಟು ಮಾಡಿದ್ರಾ ಪೃಥ್ವಿರಾಜ್?
ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಡಿಸೆಂಬರ್ 22ಕ್ಕೆ ಸಿನಿಮಾ ತೆರೆಗೆ ಬರಲಿದೆ. ಈ ಸಿನಿಮಾ ಸೆಟ್ಟೇರಿದ ದಿನದಿಂದಲೂ ಕತೆ ಬಗ್ಗೆ ಚರ್ಚೆ ನಡೀತಿದೆ. ಇದು 'ಉಗ್ರಂ' ರೀಮೆಕ್ ಎನ್ನುವ ವಾದವೂ ಇದೆ. ಆದರೆ ಚಿತ್ರತಂಡ ಅದನ್ನು ಒಪ್ಪಿಕೊಂಡಿಲ್ಲ.
'ಉಗ್ರಂ' ರೀಮೆಕ್ 'ಸಲಾರ್' ಎನ್ನುವ ಬಗ್ಗೆ ಭಾರೀ ಚರ್ಚೆ ನಡೀತಿದೆ. ಕೆಲವರು ಕಥೆ ಅದೇ. ಆದರೆ ದೊಡ್ಡಮಟ್ಟದಲ್ಲಿ ಈ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ಎರಡು ಭಾಗಗಳಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದೆ ಎನ್ನುತ್ತಿದ್ದಾರೆ. ಆದರೆ ಪ್ರಭಾಸ್ ಅಭಿಮಾನಿಗಳು ಇದನ್ನು ಒಪ್ಪಲು ಸಿದ್ಧರಿಲ್ಲ. ಯಂಗ್ ರೆಬಲ್ ಸ್ಟಾರ್ ರೀಮೆಕ್ ಸಿನಿಮಾ ಮಾಡಲ್ಲ ಎನ್ನುವುದು ಅವರ ವಾದ.

ನಿರ್ದೇಶಕ ಪ್ರಶಾಂತ್ ನೀಲ್ 'ಉಗ್ರಂ' ಸಿನಿಮಾ ಕಟ್ಟಿಕೊಟ್ಟು ಗೆದ್ದಿದ್ದರು. ಚಿತ್ರದಲ್ಲಿ ಶ್ರೀಮುರಳಿ ಹೀರೊ ಆಗಿ ಅಬ್ಬರಿಸಿದ್ದರು. ಬಳಿಕ ಪ್ರಶಾಂತ್ ನೀಲ್ 'KGF' ಸರಣಿ ತೆರೆಗೆ ತಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದರು. ಬಳಿಕ 'ಸಲಾರ್' ಸಿನಿಮಾ ಕೈಗೆತ್ತಿಕೊಂಡಿದ್ದರು. ಈ ಹಿಂದೆ ಸಂಗೀತ ನಿರ್ದೇಶಕ ರವಿ ಬಸ್ರೂರು ಕೂಡ 'ಉಗ್ರಂ' ರೀಮೆಕ್ 'ಸಲಾರ್' ಎನ್ನುವಂತೆ ಮಾತನಾಡಿದ್ದರು. ಇದೀಗ ಪ್ರಥ್ವಿರಾಜ್ ಸುಕುಮಾರನ್ ಮಾಡಿರುವ ಟ್ವೀಟ್ ಇದಕ್ಕೆ ಮತ್ತಷ್ಟು ಇಂಬು ಕೊಡುತ್ತಿದೆ.
ಬಾಹುಬಲಿ ಪ್ರಭಾಸ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸ್ಪೆಷಲ್ ಪೋಸ್ಟರ್ ಮೂಲಕ 'ಸಲಾರ್' ಚಿತ್ರತಂಡ ಪ್ರಭಾಸ್‌ಗೆ ಶುಭಾಶಯ ಕೋರಿದೆ. ಈ ಪೋಸ್ಟರ್ ಹಂಚಿಕೊಂಡಿರುವ ಮಲಯಾಳಂ ನಟ ಪೃಥ್ವಿರಾಜ್ ಶುಭ ಕೋರಿದ್ದಾರೆ. ಆದರೆ ಈ ಪೋಸ್ಟ್‌ನಲ್ಲಿ ಬರೆದಿರುವ ಡೈಲಾಗ್ 'ಉಗ್ರಂ' ರೀಮೆಕ್ ಸಲಾರ್ ಎನ್ನುವುದನ್ನು ಸಾರಿ ಸಾರಿ ಹೇಳುತ್ತಿದೆ. ಚಿತ್ರದಲ್ಲಿ ಶ್ರೀಮುರಳಿ ಮಾಡಿದ್ದ ಅಗಸ್ತ್ಯ ಪಾತ್ರವನ್ನು ಪ್ರಭಾಸ್ ಹಾಗೂ ತಿಲಕ್ ಮಾಡಿದ್ದ ಬಾಲ ಪಾತ್ರದಲ್ಲಿ ಪೃಥ್ವಿರಾಜ್ ನಟಿಸುತ್ತಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ. ಅಗಸ್ತ್ಯನ ಪಾತ್ರಕ್ಕೂ 'ಸಲಾರ್' ಸಿನಿಮಾ ಟೈಟಲ್ ಅರ್ಥಕ್ಕೂ ನಂಟಿದೆ. ಹಾಗಾಗಿ ಈ ಚರ್ಚೆ ಹೆಚ್ಚಾಗಿದೆ.
'ಉಗ್ರಂ' ಚಿತ್ರದ ಕತೆಯಲ್ಲಿ ಭೂಗತ ಲೋಕದಲ್ಲಿ ಅಂಬೆಗಾಲು ಇಡುತ್ತಿರುವ ಮತ್ತು ತನ್ನ ಬಾಲ್ಯ ಸ್ನೇಹಿತ ಬಾಲ (ತಿಲಕ್) ನಾಯಕ ಅಗಸ್ತ್ಯ(ಶ್ರೀಮುರಳಿ)ನ ಸಹಾಯಹಸ್ತ ಚಾಚುತ್ತಾನೆ. ಸದ್ಯ ಪೃಥ್ವಿರಾಜ್ ಬರೆದಿರುವ ಡೈಲಾಗ್‌ಗೂ ಕೂಡ ಇದಕ್ಕೆ ಹತ್ತಿರವಾಗಿದೆ. "ನೀವು ನಿಮ್ಮ ಸೈನ್ಯವನ್ನು ಸಮರಕ್ಕೆ ಕರೆತಂದಿದ್ದೀರಿ.. ನಾನು ಅವನನ್ನು ಕರೆತಂದಿದ್ದೇನೆ" - ವರ್ಧರಾಜ ಮನ್ನಾರ್" ಎಂದು ಪೃಥ್ವಿರಾಜ್ ಚಿತ್ರದಲ್ಲಿ ತಮ್ಮ ಡೈಲಾಗ್ ಹೇಳಿದ್ದಾರೆ. ಪೃಥ್ವಿರಾಜ್ ಡೈಲಾಗ್ 'ಉಗ್ರಂ' ಚಿತ್ರದ ಪಾತ್ರಗಳನ್ನು ನೆನಪಿಸುತ್ತಿದೆ. ಹಾಗಾಗಿ ಎರಡೂ ಸಿನಿಮಾಗಳ ಕತೆ ಒಂದೇ ಎನ್ನಲಾಗ್ತಿದೆ.

ಇತ್ತೀಚೆಗೆ 'ಉಗ್ರಂ' ಹಿಂದಿ ವರ್ಷನ್ ಯುಟ್ಯೂಬ್ ಇಂದ ತೆಗೆಯಲಾಗಿತ್ತು. ಆಗ ಕೂಡ 'ಉಗ್ರಂ' ರೀಮೇಕ್ 'ಸಲಾರ್' ಎನ್ನುವ ಚರ್ಚೆ ನಡೆದಿತ್ತು. ಇನ್ನು ಪೋಸ್ಟರ್‌ಗಳಲ್ಲಿರೋ ಕೆಲ ವಿಚಾರಗಳನ್ನು ಗಮನಿಸಿ 'ಉಗ್ರಂ' ಚಿತ್ರವನ್ನೇ ಈ ಭಾರೀ ದೊಡ್ಟಮಟ್ಟದಲ್ಲಿ ಪ್ರಶಾಂತ್ ನೀಲ್ ಕೊಟ್ಟಿಕೊಡುತ್ತಿದ್ದಾರೆ. 'ಉಗ್ರಂ' ಸಿನಿಮಾ ಮಾಡುವಾಗ ಬಜೆಟ್ ಇರಲಿಲ್ಲ. ಸಾಕಷ್ಟು ಕಾಂಪ್ರಮೈಸ್ ಮಾಡಿಕೊಂಡಿದ್ದೆ ಎಂದು ನಿರ್ದೇಶಕರು ಹೇಳಿದ್ದರು. ಆದರೆ ಈ ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡ ಬಜೆಟ್‌ನಲ್ಲಿ ತಾವು ಅಂದುಕೊಂಡಿದ್ದನ್ನೆಲ್ಲಾ 'ಸಲಾರ್' ಚಿತ್ರದಲ್ಲಿ ಮಾಡುತ್ತಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ.
'KGF' ಸರಣಿಗೆ ಕೆಲಸ ಮಾಡಿದ್ದ ತಂಡ 'ಸಲಾರ್' ಚಿತ್ರಕ್ಕೂ ಕೆಲಸ ಮಾಡ್ತಿದೆ. ಚಿತ್ರದಲ್ಲಿ ಶ್ರುತಿ ಹಾಸನ್ ನಾಯಕಿಯಾಗಿ ನಟಿಸಿದ್ದಾರೆ. ಜಗಪತಿ ಬಾಬು, ದೇವರಾಜ್, ಭಜರಂಗಿ ಲೋಕಿ ಸೇರಿದಂತೆ ದೊಡ್ಡ ತಾರಾಗಣ 'ಸಲಾರ್' ಚಿತ್ರದಲ್ಲಿದೆ. 'ಸಲಾರ್' ಚಿತ್ರವನ್ನು 2 ಭಾಗಗಳಾಗಿ ತೆರೆಗೆ ತರುತ್ತಿದ್ದಾರೆ. ಈ ಹಿಂದೆ 'ಉಗ್ರಂ' ಸೀಕ್ವೆಲ್‌ಗೆ ನೀಲ್ ಹಾಗೂ ಶ್ರೀಮುರಳಿ ಪ್ರಯತ್ನಿಸಿದ್ದರು. 'ಉಗ್ರಂ ವೀರಂ' ಟೈಟಲ್ ಎನ್ನಲಾಗಿತ್ತು. ಅದೇ 'ಉಗ್ರಂ ವೀರಂ' ಕತೆನೇ 'ಸಲಾರ್' ಪಾರ್ಟ್-2 ಆಗಿರುತ್ತಾ? ಎನ್ನುವ ಲೆಕ್ಕಾಚಾರ ಕೆಲವರದ್ದು.


Click it and Unblock the Notifications











