For Quick Alerts
  ALLOW NOTIFICATIONS  
  For Daily Alerts

  ಪೃಥ್ವಿರಾಜ್ - ಪ್ರಶಾಂತ್ ನೀಲ್ ಭೇಟಿ ಗುಟ್ಟೇನು? 'ಸಲಾರ್' ಸಮಸ್ಯೆಯೇನು?

  |

  'ಕೆಜಿಎಫ್ 2' ಸಿನಿಮಾ ರಿಲೀಸ್ ಆಗಿದ್ದೂ ಆಯ್ತು. ಬಾಕ್ಸಾಫೀಸ್‌ನಲ್ಲಿ ಸಾವಿರ ಕೋಟಿ ದೋಚಿದ್ದೂ ಆಯ್ತು. ಈಗ ಪ್ರಶಾಂತ್ ನೀಲ್ 'ಸಲಾರ್‌' ಸಿನಿಮಾ ಕಡೆ ಮಗನ ಹರಿಸಿದ್ದಾರೆ. ಪ್ರಭಾಸ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

  ಇದೇ ಸಿನಿಮಾದಲ್ಲಿ ಮಲಯಾಳಂ ನಟ ಪೃಥ್ವಿರಾಜ್‌ ಸುಕುಮಾರನ್ ಕೂಡ ನಟಿಸುತ್ತಿದ್ದಾರೆ ಎಂದು ಹಲವು ದಿನಗಳ ಹಿಂದೆನೇ ರಿವೀಲ್ ಆಗಿತ್ತು. ಆದ್ರೀಗ ಪೃಥ್ವಿರಾಜ್ ದಿಢೀರನೇ ನಿರ್ದೇಶಕ ಪ್ರಶಾಂತ್ ನೀಲ್ ಅನ್ನು ಭೇಟಿ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

  ಬಲವಂತಕ್ಕೆ 'ಕೆಜಿಎಫ್ 3' ಮಾಡುತ್ತಿದ್ದಾರೆ ಪ್ರಶಾಂತ್ ನೀಲ್: ಒತ್ತಡಕ್ಕೆ ಕಾರಣವೇನು?ಬಲವಂತಕ್ಕೆ 'ಕೆಜಿಎಫ್ 3' ಮಾಡುತ್ತಿದ್ದಾರೆ ಪ್ರಶಾಂತ್ ನೀಲ್: ಒತ್ತಡಕ್ಕೆ ಕಾರಣವೇನು?

  ಪೃಥ್ವಿರಾಜ್‌ ಸುಕುಮಾರನ್ ಟಾಲಿವುಡ್‌ನ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸುತ್ತಾರಾ? ಇಲ್ವಾ ಅನ್ನುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಪೃಥ್ವಿರಾಜ್ ಕನ್ನಡ ಹಾಗೂ ತೆಲುಗಿನ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಕೇರಳದಲ್ಲಿ ರಿಲೀಸ್ ಮಾಡಿ ಗೆದ್ದಿದ್ದಾರೆ. ಇನ್ನೊಂದು ಕಡೆ ಪೃಥ್ವಿರಾಜ್ ಮಲಯಾಳಂನ ಜನಪ್ರಿಯ ನಟ ಕೂಡ ಹೌದು. ಈ ಕಾರಣಕ್ಕೆ ಪ್ರಶಾಂತ್‌ ನೀಲ್ ಪ್ರಮುಖ ಪಾತ್ರದಲ್ಲಿ ನಟಿಸುವಂತೆ ಪೃಥ್ವಿರಾಜ್‌ ಸುಕುಮಾರ್‌ಗೆ ಕೇಳಿಕೊಂಡಿದ್ದರು. ಆದ್ರೀಗ ಇಬ್ಬರ ದಿಢೀರ್ ಭೇಟಿ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

  ಪೃಥ್ವಿರಾಜ್-ಪ್ರಶಾಂತ್ ಭೇಟಿಯಾಗಿದ್ದೇಕೆ?

  ಪೃಥ್ವಿರಾಜ್-ಪ್ರಶಾಂತ್ ಭೇಟಿಯಾಗಿದ್ದೇಕೆ?

  ಪೃಥ್ವಿರಾಜ್ ಸುಕುಮಾರನ್ ತೆಲುಗಿನ ಪ್ಯಾನ್ ಇಂಡಿಯಾ ಸಿನಿಮಾ 'ಸಲಾರ್‌'ನಲ್ಲಿ ನಟಿಸಲಿದ್ದಾರೆ ಎಂದು ಸುದ್ದಿಯಾಗಿತ್ತು. ಆದ್ರೀಗ ಪೃಥ್ವಿರಾಜ್ ಈ ಬಗ್ಗೆ ಖಚಿತ ಮಾಹಿತಿಯನ್ನು ನೀಡಿಲ್ಲ. 'ಸಲಾರ್' ಸಿನಿಮಾದಲ್ಲಿ ನಟಿಸುವುದಕ್ಕೆ ಡೇಟ್ ಸಮಸ್ಯೆಯಾಗುತ್ತಿದೆ ಎಂದು ಹೇಳಲಾಗುತ್ತಿದೆ. ಈ ಕಾರಣಕ್ಕೆ ಪೃಥ್ವಿರಾಜ್ ಇತ್ತೀಚೆಗೆ ನಿರ್ದೇಶಕ ಪ್ರಶಾಂತ್ ನೀಲ್‌ರನ್ನು ಭೇಟಿ ಮಾಡಿ, ಸಮಸ್ಯೆಯನ್ನು ವಿವರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

  ದಾಖಲೆ ಬರೆದ 'ಕೆಜಿಎಫ್ 2' ಸಿನಿಮಾ ಫೈನಲ್ ಬಾಕ್ಸಾಫೀಸ್‌ ಕಲೆಕ್ಷನ್ ರಿಪೋರ್ಟ್ ಎಷ್ಟು?ದಾಖಲೆ ಬರೆದ 'ಕೆಜಿಎಫ್ 2' ಸಿನಿಮಾ ಫೈನಲ್ ಬಾಕ್ಸಾಫೀಸ್‌ ಕಲೆಕ್ಷನ್ ರಿಪೋರ್ಟ್ ಎಷ್ಟು?

  ಸಲಾರ್' ಸಿನಿಮಾದಲ್ಲಿ ನಟಿಸುತ್ತಾರಾ?

  ಸಲಾರ್' ಸಿನಿಮಾದಲ್ಲಿ ನಟಿಸುತ್ತಾರಾ?

  ಪೃಥ್ವಿರಾಜ್‌ ಸುಕುಮಾರನ್ 'ಸಲಾರ್' ಸಿನಿಮಾದ ಡೇಟ್ ವಿಚಾರವಾಗಿ ಪ್ರಶಾಂತ್ ನೀಲ್ ಭೇಟಿ ಮಾಡಿ ಚರ್ಚಿಸಿದ್ದಾರೆ ಎನ್ನಲಾಗಿದೆ. ಮಲಯಾಳಂ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಪೃಥ್ವಿರಾಜ್ ಸೂಪರ್ ಆಕ್ಷನ್ ಸಿನಿಮಾಗೆ ಡೇಟ್ ಸಮಸ್ಯೆ ಎದುರಾಗಿರುವ ಬಗ್ಗೆ ಚರ್ಚಿಸಿದ್ದಾರೆ. ಆದರೆ, ಪ್ರಶಾಂತ್ ನೀಲ್ ಮಲಯಾಳಂ ನಟನಿಗೆ ಫ್ರೀ ಡೇಟ್ ಕೊಟ್ಟಿದ್ದಾರಾ? ಇಲ್ಲ ಪೃಥ್ವಿರಾಜ್ ಸಿನಿಮಾದಿಂದ ಹೊರಬಂದಿದ್ದಾರಾ? ಅನ್ನೋದು ಇನ್ನಷ್ಟೇ ತಿಳಿಯಬೇಕಿದೆ.

  ಡೇಟ್ ಸಿಕ್ಕರೆ ಮಾತ್ರ 'ಸಲಾರ್'!

  ಡೇಟ್ ಸಿಕ್ಕರೆ ಮಾತ್ರ 'ಸಲಾರ್'!

  ಪೃಥ್ವಿರಾಜ್ ಸುಕುಮಾರನ್ ತಮ್ಮ ಹೊಸ ಸಿನಿಮಾ 'ಕಡುವ' ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇದೂ ಕೂಡ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದರಿಂದ ಪತ್ರಿಕಾಗೋಷ್ಟಿಯಲ್ಲಿ ಭಾಗಿಯಾಗಿದ್ದರು. ಈ ವೇಳೆ "ಸಲಾರ್ ಸಿನಿಮಾದಲ್ಲಿ ನಟಿಸುವುದಕ್ಕೆ ಕಾತುರನಾಗಿದ್ದೇನೆ. ಆದರೆ, ಡೇಟ್ ಹೊಂದಾಣಿಕೆಯಾಗಬೇಕಿದೆ. ಇದೇ ವಿಚಾರವಾಗಿ ಪ್ರಶಾಂತ್ ನೀಲ್ ಅವರನ್ನು ಭೇಟಿ ಮಾಡಿ ಚರ್ಚೆ ಮಾಡುವೆ" ಎಂದು ಹೇಳಿದ್ದರು.

  ಗೋಲ್ಡ್ ಮಾಫಿಯಾ ಸ್ಟೋರಿ ಹೇಳಿದ್ದ 'ಕೆಜಿಎಫ್ 2': 'ಸಲಾರ್' ಕಥೆಯೇನು?ಗೋಲ್ಡ್ ಮಾಫಿಯಾ ಸ್ಟೋರಿ ಹೇಳಿದ್ದ 'ಕೆಜಿಎಫ್ 2': 'ಸಲಾರ್' ಕಥೆಯೇನು?

  ಪೃಥ್ವಿರಾಜ್‌ಗೆ ಪ್ರಭಾಸ್ ಕರೆ

  ಪೃಥ್ವಿರಾಜ್‌ಗೆ ಪ್ರಭಾಸ್ ಕರೆ

  'ಸಲಾರ್' ಸಿನಿಮಾದಲ್ಲಿ ಪೃಥ್ವಿರಾಜ್ ಸುಕುಮಾರನ್ ನಟಿಸುತ್ತಿರುವ ಬಗ್ಗೆ ಡಾರ್ಲಿಂಗ್ ಪ್ರಭಾಸ್ ಮೊದಲ ಬಾರಿಗೆ ರಿವೀಲ್ ಮಾಡಿದ್ದರು. ಕೆಲವು ದಿನಗಳ ಹಿಂದೆ ಸ್ವತ: ಪ್ರಭಾಸ್ ಪೋನ್ ಮಾಡಿ ಈ ಸಿನಿಮಾದಲ್ಲಿ ನೀವು ನಟಿಸಲೇ ಬೇಕು ಎಂದು ಹೇಳಿದ್ದಾರೆ ಎನ್ನಲಾಗಿದೆ. ಹೀಗಾಗಿ ಪೃಥ್ವಿರಾಜ್ ಸುಕುಮಾರ್ 'ಸಲಾರ್' ಸಿನಿಮಾದಲ್ಲಿ ನಟಿಸುತ್ತಾರಾ? ಇಲ್ಲವಾ ಅನ್ನೋದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

  English summary
  Prithviraj Sukumaran will be meeting with Prashanth Neel for Date Allocation For Prabhas Salaar, Know More.
  Sunday, June 26, 2022, 15:10
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X