For Quick Alerts
  ALLOW NOTIFICATIONS  
  For Daily Alerts

  ತರುಣ್ ಜೊತೆ ಪ್ರೀತಿ ಮತ್ತು ದುಬಾರಿ ಕಾರು ಉಡುಗೊರೆ: ಸ್ಪಷ್ಟನೆ ಕೊಟ್ಟ ಪ್ರಿಯಾಮಣಿ

  |

  ಕನ್ನಡತಿ, ನಟಿ ಪ್ರಿಯಾಮಣಿ ಈಗ ಮದುವೆಯಾಗಿ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ. ಮದುವೆ ನಂತರ ನಟನೆಯನ್ನೇನೂ ಬಿಡದ ಪ್ರಿಯಾಮಣಿ ಈಗಲೂ ದಕ್ಷಿಣ ಭಾರತದ ವಿವಿಧ ಭಾಷೆಗಳ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

  ಆದರೆ ನಟಿ ಪ್ರಿಯಾಮಣಿ ಬಗ್ಗೆ ಬಹು ವರ್ಷದ ಹಿಂದೊಮ್ಮೆ ಗಾಳಿಸುದ್ದಿಯೊಂದು ತುಸು ಜೋರಾಗಿಯೇ ಹರಿದಾಡಿತ್ತು. ತೆಲುಗಿನ ಯುವ ನಟನೊಂದಿಗೆ ಪ್ರೇಮದಲ್ಲಿದ್ದಾರೆ, ಇಬ್ಬರೂ ಮದುವೆ ಆಗಲಿದ್ದಾರೆ ಎಂದೆಲ್ಲಾ ವರದಿಗಳು ಪ್ರಕಟವಾಗಿದ್ದವು.

  ಆದರೆ ಅದಾವುದೂ ನಡೆಯಲಿಲ್ಲ, ಮತ್ತು ಆಗ ಹರಡಿದ್ದ ಗಾಳಿ ಸುದ್ದಿಗಳ ಬಗ್ಗೆ ಇತ್ತೀಚಿನ ಸಂದರ್ಶನವೊಂದರಲ್ಲಿ ನಟಿ ಪ್ರಿಯಾಮಣಿ ಸ್ಪಷ್ಟನೆ ನೀಡಿದ್ದಾರೆ. ಆ ರೂಮರ್‌ಗಳ ತಮ್ಮ ಮೇಲೆ ಬೀರಿದ ಪ್ರಭಾವ, ಅದರಿಂದ ತಾವು ಕಲಿತ ಪಾಠದ ಬಗ್ಗೆಯೂ ಪ್ರಿಯಾಮಣಿ ಮಾತನಾಡಿದ್ದಾರೆ.

  ನವವಸಂತ ಸಿನಿಮಾದಲ್ಲಿ ಒಟ್ಟಿಗೆ ನಟನೆ

  ನವವಸಂತ ಸಿನಿಮಾದಲ್ಲಿ ಒಟ್ಟಿಗೆ ನಟನೆ

  ತೆಲುಗಿನಲ್ಲಿ ಒಂದು ಕಾಲದ ರೊಮ್ಯಾಂಟಿಕ್ ನಟ ತರುಣ್ ಜೊತೆಗೆ ಪ್ರಿಯಾಮಣಿ ಹೆಸರು ತಳುಕು ಹಾಕಿಕೊಂಡಿತ್ತು. ಇಬ್ಬರೂ ಒಟ್ಟಿಗೆ 'ನವವಸಂತಂ' ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾದ ನಂತರ ಇಬ್ಬರ ಬಗ್ಗೆ ರೂಮರ್ ಹಬ್ಬಿತ್ತು.

  ಪ್ರಿಯಾಮಣಿಗೆ ದುಬಾರಿ ಕಾರು ನೀಡಿದ್ದಾರೆಂದು ಸುದ್ದಿ

  ಪ್ರಿಯಾಮಣಿಗೆ ದುಬಾರಿ ಕಾರು ನೀಡಿದ್ದಾರೆಂದು ಸುದ್ದಿ

  ಪ್ರಿಯಾಮಣಿ ಹಾಗೂ ತರುಣ್ ಪ್ರೀತಿಸುತ್ತಿದ್ದಾರೆ. ಇಬ್ಬರೂ ಶೀಘ್ರದಲ್ಲಿಯೇ ಮದುವೆ ಆಗಲಿದ್ದಾರೆ. ತರುಣ್, ಪ್ರಿಯಾಮಣಿಗೆ ಭಾರಿ ದುಬಾರಿ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದೆಲ್ಲಾ ಸುದ್ದಿಗಳು ಕೆಲವು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು.

  ವರದಿಗಾರನನ್ನು ಬೈದಿದ್ದ ಪ್ರಿಯಾಮಣಿ

  ವರದಿಗಾರನನ್ನು ಬೈದಿದ್ದ ಪ್ರಿಯಾಮಣಿ

  ಈ ಬಗ್ಗೆ ವರದಿಗಾರರೊಬ್ಬರು ಸ್ಪಷ್ಟನೆ ಪಡೆಯಲು ಪ್ರಿಯಾಮಣಿಗೆ ಕರೆ ಮಾಡಿದ್ದಾಗ, ಪ್ರಿಯಾಮಣಿ ಆ ವರದಿಗಾರನ ಮೇಲೆ ಹಾಗೂ ಸುಳ್ಳು ಸುದ್ದಿ ಬರೆದ ಪತ್ರಿಕೆಗಳ ಮೇಲೆ ಕಿರುಚಾಡಿ, ಬೈದಿದ್ದರಂತೆ. ಆ ಸುಳ್ಳು ಸುದ್ದಿಗಳಿಂದ ಮನಸ್ಸಿಗೆ ತೀವ್ರ ಘಾಸಿಯಾಗಿತ್ತು ಎಂದಿದ್ದಾರೆ ಪ್ರಿಯಾಮಣಿ.

  ತಂದೆ ನೀಡಿದ ಸಲಹೆ ಪಾಲಿಸುತ್ತಿರುವ ಪ್ರಿಯಾಮಣಿ

  ತಂದೆ ನೀಡಿದ ಸಲಹೆ ಪಾಲಿಸುತ್ತಿರುವ ಪ್ರಿಯಾಮಣಿ

  ನಡೆದ ಘಟನೆಯನ್ನು ಪ್ರಿಯಾಮಣಿ ತಮ್ಮ ತಂದೆಗೆ ವಿವರಿಸಿದಾಗ, ಇಂಥಹ ಸುದ್ದಿಗಳಿಗೆ ಪ್ರತಿಕ್ರಿಯೆ ನೀಡಿದರೆ ಅದು ಬೆಳೆಯುತ್ತಾ ಹೋಗುತ್ತದೆ, ಹಾಗಾಗಿ ಇಂಥಹಾ ಸುದ್ದಿಗಳಿಗೆ ಪ್ರತಿಕ್ರಿಯೆ ನೀಡಬಾರದು ಎಂದರಂತೆ. ಆಗಿನಿಂದಲೂ ತಮ್ಮ ಬಗ್ಗೆ ಯಾವುದೇ ರೂಮರ್ ಪ್ರಕಟವಾದರೂ ಪ್ರತಿಕ್ರಿಯಿಸುವುದಿಲ್ಲವಂತೆ ಪ್ರಿಯಾಮಣಿ.

  ಗೊಳಾಡುತ್ತಿದ್ದಾರೆ ಒಂದು ಕಾಲದ ಸ್ಟಾರ್ ನಟ | Filmibeat Kannada
  ಹಲವು ಸಿನಿಮಾಗಳಲ್ಲಿ ನಟಿಸುತ್ತಿರುವ ಪ್ರಿಯಾಮಣಿ

  ಹಲವು ಸಿನಿಮಾಗಳಲ್ಲಿ ನಟಿಸುತ್ತಿರುವ ಪ್ರಿಯಾಮಣಿ

  2017 ರಲ್ಲಿ ಮಸ್ತಾನ್ ರಾಜ್ ಎಂಬುವರನ್ನು ಪ್ರಿಯಾಮಣಿ ವಿವಾಹವಾಗಿದ್ದಾರೆ. ಮದುವೆ ನಂತರವೂ ನಟನೆ ಮುಂದುವರೆಸಿರುವ ಪ್ರಿಯಾಮಣಿ, ತೆಲುಗಿನಲ್ಲಿ ವೆಂಕಟೇಶ್ ಜೊತೆಗೆ ನಾರಪ್ಪ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅಂಗುಲಿಕಾ, ಸೈನೈಡ್, ಪೇಂಟಿಂಗ್ ಲೈಫ್, ಪಪ್ಪಾ, ಮೈದಾನ್, ವಿರಾಟ ಪರ್ವಂ, ಸಿರಿವೆನ್ನೆಲ, ಖೈಮರಾ, ಕಾದಲ್ ಮುದಿಚು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

  English summary
  Actress Priyamani talked about rumours spreaded about her and actor Tarun long ago.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X