ಮಹೇಶ್ ಬಾಬುಗಾಗಿ ಹಾಲಿವುಡ್ ನಾಯಕಿಯನ್ನು ಕರೆತಂದ ರಾಜಮೌಳಿ, ಎಲ್ಲಿಗೆ ಬಂತು SSMB29..?
ರಾಜಮೌಳಿ ಚಿತ್ರ ಎಂದರೆ ಅಲ್ಲಿ ದುಬಾರಿ, ರಾಯಲ್ಲು, ವೈಭವ ಎಲ್ಲವೂ ನಿರೀಕ್ಷೆಗೂ ಮೀರಿ ಹೆಚ್ಚಾಗಿರುತ್ತೆ. ಇದು ಬಾಹುಬಲಿ, ಮಗಧೀರ ಮತ್ತು ಆರ್.ಆರ್.ಆರ್ ಚಿತ್ರಗಳ ಮೂಲಕ ಈಗಾಗಲೇ ರುಜುವಾತಾಗಿದೆ. ಈ ಸಾಲಿಗೆ ಈಗ ರಾಜಮೌಳಿ ನಿರ್ದೇಶನದಲ್ಲಿ ಸಿದ್ಧವಾಗಲಿರುವ , ಮಹೇಶ್ ಬಾಬು ನಾಯಕನಾಗಿ ಅಭಿನಯಿಸಲಿರುವ ಮುಂದಿನ ಚಿತ್ರ ಕೂಡ ಸೇರಿಕೊಳ್ಳುವ ಎಲ್ಲ ಲಕ್ಷಣ ಕಂಡು ಬರುತ್ತಿವೆ.
ಹೌದು, ಆರಂಭಕ್ಕೂ ಮುನ್ನವೇ ನಾನಾ ಕಾರಣಗಳಿಂದ ಸುದ್ದಿಯಾಗುತ್ತಲೇ ಬಂದ ಮಹೇಶ್ ಬಾಬು ಅಭಿನಯದ ಈ 29ನೇ ಚಿತ್ರ ನೂರಲ್ಲ, ಇನ್ನೂರಲ್ಲ.. ಬರೋಬ್ಬರಿ ಒಂದು ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ ಎನ್ನುವ ಸುದ್ದಿ ಹಿಂದೆ ಗುಲ್ಲಾಗಿತ್ತು. ಈ ಸುದ್ದಿಯನ್ನು ಕೇಳಿಯೇ ಚಿತ್ರರಂಗದ ಅನೇಕರು ಬೆಚ್ಚಿ ಬಿದ್ದಿದ್ದರು.

ಇನ್ನು ದೇಶ ವಿದೇಶಗಳಲ್ಲಿ ಸಾಗುವ ಕಥೆಯನ್ನು ಹೇಳಲು ಮುಂದಾಗಿರುವ ರಾಜಮೌಳಿ ಈ ಬಾರಿ ಹಾಲಿವುಡ್ ಕಲಾವಿದರು ಮತ್ತು ತಂತ್ರಜ್ಞರ ಜೊತೆ ಕೈ ಜೋಡಿಸಲಿದ್ದಾರೆ, ಇಷ್ಟೇ ಅಲ್ಲ ಈ ಚಿತ್ರವನ್ನು ಕೂಡ ಎರಡು ಭಾಗದಲ್ಲಿ ತೆರೆಗೆ ತರಲಿದ್ದಾರೆ ಎನ್ನುವ ಮಾತು ಕೂಡ ಕೇಳಿ ಬಂದಿತ್ತು. ಈ ಕಾರಣಕ್ಕೆ ಇದು ಭಾರತದ ಅತ್ಯಂತ ದುಬಾರಿ ಚಿತ್ರವಾಗಲಿದೆ ಎಂದು ಚಿತ್ರತಂಡ ಸಬೂಬು ನೀಡಿತ್ತು. ಇದೀಗ ಈ ಸುದ್ದಿಗಳು ಒಂದೊಂದಾಗಿಯೇ ನಿಜವಾಗುತ್ತಿವೆ.
ಹೌದು, 2025ರ ಏಪ್ರಿಲ್‌ನಲ್ಲಿ ಚಿತ್ರದ ಚಿತ್ರೀಕರಣವನ್ನು ಶುರು ಮಾಡಲು ಸಿದ್ಧತೆಯನ್ನು ಮಾಡಿಕೊಳ್ಳುತ್ತಿರುವ ರಾಜಮೌಳಿ ಸದ್ಯ ಮಹೇಶ್ ಬಾಬುಗೆ ನಾಯಕಿಯನ್ನಾಗಿ ಪ್ರಿಯಾಂಕ ಚೋಪ್ರಾ ಅವರನ್ನು ಆಯ್ಕೆ ಮಾಡಿದ್ದಾರೆ. ಹೀಗೊಂದು ಸುದ್ದಿ ಸದ್ಯ ಹೈದ್ರಾಬಾದ್‌ನಲ್ಲಿ ಕೇಳಿ ಬರುತ್ತಿದೆ. ಚಿತ್ರರಂಗದಲ್ಲಿ ಈ ಸುದ್ದಿ ಸಂಚಲನವನ್ನು ಸೃಷ್ಟಿಸಿದೆ.
ಯಾಕೆಂದರೆ, ಎಲ್ಲರಿಗೆ ಗೊತ್ತಿರುವಂತೆ ಪ್ರಿಯಾಂಕ ಚೋಪ್ರಾ ಈಗ ಬಾಲಿವುಡ್ ಹೀರೋಯಿನ್ ಅಲ್ಲ. ಬದಲಿಗೆ ಹಾಲಿವುಡ್‌ನ ಆಕ್ಷನ್ ಕ್ವೀನ್. ನಿಕ್ ಜೋನಾಸ್ ಜೊತೆ ಮದುವೆಯಾದ ನಂತರ ಬಾಲಿವುಡ್ ಮತ್ತು ಭಾರತ ಎರಡನ್ನೂ ಪ್ರಿಯಾಂಕ ತೊರೆದು ವರ್ಷಗಳೇ ಆಗಿವೆ. ಇದಕ್ಕೆ ಪುರಾವೆ ಎನ್ನುವಂತೆ ಕಳೆದ ಆರು ವರ್ಷಗಳಲ್ಲಿ ಪ್ರಿಯಾಂಕ ಚೋಪ್ರಾ ಒಂದೇ ಒಂದು ಭಾರತದ ಚಿತ್ರವನ್ನು ಒಪ್ಪಿಕೊಂಡಿಲ್ಲ. ಪ್ರಿಯಾಂಕ ಚೋಪ್ರಾ ಅವರನ್ನು ಮರಳಿ ಕರೆತರುವ ಪ್ರಯತ್ನವನ್ನು ಬಾಲಿವುಡ್‌ನಲ್ಲಿ ಅನೇಕರು ಮಾಡಿದಾರಾದರೂ ಯಾರ ಪ್ರಯತ್ನ ಕೈಗೂಡಲಿಲ್ಲ.
ಹೀಗಿರುವಾಗ ರಾಜಮೌಳಿ ತಮ್ಮ ಚಿತ್ರಕ್ಕೆ ಪ್ರಿಯಾಂಕ ಚೋಪ್ರಾ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ. ಹಾಗೊಂದು ವೇಳೆ ಈ ಸುದ್ದಿ ನಿಜಾ ಆಗಿದ್ದೇ ಆದಲ್ಲಿ ಆರು ವರ್ಷಗಳ ನಂತರ ಪ್ರಿಯಾಂಕ ಚೋಪ್ರಾ ಭಾರತೀಯ ಚಿತ್ರವೊಂದರಲ್ಲಿ ಕಾಣಿಸಿಕೊಂಡಂತೆ ಆಗಲಿದೆ. ಹಾಲಿವುಡ್‌ನ ಸೂಪರ್ ಸ್ಟಾರ್ ಪ್ರಿಯಾಂಕ ಚೋಪ್ರಾ ಅವರನ್ನು ಮತ್ತೆ ತಾಯ್ನಾಡಿಗೆ ಕರೆತಂದ ಚಿತ್ರ ಎನ್ನುವ ಹೆಗ್ಗಳಿಕೆಗೆ ಕೂಡ ಮಹೇಶ್ ಬಾಬು ಅವರ ಈ 29ನೇ ಚಿತ್ರ ಪಾತ್ರವಾಗಲಿದೆ.
ಅಂದ್ಹಾಗೇ ಕೇವಲ ಪ್ರಿಯಾಂಕ ಚೋಪ್ರಾ ಮಾತ್ರವಲ್ಲ ಹಾಲಿವುಡ್ ನಟ ಕ್ರಿಸ್ ಹೆಮ್ಸ್ವರ್ತ್ ಕೂಡ ಈ ಚಿತ್ರದಲ್ಲಿದ್ದಾರೆ ಎನ್ನುವ ಸುದ್ದಿ ಇದೆ. ಮೋಹನ್ ಲಾಲ್, ನಯನತಾರ, ಚಿಯಾನ್ ವಿಕ್ರಂ, ಪೃಥ್ವಿರಾಜ್ ಸುಕುಮಾರನ್ ಸೇರಿದಂತೆ ದೇಶ-ವಿದೇಶದ ಅನೇಕರು ಈ ಮಹತ್ವಕಾಂಕ್ಷೆಯ ಚಿತ್ರಕ್ಕೆ ಕೈ ಜೋಡಿಸುತ್ತಿದ್ಧಾರೆ ಎನ್ನುವ ಚರ್ಚೆ ಕೂಡ ನಡೆಯುತ್ತಿದೆ. ಆದರೆ ಚಿತ್ರದ ಬಗ್ಗೆ ಯಾವ ಗುಟ್ಟನ್ನು ರಾಜಮೌಳಿ ಬಿಟ್ಟು ಕೊಟ್ಟಿಲ್ಲ
'


Click it and Unblock the Notifications











