ಮಹೇಶ್ ಬಾಬು 'ವಾರಣಾಸಿ' ಖತಂ ; ರಾಜ್‌ಮೌಳಿಗೆ ಬೈ ಹೇಳಿ ಅಮೆರಿಕಾಗೆ ಹಾರಿದ ಪ್ರಿಯಾಂಕ ಚೋಪ್ರಾ

ರಾಜಮೌಳಿ ಚಿತ್ರ ಎಂದರೆ ಅಲ್ಲಿ ದುಬಾರಿ, ರಾಯಲ್ಲು, ವೈಭವ ಎಲ್ಲವೂ ನಿರೀಕ್ಷೆಗೂ ಮೀರಿ ಹೆಚ್ಚಾಗಿರುತ್ತೆ. ಇದು ''ಬಾಹುಬಲಿ''.. ''ಮಗಧೀರ''.. ಮತ್ತು ''ಆರ್.ಆರ್.ಆರ್'' ಚಿತ್ರಗಳ ಮೂಲಕ ಈಗಾಗಲೇ ರುಜುವಾತಾಗಿದೆ. ಮಹೇಶ್ ಬಾಬು ಅಭಿನಯದ ''ವಾರಣಾಸಿ'' ಕೂಡ ಇದರಿಂದ ಹೊರತಾಗಿಲ್ಲ. ಈ ಚಿತ್ರಕ್ಕೆ ಈಗಾಗಲೇ ಹಣವನ್ನು ನೀರಿನಂತೆ ಸುರಿಯಲಾಗಿದೆ. ಚಿಕ್ಕದಾದ ಟೀಸರ್ ಬಿಡುಗಡೆ ಸಮಾರಂಭಕ್ಕೆ ಕೋಟ್ಯಂತರ ಹಣವನ್ನು ಚೆಲ್ಲಲಾಗಿದೆ.

ಇನ್ನೂ ''ವಾರಣಾಸಿ'' ಬಿಡುಗಡೆಯಾಗುವುದು ಈ ವರ್ಷವಲ್ಲ. ಬದಲಿಗೆ ಮುಂದಿನ ವರ್ಷ. ಆದರೆ, ಇದು ರಾಜಮೌಳಿಯ ಸಿನಿಮಾ. ಬಿಡುಗಡೆಯ ಮುನ್ನವೇ ವ್ಯಾಪಾರ ಮಾಡುವುದು ಹೇಗೆ..? ಎನ್ನುವ ಕಲೆ ಜಕ್ಕಣ್ಣಗೆ ಚೆನ್ನಾಗಿಯೇ ಗೊತ್ತು. ಇದಕ್ಕೆ ಕೈಗನ್ನಡಿ ಎಂಬಂತೆ ಕೆಲ ದಿನಗಳ ಹಿಂದೆಯಷ್ಟೇ ಅಂತರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳಿಗೆ ತಮ್ಮ ಸಂದರ್ಶನ ನೀಡಿದ್ದಾರೆ. ಎಲ್ಲರನ್ನೂ ಹೈದರಾಬಾದ್‌ಗೆ ಕರೆಸಿಕೊಂಡು ಪುರುಸೊತ್ತಾಗಿ ಮಾತನಾಡಿದ್ದಾರೆ.

priyanka-chopra-wraps-rajamouli-s-varanasi-jet-sets-to-la-for-the-bluff-promotions

''ದಿ ರಾಪ್''.. ''ವೆರೈಟಿ''.. ''ಕೊಲೈಡರ್''.. '' ಸಿನಿಮಾ ಬ್ಲೆಂಡ್''.. ಹೀಗೆ ಹಲವರಿಗೆ ಚಿತ್ರದ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ವಿಶೇಷ ಅಂದರೆ ಪ್ರತಿಯೊಂದು ಸಂದರ್ಶನದಲ್ಲಿಯೂ ರಾಜಮೌಳಿ ಮತ್ತು ತಂಡ ವಿಷಯಗಳನ್ನು ಪುನರಾವರ್ತನೆ ಮಾಡಿಲ್ಲ. ಪ್ರತಿಯೊಂದು ಸಂದರ್ಶನದಲ್ಲಿ ಬೇರೆ ಬೇರೆ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ಉದಾಹರಣೆಗೆ ''ದಿ ರಾಪ್‌''ಗೆ ನೀಡಿದ ಸಂದರ್ಶನದಲ್ಲಿ 25 ನಿಮಿಷಗಳ ಕಾಲ ಇರುವ ರಾಮಾಯಣದ ಕುರಿತು ಇರುವ ಸನ್ನಿವೇಶದ ಕುರಿತು ರಾಜಮೌಳಿ ಮಾತನಾಡಿದರೆ, ''ಸ್ಕ್ರೀನ್ ರ್‍ಯಾಂಟ್‌''ಗೆ ನೀಡಿದ ಸಂದರ್ಶನದಲ್ಲಿ ಮಹೇಶ್ ಬಾಬು ಈ ಚಿತ್ರದಲ್ಲಿ ಟೈಮ್ ಟ್ರಾವೆಲ್ ಕಥೆ ಇದೆ ಎನ್ನುವುದನ್ನು ಖಚಿತ ಪಡಿಸಿದ್ದಾರೆ. ''ವೆರೈಟಿ''ಗೆ ನೀಡಿದ ಸಂದರ್ಶನದಲ್ಲಿ ಪ್ರಿಯಾಂಕ ಚೋಪ್ರಾ ಚಿತ್ರದ ನಿರ್ದೇಶಕ ರಾಜಮೌಲಿ ಅವರನ್ನು ಹಾಲಿವುಡ್‌ನ ದಿಗ್ಗಜರಾದ ಸ್ಟೀಫನ್ ಸ್ಪೀಲ್ಬರ್ಗ್ ಮತ್ತು ಕ್ರಿಸ್ಟೋಫರ್ ನೋಲನ್ ಅವರೊಂದಿಗೆ ಹೋಲಿಸಿ ಮಾತನಾಡಿದ್ದಾರೆ.

ಹೀಗೆ ಪ್ರತಿಯೊಂದು ಹಂತದಲ್ಲಿ ತುಂಬಾನೇ ಎಚ್ಚರಿಕೆ ವಹಿಸಿ, ವರ್ಷದ ಮೊದಲೇ ಪ್ರಚಾರವನ್ನು ಮಾಡುತ್ತಿರುವ ರಾಜಮೌಳಿ ಸದ್ಯ ತಮ್ಮ ಚಿತ್ರದ 'ಮಂದಾಕಿನಿ' ಪ್ರಿಯಾಂಕ ಚೋಪ್ರಾ ಅವರನ್ನು ಬೀಳ್ಕೊಟ್ಟಿದ್ದಾರೆ.

ಹೌದು, ''ವಾರಣಾಸಿ''ಯ ಚಿತ್ರದ ಚಿತ್ರೀಕರಣವನ್ನು ಮುಗಿಸಿ ಪ್ರಿಯಾಂಕ ಚೋಪ್ರಾ ಮರಳಿ ತಮ್ಮ ಗೂಡಾದ ಅಮೆರಿಕಾಗೆ ತೆರಳಿದ್ದಾರೆ. ತಮ್ಮ ಮುಂಬರುವ ಹಾಲಿವುಡ್ ಚಿತ್ರ ''ದಿ ಬ್ಲಫ್'' ಚಿತ್ರದ ಪ್ರಚಾರವನ್ನು ಶುರು ಮಾಡಲಿದ್ದಾರೆ. ಈ ಚಿತ್ರದ ಇದೇ ಫೆಬ್ರವರಿ 28ರಂದು ತೆರೆಗೆ ಬರಲಿದೆ.

priyanka-chopra-wraps-rajamouli-s-varanasi-jet-sets-to-la-for-the-bluff-promotions

''ಟೈಮ್ಸ್ ಆಫ್ ಇಂಡಿಯಾ'' ವರದಿ ಪ್ರಕಾರ ಹೈದರಾಬಾದ್‌ನ ಶೆಡ್ಯೂಲ್‌ನ್ನು ಪ್ರಿಯಾಂಕ ಚೋಪ್ರಾ ಮುಗಿಸಿದ್ದು ಮುಂಬರುವ ದಿನಗಳಲ್ಲಿ ಮತ್ತೆ ''ವಾರಣಾಸಿ'' ತಂಡವನ್ನು ಬಂದು ಸೇರಿಕೊಳ್ಳಲಿದ್ದಾರೆ. ಪ್ರಿಯಾಂಕ ಚೋಪ್ರಾ ಮರಳಿ ಬರುವವರೆಗೆ ಮಹೇಶ್ ಬಾಬು ಮತ್ತು ತಂಡದ ಬಾಕಿ ಉಳಿದ ಭಾಗಗಳನ್ನು ರಾಜಮೌಳಿ ಸೆರೆ ಹಿಡಿಯಲಿದ್ದಾರೆ.

ಅಂದ್ಹಾಗೇ ಪ್ರಿಯಾಂಕ ಚೋಪ್ರಾ ಭಾರತದ ಚಿತ್ರಕ್ಕೆ ಬಣ್ಣ ಹಚ್ಚಿ 6-7 ವರ್ಷಗಳಾಗಿವೆ.2019ರಲ್ಲಿ ಬಂದ ''ದಿ ಸ್ಕೈ ಈಸ್ ಪಿಂಕ್'' ಸಿನಿಮಾನೇ ಕೊನೆ. ಆ ನಂತರ ಬಾಲಿವುಡ್, ಟಾಲಿವುಡ್, ಕಾಲಿವುಡ್, ಯಾವ ವುಡ್ಡಿನಲ್ಲಿಯೂ ಪ್ರಿಯಾಂಕ ಚೋಪ್ರಾ ಕಾಣಿಸಿಕೊಂಡಿಲ್ಲ. ಕಾಣಿಸಿಕೊಂಡಿದ್ದು ಕೇವಲ ಹಾಲಿವುಡ್‌ನಲ್ಲಿ ಮಾತ್ರ. ಈ ಹಿನ್ನೆಲೆ ''ವಾರಣಾಸಿ''ಯಲ್ಲಿನ ಇವರ ಪಾತ್ರದ ಮೇಲೆ ಇವರ ಅಭಿಮಾನಿಗಳಿಗೆ ನಿರೀಕ್ಷೆ ಇದೆ. ''ವಾರಣಾಸಿ''ಯ ಮೇಲೆ ಪ್ರಿಯಾಂಕ ಚೋಪ್ರಾಗೆ ಭರವಸೆ ಇದೆ.

ಇನ್ನುಳಿದಂತೆ ಹೈದರಾಬಾದ್‌ದಿಂದ ತೆರಳುವಾಗ ಭಾವುಕಗೊಂಡಿದ್ದ ಪ್ರಿಯಾಂಕ ಚೋಪ್ರಾ ತಮ್ಮ ನೆಚ್ಚಿನ ಮತ್ತು ಹೈದರಾಬಾದ್‌ನ ಖ್ಯಾತ ''ಬನ್ ಮಸ್ಕಾ''ವನ್ನು ತಮ್ಮ ಜೊತೆ ತೆಗೆದುಕೊಂಡು ಹೋಗಿದ್ದಾರೆ. ಹೈದರಾಬಾದ್‌ನ ಒಂಚು ಚಿಕ್ಕ ಭಾಗವನ್ನು ನನ್ನ ಜೊತೆ ತೆಗೆದುಕೊಂಡು ಹೋಗುತ್ತಿದ್ದೇನೆ, ಶೀಘ್ರದಲ್ಲಿಯೇ ಮತ್ತೆ ನಿಮ್ಮೆಲ್ಲರನ್ನು ನೋಡುತ್ತೇನೆ ಎಂದು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.

More from Filmibeat

English summary
Priyanka Chopra completes key filming for Rajamouli’s magnum opus Varanasi. From the sets of Hyderabad to the heart of Hollywood, see why her move to Los Angeles for The Bluff promotions is trending worldwide. Full details inside!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X