ತನ್ನ ತಾಯಿಯ ಪ್ರಗ್ನೆನ್ಸಿ ಫೋಟೊಶೂಟ್ ಮಾಡಿಸಿದ ನಟಿ ಪ್ರಿಯಾಂಕ ಜೈನ್; ವಿಡಿಯೋ ವೈರಲ್
ತಾಯ್ತನ ಪ್ರತಿ ಹೆಣ್ಣು ತುಂಬಾ ಇಷ್ಟಪಡುವ ಸಂಗತಿ. 9 ತಿಂಗಳು ಮಗುವನ್ನು ತನ್ನ ಹೊಟ್ಟೆಯಲ್ಲಿ ಜೋಪಾನವಾಗಿಟ್ಟುಕೊಂಡು ಹಾರೈಕೆ ಮಾಡಿ ಆ ಜೀವವನ್ನು ಭೂಮಿಗೆ ತರುವುದು ಆಕೆಯ ಜೀವನ ಅಮೂಲ್ಯ ಕ್ಷಣಗಳೂ ಹೌದು. ಇತ್ತೀಚೆಗೆ ಪ್ರೆಗ್ನೆನ್ಸಿ ಫೋಟೊಶೂಟ್ ಟ್ರೆಂಡ್ ಆಗಿದೆ. ವಿಭಿನ್ನ ಥೀಮ್‌ಗಳಲ್ಲಿ ಗರ್ಭಿಣಿಯರ ಫೋಟೊಶೂಟ್ ಮಾಡಲಾಗುತ್ತದೆ.
ನಟಿ, ಬಿಗ್‌ಬಾಸ್ ತೆಲುಗು ಮಾಜಿ ಸ್ಪರ್ಧಿ ಪ್ರಿಯಾಂಕಾ ಜೈನ್ ತಮ್ಮ ತಾಯಿ ಪ್ರಗ್ನೆನ್ಸಿ ಫೋಟೊಶೂಟ್ ಮಾಡಿಸಿ ಸಂಭ್ರಮಿಸಿದ್ದರು. ಆ ವೀಡಿಯೋ ಈಗ ಮತ್ತೆ ವೈರಲ್ ಆಗುತ್ತಿದೆ. ತಮ್ಮ 27ನೇ ವಯಸ್ಸಿನ ಹುಟ್ಟುಹಬ್ಬದ ಸಂಭ್ರಮದಲ್ಲಿ ತನಗೆ ಜನ್ಮ ನೀಡಿದ ತಾಯಿಯ ಸ್ಪೆಷಲ್ ಫೋಟೊಶೂಟ್ ಮಾಡಿ ಪ್ರಿಯಾಂಕಾ ಗಮನ ಸೆಳೆದಿದ್ದರು. ಏಳೆಂಟು ತಿಂಗಳ ಹಿಂದೆ ಈ ವೀಡಿಯೋವನ್ನು ಪ್ರಿಯಾಂಕ ತಮ್ಮ ಯೂಟ್ಯೂಬ್ ಚಾನಲ್‌ನಲ್ಲಿ ಹಂಚಿಕೊಂಡಿದ್ದರು. ಬೆಳಗಾವಿ ಮೂಲದ ನಟ ಶಿವಕುಮಾರ್ ಹಾಗೂ ನಟಿ ಪ್ರಿಯಾಂಕ ಪರಸ್ಪರ ಪ್ರೀತಿಸುತ್ತಿದ್ದಾರೆ. ಇನ್ನು ಮದುವೆ ಆಗದೇ ಲಿವ್‌ಇನ್ ರಿಲೇಷನ್‌ಶಿಪ್‌ನಲ್ಲಿದ್ದಾರೆ.

ಪ್ರಿಯಾಂಕಾ ಜೈನ್ ನಮ್ಮ ತಾಯಿಯ ಪ್ರೆಗ್ನೆನ್ಸಿ ಫೋಟೊಶೂಟ್ ಮಾಡಲು ಶಿವಕುಮಾರ್ ಕೂಡ ಸಾಥ್ ಕೊಟ್ಟಿದ್ದಾರೆ. ಈ ಜೋಡಿ Never Ending Tales ಎಂಬ ಯೂಟ್ಯೂಬ್ ಚಾನಲ್‌ನಲ್ಲಿ ಆಗಾಗ್ಗೆ ವ್ಲಾಗ್ ವೀಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಅದೇ ರೀತಿ ತಮ್ಮ ತಾಯಿಯ ಸ್ಪೆಷಲ್ ಫೋಟೊಶೂಟ್ ವಿಡಿಯೋವನ್ನು ಪ್ರಿಯಾಂಕ ಪೋಸ್ಟ್ ಮಾಡಿದ್ದರು.
ಪ್ರಿಯಾಂಕ ಮಾತನಾಡಿ ನನ್ನ ತಾಯಿ 27 ವರ್ಷಗಳ ಹಿಂದೆ ಗರ್ಭಿಣಿ ಆಗಿದ್ದರು. ಆಗ ಆಕೆಯ ಹೊಟ್ಟೆಯಲ್ಲಿ ನಾನು ಇದ್ದೆ. ಆ ಪ್ರೆಗ್ನೆನ್ಸಿಯನ್ನು ಈಗ ರೀ-ಕ್ರಿಯೇಟ್ ಮಾಡುತ್ತಿದ್ದೇವೆ. ನಾನು ಹುಟ್ಟುವುದಕ್ಕೂ ಮುನ್ನ ನಮ್ಮ ತಾಯಿ ಹೇಗೆ ಫೀಲ್ ಆಗಿದ್ದರು ಎಂದು ಕಣ್ಣಾರೆ ನೋಡಬೇಕು. ಆಗ ನಮ್ಮ ತಾಯಿಗೆ ಸೀಮಂತ ಶಾಸ್ತ್ರ ಕೂಡ ಮಾಡಿರಲಿಲ್ಲ. ಅದಕ್ಕೆ ಈ ಸ್ಪೆಷಲ್ ಫೋಟೊಶೂಟ್ ಪ್ಲ್ಯಾನ್ ಮಾಡ್ದೆ ಎಂದಿದ್ದಾರೆ.
ಹೀಗೆ ಮಗಳು ಸ್ಪೆಷಲ್ ಫೋಟೊಶೂಟ್ ಮಾಡಿಸಿದ್ದಕ್ಕೆ ಸಂತೋಷದಿಂದ ಪ್ರಿಯಾಂಕ ತಾಯಿ ಆನಂದಬಾಷ್ಪ ಸುರಿಸಿದ್ದಾರೆ. ಶಿವಕುಮಾರ್ ವೀಡಿಯೋ ಶೂಟ್ ಮಾಡಿದ್ದಾರೆ. ಈ ಫೋಟೊಶೂಟ್‌ಗಾಗಿಯೇ ತಾಯಿಗೆ ಸ್ಪೆಷಲ್ ಕಾಸ್ಟ್ಯೂಮ್ ಖರೀದಿಸಿದ್ದಾಗಿ ಪ್ರಿಯಾಂಕಾ ಹೇಳಿದ್ದಾರೆ. ಫೋಟೊಶೂಟ್ ನಡುವೆ ಶಿವಕುಮಾರ್ ನಿನಗೆ ತಂಗಿ ಬೇಕಾ? ತಮ್ಮ ಬೇಕಾ? ಎಂದು ಕಾಮಿಡಿ ಮಾಡಿದ್ದಾರೆ.
ಶಿವಕುಮಾರ್ ಪ್ರಶ್ನೆಗೆ ಪ್ರಿಯಾಂಕಾ ಪ್ರತಿಕ್ರಿಯಿಸಿ "ನಾನು ನನಗೆ ಯಾವಾಗ ಮಗು ಹುಟ್ಟುತ್ತದೆ ಎಂದು ಯೋಚಿಸುತ್ತಿದ್ದೇನೆ" ಎಂದಿದ್ದಾರೆ. ಅಯ್ಯೋ ಮದುವೆ ಆದಮೇಲೆ ಮಗು ಬಗ್ಗೆ ಯೋಚಿಸಬೇಕು ಎಂದು ಶಿವಕುಮಾರ್ ಹೇಳಿದ್ದಾರೆ. "ಮದುವೆ ಆದ್ಮೇಲೆ ಅಲ್ವೆ ಮಕ್ಕಳನ್ನು ಹೆರುವುದು. ಒಂದು ಹೆಣ್ಣಾಗಿ ನನ್ನ ನೋವು ನಿನಗೇನು ಗೊತ್ತು" ಎಂದು ಪ್ರಿಯಾಂಕಾ ಬೇಸರ ವ್ಯಕ್ತಪಡಿಸಿದ್ದಾರೆ.
'ಮೌನರಾಗಂ' ಹಾಗೂ 'ಜಾನಕಿ ಕಲಗನಲೇದು' ಎಂಬ ತೆಲುಗು ಧಾರಾವಾಹಿಗಳಲ್ಲಿ ಪ್ರಿಯಾಂಕ ಮಿಂಚಿದ್ದರು. ಬಿಗ್‌ಬಾಸ್ ತೆಲುಗು ಸೀಶನ್ 7ರಲ್ಲಿ ಫಿನಾಲೆವರೆಗೂ ಹೋಗಿದ್ದರು. 'ನಾಗಕನ್ನಿಕೆ' ಹಾಗೂ 'ಮಾನಸ ಸರೋವರ' ಎಂಬ ಕನ್ನಡ ಧಾರಾವಾಹಿಗಳಲ್ಲಿ ಶಿವಕುಮಾರ್ ಬಣ್ಣ ಹಚ್ಚಿದ್ದರು. ಬಳಿಕ ತೆಲುಗು ಕಿರುತೆರೆಯಲ್ಲಿ ಸಕ್ರಿಯರಾದರು. 'ಗೋಲಿಸೋಡ' ಎಂಬ ಕನ್ನಡ ಚಿತ್ರದಲ್ಲಿ ಪ್ರಿಯಾಂಕ ನಟಿಸಿದ್ದರು.
ಪ್ರೀತಿಸುತ್ತಿರುವ ಹುಡುಗನಿಗೆ ಮಂಡಿಯೂರಿ ಪ್ರೇಮ ನಿವೇದನೆ ಮಾಡಬೇಕು ಎನ್ನುವುದು ಪ್ರಿಯಾಂಕ ಕನಸಾಗಿದ್ದಂತೆ. ಅದರಂತೆ ಶಿವಕುಮಾರ್ ಎದುರು ಪ್ರೇಮ ನಿವೇದನೆ ಮಾಡಿದ್ದ ಬಗ್ಗೆ ವೀಡಿಯೋ ಮಾಡಿ ಹಂಚಿಕೊಂಡಿದ್ದರು. ಆ ವೀಡಿಯೋ ಕೂಡ ಸಖತ್ ವೈರಲ್ ಆಗಿತ್ತು. ವೀವ್ಸ್, ಲೈಕ್ಸ್‌ಗಾಗಿ ಏನೆಲ್ಲಾ ಮಾಡ್ತಾರಪ್ಪಾ ಎಂದು ಇವರಿಬ್ಬರ ವೀಡಿಯೋಗಳಿಗೆ ಕೆಲವರು ಕಾಮೆಂಟ್ ಮಾಡುತ್ತಾರೆ.


Click it and Unblock the Notifications











