twitter
    For Quick Alerts
    ALLOW NOTIFICATIONS  
    For Daily Alerts

    'ಅಲ್ಲು ಅರ್ಜುನ್ ಚಿತ್ರಕ್ಕೆ 80% ನಷ್ಟ, ಮಹೇಶ್ ಬಾಬು ಒಬ್ಬರೇ ದುಡ್ಡು ಹಿಂತಿರುಗಿಸಿದ್ದು'

    |

    ಸಿನಿಮಾ ಹಿಟ್ ಆದರೂ ಫ್ಲಾಪ್ ಆದರೂ ನಟ-ನಟಿ-ನಿರ್ದೇಶಕ ಆರ್ಥಿಕವಾಗಿ ಚೆನ್ನಾಗಿಯೇ ಇರ್ತಾರೆ. ಒಂದು ವೇಳೆ ಆ ಚಿತ್ರ ಸೋತರೆ ನಿರ್ಮಾಪಕನ ಕಷ್ಟ ಹೇಳತೀರದು. ಆ ನಷ್ಟದಿಂದ ಬಹಳ ಸಂಕಷ್ಟಕ್ಕೆ ಸಿಲುಕುತ್ತಾನೆ. ನಿರ್ಮಾಪಕನ ಕಷ್ಟಕ್ಕೆ ಯಾರೂ ಬರಲ್ಲ. ಸಿನಿ ಇಂಡಸ್ಟ್ರಿಯಲ್ಲಿ ಕೆಲವೇ ಕೆಲವು ಕಲಾವಿದರು ಮಾತ್ರ ನಿರ್ಮಾಪಕ ನಷ್ಟಕ್ಕೆ ಸ್ಪಂದಿಸಿ ಸಹಾಯ ಮಾಡ್ತಾರೆ.

    ನಿರ್ಮಾಪಕ ನಷ್ಟ ಅನುಭವಿಸಿದಾಗ ಸೂಪರ್ ಸ್ಟಾರ್ ರಜನಿಕಾಂತ್ ತಮ್ಮಿಂದ ಸಾಧ್ಯವಾದಷ್ಟು ಹಣ ಹಿಂತಿರುಗಿಸಿರುವ ಘಟನೆ ನಡೆದಿದೆ. ಅದೇ ರೀತಿ ಪವನ್ ಕಲ್ಯಾಣ್, ಸಲ್ಮಾನ್ ಖಾನ್ ಹಾಗೂ ಮಹೇಶ್ ಬಾಬು ಸಹ ಕೆಲವು ಬಾರಿ ನಡೆದುಕೊಂಡಿರುವ ಉದಾಹರಣೆಗಳಿವೆ. ತೆಲುಗಿನ ಖ್ಯಾತ ವಿತರಕ ಮತ್ತು ನಿರ್ಮಾಪಕ ಅಭಿಷೇಕ್ ನಾಮ 'ವರಡು' ಚಿತ್ರದ ವೇಳೆ ತನಗಾದ ನಷ್ಟದ ಬಗ್ಗೆ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಮುಂದೆ ಓದಿ...

    'ವರಡು' ಚಿತ್ರದಿಂದ ಶೇಕಡಾ 80 ರಷ್ಟು ನಷ್ಟ

    'ವರಡು' ಚಿತ್ರದಿಂದ ಶೇಕಡಾ 80 ರಷ್ಟು ನಷ್ಟ

    ಅಲ್ಲು ಅರ್ಜುನ್ ನಟಿಸಿದ್ದ 'ವರಡು' ಚಿತ್ರದಿಂದ ಶೇಕಡಾ 80 ರಷ್ಟು ನಷ್ಟ ಅನುಭವಿಸಬೇಕಾಯಿತು ಎಂದು ವಿತರಕ ಅಭಿಷೇಕ್ ನಾಮ ಟಿವಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಗುಣಶೇಖರ್ ನಿರ್ದೇಶಿಸಿದ್ದ ಈ ಚಿತ್ರ 2010ರಲ್ಲಿ ಬಿಡುಗಡೆಯಾಗಿತ್ತು. ಡಿವಿವಿ ದಾನಯ್ಯ ಬಂಡವಾಳ ಹಾಕಿದ್ದರು. ಫ್ಯಾಮಿಲಿ ಎಂಟರ್‌ಟೈನ್ ಆಗಿದ್ದ ಈ ಚಿತ್ರ ರಿಲೀಸ್‌ಗೂ ಮೊದಲು ಭಾರಿ ನಿರೀಕ್ಷೆ ಹುಟ್ಟಿಸಿತ್ತು. ಆದರೆ, ಬಿಡುಗಡೆಯಾದ್ಮೇಲೆ ಹೀನಾಯ ಸೋಲು ಕಂಡಿತು ಎಂದು ಅಭಿಷೇಕ್ ಬಹಿರಂಗಪಡಿಸಿದರು.

    40 ಕೋಟಿ ವೆಚ್ಚದಲ್ಲಿ ತಯಾರಾಗಲಿದೆ 'ಪುಷ್ಪ' ಚಿತ್ರದ ಸಾಹಸ ದೃಶ್ಯ40 ಕೋಟಿ ವೆಚ್ಚದಲ್ಲಿ ತಯಾರಾಗಲಿದೆ 'ಪುಷ್ಪ' ಚಿತ್ರದ ಸಾಹಸ ದೃಶ್ಯ

    ರಿಸ್ಕ್ ಬೇಡ ಅಂತ ಸಿನಿಮಾ ಮಾರಿದ ನಿರ್ಮಾಪಕ

    ರಿಸ್ಕ್ ಬೇಡ ಅಂತ ಸಿನಿಮಾ ಮಾರಿದ ನಿರ್ಮಾಪಕ

    ವರಡು ಚಿತ್ರದಲ್ಲಿ ದೊಡ್ಡ ಪ್ರಯೋಗವೇ ಮಾಡಿದ್ದರು ನಿರ್ದೇಶಕ ಗುಣಶೇಖರ್. ಸಿನಿಮಾ ರಿಲೀಸ್ ಆಗುವವರೆಗೂ ನಾಯಕಿಯ ಮುಖವನ್ನು ತೋರಿಸಿರಲಿಲ್ಲ. ದೊಡ್ಡ ಕಲಾವಿದರ ಬಳಗ ಆಯ್ಕೆ ಮಾಡಿಕೊಂಡರು. ನೂರಾರು ಸಂಖ್ಯೆಯಲ್ಲಿ ನಿಜವಾದ ಕುಟುಂಬಗಳನ್ನು ಕರೆತಂದು ಸಿನಿಮಾದಲ್ಲಿ ನಟಿಸಿದರು. ಆದರೆ, ವಿಲನ್ ಪಾತ್ರದಲ್ಲಿದ್ದ ಆರ್ಯ ಮತ್ತು ಮಣಿಶರ್ಮ ಮ್ಯೂಸಿಕ್ ಬಿಟ್ಟರೆ ಬೇರೆನೂ ವರ್ಕೌಟ್ ಆಗಲಿಲ್ಲ. ನಿರ್ಮಾಪಕ ರಿಸ್ಕ್ ತೆಗೆದುಕೊಳ್ಳುವುದು ಬೇಡ ಅಂತ ಚಿತ್ರವನ್ನು ಅಭಿಷೇಕ್ ಪ್ರೊಡಕ್ಷನ್‌ಗೆ ಮಾರಾಟ ಮಾಡಿದರು.

    ಬಂಡವಾಳಕ್ಕಿಂತ ಹೆಚ್ಚು ಹಣ ನೀಡಿದ ವಿತರಕ

    ಬಂಡವಾಳಕ್ಕಿಂತ ಹೆಚ್ಚು ಹಣ ನೀಡಿದ ವಿತರಕ

    ಸುಮಾರು 30 ಕೋಟಿ ವೆಚ್ಚದಲ್ಲಿ ವರಡು ಸಿನಿಮಾ ತಯಾರಾಗಿತ್ತು. ಆ ಚಿತ್ರದ ಮೇಲಿನ ನಂಬಿಕೆಯಿಂದ ವಿತರಕ ಅಭಿಷೇಕ್ ನಾಮ 30 ಕೋಟಿಗೂ ಅಧಿಕ ಹಣ ನೀಡಿ ಸಿನಿಮಾ ಖರೀದಿ ಮಾಡಿದ್ದರು. ಮೊದಲ ಶೋನಲ್ಲೇ ಚಿತ್ರದ ಫಲಿತಾಂಶ ತಿಳಿಯಿತು. ಸಿನಿಮಾ ಸೋಲು ಕಂಡಿದ್ದಲ್ಲದೇ ಕೈಯಿಂದ ಹಾಕಿದ್ದ ಹಣದಲ್ಲಿ ಶೇಕಡಾ 80ರಷ್ಟು ಹಣ ನಷ್ಟ ಆಯಿತು ಎಂದು ಇತ್ತೀಚಿಗಷ್ಟೆ ನೀಡಿರುವ ಸಂದರ್ಶನದಲ್ಲಿ ನಷ್ಟದ ಕುರಿತು ಮಾತನಾಡಿದರು.

    ಮಹೇಶ್ ಬಾಬುಗೆ ಸಿನಿಮಾದಲ್ಲಿ ನಟಿಸಲು ಒಲ್ಲೆ ಎಂದ ಬಾಲಿವುಡ್ ನಟಿಮಹೇಶ್ ಬಾಬುಗೆ ಸಿನಿಮಾದಲ್ಲಿ ನಟಿಸಲು ಒಲ್ಲೆ ಎಂದ ಬಾಲಿವುಡ್ ನಟಿ

    Recommended Video

    ಇನ್ಯಾವತ್ತೂ Salman Khan ಸಿನಿಮಾ ವಿಮರ್ಶೆ ಮಾಡೋದಿಲ್ಲ ಎಂದ‌ KRK | Filmibeat Kannada
    ಮಹೇಶ್ ಬಾಬು ಒಬ್ಬರೆ ಹಿಂತಿರುಗಿಸಿದ್ದು

    ಮಹೇಶ್ ಬಾಬು ಒಬ್ಬರೆ ಹಿಂತಿರುಗಿಸಿದ್ದು

    ಇನ್ನು ಮಹೇಶ್ ಬಾಬು ಕುರಿತು ಮಾತನಾಡಿದ ಅಭಿಷೇಕ್ ನಾಮ, ಅವರ ಸಿನಿಮಾ ವಿತರಣೆ ಮಾಡಿದ ಸಂದರ್ಭದಲ್ಲೂ ಭಾರಿ ನಷ್ಟ ಆಗಿತ್ತು. ಆದರೆ ಆ ಸಮಯದಲ್ಲಿ ಮಹೇಶ್ ಬಾಬು ಕರೆದು ಆರ್ಥಿಕವಾಗಿ ಒಂದಿಷ್ಟು ಸಹಾಯ ಮಾಡಿದ್ದರು. ಆಮೇಲೆ ಒಳ್ಳೊಳ್ಳೆ ಚಿತ್ರಗಳನ್ನು ಕೊಡಿಸಿದ್ದರು. ಈ ಮೂಲಕ ಇಂಡಸ್ಟ್ರಿಯಲ್ಲಿ ನಮಗೆ ಸಹಾಯ ಮಾಡಿದ್ದು ಮಹೇಶ್ ಬಾಬು ಮಾತ್ರವೇ ಎಂದು ನೆನಪಿಸಿಕೊಂಡಿದ್ದಾರೆ.

    English summary
    Tollywood Famous film distributor and producer Abhishek Nama talked about Varadu Movie disaster.
    Wednesday, May 26, 2021, 17:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X