twitter
    For Quick Alerts
    ALLOW NOTIFICATIONS  
    For Daily Alerts

    ರಜನೀಕಾಂತ್ ಮಾತು ಕೇಳದೆ ಸಿನಿಮಾ ಮಾಡಿ ಭಾರಿ ನಷ್ಟ ಅನುಭವಿಸಿದೆ: ನಿರ್ಮಾಪಕ

    By ಫಿಲ್ಮಿಬೀಟ್ ಡೆಸ್ಕ್
    |

    ಸಿನಿಮಾ ಮಂದಿಗೆ ದೇವರ ಮೇಲೆ ಭಕ್ತಿ ಹೆಚ್ಚು. ಕೆಲವಾರು ನಂಬಿಕೆಗಳನ್ನು ಸಿನಿಮಾ ಮಂದಿ ವರ್ಷಾನುಗಟ್ಟಲೆಯಿಂದ ನಂಬಿಕೊಂಡು ಬಂದಿರುತ್ತಾರೆ. ಇಂಥ ದೇವಾಲಯದಲ್ಲಿ ಮುಹೂರ್ತ, ಇಂಥದೇ ದೇವಾಲಯದಲ್ಲಿ ಸ್ಕ್ರಿಪ್ಟ್ ಪೂಜೆ, ಚಿತ್ರೀಕರಣ ಮುಗಿದ ಮೇಲೆ ಕುಂಬಳಕಾಯಿ ಒಡೆಯುವುದು ಇಂಥಹಾ ಕೆಲವು ಸಂಪ್ರದಾಯಗಳು ಇವೆ.

    ಜೊತೆಗೆ, ಸಿನಿಮಾದಲ್ಲಿ ಕೆಲವು ದೃಶ್ಯಗಳನ್ನು ತೋರಿಸಿದರೆ ಸಿನಿಮಾ ಓಡುವುದಿಲ್ಲ ಎಂಬ ನಂಬಿಕೆಗಳೂ ಇವೆ. ನಾಯಕಿಯ ಕಾಲ ಬೆರಳುಗಳನ್ನು ತೋರಿಸಬಾರದು, ಕೆಲವು ಪಟ್ಟಣಗಳಲ್ಲಿ ಚಿತ್ರೀಕರಣ ಮಾಡಬಾರದು, ದೇವರ ಕತೆಯನ್ನಿಟ್ಟುಕೊಂಡು ಸಿನಿಮಾ ಮಾಡಬಾರದು ಹೀಗೆ ಕೆಲವಾರು ನಂಬಿಕೆಗಳು ಇವೆ. ಹೀಗೆ ಮಾಡಿದರೆ ಹಣ ಕಳೆದುಕೊಳ್ಳುತ್ತಾರೆ ಎಂಬ ನಂಬಿಕೆ ಇದೆ. ಹಲವರು ಇವನ್ನು ನಂಬಿದರೆ ಕೆಲವರು ನಂಬುವುದಿಲ್ಲ.

    ರಜನೀಕಾಂತ್ ಸೇರಿ ಹಲವು ಸಿನಿ ಪ್ರಮುಖರು ಹೇಳಿದರೂ ಕೇಳದೆ ಶಕ್ತಿ ದೇವತೆಯ ಬಗ್ಗೆ ಸಿನಿಮಾ ಮಾಡಿ ಕೋಟಿಗಟ್ಟಲೆ ಕಳೆದುಕೊಂಡ ನಿರ್ಮಾಪಕರೊಬ್ಬರು ತಮಗಾದ ಅನುಭವವನ್ನು ಇತ್ತೀಚೆಗೆ ಹೇಳಿಕೊಂಡಿದ್ದಾರೆ. ದೊಡ್ಡ ಸ್ಟಾರ್ ನಟ, ಸ್ಟಾರ್ ನಟಿ, ಹಿಟ್ ನಿರ್ದೇಶಕ, ಒಳ್ಳೆಯ ಕತೆ, ಭರ್ಜರಿ ಸೆಟ್‌ಗಳು ಎಲ್ಲವೂ ಇದ್ದರೂ ಸಿನಿಮಾದಿಂದ ಕೋಟ್ಯಂತರ ಕಳೆದುಕೊಂಡಿದ್ದಾರೆ ಈ ನಿರ್ಮಾಪಕ.

    'ಶಕ್ತಿ' ಸಿನಿಮಾದಲ್ಲಿ ನಟಿಸಿದ್ದ ಜೂ.ಎನ್‌ಟಿಆರ್

    'ಶಕ್ತಿ' ಸಿನಿಮಾದಲ್ಲಿ ನಟಿಸಿದ್ದ ಜೂ.ಎನ್‌ಟಿಆರ್

    ತೆಲುಗಿನ ಸ್ಟಾರ್ ನಟ ಜೂ.ಎನ್‌ಟಿಆರ್ 'ಶಕ್ತಿ' ಹೆಸರಿನ ಸಿನಿಮಾದಲ್ಲಿ ನಟಿಸಿದ್ದರು. ಸಿನಿಮಾದಲ್ಲಿ ಇಲಿಯಾನ ಡಿಕ್ರೂಜ್ ನಾಯಕಿ. ವಿದೇಶದಿಂದ ವಿಲನ್‌ಗಳನ್ನು ಕರೆಸಲಾಗಿತ್ತು. ಕೊಲ್ಕತ್ತ, ರಾಜಸ್ಥಾನ, ಕಾಶ್ಮೀರ, ವಿದೇಶಗಳಲ್ಲಿಯೂ ಸಿನಿಮಾವನ್ನು ಚಿತ್ರೀಕರಿಸಲಾಗಿತ್ತು, ಸಿನಿಮಾ ಬಿಡುಗಡೆಗೆ ಮುನ್ನಾ ಭಾರಿ ಪ್ರಚಾರ ಮಾಡಲಾಗಿತ್ತು ಇಷ್ಟೆಲ್ಲ ಆದರೂ ಸಿನಿಮಾ ಇನ್ನಿಲ್ಲದಂತೆ ನೆಲಕಚ್ಚಿತು.

    ರಜನೀಕಾಂತ್ ಸಹ ಹೇಳಿದ್ದರು ಸಿನಿಮಾ ಬೇಡವೆಂದು

    ರಜನೀಕಾಂತ್ ಸಹ ಹೇಳಿದ್ದರು ಸಿನಿಮಾ ಬೇಡವೆಂದು

    ಸಿನಿಮಾವನ್ನು ವೈಜಯಂತಿ ಮೂವೀಸ್‌ನ ಸಿ.ಅಶ್ವಿನಿ ದತ್ ನಿರ್ಮಾಣ ಮಾಡಿದ್ದರು. ಅವರೇ ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿಕೊಂಡಿರುವಂತೆ, ರಜನೀಕಾಂತ್ ಸೇರಿದಂತೆ ಹಲವು ತಮಗೆ ಹೇಳಿದ್ದರು ಶಕ್ತಿ ದೇವತೆಗಳ ಬಗ್ಗೆ ಸಿನಿಮಾ ಮಾಡಬೇಡ ಎಂದು ಆದರೆ ನಾನು ಕೇಳಲಿಲ್ಲ. ನಾನು ಶಕ್ತಿ ದೇವತೆಗಳ ಬಗ್ಗೆ ಸಿನಿಮಾ ಮಾಡುತ್ತಿರುವುದು ಗೊತ್ತಾದ ಕೂಡಲೇ ರಜನೀಕಾಂತ್ ಕರೆ ಮಾಡಿ ಸಿನಿಮಾ ನಿಲ್ಲಿಸಿಬಿಡು ಎಂದರು. ಒಂದೊಮ್ಮೆ ಸಿನಿಮಾ ಪ್ರಾರಂಭಿಸಿಬಿಟ್ಟಿದ್ದರೆ ಹೆಚ್ಚು ಬಂಡವಾಳ ತೊಡಗಿಸಬೇಡ ಎಂದಿದ್ದರು'' ಎಂದು ನೆನಪಿಸಿಕೊಂಡಿದ್ದಾರೆ.

    ಶಿಸ್ತಿನಿಂದ, ಸಂಪ್ರದಾಯಬದ್ಧವಾಗಿ ಕತೆ ಹೇಳಬೇಕಿತ್ತು: ಅಶ್ವಿನಿ ದತ್ತ

    ಶಿಸ್ತಿನಿಂದ, ಸಂಪ್ರದಾಯಬದ್ಧವಾಗಿ ಕತೆ ಹೇಳಬೇಕಿತ್ತು: ಅಶ್ವಿನಿ ದತ್ತ

    ದೇವಿ ಕತೆಯನ್ನು ಹೇಳುವಾಗ ಶಿಸ್ತಾಗಿ, ಸಂಪ್ರದಾಯಬದ್ಧವಾಗಿ ಹೇಳಬೇಕು ಆದರೆ ನಾವು 'ಶಕ್ತಿ' ಸಿನಿಮಾದಲ್ಲಿ ಕಮರ್ಶಿಯಲ್ ಅಂಶಗಳನ್ನು ಸೇರಿಸಿದ್ದೆವು, ನಾಯಕನಕ ವೈಭವೀಕರಣ ಆಗಿತ್ತು. ಹಾಗಾಗಿ ಸಿನಿಮಾದಲ್ಲಿ ಭಾರಿ ದೊಡ್ಡ ನಷ್ಟವಾಯಿತು. 50 ವರ್ಷದಿಂದ ವೈಜಯಂತಿ ಸಿನಿಮಾಸ್ ಕಾರ್ಯ ನಿರ್ವಹಿಸುತ್ತಿದೆ ನಮ್ಮ ನಿರ್ಮಾಣ ಸಂಸ್ಥೆ ಅತಿ ಹೆಚ್ಚು ನಷ್ಟ ಅನುಭವಿಸಿದ್ದು 'ಶಕ್ತಿ' ಸಿನಿಮಾದಿಂದಲೇ ಎಂದಿದ್ದಾರೆ ಅಶ್ವಿನಿ ದತ್ತ.

    ಶಕ್ತಿ ಸಿನಿಮಾದಿಂದ ನಷ್ಟವಾಗಿದ್ದು ಎಷ್ಟು?

    ಶಕ್ತಿ ಸಿನಿಮಾದಿಂದ ನಷ್ಟವಾಗಿದ್ದು ಎಷ್ಟು?

    'ಶಕ್ತಿ' ಸಿನಿಮಾದಿಂದ 25 ಕೋಟಿ ರು ನಷ್ಟವಾಯಿತು. ಸಿನಿಮಾ ಮೇಲೆ 40 ಕೋಟಿಗೂ ಹೆಚ್ಚು ಹೂಡಿಕೆ ಮಾಡಿದ್ದೆವು ಆದರೆ ಎಲ್ಲ ಒಟ್ಟು ಸೇರಿ ಸಿನಿಮಾದಿಂದ 18 ಕೋಟಿ ಅಷ್ಟೆ ವಾಪಸ್ಸಾಯಿತು ಎಂದಿದ್ದಾರೆ ಅಶ್ವಿನಿ ದತ್ತ. ಆ ನಂತರ ನಮ್ಮದೇ ನಿರ್ಮಾಣ ಸಂಸ್ಥೆಯಿಂದ ನಿರ್ಮಿಸಿದ 'ದೇವದಾಸು' ಹಾಗೂ ಮಹೇಶ್ ಬಾಬು ನಟಿಸಿದ 'ಮಹರ್ಷಿ' ಸಿನಿಮಾಗಳು ನಿರೀಕ್ಷಿತ ಮಟ್ಟದಲ್ಲಿ ಹಣ ಗಳಿಸಲಿಲ್ಲ ಎಂದಿದ್ದಾರೆ ಅಶ್ವಿನಿ ದತ್ತ.

    ಹಲವು ಸ್ಟಾರ್‌ಗಳನ್ನು ಕೊಟ್ಟ ಶ್ರೇಯ ವೈಜಯಂತಿ ಮೂವೀಸ್‌ಗಿದೆ

    ಹಲವು ಸ್ಟಾರ್‌ಗಳನ್ನು ಕೊಟ್ಟ ಶ್ರೇಯ ವೈಜಯಂತಿ ಮೂವೀಸ್‌ಗಿದೆ

    ವೈಜಯಂತಿ ಮೂವೀಸ್‌ ತೆಲುಗಿನ ಹಳೆಯ ಸಿನಿಮಾ ಪ್ರೊಡಕ್ಷನ್ ಸಂಸ್ಥೆಗಳಲ್ಲಿ ಒಂದು. ಹಲವು ಸೂಪರ್-ಡೂಪರ್ ಹಿಟ್ ಸಿನಿಮಾಗಳನ್ನು ತೆಲುಗು ಸಿನಿಮಾರಂಗಕ್ಕೆ ನೀಡಿರುವ ವೈಜಯಂತಿ ಮೂವೀಸ್‌ ಹಲವು ಸೂಪರ್ ಸ್ಟಾರ್‌ಗಳನ್ನು ಪರಿಚಯಿಸಿರುವ ಶ್ರೇಯವನ್ನೂ ಹೊಂದಿದೆ. ಜೂ.ಎನ್‌ಟಿಆರ್, ಮಹೇಶ್ ಬಾಬು, ಅಲ್ಲು ಅರ್ಜುನ್, ರಾಮ್ ಚರಣ್ ತೇಜ ಅಂಥ ಇಂದಿನ ಸೂಪರ್ ಸ್ಟಾರ್‌ಗಳ ಮೊದಲ ಸಿನಿಮಾವನ್ನು ಇದೇ ವೈಜಯಂತಿ ಮೂವೀಸ್‌ ನಿರ್ಮಾಣ ಮಾಡಿದ್ದು ವಿಶೇಷ. 1975ರಿಂದಲೂ ಸಿನಿಮಾ ನಿರ್ಮಾಣ ಮಾಡುತ್ತಿರುವ ವೈಜಯಂತಿ ಮೂವೀಸ್‌ ಸೀನಿಯರ್ ಎನ್‌ಟಿಆರ್, ಚಿರಂಜೀವಿ, ವೆಂಕಟೇಶ್, ನಾಗಾರ್ಜುನ ಅವರ ಸಿನಿಮಾಗಳನ್ನೂ ನಿರ್ಮಾಣ ಮಾಡಿದೆ. ಕನ್ನಡದಲ್ಲಿ ರವಿಚಂದ್ರನ್ ಅಭಿನಯಿಸಿರುವ 'ಪ್ರೇಮಕ್ಕೆ ಸೈ' ಸಿನಿಮಾವನ್ನು ನಿರ್ಮಾಣ ಮಾಡಿದೆ. ಇದೀಗ ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್ ನಟಿಸಲಿರುವ ಇನ್ನೂ ಹೆಸರಿಡದ ಸಿನಿಮಾವನ್ನು ನಿರ್ಮಾಣ ಮಾಡಲಿದೆ.

    English summary
    Jr NTR starer Shakthi movie producer C Ashwini Dutt talks about movie's loss at box office. He said some people warned me to not choose that kind of story.
    Friday, August 6, 2021, 16:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X