"ಕಿವಿ ಕೂದಲಲ್ಲ, ನನ್ನ ದೇಹದಲ್ಲಿ ಎಲ್ಲೆಲ್ಲಿ ಬೆಳೆದಿದೆ ಅಧ್ಯಯನ ಮಾಡಲಿ..ನಾನು ಬಾಯಿಬಿಟ್ರೆ ಆಕೆ ಕಥೆ ಅಷ್ಟೇ"

ಟಾಲಿವುಡ್‌ನಲ್ಲಿ ನಟಿ ಸಮಂತಾ ಹಾಗೂ ನಿರ್ಮಾಪಕ ಚಿಟ್ಟಿಬಾಬು ನಡುವಿನ ಜಟಾಪಟಿ ತಾರಕಕ್ಕೇರಿದೆ. "ಸಮಂತಾ ಮುಖ ಮುದುಕಿ ತರ ಇದೆ. ದುಡ್ಡಿಗಾಗಿ ಅರಬೆತ್ತಲಾಗಿ ಕುಣಿತ್ತಾಳೆ, ಆಕೆಯನ್ನು ಯಾಕಾದ್ರೂ ಶಾಕುಂತಲಂ ಪಾತ್ರಕ್ಕೆ ಆಯ್ಕೆ ಮಾಡಿಕೊಂಡ್ರೋ" ಅಂತ ನಿರ್ಮಾಪಕ ಚಿಟ್ಟಿಬಾಬು ಹೇಳಿದ್ದರು. ಇದಕ್ಕೆ ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದ ನಟಿ ಸಮಂತಾ ನಿರ್ಮಾಪಕರ ಕಿವಿಯ ಕೂದಲನ್ನು ಉಲ್ಲೇಖಿಸಿ ಮಾಡಿದ್ದ ಪೋಸ್ಟ್ ವೈರಲ್ ಆಗಿತ್ತು.

ಸಮಂತಾ ಗೂಡಾರ್ಥದ ಪೋಸ್ಟ್‌ಗೆ ಇದೀಗ ನಿರ್ಮಾಪಕ ಚಿಟ್ಟಿಬಾಬು ಪ್ರತಿಕ್ರಿಯಿಸಿದ್ದಾರೆ. ಮಾಧ್ಯಮವೊಂದಕ್ಕೆ ಮಾತನಾಡಿರುವ ನಿರ್ಮಾಪಕರು, ನಾನು ಬಾಯಿಬಿಟ್ರೆ ಆಕೆ ಕಥೆ ಅಷ್ಟೇ ಎಂದಿದ್ದಾರೆ. ಒಟ್ನಲ್ಲಿ ನಿರ್ಮಾಪಕ ಚಿಟ್ಟಿಬಾಬು ಹಾಗೂ ನಟಿ ಸಮಂತಾ ನಡುವೆ ಮಾತಿನ ಜಟಾಪಟಿ ಮುಂದುವರೆದಿದೆ. ಒಬ್ಬರ ಮೇಲೆ ಒಬ್ಬರು ಕೌಂಟರ್‌ ಕೊಡುತ್ತಿದ್ದಾರೆ. ನಿರ್ಮಾಪಕ ಚಿಟ್ಟಿಬಾಬು ಎರಡು ಮೂರು ಸಂದರ್ಭಗಳಲ್ಲಿ ಸಮಂತಾನ ಟಾರ್ಗೆಟ್ ಮಾಡಿ ಮಾತನಾಡಿದ್ದರು. ಆಕೆಗೆ ಅನಾರೋಗ್ಯ ಅನ್ನುವುದೆಲ್ಲಾ ನಾಟಕ, ಸಿಂಪಥಿ ಗಿಟ್ಟಿಸಲು ಹೀಗೆಲ್ಲಾ ಮಾಡುತ್ತಿದ್ದಾಳೆ ಎಂದಿದ್ದರು.

Producer Chittibabu strong counter to Samanthas cryptic post about his ear hair

ಸಮಂತಾ ಸ್ಟಾರ್‌ಡಮ್ ಹೊರಟು ಹೋಗಿದೆ. ಜೀವನಕ್ಕಾಗಿ ಸಿಕ್ಕ ಅವಕಾಶಗಳನ್ನು ಒಪ್ಪಿಕೊಳ್ಳುತ್ತಿದ್ದಾಳೆ. ಆಕೆಗೆ ಈಗ ಗ್ಲಾಮರ್ ಇಲ್ಲ. ಮದುಕಿ ಮುಖ, ಶಾಕುಂತಲಂ ರೀತಿಯ ಪಾತ್ರವನ್ನು ಆಕೆ ಹೇಗೆ ಮಾಡ್ತಾಳೆ? ನೋಡ್ತಾ ಇರಿ ಆ ಸಿನಿಮಾ ಗೆಲ್ಲಲ್ಲ ಎಂದು ಸಿನಿಮಾ ರಿಲೀಸ್‌ಗೂ ಮೊದಲೇ ಹೇಳಿದ್ದರು. ಇದಕ್ಕೆ ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದ ಸ್ಯಾಮ್, ಕಾಲೆಳೆದು ಒಂದು ಪೋಸ್ಟ್ ಮಾಡಿದ್ದರು. ಚಿಟ್ಟಿ ಬಾಬು ಅವರಿಗೆ ಕಿವಿಯಲ್ಲಿ ಕೂದಲು ಇರುವುದನ್ನು ಪ್ರಸ್ತಾಪಿಸಿ, ಕಿವಿಯಲ್ಲಿ ಕೂದಲು ಯಾಕೆ ಇರುತ್ತದೆ ಎಂದು ಗೂಗಲ್ ಸರ್ಚ್ ಮಾಡಿದ್ದು ಟೆಸ್ಟೋಸ್ಟಿರಾನ್ ಅಧಿಕವಾಗುವುದರಿಂದ ಎಂದು ತೋರಿಸಿದೆ. ಇದರ ಸ್ಕ್ರೀನ್‌ಶಾಟ್ ತೆಗೆದು ಪೋಸ್ಟ್ ಮಾಡಿದ್ದರು.

ನೇರವಾಗಿ ಹೇಳಬೇಕು ಅಂದ್ರೆ ಚಿಟ್ಟಿಬಾಬು ಮದವೇರಿ ಇಂತಹ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ ಎಂದು ಹೆಸರು ಹೇಳದೇ ಸಮಂತಾ ಹೇಳಿದ್ದರು. ಸಮಂತಾ ಪೋಸ್ಟ್‌ಗೆ ಚಿಟ್ಟಿಬಾಬು ಪ್ರತಿಕ್ರಿಯಿಸಿದ್ದಾರೆ. ಬಹಳ ಖಾರವಾಗಿಯೇ ಟೀಕೆ ಮಾಡಿದ್ದಾರೆ. "ಇದೆಲ್ಲಾ ಬಹಳ ಬುದ್ಧಿವಂತಿಕೆಯ ಉತ್ತರ ಎಂದುಕೊಳ್ಳುತ್ತಾರೆ. ನಾನು ಮಾತನಾಡಿದರೆ ಸಮಂತಾ ಕಥೆ ಕಷ್ಟೇ ಎಂದಿದ್ದಾರೆ. ನನ್ನ ಹೆಸರು ಹೇಳಿಲ್ಲ, ಹಾಗಾಗಿ ನಾನು ಕೂಡ ಆಕೆಯ ಹೆಸರು ಹೇಳುತ್ತಿಲ್ಲ. ನನನ ಕಿವಿಯಲ್ಲಿರುವ ಕೂದಲಿನ ಬಗ್ಗೆ ಮಾತನಾಡುವ ಬದಲು ನನ್ನ ಮಾತಿನಲ್ಲಿರುವ ಸತ್ಯಾಸತ್ಯತೆ ಬಗ್ಗೆ ಮಾತನಾಡಿದ್ದರೆ ಚೆನ್ನಾಗಿತ್ತು" ಎಂದಿದ್ದಾರೆ.

Producer Chittibabu strong counter to Samanthas cryptic post about his ear hair

ನಾಗಚೈತನ್ಯಾರಿಂದ ದೂರಾದ ಮೇಲೆ ಸಮಂತಾ ಸುಮ್ಮನಿದ್ದರು. ಇಬ್ಬರ ನಡುವಿನ ಭಿನ್ನಾಭಿಪ್ರಾಯಗಳಿಂದ ದೂರಾಗಿದ್ದಾಗಿ ಮೊದಲು ಹೇಳಿದ್ದರು. ಆದರೆ ಈಗ ಪರೋಕ್ಷವಾಗಿ ಚೈತು ಮೇಲೆ ಆರೋಪಗಳನ್ನು ಮಾಡುತ್ತಿರುವುದು ಯಾಕೆ? ಮತ್ತೊಬ್ಬರಿಂದ ಪೋಸ್ಟ್ ಮಾಡಿಸಿ ಚೈತನ್ಯಾನ ವಿಲನ್ ರೀತಿ ತೋರ್ಪಡಿಸುವುದು ಯಾಕೆ? ಸಿಂಪಥಿಗಾಗಿ ಹೀಗೆ ಮಾಡ್ತಿದ್ದೀಯಾ? ಎಂದು ನಾನು ಹೇಳಿದ್ದೆ. ಆದರೆ ಆಕೆ ಏನೋ ಬಹಳ ಚಿಲ್ಲರೆಯಾಗಿ ಏನೇನೋ ಪೋಸ್ಟ್‌ಗಳನ್ನು ಮಾಡುತ್ತಿದ್ದಾಳೆ. ನಾನು ಮಾತಾನಾಡಿದ್ದರಲ್ಲಿ ತಪ್ಪಿದ್ದರೆ ಹೇಳಲಿ, ಅದು ಬಿಟ್ಟು ನನ್ನ ಕಿವಿಯಲ್ಲಿನ ಕೂದಲಿನ ಕಥೆ ಯಾಕೆ? ಎಂದು ಕೇಳಿದ್ದಾರೆ.

ನಾನು ಮಾತನಾಡಿದರೆ ಸಮಂತಾ ಮಾನ ಮರ್ಯಾದೆ ಹರಾಜಾಗುತ್ತದೆ ಎನ್ನುವ ಅರ್ಥದಲ್ಲಿ ಚಿಟ್ಟಿಬಾಬು ಪ್ರತಿಕ್ರಿಯಿಸಿದ್ದಾರೆ. ಇನ್ನು ಸಮಂತಾ ಪೋಸ್ಟ್ ಬಗ್ಗೆ ಕಾನೂನು ಕ್ರಮ ಕೈಗೊಳ್ಳುತ್ತೀರಾ? ಎನ್ನುವ ಪ್ರಶ್ನೆಗೆ ಆಕೆ ನನ್ನ ಹೆಸರು ಹೇಳಿಲ್ಲ. ಒಂದು ವೇಳೆ ನಾನು ಅದಕ್ಕೆ ಮುಂದಾದರೂ ನಾನು ಸುಮ್ನೆ ಪೋಸ್ಟ್‌ ಮಾಡ್ದೆ, ಅವರ ಹೆಸರು ಪ್ರಸ್ತಾಪಿಸಿಲ್ಲ ಎನ್ನಬಹುದು. ಹಾಗಾಗಿ ಅಂತಹ ಪ್ರಯತ್ನ ಮಾಡಲ್ಲ ಎಂದಿದ್ದಾರೆ. ಆದರೆ ಸಮಂತಾ ಪೋಸ್ಟ್‌ಗೆ ನಿರ್ಮಾಪಕ ಚಿಟ್ಟಿಬಾಬು ಬೇಸರಗೊಂಡಿರುವುದು ಗೊತ್ತಾಗುತ್ತಿದೆ.

More from Filmibeat

English summary
Producer Chittibabu strong counter to Samantha's cryptic post about his ear hair. Producer Chitti Babu's Shocking Comments Goes Viral.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X